Social Welfare
ಎಸ್.ಓ.ಎ.ಆರ್ ಕೃತಕ ಬುದ್ಧಿಮತ್ತೆ - ಚಾಲಿತ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗೆ ಉತ್ತೇಜನ
Posted On:
22 OCT 2025 10:07AM
|
ಪ್ರಮುಖ ಮಾರ್ಗಸೂಚಿಗಳು
- ಕೃತಕ ಬುದ್ಧಿಮತ್ತೆ ಸನ್ನದ್ಧತೆಗಾಗಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವು, ಹೆಚ್ಚುತ್ತಿರುವ ಈ ಡಿಜಿಟಲ್ ಜಗತ್ತಿನಲ್ಲಿ ಭವಿಷ್ಯಕ್ಕೆ ಸಿದ್ಧವಾದ ಭಾರತವನ್ನು ಸಕ್ರಿಯಗೊಳಿಸಲು, 6 ರಿಂದ 12ನೇ ತರಗತಿಯ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಗುರಿಯಾಗಿಸಿಕೊಂಡಿದೆ.
- ಎಸ್.ಓ.ಎ.ಆರ್ ಕಾರ್ಯಕ್ರಮವು ವಿದ್ಯಾರ್ಥಿಗಳಿಗಾಗಿ 3 ಗುರಿಯುಳ್ಳ 15-ಗಂಟೆಗಳ ಮಾಡ್ಯೂಲ್ಗಳನ್ನು ಮತ್ತು ಶಿಕ್ಷಕರಿಗಾಗಿ ಒಂದು ಸ್ವತಂತ್ರ 45-ಗಂಟೆಗಳ ಮಾಡ್ಯೂಲ್ ಅನ್ನು ಒಳಗೊಂಡಿದೆ. ಇದು ನೈತಿಕ ಎಐ ಬಳಕೆ ಮತ್ತು ಯಂತ್ರ ಕಲಿಕೆಯ ಮೂಲಭೂತ ಪರಿಕಲ್ಪನೆಗಳಂತಹ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ.
- ಕೇಂದ್ರ ಬಜೆಟ್ 2025-26 ರಲ್ಲಿ, ಎಐ-ಚಾಲಿತ ಕಲಿಕೆ ಮತ್ತು ನಾವೀನ್ಯತೆಯನ್ನು ಮುನ್ನಡೆಸುವ ಗುರಿಯೊಂದಿಗೆ, ಶಿಕ್ಷಣಕ್ಕಾಗಿ ಕೃತಕ ಬುದ್ಧಿಮತ್ತೆಯಲ್ಲಿ ಒಂದು ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲು ₹500 ಕೋಟಿ ಮೀಸಲಿಡಲಾಗಿದೆ.
- ಜೂನ್ 2025 ರ ಹೊತ್ತಿಗೆ, ಎನ್.ಎ.ಪಿ.ಎಸ್-2 ಅಡಿಯಲ್ಲಿ ಎಐ ಡಾಟಾ ಇಂಜಿನಿಯರ್ ಮತ್ತು ಮೆಷಿನ್ ಲರ್ನಿಂಗ್ ಇಂಜಿನಿಯರ್ ನಂತಹ ಎಐ-ಸಂಬಂಧಿತ ಪಾತ್ರಗಳಲ್ಲಿ, ಹಣಕಾಸು ವರ್ಷ 2022-23 ರಿಂದ 2025-2026 ರ ನಡುವೆ 1,480 ಅಪ್ರೆಂಟಿಸ್‌ಗಳಿಗೆ ತರಬೇತಿ ನೀಡಲಾಗಿದೆ.
