• Skip to Content
  • Sitemap
  • Advance Search
Infrastructure

ನೌಕಾಯಾನ ಆರಂಭ: ಭಾರತದ ಹಡಗು ನಿರ್ಮಾಣದ ಪುನರ್ ಸ್ಥಾಪನೆ

Posted On: 14 OCT 2025 4:15PM

ಪ್ರಮುಖ ಮಾರ್ಗಸೂಚಿಗಳು

  • ಸೆಪ್ಟೆಂಬರ್ 2025ರಲ್ಲಿ 69,725 ಕೋಟಿ ಮೌಲ್ಯದ ಹಡಗು ನಿರ್ಮಾಣ ಮತ್ತು ಕಡಲ ಸುಧಾರಣಾ ಯೋಜನೆಗಳನ್ನು ಅನಾವರಣಗೊಳಿಸಲಾಗಿದೆ.
  • ₹24,736 ಕೋಟಿ ವೆಚ್ಚದ ಹಡಗು ನಿರ್ಮಾಣ ಆರ್ಥಿಕ ನೆರವು ಯೋಜನೆಯು ಆರ್ಥಿಕ ಬೆಂಬಲ, ಹಡಗು ಒಡೆಯುವಿಕೆಯ ಕ್ರೆಡಿಟ್ ನೋಟುಗಳನ್ನು ಒದಗಿಸುತ್ತದೆ ಮತ್ತು ರಾಷ್ಟ್ರೀಯ ಹಡಗು ನಿರ್ಮಾಣ ಮಿಷನ್ ಮೂಲಕ ದೇಶೀಯ ಉತ್ಪಾದನೆಗೆ ಮಾರ್ಗದರ್ಶನ ನೀಡುತ್ತದೆ.
  • ₹25,000 ಕೋಟಿ ವೆಚ್ಚದ ಕಡಲ ಅಭಿವೃದ್ಧಿ ನಿಧಿಯು ಬಂಡವಾಳ ಹೂಡಿಕೆ ಮತ್ತು ಬಡ್ಡಿ ಪ್ರೋತ್ಸಾಹದತ್ತ ಗಮನ ಹರಿಸುತ್ತದೆ.
  • ₹19,989 ಕೋಟಿ ವೆಚ್ಚದ ಹಡಗು ನಿರ್ಮಾಣ ಅಭಿವೃದ್ಧಿ ಯೋಜನೆಯು ಬಂಡವಾಳ ಬೆಂಬಲ, ಅಪಾಯದ ವ್ಯಾಪ್ತಿ ಮತ್ತು ಹಡಗು ನಿರ್ಮಾಣ ಕ್ಲಸ್ಟರ್‌ಗಳಿಗೆ ಸಾಮರ್ಥ್ಯ-ವರ್ಧನೆಯನ್ನು ಒದಗಿಸುತ್ತದೆ.
  • ದೊಡ್ಡ ಹಡಗುಗಳಿಗೆ ಮೂಲಸೌಕರ್ಯದ ಸ್ಥಾನಮಾನವನ್ನು ನೀಡಿರುವುದು ದೇಶೀಯ ಹಡಗು ನಿರ್ಮಾಣವನ್ನು ಉತ್ತೇಜಿಸಲಿದೆ.

ಅವಲೋಕನ

ಸಾಂಪ್ರದಾಯಿಕತೆಯಲ್ಲಿ ಆಧಾರವಾಗಿ ಮತ್ತು ತಂತ್ರಜ್ಞಾನದಿಂದ ಚಾಲಿತವಾಗಿ, ಭಾರತದ ಹಡಗು ನಿರ್ಮಾಣದ ಭೂದೃಶ್ಯವು ಜಾಗತಿಕ ಮನ್ನಣೆಗೆ ಸಿದ್ಧವಾಗಿದೆ. ಭಾರತದ ಕಡಲ ವಲಯವು ಐತಿಹಾಸಿಕವಾಗಿ ಉಪಖಂಡವನ್ನು ಜಾಗತಿಕ ವ್ಯಾಪಾರ ಮಾರ್ಗಗಳಿಗೆ ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸಿದೆ; ಇಲ್ಲಿನ ಶತಮಾನಗಳ ಸಮುದ್ರಯಾನ ಮತ್ತು ವಾಣಿಜ್ಯವು ಅದರ ಆರ್ಥಿಕ ಅಡಿಪಾಯವನ್ನು ರೂಪಿಸಿವೆ. ಭಾರತದ ಹಡಗು ನಿರ್ಮಾಣದ ಸಂಪ್ರದಾಯವು ಸಿಂಧೂ ಕಣಿವೆ ನಾಗರಿಕತೆಯ ಹಿಂದಿನದ್ದಾಗಿದೆ. ಲೋಥಾಲ್‌ನಂತಹ (ಇಂದಿನ ಗುಜರಾತ್‌ನಲ್ಲಿರುವ) ಸ್ಥಳಗಳ ಪುರಾತತ್ವ ಪುರಾವೆಗಳು ಹಡಗುಕಟ್ಟೆಗಳು ಮತ್ತು ಕಡಲ ವ್ಯಾಪಾರದ ಅಸ್ತಿತ್ವವನ್ನು ಸೂಚಿಸುತ್ತವೆ. ಲೋಥಾಲ್‌ನ ಹಡಗುಕಟ್ಟೆಯು ವಿಶ್ವದ ಅತ್ಯಂತ ಪ್ರಾಚೀನ ತಿಳಿದಿರುವ ಉಬ್ಬರವಿಳಿತದ ಹಡಗುಕಟ್ಟೆಗಳಲ್ಲಿ ಒಂದಾಗಿದೆ.