|
ಪರಿಚಯ
ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ಡಾಟಾ ಸೈನ್ಸ್ ಮತ್ತು ಯಾಂತ್ರೀಕರಣದಲ್ಲಿನ ಪ್ರಗತಿಯಿಂದಾಗಿ ಜಾಗತಿಕ ಉದ್ಯೋಗಿ ಬಳಗದಲ್ಲಿ ಆಳವಾದ ಪರಿವರ್ತನೆ ಉಂಟಾಗುತ್ತಿದೆ. ಆರೋಗ್ಯ ರಕ್ಷಣೆ, ಹಣಕಾಸು, ಶಿಕ್ಷಣ, ಉತ್ಪಾದನೆ ಮತ್ತು ಸಾರ್ವಜನಿಕ ಸೇವೆಗಳಂತಹ ಕೈಗಾರಿಕೆಗಳಲ್ಲಿ ಎಐ ಅಳವಡಿಕೆಯಾಗುತ್ತಿದ್ದಂತೆ, ವ್ಯಾಪಕ ಮಟ್ಟದ ಎಐ ಸಾಕ್ಷರತೆ ಮತ್ತು ವಿಶೇಷ ಪ್ರತಿಭೆಗಳ ತುರ್ತು ಅಗತ್ಯವಿದೆ. ಭಾರತದಲ್ಲಿನ ಸ್ಕಿಲ್ಲಿಂಗ್ ಫಾರ್ ಎಐ ರೆಡಿನೆಸ್ ಕಾರ್ಯಕ್ರಮವು, ಭಾರತದ ಶೈಕ್ಷಣಿಕ ಚೌಕಟ್ಟಿನಲ್ಲಿ ಕೃತಕ ಬುದ್ಧಿಮತ್ತೆಯ ಸಾಮರ್ಥ್ಯಗಳನ್ನು ಸಂಯೋಜಿಸಲು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಒಂದು ಕಾರ್ಯತಂತ್ರದ ಉಪಕ್ರಮವಾಗಿದೆ. ಇದು ಜಾಗತಿಕ ತಾಂತ್ರಿಕ ಪ್ರಗತಿಗಳಲ್ಲಿ ಮುಂಚೂಣಿಯಲ್ಲಿರಬೇಕು ಎಂಬ ಸರ್ಕಾರದ ಗುರಿಯೊಂದಿಗೆ ಹೊಂದಿಕೆಯಾಗುತ್ತದೆ. ಜುಲೈ 2025 ರಲ್ಲಿ ಪ್ರಾರಂಭಿಸಲಾದ ಈ ಕಾರ್ಯಕ್ರಮವು, 2015 ರಿಂದ ವಿವಿಧ ಕೌಶಲ್ಯ ಯೋಜನೆಗಳ ಮೂಲಕ ಜನರಿಗೆ ಅಧಿಕಾರ ನೀಡಿದ ಸ್ಕಿಲ್ ಇಂಡಿಯಾ ಮಿಷನ್‌ನ 10 ವರ್ಷಗಳ ಮೈಲಿಗಲ್ಲಿನೊಂದಿಗೆ ಹೊಂದಿಕೊಂಡಿದೆ. ಈ ಯೋಜನೆಗಳು, ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ 4.0 ಅಡಿಯಲ್ಲಿ ಎಐ ನಂತಹ ಉದಯೋನ್ಮುಖ ಕ್ಷೇತ್ರಗಳಿಗೆ ವಿಸ್ತರಣೆಗೊಂಡಿವೆ.
ಎಸ್.ಓ.ಎ.ಆರ್ ನ ಧ್ಯೇಯ: ಭವಿಷ್ಯಕ್ಕೆ ಅಧಿಕಾರ ನೀಡುವುದು

ಕೃತಕ ಬುದ್ಧಿಮತ್ತೆ ಅರಿವಿಗೆ ಉತ್ತೇಜನ: ಎಸ್.ಓ.ಎ.ಆರ್ ಉಪಕ್ರಮವು ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಎಐ ಸಾಕ್ಷರತೆಯನ್ನು ಬೆಳೆಸಲು ಆದ್ಯತೆ ನೀಡುತ್ತದೆ. ಯಂತ್ರ ಕಲಿಕೆಯ ಮೂಲಭೂತ ಅಂಶಗಳು ಮತ್ತು ನೈತಿಕ ಎಐ ಬಳಕೆಯಂತಹ ಮೂಲಭೂತ ಎಐ ಪರಿಕಲ್ಪನೆಗಳನ್ನು ಪರಿಚಯಿಸುವುದರ ಮೂಲಕ, ಈ ಕಾರ್ಯಕ್ರಮವು ಯುವ ಕಲಿಯುವವರಲ್ಲಿ ಕುತೂಹಲ ಮತ್ತು ಮಹತ್ವಾಕಾಂಕ್ಷೆಯನ್ನು ಹುಟ್ಟುಹಾಕಿ, ಅವರನ್ನು ತಂತ್ರಜ್ಞಾನ-ಚಾಲಿತ ಭವಿಷ್ಯಕ್ಕಾಗಿ ಸಿದ್ಧಪಡಿಸುವ ಗುರಿ ಹೊಂದಿದೆ. ಶಿಕ್ಷಕರಿಗಾಗಿ, ಎಸ್.ಓ.ಎ.ಆರ್ ಪ್ರಸ್ತುತ ಇರುವ ಪಠ್ಯಕ್ರಮಗಳಲ್ಲಿ ಎಐ ಮಾಡ್ಯೂಲ್‌ಗಳನ್ನು ಅಳವಡಿಸಲು ವಿಶೇಷ ತರಬೇತಿಯನ್ನು ಒದಗಿಸುತ್ತದೆ, ಇದು ಪರಿಣಾಮಕಾರಿ ವಿತರಣೆ ಮತ್ತು ಉದ್ಯಮದ ಅಗತ್ಯತೆಗಳೊಂದಿಗೆ ಹೊಂದಾಣಿಕೆಯನ್ನು ಖಚಿತಪಡಿಸುತ್ತದೆ.
ಆರ್ಥಿಕ ಸ್ವಾವಲಂಬನೆಗೆ ಬೆಂಬಲ: ಎಸ್.ಓ.ಎ.ಆರ್ ಕಾರ್ಯಕ್ರಮವು, ಯುವಕರಿಗೆ ಐಟಿ , ಡಿಜಿಟಲ್ ನಾವೀನ್ಯತೆ ಮತ್ತು ಎಐ-ಚಾಲಿತ ಕೈಗಾರಿಕೆಗಳಂತಹ ಹೆಚ್ಚಿನ ಬೇಡಿಕೆಯ ವಲಯಗಳಿಗೆ ಕೌಶಲ್ಯಗಳನ್ನು ಒದಗಿಸುವ ಮೂಲಕ, ಭಾರತದ ಆರ್ಥಿಕ ಸ್ವಾವಲಂಬನೆಯ (ಆತ್ಮನಿರ್ಭರ ಭಾರತ) ದೃಷ್ಟಿಕೋನವನ್ನು ಕಾರ್ಯತಂತ್ರವಾಗಿ ಬೆಂಬಲಿಸುತ್ತದೆ. ಉದ್ಯೋಗಾವಕಾಶ ಮತ್ತು ಉದ್ಯಮಶೀಲತೆಯನ್ನು ಹೆಚ್ಚಿಸಲು ಉದಯೋನ್ಮುಖ ತಂತ್ರಜ್ಞಾನಗಳಿಗಾಗಿ ಕೌಶಲ್ಯಾಭಿವೃದ್ಧಿಯ ಮೇಲೆ ಕೇಂದ್ರೀಕರಿಸುವ ಪಿಎಂಕೆವಿವೈ 4.0 ನಂತಹ ಪ್ರಮುಖ ಯೋಜನೆಗಳ ಅಡಿಯಲ್ಲಿ ರಾಷ್ಟ್ರೀಯ ಆದ್ಯತೆಗಳೊಂದಿಗೆ ಈ ಉಪಕ್ರಮವು ಹೊಂದಿಕೊಂಡಿದೆ.