ಹಡಗು ನಿರ್ಮಾಣವು, ಸಾಮಾನ್ಯವಾಗಿ "ಭಾರಿ ಎಂಜಿನಿಯರಿಂಗ್‌ನ ತಾಯಿ" ಎಂದು ಕರೆಯಲ್ಪಡುತ್ತದೆ, ಇದು ಉದ್ಯೋಗವನ್ನು ಸೃಷ್ಟಿಸುವುದು, ಹೂಡಿಕೆಯನ್ನು ಆಕರ್ಷಿಸುವುದು ಮತ್ತು ರಾಷ್ಟ್ರೀಯ ಭದ್ರತೆ ಹಾಗೂ ಆರ್ಥಿಕ ಸ್ವಾತಂತ್ರ್ಯವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭಾರತದ ಹಡಗು ನಿರ್ಮಾಣ ವಲಯವು ಬಲವಾದ ಆರ್ಥಿಕ ಪರಿಣಾಮವನ್ನು ಸೃಷ್ಟಿಸುತ್ತದೆ; ಪ್ರತಿ ಹೂಡಿಕೆಯು ಉದ್ಯೋಗವನ್ನು 6.4 ಪಟ್ಟು ಹೆಚ್ಚಿಸುತ್ತದೆ ಮತ್ತು ಬಂಡವಾಳಕ್ಕಿಂತ 1.8 ಪಟ್ಟು ಆದಾಯವನ್ನು ನೀಡುತ್ತದೆ, ಇದು ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಮುನ್ನಡೆಸುವ ಅದರ ಶಕ್ತಿಯನ್ನು ತೋರಿಸುತ್ತದೆ. ಈ ಉದ್ಯಮವು ದೂರದ, ಕರಾವಳಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗಮನಾರ್ಹ ಭರವಸೆಯನ್ನು ಹೊಂದಿದೆ. ಆತ್ಮನಿರ್ಭರ ಭಾರತದ ದೃಷ್ಟಿಕೋನವನ್ನು ಮುನ್ನಡೆಸುವ ಪ್ರಮುಖ ಚಾಲಕ ಶಕ್ತಿಯಾಗಿ ಇದರ ಅಭಿವೃದ್ಧಿ ಮತ್ತು ಉತ್ತೇಜನಕ್ಕೆ ಆದ್ಯತೆ ನೀಡಲಾಗುತ್ತಿದೆ.

ಹಡಗು ನಿರ್ಮಾಣ ವಲಯದ ಬೆಳವಣಿಗೆ ಮತ್ತು ಅಭಿವೃದ್ಧಿ

ಸ್ವಾತಂತ್ರ್ಯಾ ನಂತರ, ಹಡಗು ನಿರ್ಮಾಣವು ಹೆಚ್ಚಾಗಿ ಮಜಗಾನ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್ (ಮುಂಬೈ), ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ & ಎಂಜಿನಿಯರ್ಸ್ ಲಿಮಿಟೆಡ್ (ಕೋಲ್ಕತ್ತಾ) ಮತ್ತು ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್ (ವಿಶಾಖಪಟ್ಟಣಂ) ನಂತಹ ಸಾರ್ವಜನಿಕ ವಲಯದ ಘಟಕಗಳಲ್ಲಿ ಕೇಂದ್ರೀಕೃತವಾಗಿತ್ತು. ಕಳೆದ ದಶಕದಲ್ಲಿ, ಖಾಸಗಿ ಹಡಗು ಸಂಸ್ಥೆಗಳ ಪ್ರವೇಶದೊಂದಿಗೆ, ಭಾರತದ ಹಡಗು ಮತ್ತು ಕಡಲ ವಲಯವು ಗಮನಾರ್ಹ ರೂಪಾಂತರಕ್ಕೆ ಸಾಕ್ಷಿಯಾಗಿದೆ. ಕ್ರೂಸ್ ಪ್ರವಾಸೋದ್ಯಮ, ಒಳನಾಡು ಜಲ ಸಾರಿಗೆ ಮತ್ತು ಬಂದರು ಮೂಲಸೌಕರ್ಯಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಕಾರ್ಯತಂತ್ರದ ಹೂಡಿಕೆಗಳು, ನೀತಿ ಸುಧಾರಣೆಗಳು ಮತ್ತು ವಿಸ್ತೃತ ಜಲಮಾರ್ಗಗಳು ಒಟ್ಟಾಗಿ ಸರಕು ಸಾಗಣೆ ಮತ್ತು ಕರಾವಳಿ ಸಂಪರ್ಕವನ್ನು ಹೆಚ್ಚಿಸಿವೆ.

ಮತ್ತು ಉದ್ಯೋಗಾವಕಾಶಗಳು, ಈ ವಲಯವನ್ನು ಆರ್ಥಿಕ ಬೆಳವಣಿಗೆ ಮತ್ತು ಪ್ರಾದೇಶಿಕ ಏಕೀಕರಣದ ಪ್ರಮುಖ ಚಾಲಕ ಶಕ್ತಿಯನ್ನಾಗಿ ಇರಿಸಿದೆ. ನವೆಂಬರ್ 2024ರ ಹೊತ್ತಿಗೆ, ಭಾರತವು 13.65 ಮಿಲಿಯನ್ ಒಟ್ಟು ಟನ್ನೇಜ್  ಹೊಂದಿರುವ 1,552 ಭಾರತೀಯ ಧ್ವಜ ಹೊತ್ತ ಹಡಗುಗಳ ಪಡೆಯನ್ನು ಹೊಂದಿದೆ.

ಪ್ರಮುಖ ಸರ್ಕಾರಿ ನೀತಿಗಳು ಮತ್ತು ಉಪಕ್ರಮಗಳು

  • ಹಡಗು ನಿರ್ಮಾಣ ಆರ್ಥಿಕ ನೆರವು ನೀತಿ: ಹಸಿರು ಇಂಧನಗಳು ಅಥವಾ ಹೈಬ್ರಿಡ್ ಪ್ರೊಪಲ್ಷನ್ ವ್ಯವಸ್ಥೆಗಳನ್ನು ಬಳಸುವ ಹಡಗುಗಳಿಗೆ 20–30% ಆರ್ಥಿಕ ನೆರವನ್ನು ನೀಡುತ್ತದೆ.
  • ಮೊದಲ ನಿರಾಕರಣೆಯ ಹಕ್ಕು: ಹಡಗುಗಳ ಸ್ವಾಧೀನಕ್ಕಾಗಿ ಸರ್ಕಾರಿ ಟೆಂಡರ್‌ಗಳಲ್ಲಿ ಭಾರತೀಯ ಹಡಗುಕಟ್ಟೆಗಳಿಗೆ ಆದ್ಯತೆ ನೀಡಲಾಗುತ್ತದೆ. ಪರಿಷ್ಕೃತ ಶ್ರೇಣೀಕರಣವು ಭಾರತದಲ್ಲಿ ನಿರ್ಮಿಸಿದ, ಭಾರತೀಯ ಧ್ವಜ ಹೊತ್ತ ಮತ್ತು ಭಾರತೀಯ ಒಡೆತನದ ಹಡಗುಗಳಿಗೆ ಅನುಕೂಲ ಮಾಡಿಕೊಡುತ್ತದೆ.
  • ಸಾರ್ವಜನಿಕ ಸಂಗ್ರಹಣೆಯಲ್ಲಿ ಆದ್ಯತೆ2017ರ 'ಮೇಕ್ ಇನ್ ಇಂಡಿಯಾ ಆದೇಶ'ದ ಪ್ರಕಾರ, ₹200 ಕೋಟಿಗಿಂತ ಕಡಿಮೆ ಮೌಲ್ಯದ ಹಡಗುಗಳನ್ನು ಭಾರತೀಯ ಹಡಗುಕಟ್ಟೆಗಳಿಂದಲೇ ಸಂಗ್ರಹಿಸಬೇಕು.
  • ಹಸಿರು ಟಗ್ ಪರಿವರ್ತನಾ ಕಾರ್ಯಕ್ರಮ: ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಪರಿಸರ ಸ್ನೇಹಿ ಟಗ್ ಬೋಟ್ ಕಾರ್ಯಾಚರಣೆಗಳನ್ನು ಉತ್ತೇಜಿಸುತ್ತದೆ.
  • ಹರಿತ್ ನೌಕಾ ಮಾರ್ಗಸೂಚಿಗಳು: ಒಳನಾಡು ಜಲಮಾರ್ಗ ನೌಕೆಗಳಲ್ಲಿ ಹಸಿರು ತಂತ್ರಜ್ಞಾನಗಳ ಅಳವಡಿಕೆಯನ್ನು ಉತ್ತೇಜಿಸುತ್ತವೆ.

ಒಡಂಬಡಿಕೆಗಳು ಮತ್ತು ಸಹಯೋಗಗಳು: ಭಾರತವು ಕಾರ್ಯತಂತ್ರದ ಸಹಭಾಗಿತ್ವಗಳು, ಮೂಲಸೌಕರ್ಯ ವಿಸ್ತರಣೆ ಮತ್ತು ಆರ್ಥಿಕ ಸಹಯೋಗಗಳ ಮೂಲಕ ತನ್ನ ಹಡಗು ನಿರ್ಮಾಣ ಮತ್ತು ಕಡಲ ಸಾಮರ್ಥ್ಯಗಳನ್ನು ಹೆಚ್ಚಿಸುತ್ತಿದೆ. ಈ ಪ್ರಯತ್ನಗಳು ದೇಶೀಯ ಉತ್ಪಾದನೆಯನ್ನು ಬಲಪಡಿಸುವುದು, ವಿದೇಶಿ ಹಡಗುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ವಲಯದಾದ್ಯಂತ ಸುಸ್ಥಿರ ಬೆಳವಣಿಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ.

  • ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ತೈಲ ಪಿಎಸ್‌ಯುಗಳು ಹಡಗು-ಮಾಲೀಕತ್ವದ ಜಂಟಿ ಉದ್ಯಮವನ್ನು ರಚಿಸಲು ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿವೆ. ಇದು ವಿದೇಶಿ ನೌಕಾಪಡೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಭಾರತದಲ್ಲಿ ನಿರ್ಮಿಸಿದ ಹಡಗುಗಳಿಗೆ ಬೇಡಿಕೆಯನ್ನು ಹೆಚ್ಚಿಸುತ್ತದೆ.
  • ಪ್ರಮುಖ ಬಂದರುಗಳು ಮತ್ತು ಕರಾವಳಿ ರಾಜ್ಯಗಳ ನಡುವೆ ಜಂಟಿ ಹೂಡಿಕೆಯೊಂದಿಗೆ ಹಡಗು ನಿರ್ಮಾಣ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸಲು ಒಡಂಬಡಿಕೆಗಳಿಗೆ (MoUs) ಸಹಿ ಹಾಕಲಾಗಿದೆ. ಇದು 2047 ರ ವೇಳೆಗೆ ಭಾರತವನ್ನು ವಿಶ್ವದ ಅಗ್ರ ಐದು ಜಾಗತಿಕ ಹಡಗು ನಿರ್ಮಾಣ ರಾಷ್ಟ್ರಗಳಲ್ಲಿ ಇರಿಸುವ ಗುರಿಯನ್ನು ಹೊಂದಿದೆ. ಈ ಕೇಂದ್ರಗಳು ಸುಸ್ಥಿರ ಸಾಗರ ಎಂಜಿನಿಯರಿಂಗ್‌ಗಾಗಿ ಹಡಗುಕಟ್ಟೆಗಳು, ಸಂಶೋಧನೆ ಮತ್ತು ಅಭಿವೃದ್ಧಿ (R&D), MSME ಗಳು ಮತ್ತು ಹಸಿರು ಆವಿಷ್ಕಾರವನ್ನು ಸಂಯೋಜಿಸಲಿವೆ.
  • ಕೊಚಿನ್ ಶಿಪ್‌ಯಾರ್ಡ್ ಮತ್ತು ಮಜಗಾನ್ ಡಾಕ್ ಸಂಸ್ಥೆಗಳು ತಮಿಳುನಾಡು ಏಜೆನ್ಸಿಗಳೊಂದಿಗೆ ಪ್ರಮುಖ ಹಡಗು ನಿರ್ಮಾಣ ಸಂಕೀರ್ಣಗಳನ್ನು ಸ್ಥಾಪಿಸಲು ಒಡಂಬಡಿಕೆಗಳಿಗೆ (MoUs) ಸಹಿ ಹಾಕಿವೆ. ಇದರಲ್ಲಿ ₹15,000 ಕೋಟಿ ವೆಚ್ಚದ ಸೌಲಭ್ಯವಿದ್ದು, ಒಂದು ಮಿಲಿಯನ್ ಜಿಟಿ (GT) ವಾರ್ಷಿಕ ಸಾಮರ್ಥ್ಯ ಮತ್ತು ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಯಾಗಲಿದೆ.
  • ಸಾಗರಮಾಲಾ ಹಣಕಾಸು ನಿಗಮವು ಹಸಿರು ಹಡಗು ನಿರ್ಮಾಣ, ನೌಕಾಪಡೆ ನವೀಕರಣ ಮತ್ತು ಕಡಲ ಸಾರಿಗೆಗಾಗಿ ವೈವಿಧ್ಯಮಯ ನಿಧಿಯನ್ನು (funding) ಒದಗಿಸಲು ಪ್ರಮುಖ ಹಣಕಾಸು ಸಂಸ್ಥೆಗಳೊಂದಿಗೆ ಒಡಂಬಡಿಕೆಗಳಿಗೆ (MoUs) ಸಹಿ ಹಾಕಿದೆ. ಇದು ಬಲಿಷ್ಠ ಹೂಡಿಕೆ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಜಾಗತಿಕ ಹವಾಮಾನ ಹಣಕಾಸು ಮತ್ತು ದೇಶೀಯ ಬಂಡವಾಳವನ್ನು ಮಿಶ್ರಣ ಮಾಡುತ್ತದೆ.
  • ಕೊಚಿನ್ ಶಿಪ್‌ಯಾರ್ಡ್ ಮತ್ತು ಹೆಚ್‌ಡಿ ಕೊರಿಯಾ ಶಿಪ್‌ಬಿಲ್ಡಿಂಗ್ (ಸಂಸ್ಥೆಗಳು ಭಾರತದಲ್ಲಿ ದೊಡ್ಡ ವಾಣಿಜ್ಯ ಹಡಗುಗಳನ್ನು ನಿರ್ಮಿಸಲು ಪಾಲುದಾರಿಕೆ ಮಾಡಿಕೊಂಡಿವೆ. ಸಿಎಸ್‌ಎಲ್‌ನ ಹೊಸ ಒಣಕಟ್ಟೆ ಮತ್ತು ಕೊಚ್ಚಿಯಲ್ಲಿ ಯೋಜಿಸಲಾದ ₹3,700 ಕೋಟಿ ವೆಚ್ಚದ ಫ್ಯಾಬ್ರಿಕೇಶನ್ ಸೌಲಭ್ಯವು ಇದಕ್ಕೆ ಬೆಂಬಲ ನೀಡಲಿದ್ದು, ಇದು ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿ ಮತ್ತು MSME-ಸಂಬಂಧಿತ ಪೂರೈಕೆ ಸರಪಳಿಗಳನ್ನು ಉತ್ತೇಜಿಸುವ ನಿರೀಕ್ಷೆಯಿದೆ.

ಹಡಗು ನಿರ್ಮಾಣ ವಲಯದ ಪುನಶ್ಚೇತನ

ಸೆಪ್ಟೆಂಬರ್ 2025ರಲ್ಲಿ ಹಡಗು ನಿರ್ಮಾಣ ವಲಯಕ್ಕಾಗಿ ಇತ್ತೀಚಿನ ಸರ್ಕಾರದ ಘೋಷಣೆಗಳು ದೇಶೀಯ ಸಾಮರ್ಥ್ಯವನ್ನು ವಿಸ್ತರಿಸುವುದು, ದೀರ್ಘಾವಧಿಯ ಹಣಕಾಸು ಲಭ್ಯತೆಯನ್ನು ಸುಧಾರಿಸುವುದು ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವುದರ ಮೇಲೆ ಕೇಂದ್ರೀಕೃತವಾಗಿವೆ. ಈ ಕ್ರಮಗಳು ಆಧುನಿಕ ಮೂಲಸೌಕರ್ಯ ಮತ್ತು ನೀತಿ ಸುಧಾರಣೆಗಳ ಮೂಲಕ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಸುವುದು, ಹೂಡಿಕೆಯನ್ನು ಆಕರ್ಷಿಸುವುದು ಮತ್ತು ಭಾರತದ ಕಾರ್ಯತಂತ್ರದ ಹಾಗೂ ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವ ಗುರಿಯನ್ನು ಹೊಂದಿವೆ.