ತಂತ್ರಜ್ಞಾನ ಚಾಲಿತ ಭಾರತವನ್ನು ನಿರ್ಮಿಸುವುದು: ಎಸ್.ಓ.ಎ.ಆರ್ ನ ದೂರಗಾಮಿ ದೃಷ್ಟಿಯು, ಭಾರತೀಯ ಯುವಕರನ್ನು ಎಐ-ಚಾಲಿತ ವೃತ್ತಿಜೀವನ ಮತ್ತು ಉದ್ಯಮಶೀಲತಾ ಸಾಹಸಗಳಿಗಾಗಿ ಸಿದ್ಧಪಡಿಸುವ ಮೂಲಕ, ಜಾಗತಿಕವಾಗಿ ಎಐ ಕ್ಷೇತ್ರದಲ್ಲಿ ಭಾರತವನ್ನು ಮುಂಚೂಣಿಯಲ್ಲಿ ನಿಲ್ಲಿಸುವುದು ಆಗಿದೆ. ಎಐ-ಸಾಕ್ಷರ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಬಲವಾದ ಪರಿಸರ ವ್ಯವಸ್ಥೆಯನ್ನು ಪೋಷಿಸುವ ಮೂಲಕ, ಈ ಉಪಕ್ರಮವು ಎಐ ಅಭಿವೃದ್ಧಿ, ಡಾಟಾ ಅನಾಲಿಟಿಕ್ಸ್ ಮತ್ತು ಟೆಕ್ ನಾವೀನ್ಯತೆಗಳಲ್ಲಿನ ಪಾತ್ರಗಳಿಗಾಗಿ ಕೌಶಲ್ಯಪೂರ್ಣ ವೃತ್ತಿಪರರ ಸರಪಳಿಯನ್ನು ಸೃಷ್ಟಿಸುವ ಗುರಿ ಹೊಂದಿದೆ.

ಕೃತಕ ಬುದ್ಧಿಮತ್ತೆ: ಭಾರತದ ಶಿಕ್ಷಣ ಭೂದೃಶ್ಯವನ್ನು ಪರಿವರ್ತಿಸುವುದು
ಕೃತಕ ಬುದ್ಧಿಮತ್ತೆಯು ನಾವೀನ್ಯತೆಯನ್ನು ಉತ್ತೇಜಿಸುವ, ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸುವ ಮತ್ತು ವಿದ್ಯಾರ್ಥಿಗಳನ್ನು ತಂತ್ರಜ್ಞಾನ-ಚಾಲಿತ ಭವಿಷ್ಯಕ್ಕಾಗಿ ಸಿದ್ಧಪಡಿಸುವ ಮೂಲಕ ಭಾರತದ ಶಿಕ್ಷಣ ವಲಯದಲ್ಲಿ ಕ್ರಾಂತಿಯನ್ನುಂಟು ಮಾಡುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020ರ ಶಿಫಾರಸುಗಳೊಂದಿಗೆ ಹೊಂದಿಕೊಂಡು, ಎಐ ಅನ್ನು ತರಗತಿಗಳು ಮತ್ತು ಕೌಶಲ್ಯ ಅಭಿವೃದ್ಧಿ ಚೌಕಟ್ಟುಗಳಲ್ಲಿ ಸುಗಮವಾಗಿ ಸಂಯೋಜಿಸಲಾಗುತ್ತಿದೆ. ಈ ಪರಿವರ್ತನೆಗೆ ಕಾರಣವಾಗುವ ಕೆಲವು ಪ್ರಮುಖ ಬೆಳವಣಿಗೆಗಳು ಹೀಗಿವೆ:

ಶಾಲಾ ಪಠ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆ
ರಾಷ್ಟ್ರೀಯ ಶಿಕ್ಷಣ ನೀತಿ 2020 ಯು ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಮತ್ತು ಡಿಜಿಟಲ್ ಸಾಕ್ಷರತೆಯನ್ನು ಉತ್ತೇಜಿಸಲು, ಸೂಕ್ತ ಹಂತಗಳಲ್ಲಿ ಕೃತಕ ಬುದ್ಧಿಮತ್ತೆ ಯಂತಹ ಸಮಕಾಲೀನ ವಿಷಯಗಳನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಲು ಒತ್ತು ನೀಡುತ್ತದೆ. ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ಈಗಾಗಲೇ ಅಂಗಸಂಸ್ಥೆ ಶಾಲೆಗಳಲ್ಲಿ ಎಐ ಅನ್ನು ಒಂದು ವಿಷಯವಾಗಿ ಜಾರಿಗೊಳಿಸಿದೆ. ಇದನ್ನು 2019-2020ರ ಶೈಕ್ಷಣಿಕ ವರ್ಷದಿಂದ 9ನೇ ತರಗತಿಯಲ್ಲಿ ಪರಿಚಯಿಸಲಾಗಿದ್ದು, 2020-2021ರ ಅವಧಿಯಿಂದ 11ನೇ ತರಗತಿಗೂ ವಿಸ್ತರಿಸಲಾಗಿದೆ. ಇದು ಕೌಶಲ್ಯ ಅಭಿವೃದ್ಧಿ ಮತ್ತು ವೈಯಕ್ತಿಕಗೊಳಿಸಿದ ಕಲಿಕಾ ಸಾಧನಗಳಂತಹ ಪ್ರಾಯೋಗಿಕ ಅನ್ವಯಗಳ ಮೇಲೆ ಕೇಂದ್ರೀಕರಿಸುತ್ತದೆ.