ಸ್ತಂಭ 1: ಹಡಗು ನಿರ್ಮಾಣ ಆರ್ಥಿಕ ನೆರವು ಯೋಜನೆ: ಈ ಯೋಜನೆಯು, ಒಂದು ಮೂಲಭೂತ ಸ್ತಂಭವಾಗಿಯೂ ಕಂಡುಬರುತ್ತದೆ, ಇದು ಭಾರತದ ಸ್ಥಳೀಯ ಹಡಗು ನಿರ್ಮಾಣ ಸಾಮರ್ಥ್ಯಗಳು ಮತ್ತು ಕಡಲ ಆವಿಷ್ಕಾರವನ್ನು ಒಗ್ಗೂಡಿಸುವ ಗುರಿಯನ್ನು ಹೊಂದಿದೆ. ₹24,736 ಕೋಟಿ ವೆಚ್ಚದೊಂದಿಗೆ, ಇದು ದೇಶೀಯ ಹಡಗು ನಿರ್ಮಾಣ ಸಾಮರ್ಥ್ಯಗಳು ಮತ್ತು ಕಡಲ ಆವಿಷ್ಕಾರವನ್ನು ವೇಗಗೊಳಿಸಲು ಮೂಲಭೂತ ಸ್ತಂಭವಾಗಿ ಕಾರ್ಯನಿರ್ವಹಿಸುತ್ತದೆ. ಇದು ಭಾರತದ ಹಡಗು ನಿರ್ಮಾಣ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಗುರಿಯ ಆಧಾರಿತ ಪ್ರೋತ್ಸಾಹಕಗಳು, ಕಾರ್ಯತಂತ್ರದ ಮಿಷನ್‌ಗಳು ಮತ್ತು ಜೀವಿತಾವಧಿಯ ಬೆಂಬಲವನ್ನು ಸಂಯೋಜಿಸುತ್ತದೆ.

ಘಟಕ 1: ಆರ್ಥಿಕ ನೆರವು

  • ಉದ್ದೇಶ: ಭಾರತೀಯ ಹಡಗುಕಟ್ಟೆಗಳಿಗೆ ವೆಚ್ಚದ ಅನಾನುಕೂಲತೆಗಳನ್ನು ಕಡಿಮೆ ಮಾಡಲು ಮತ್ತು ಸ್ಪರ್ಧಾತ್ಮಕತೆಯನ್ನು ಉತ್ತೇಜಿಸಲು ಆರ್ಥಿಕ ಬೆಂಬಲವನ್ನು ಒದಗಿಸುವುದು.
  • ಪ್ರೋತ್ಸಾಹಕ ರಚನೆ:

₹100 ಕೋಟಿಗಿಂತ ಕಡಿಮೆ ಮೌಲ್ಯದ ಹಡಗುಗಳಿಗೆ 15% ನೆರವು.

₹100 ಕೋಟಿಗಿಂತ ಹೆಚ್ಚು ಮೌಲ್ಯದ ಹಡಗುಗಳಿಗೆ 20% ನೆರವು.

ಹಸಿರು, ಹೈಬ್ರಿಡ್ ಅಥವಾ ವಿಶೇಷ ಹಡಗುಗಳಿಗೆ 25% ನೆರವು.

  • ದೇಶೀಯ ಮೌಲ್ಯವರ್ಧನೆ ಪ್ರೋತ್ಸಾಹಕಗಳಿಗೆ ಅರ್ಹರಾಗಲು ಕನಿಷ್ಠ 30% ದೇಶೀಯ ಮೌಲ್ಯವರ್ಧನೆ ಅಗತ್ಯವಿದೆ, ಇದು ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುತ್ತದೆ.
  • ಆರ್ಥಿಕ ಹಂಚಿಕೆ: ಒಟ್ಟು20,554 ಕೋಟಿ ವೆಚ್ಚವನ್ನು ಅನುಮೋದಿಸಲಾಗಿದೆ, ಇದು ಮಾರ್ಚ್ 2036 ರವರೆಗೆ ಮಾನ್ಯವಾಗಿರುತ್ತದೆ.

ಘಟಕ 2: ಹಡಗು ಒಡೆಯುವಿಕೆಯ ಕ್ರೆಡಿಟ್ ನೋಟು

  • ಪ್ರೋತ್ಸಾಹಕ ಮೌಲ್ಯ: ಭಾರತೀಯ ಹಡಗುಕಟ್ಟೆಯಲ್ಲಿ ಹಡಗನ್ನು ಸ್ಕ್ರ್ಯಾಪ್ ಮಾಡಿದಾಗ, ಆ ಹಡಗಿನ ಸ್ಕ್ರ್ಯಾಪ್ ಮೌಲ್ಯದ 40% ರಷ್ಟು ಕ್ರೆಡಿಟ್ ನೋಟು.
  • ಬಳಕೆ: ಈ ನೋಟುಗಳನ್ನು ಭಾರತೀಯ ಹಡಗುಕಟ್ಟೆಯಲ್ಲಿ ಹೊಸ ಹಡಗನ್ನು ನಿರ್ಮಿಸುವ ವೆಚ್ಚಕ್ಕೆ ಬದಲಾಗಿ ಬಳಸಬಹುದು.
  • ಹೊಂದಾಣಿಕೆ: ಈ ನೋಟುಗಳು ಸಂಗ್ರಹಿಸಬಹುದಾದವು, ವರ್ಗಾಯಿಸಬಹುದಾದವು ಮತ್ತು 3 ವರ್ಷಗಳವರೆಗೆ ಮಾನ್ಯವಾಗಿರುತ್ತವೆ.
  • ಬಜೆಟ್ ಹಂಚಿಕೆ: ಈ ಯೋಜನೆಗೆ ಒಟ್ಟು ₹4,001 ಕೋಟಿ ವೆಚ್ಚವನ್ನು ನಿಗದಿಪಡಿಸಲಾಗಿದೆ.