ಕೃತಕ ಬುದ್ಧಿಮತ್ತೆಯಲ್ಲಿ ಉತ್ಕೃಷ್ಟತಾ ಕೇಂದ್ರದ ಸ್ಥಾಪನೆ
ಭಾರತ ಸರ್ಕಾರವು ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಕೆಯನ್ನು ಮುನ್ನಡೆಸಲು ಪ್ರಮುಖ ಉಪಕ್ರಮವಾಗಿ ಎಐ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸುತ್ತಿದೆ.ಭಾರತೀಯ ಭಾಷೆಗಳಿಗೆ ಎಐ ಅನ್ನು ಬಳಸಿಕೊಳ್ಳುವುದು, ತರಗತಿಗಳಲ್ಲಿ ವಿಮರ್ಶಾತ್ಮಕ ಚಿಂತನೆಯನ್ನು ಉತ್ತೇಜಿಸುವುದು ಮತ್ತು ಸಾಂಪ್ರದಾಯಿಕ ಬೋಧನಾ ವಿಧಾನಗಳಿಂದ "ಚಾಕ್‌ಬೋರ್ಡ್‌ಗಳಿಂದ ಚಿಪ್‌ಸೆಟ್‌ಗಳವರೆಗೆ" ಎಂಬ ತಂತ್ರಜ್ಞಾನ-ಚಾಲಿತ ವಿಧಾನಗಳಿಗೆ ಪರಿವರ್ತನೆಗೊಳ್ಳುವುದು ಇದರ ಗುರಿಯಾಗಿದೆ.
ಈ ಕೇಂದ್ರವು ಎಐ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲವನ್ನು ನಿರ್ಮಿಸುವ ವ್ಯಾಪಕವಾದ ರಾಷ್ಟ್ರೀಯ ಪ್ರಯತ್ನಗಳಿಗೆ ಬೆಂಬಲ ನೀಡಲಿದೆ. ಇದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಿಂದ (AICTE) ಅನುಮೋದಿಸಲ್ಪಟ್ಟ ಸಂಸ್ಥೆಗಳು ವಿವಿಧ ಶೈಕ್ಷಣಿಕ ಕೋರ್ಸ್‌ಗಳಲ್ಲಿ ಎಐ ಅನ್ನು ಐಚ್ಛಿಕ ವಿಷಯವಾಗಿ (elective) ಒದಗಿಸುವ ಶಿಫಾರಸುಗಳನ್ನು ಸಹ ಒಳಗೊಂಡಿದೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ಸ್ ಆಫ್ ಟೆಕ್ನಾಲಜಿ (ಐಐಟಿಗಳು) ಸಹ ಇದಕ್ಕೆ ಪೂರಕವಾಗಿ ಡೀಪ್ ಲರ್ನಿಂಗ್, ಮೆಷಿನ್ ಲರ್ನಿಂಗ್ ಮತ್ತು ಪ್ರಿಡಿಕ್ಟಿವ್ ಡಾಟಾ ಅನಾಲಿಟಿಕ್ಸ್‌ನಂತಹ ಸುಧಾರಿತ ಎಐ-ಸಂಬಂಧಿತ ಕೋರ್ಸ್‌ಗಳನ್ನು ನೀಡುತ್ತಿವೆ.
ಸ್ಕಿಲ್ ಇಂಡಿಯಾ ಮಿಷನ್ನಲ್ಲಿ (ಎಸ್ಐಎಂ) ಎಐ ಮತ್ತು ಡಿಜಿಟಲ್ ಕಲಿಕೆಯ ಸಂಯೋಜನೆ
ಭಾರತ ಸರ್ಕಾರವು ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಕಲಿಕಾ ಕಾರ್ಯಕ್ರಮಗಳನ್ನು ಸ್ಕಿಲ್ ಇಂಡಿಯಾ ಮಿಷನ್‌ನ ಒಳಗೆ ಸಕ್ರಿಯವಾಗಿ ಸಂಯೋಜಿಸುತ್ತಿದೆ.
ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ 4.0, ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಚಾರ ಯೋಜನೆ, ಕೈಗಾರಿಕಾ ತರಬೇತಿ ಸಂಸ್ಥೆಗಳು, ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಗಳು ಮತ್ತು ಸ್ಕಿಲ್ ಇಂಡಿಯಾ ಡಿಜಿಟಲ್ ಹಬ್ ವೇದಿಕೆಯ ಅಡಿಯಲ್ಲಿ ಗುರಿಯಿಟ್ಟ ಉಪಕ್ರಮಗಳೊಂದಿಗೆ, ಭವಿಷ್ಯಕ್ಕೆ ಸಿದ್ಧವಾದ ಉದ್ಯೋಗಿ ಬಳಗವನ್ನು ಸಿದ್ಧಪಡಿಸುವುದು ಇದರ ಉದ್ದೇಶವಾಗಿದೆ.




ಎಸ್.ಓ.ಎ.ಆರ್ : ಪ್ರಸ್ತುತತೆ ಮತ್ತು ನಿರೀಕ್ಷಿತ ಫಲಿತಾಂಶಗಳು
ಸ್ಕಿಲ್ ಇಂಡಿಯಾ ಮಿಷನ್‌ನೊಂದಿಗೆ ಕಾರ್ಯತಂತ್ರದ ಹೊಂದಾಣಿಕೆ: ಎಸ್.ಓ.ಎ.ಆರ್ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಉದ್ದೇಶಿತ ಮಾಡ್ಯೂಲ್‌ಗಳನ್ನು ಒದಗಿಸುವ ಮೂಲಕ ಸ್ಕಿಲ್ ಇಂಡಿಯಾ ಮಿಷನ್‌ಗೆ ಬೆಂಬಲ ನೀಡುತ್ತದೆ. ಇದು ಯುವಕರಿಗೆ ಎಐ-ಚಾಲಿತ ವಲಯಗಳಲ್ಲಿ ಉದ್ಯೋಗಾರ್ಹತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಅಗತ್ಯವಾದ ಡಿಜಿಟಲ್ ಕೌಶಲ್ಯಗಳನ್ನು ಒದಗಿಸುತ್ತದೆ.
ವಿಕಸಿತ ಭಾರತ ದೃಷ್ಟಿಕೋನಕ್ಕೆ ಕೊಡುಗೆ: ಈ ಕಾರ್ಯಕ್ರಮವು 'ಎಲ್ಲರಿಗಾಗಿ ಎಐ' ಉಪಕ್ರಮಗಳ ಮೂಲಕ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಗೆ ಪ್ರಗತಿ ನೀಡುತ್ತದೆ. ಇದು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಕಾರ್ಯತಂತ್ರಗಳಲ್ಲಿ ಒತ್ತಿಹೇಳಿದಂತೆ, ನಾವೀನ್ಯತೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಎಐ ಅನ್ನು ಬಳಸಿಕೊಳ್ಳುವ ತಂತ್ರಜ್ಞಾನ-ಜ್ಞಾನವುಳ್ಳ ಉದ್ಯೋಗಿ ಬಳಗವನ್ನು ಪೋಷಿಸುತ್ತದೆ.