ಘಟಕ 3: ರಾಷ್ಟ್ರೀಯ ಹಡಗು ನಿರ್ಮಾಣ ಮಿಷನ್

  • ಮಿಷನ್ ನಾಯಕತ್ವ: ವಲಯಗಳಾದ್ಯಂತ ರಾಷ್ಟ್ರೀಯ ಹಡಗು ನಿರ್ಮಾಣ ಉಪಕ್ರಮಗಳನ್ನು ಮುನ್ನಡೆಸುವುದು ಮತ್ತು ಮೇಲ್ವಿಚಾರಣೆ ಮಾಡುವುದು.
  • ನಿಧಿ ನಿರ್ವಹಣೆ: ಅರ್ಜಿಗಳನ್ನು ಮೌಲ್ಯಮಾಪನ ಮಾಡುವುದು, ಹಕ್ಕುಗಳನ್ನು ಪರಿಶೀಲಿಸುವುದು ಮತ್ತು ನಿಧಿಯನ್ನು ಸಮಯಕ್ಕೆ ಸರಿಯಾಗಿ ವಿತರಿಸುವುದನ್ನು ಖಚಿತಪಡಿಸುವುದು.
  • ಖರೀದಿ ಸಮನ್ವಯ: ಬೇಡಿಕೆಯನ್ನು ಒಟ್ಟುಗೂಡಿಸುವುದು ಮತ್ತು ರಚನಾತ್ಮಕ, ಕೇಂದ್ರೀಕೃತ ಸಂಗ್ರಹಣಾ ಪ್ರಕ್ರಿಯೆಗಳನ್ನು ಸಕ್ರಿಯಗೊಳಿಸುವುದು.
  • ಜಾಗತಿಕ ಸಹಭಾಗಿತ್ವ: ದೇಶೀಯ ಸಾಮರ್ಥ್ಯಗಳನ್ನು ಬಲಪಡಿಸಲು ವಿದೇಶಿ ಸಹಯೋಗಗಳನ್ನು ಗುರುತಿಸುವುದು ಮತ್ತು ಸುಗಮಗೊಳಿಸುವುದು.
  • ಯೋಜನೆಯ ಅವಧಿ: 10 ವರ್ಷಗಳ ಅವಧಿ, ಯೋಜನೆಯ ಅವಧಿ ಮುಗಿದ ನಂತರವೂ ಬದ್ಧ ಹೊಣೆಗಾರಿಕೆಗಳನ್ನು ಗೌರವಿಸಲಾಗುತ್ತದೆ.

ಸ್ತಂಭ 2: ಕಡಲ ಅಭಿವೃದ್ಧಿ ನಿಧಿ (₹25,000 ಕೋಟಿ) ಕಡಲ ಅಭಿವೃದ್ಧಿ ನಿಧಿಯು ಭಾರತದ ರಫ್ತು ಮತ್ತು ಆಮದು ವ್ಯಾಪಾರದ (EXIM ವ್ಯಾಪಾರ) ಬೆನ್ನೆಲುಬನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಈ ವ್ಯಾಪಾರವು ಕಡಲ ಸಾರಿಗೆಯ ಮೇಲೆ ಹೆಚ್ಚು ಅವಲಂಬಿತವಾಗಿದೆ—ಇದು ವ್ಯಾಪಾರದ 95% ರಷ್ಟನ್ನು ಪರಿಮಾಣದ ಮೂಲಕ ಮತ್ತು 65% ರಷ್ಟನ್ನು ಮೌಲ್ಯದ ಮೂಲಕ ನಿರ್ವಹಿಸುತ್ತದೆ.ಅದರ ಕಾರ್ಯತಂತ್ರದ ಪ್ರಾಮುಖ್ಯತೆಯ ಹೊರತಾಗಿಯೂ, ಈ ವಲಯವು ಕೈಗೆಟುಕುವ ಹಣಕಾಸು ಸೌಲಭ್ಯವನ್ನು ಪಡೆಯುವಲ್ಲಿ ನಿರಂತರ ಸವಾಲುಗಳನ್ನು ಎದುರಿಸುತ್ತಿದೆ. ಈ ಅಡೆತಡೆಗಳನ್ನು ನಿವಾರಿಸುವುದು, ಭಾರತದ ಕಡಲ ಆರ್ಥಿಕತೆಯ ಸಂಪೂರ್ಣ ಸಾಮರ್ಥ್ಯವನ್ನು ಹೊರತರಲು ಅತ್ಯಗತ್ಯವಾಗಿದೆ.

ಘಟಕ 1: ಕಡಲ ಹೂಡಿಕೆ ನಿಧಿ

  • ನಿಧಿಯ ಮೂಲ ಮೊತ್ತ ಪ್ರಾರಂಭಿಕವಾಗಿ ₹20,000 ಕೋಟಿ ಹಂಚಿಕೆ
  • ಇಕ್ವಿಟಿ-ಆಧಾರಿತ ಹಣಕಾಸು  ಮತ್ತು ಹೆಚ್ಚುವರಿ ಹೂಡಿಕೆದಾರರ ಕೊಡುಗೆಗಳು, ಕಡಲ ಹೂಡಿಕೆ ನಿಧಿಯ ಬಂಡವಾಳದ ರಚನೆಗೆ ಆಧಾರವಾಗುತ್ತವೆ.
  • ಯೋಜನಾತ್ಮಕ ಗಮನ ಕ್ಷೇತ್ರಗಳು:

 ಭಾರತೀಯ ಹಡಗು ಸಾಗಾಣಿಕೆ ಸಾಮರ್ಥ್ಯದ ವಿಸ್ತರಣೆ.