ಡಿಜಿಟಲ್ ಒಳಗೊಳ್ಳುವಿಕೆಗೆ ಪ್ರಚಾರ (ಅಥವಾ ಉತ್ತೇಜನ): ಎಸ್.ಓ.ಎ.ಆರ್ ಕಾರ್ಯಕ್ರಮವು ಎಐ ತರಬೇತಿಯನ್ನು ಸ್ಕಿಲ್ ಇಂಡಿಯಾ ಡಿಜಿಟಲ್ ಹಬ್‌ನಂತಹ ಸುಲಭವಾಗಿ ಪ್ರವೇಶಿಸಬಹುದಾದ ವೇದಿಕೆಗಳಲ್ಲಿ ಸಂಯೋಜಿಸುವ ಮೂಲಕ ನಗರ-ಗ್ರಾಮೀಣ ಡಿಜಿಟಲ್ ಅಂತರವನ್ನು ಕಡಿಮೆ ಮಾಡುತ್ತದೆ. ಇದು ಸರ್ಕಾರಿ ಮತ್ತು ಖಾಸಗಿ ಶಾಲೆಗಳಾದ್ಯಂತ ಡಿಜಿಟಲ್ ಕೌಶಲ್ಯಗಳಿಗೆ ಸಮಾನ ಪ್ರವೇಶವನ್ನು ಖಚಿತಪಡಿಸುತ್ತದೆ, ಆ ಮೂಲಕ ಅಂಚಿನಲ್ಲಿರುವ ಸಮುದಾಯಗಳಿಗೆ ಅಧಿಕಾರ ನೀಡುತ್ತದೆ.
ಎಐ-ಅರಿವುಳ್ಳ ವಿದ್ಯಾರ್ಥಿಗಳು ಮತ್ತು ತರಬೇತಿ ಪಡೆದ ಶಿಕ್ಷಕರು: ಎಸ್.ಓ.ಎ.ಆರ್ ಕಾರ್ಯಕ್ರಮವು ನೈತಿಕ ಎಐ ಅನ್ವಯಿಕೆಗಳಲ್ಲಿ ಸಮರ್ಥರಾಗಿರುವ ಎಐ-ಅರಿವುಳ್ಳ ವಿದ್ಯಾರ್ಥಿಗಳನ್ನು ರೂಪಿಸುವ ಗುರಿ ಹೊಂದಿದೆ. ಜೊತೆಗೆ, ಬೋಧನಾ ವಿಧಾನಗಳನ್ನು ಹೆಚ್ಚಿಸಲು ಮತ್ತು ತರಗತಿಗಳಲ್ಲಿ ಎಐಯ ವ್ಯಾಪಕ ಅಳವಡಿಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರಿ ಮತ್ತು ಖಾಸಗಿ ಶಾಲೆಗಳಾದ್ಯಂತ ಶಿಕ್ಷಕರಿಗೆ ತರಬೇತಿ ನೀಡುವ ಗುರಿ ಹೊಂದಿದೆ.
ಎಐ ವೃತ್ತಿ ಆಸಕ್ತಿಯನ್ನು ಹೆಚ್ಚಿಸುವುದು ಮತ್ತು ಕೌಶಲ್ಯದ ಅಂತರವನ್ನು ಕಡಿಮೆ ಮಾಡುವುದು: ಎಸ್.ಓ.ಎ.ಆರ್ ಕಾರ್ಯಕ್ರಮವು ಪ್ರಾಯೋಗಿಕ ಕೌಶಲ್ಯಾಭಿವೃದ್ಧಿಯ ಮೂಲಕ ಎಐ ವೃತ್ತಿಜೀವನದಲ್ಲಿ ಯುವಕರ ಆಸಕ್ತಿಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಇದು ಸಮಗ್ರ ತರಬೇತಿಯನ್ನು ಒದಗಿಸುವ ಮತ್ತು ಹೆಚ್ಚಿನ ಬೇಡಿಕೆಯಿರುವ ಟೆಕ್ ಕೌಶಲ್ಯಗಳಿಗೆ ಪ್ರವೇಶವನ್ನು ಸಕ್ರಿಯಗೊಳಿಸುವ ಮೂಲಕ, ಡಿಜಿಟಲ್ ಸಾಮರ್ಥ್ಯಗಳಲ್ಲಿನ ನಗರ-ಗ್ರಾಮೀಣ ಅಂತರವನ್ನು ಸಹ ಕಡಿಮೆ ಮಾಡುತ್ತದೆ.
ಉಪಸಂಹಾರ
ಸ್ಕಿಲ್ಲಿಂಗ್ ಫಾರ್ ಎಐ ರೆಡಿನೆಸ್ ಕಾರ್ಯಕ್ರಮವು ಭಾರತವನ್ನು ಕೃತಕ ಬುದ್ಧಿಮತ್ತೆ-ಚಾಲಿತ ಶಿಕ್ಷಣ ಮತ್ತು ಉದ್ಯೋಗಿ ಬಳಗ ಅಭಿವೃದ್ಧಿಯಲ್ಲಿ ಜಾಗತಿಕ ಮುಂಚೂಣಿಯಲ್ಲಿ ಇರಿಸುವ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಶಾಲಾ ಪಠ್ಯಕ್ರಮ ಮತ್ತು ವೃತ್ತಿಪರ ತರಬೇತಿಯೊಳಗೆ ಎಐ ಸಾಕ್ಷರತೆಯನ್ನು ಅಳವಡಿಸುವುದರ ಮೂಲಕ, ಎಸ್.ಓ.ಎ.ಆರ್ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅತ್ಯಾಧುನಿಕ ಕೌಶಲ್ಯಗಳನ್ನು ನೀಡುವುದಲ್ಲದೆ, ನಾವೀನ್ಯತೆ ಮತ್ತು ನೈತಿಕ ತಂತ್ರಜ್ಞಾನ ಬಳಕೆಯ ಸಂಸ್ಕೃತಿಯನ್ನು ಪೋಷಿಸುತ್ತದೆ. ಕಾರ್ಯತಂತ್ರದ ಪಾಲುದಾರಿಕೆಗಳು ಮತ್ತು ಸ್ಕಿಲ್ ಇಂಡಿಯಾ ಡಿಜಿಟಲ್ ಹಬ್‌ನಂತಹ ವೇದಿಕೆಗಳ ಮೂಲಕ, ಈ ಕಾರ್ಯಕ್ರಮವು ವಿವಿಧ ಸಾಮಾಜಿಕ-ಆರ್ಥಿಕ ಗುಂಪುಗಳಿಗೆ ಪ್ರವೇಶವನ್ನು ಖಚಿತಪಡಿಸುತ್ತದೆ, ತಾಂತ್ರಿಕ ಮತ್ತು ಆರ್ಥಿಕ ಪ್ರಗತಿಯನ್ನು ಮುನ್ನಡೆಸಲು ಭಾರತದ ಯುವಕರಿಗೆ ಅಧಿಕಾರ ನೀಡುತ್ತದೆ. ವಿಕಸಿತ ಭಾರತ @ 2047 ದೃಷ್ಟಿಕೋನದ ಮೂಲಾಧಾರವಾಗಿ, ಎಸ್.ಓ.ಎ.ಆರ್ ಕಾರ್ಯಕ್ರಮವು ಜಾಗತಿಕ ನಾವೀನ್ಯತೆಯ ಭವಿಷ್ಯವನ್ನು ರೂಪಿಸಲು ಸಿದ್ಧವಾಗಿರುವ, ಡಿಜಿಟಲ್ ಒಳಗೊಳ್ಳುವಿಕೆಯ, ಸ್ಪರ್ಧಾತ್ಮಕ ಮತ್ತು ಸ್ವಾವಲಂಬಿ ಭಾರತಕ್ಕೆ ಅಡಿಪಾಯ ಹಾಕುತ್ತದೆ.
References:
Union Budget:
https://www.indiabudget.gov.in/doc/bh1.pdf
Press Information Bureau:
https://www.pib.gov.in/PressReleasePage.aspx?PRID=2153010
https://www.pib.gov.in/PressReleseDetailm.aspx?PRID=2147048
https://www.pib.gov.in/Pressreleaseshare.aspx?PRID=1704878
Ministry of Education:
https://www.education.gov.in/sites/upload_files/mhrd/files/PIB2132184.pdf
Ministry of Skill Development and Entrepreneurship:
https://www.skillindiadigital.gov.in/home
https://sansad.in/getFile/loksabhaquestions/annex/184/AU2748_0eg8Dq.pdf?source=pqals
https://www.apprenticeshipindia.gov.in/
Others:
https://www.cprgindia.org/Padh-AI-Conclave/image/pdf/PADHAI-CONCLAVE-BROCHURE.pdf
Click here to see PDF
*****
(Backgrounder ID: 155643)
Visitor Counter : 7
Provide suggestions / comments
Read this release in:
Malayalam
,
English
,
Manipuri
,
Bengali
,
Assamese
,
Urdu
,
Nepali
,
हिन्दी
,
Hindi_Ddn
,
Punjabi
,
Odia
,
Telugu