 ಹಡಗುಕಟ್ಟೆಗಳು, ಹಡಗು ರಿಪೇರಿ ಸೌಲಭ್ಯಗಳು ಮತ್ತು ಅವುಗಳಿಗೆ ಬೆಂಬಲ ನೀಡುವ ಉದ್ಯಮಗಳ ಅಭಿವೃದ್ಧಿ.

ಬಂದರು ಮತ್ತು ಅದಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳ ಬಲವರ್ಧನೆ.

ಸಾರಿಗೆಯಲ್ಲಿ ಸರಕು ಹಂಚಿಕೆ ಪ್ರಮಾಣವನ್ನು ಸುಧಾರಿಸಲು ಒಳನಾಡು ಮತ್ತು ಕರಾವಳಿ ಜಲಸಾರಿಗೆಗೆ ಉತ್ತೇಜನ ನೀಡುವುದು.

  • ಹಣಕಾಸು ರಚನೆ ಸಾರ್ವಜನಿಕ ನಿಧಿಯ ಜೊತೆಗೆ ಖಾಸಗಿ ವಲಯದ ಹೂಡಿಕೆಯನ್ನು ಕ್ರೋಢೀಕರಿಸಲು ಒಂದು ಮಿಶ್ರಿತ ಹಣಕಾಸು ಮಾದರಿಯಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.

ರಿಯಾಯಿತಿ ದರದಲ್ಲಿ ಸರ್ಕಾರದ ವತಿಯಿಂದ 49% ಬಂಡವಾಳ.

51% ವಾಣಿಜ್ಯ ಬಂಡವಾಳವನ್ನು ಬಹುಪಕ್ಷೀಯ ಸಾಲದಾತರು, ಬಂದರು ಪ್ರಾಧಿಕಾರಗಳು ಮತ್ತು ಸಾರ್ವಭೌಮ ನಿಧಿಗಳಿಂದ ಪಡೆಯಲಾಗುತ್ತದೆ.

ಘಟಕ 2: ಬಡ್ಡಿ ಪ್ರೋತ್ಸಾಹ ನಿಧಿ:

  • ನಿಧಿಯ ಮೂಲ ಮೊತ್ತ: ಈ ಉಪಕ್ರಮಕ್ಕಾಗಿ ₹5,000 ಕೋಟಿ ಹಂಚಿಕೆ.
  • ಯೋಜನೆಯ ಅವಧಿ 10 ವರ್ಷಗಳು, ಮಾರ್ಚ್ 2036 ರವರೆಗೆ ಮಾನ್ಯವಾಗಿರುತ್ತದೆ.
  • ಪ್ರೋತ್ಸಾಹಕ ರಚನೆ:

3% ವರೆಗೆ ಬಡ್ಡಿ ಪ್ರೋತ್ಸಾಹ

ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ನೀಡಲಾಗುತ್ತದೆ

ಭಾರತೀಯ ಹಡಗುಕಟ್ಟೆಗಳಿಗೆ ನೀಡಿದ ಸಾಲಗಳಿಗೆ ಇದು ಅನ್ವಯಿಸುತ್ತದೆ.

  • ಅನುಷ್ಠಾನ: ಇದನ್ನು ನಾಮನಿರ್ದೇಶಿತ ಅನುಷ್ಠಾನ ಸಂಸ್ಥೆಗಳ ಮೂಲಕ ಸಮನ್ವಯಗೊಳಿಸಲಾಗುವುದು.

ಸ್ತಂಭ 3: ಹಡಗು ನಿರ್ಮಾಣ ಅಭಿವೃದ್ಧಿ ಯೋಜನೆ (₹19,989 ಕೋಟಿ) - ಉತ್ತಮ ಮೂಲಸೌಕರ್ಯ, ಸುರಕ್ಷತಾ ಕ್ರಮಗಳು ಮತ್ತು ಅಪಾಯ ನಿರ್ವಹಣೆಯ ಮೂಲಕ ಹಡಗು ನಿರ್ಮಾಣಕ್ಕೆ ಉತ್ತೇಜನ ನೀಡಲು ದೀರ್ಘಾವಧಿಯ ಬೆಂಬಲವನ್ನು ಯೋಜಿಸಲಾಗಿದೆ.

ಹಡಗು ನಿರ್ಮಾಣ ಅಭಿವೃದ್ಧಿ ಯೋಜನೆ

  • ಹಡಗು ನಿರ್ಮಾಣ ಕ್ಲಸ್ಟರ್‌ಗಳಿಗೆ ಬಂಡವಾಳ ಬೆಂಬಲ
  • ಗ್ರೀನ್ಫೀಲ್ಡ್ ಕ್ಲಸ್ಟರ್ ₹9,930 ಕೋಟಿ
  • ಬ್ರೌನ್ಫೀಲ್ಡ್ ಸಾಮರ್ಥ್ಯ ವಿಸ್ತರಣೆ ₹8,261 ಕೋಟಿ
  • ಹಡಗು ನಿರ್ಮಾಣ ಅಪಾಯದ ವ್ಯಾಪ್ತಿ: ₹1,443 ಕೋಟಿ
  • ಸಾಮರ್ಥ್ಯ ಅಭಿವೃದ್ಧಿ ಉಪಕ್ರಮಗಳು: ₹305 ಕೋಟಿ
  • ಒಟ್ಟು ನಿಧಿ: ₹19,989 ಕೋಟಿ
  • ಅವಧಿ: 10 ವರ್ಷಗಳು (ಮಾರ್ಚ್ 2036 ರವರೆಗೆ)

ಸ್ತಂಭ 4: ಕಾನೂನು, ನೀತಿ ಮತ್ತು ಪ್ರಕ್ರಿಯೆ ಸುಧಾರಣೆಗಳು:

ಕಾನೂನು, ನೀತಿ ಮತ್ತು ಪ್ರಕ್ರಿಯೆ ಸುಧಾರಣೆಗಳ ಭಾಗವಾಗಿ, ದೊಡ್ಡ ಹಡಗುಗಳಿಗೆ ಕೈಗೆಟುಕುವ ಹಣಕಾಸು ಸೌಲಭ್ಯವನ್ನು ಸುಲಭವಾಗಿ ಪಡೆಯಲು ಮೂಲಸೌಕರ್ಯ ಸ್ಥಾನಮಾನವನ್ನು ನೀಡಲಾಗಿದೆ. ಅದೇ ಸಮಯದಲ್ಲಿ, ಬೇಡಿಕೆಯ ಒಟ್ಟುಗೂಡಿಸುವಿಕೆ ಮೂಲಕ ದೇಶೀಯ ಹಡಗು ನಿರ್ಮಾಣವನ್ನು ಹೆಚ್ಚಿಸಲು ಸಮನ್ವಯದ ಪ್ರಯತ್ನಗಳು ನಡೆಯುತ್ತಿವೆ. ಕಡಲ ಕಾನೂನುಗಳನ್ನು ಆಧುನೀಕರಿಸಲು ಮತ್ತು ನಿಯಂತ್ರಣಾ ಚೌಕಟ್ಟುಗಳನ್ನು ಬಲಪಡಿಸಲು ಶಾಸಕಾಂಗದ ನವೀಕರಣಗಳ ಸರಣಿಯನ್ನು ಸಹ ಪರಿಚಯಿಸಲಾಗಿದೆ.

ಕಾನೂನು, ನೀತಿ ಮತ್ತು ಪ್ರಕ್ರಿಯೆ ಸುಧಾರಣೆಗಳು

  • ದೊಡ್ಡ ಹಡಗುಗಳಿಗೆ ಮೂಲಸೌಕರ್ಯ ಸ್ಥಾನಮಾನ: ದೀರ್ಘಾವಧಿಯ, ಕಡಿಮೆ ವೆಚ್ಚದ ಹಣಕಾಸು ಸೌಲಭ್ಯವನ್ನು ಸುಗಮಗೊಳಿಸಲು ಸೆಪ್ಟೆಂಬರ್ 19, 2025 ರಂದು ನೀಡಲಾಗಿದೆ.
  • ತೈಲ ಮತ್ತು ಅನಿಲ ಪಿಎಸ್‌ಯುಗಳ ಮೂಲಕ ಬೇಡಿಕೆಯ ಒಟ್ಟುಗೂಡಿಸುವಿಕೆ: ಮುಂದಿನ 10 ವರ್ಷಗಳಲ್ಲಿ ಭಾರತದಲ್ಲಿ 110+ ಹಡಗುಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.
  • ಪರಿಚಯಿಸಲಾದ ಕಾನೂನು ಸುಧಾರಣೆಗಳು:

ಬಿಲ್ಸ್ ಆಫ್ ಲೇಡಿಂಗ್ ಕಾಯಿದೆ, 2025 

ಸಮುದ್ರದ ಮೂಲಕ ಸರಕು ಸಾಗಣೆ ಕಾಯಿದೆ, 2025 

ಕರಾವಳಿ ಹಡಗು ಸಾಗಣೆ ಕಾಯಿದೆ, 2025 

ಮರ್ಚೆಂಟ್ ಶಿಪ್ಪಿಂಗ್ ಕಾಯಿದೆ, 2025 

ಭಾರತೀಯ ಬಂದರುಗಳ ಕಾಯಿದೆ, 2025 

ಸುಧಾರಣೆಗಳ ಪರಿಣಾಮಗಳು: ಈ ಸುಧಾರಣೆಗಳು ಭಾರತದ ಹಡಗು ಸಾಗಣೆ ಮತ್ತು ಬಂದರು ಮೂಲಸೌಕರ್ಯವನ್ನು ಜಾಗತಿಕ ಗುಣಮಟ್ಟಕ್ಕೆ ಏರಿಸುವ ಗುರಿಯನ್ನು ಹೊಂದಿವೆ. ಇದರಿಂದ ಹಡಗು ನಿರ್ಮಾಣ ಮತ್ತು ಕಡಲ ಸಾಮರ್ಥ್ಯದಲ್ಲಿ ಗಣನೀಯ ಉದ್ಯೋಗ, ಹೂಡಿಕೆ ಮತ್ತು ವಿಸ್ತರಣೆಗೆ ಉತ್ತೇಜನ ಸಿಗಲಿದೆ. ಇವು, ಹಡಗುಗಳ ಸಂಖ್ಯೆ ಮತ್ತು ಬಂದರಿನ ಸರಕು ನಿರ್ವಹಣೆಯಲ್ಲಿ ಮಹತ್ವದ ಏರಿಕೆಯನ್ನು ನೀಡುವ ಮೂಲಕ ಈ ವಲಯದ ಒಟ್ಟಾರೆ ಸ್ಪರ್ಧಾತ್ಮಕತೆಯನ್ನು ಬಲಪಡಿಸುತ್ತವೆ.

ಉಪಸಂಹಾರ

ಭಾರತದ ಹಡಗು ನಿರ್ಮಾಣ ವಲಯವು ಪ್ರಗತಿಪರ ಉಪಕ್ರಮಗಳು ಮತ್ತು ನೀತಿ ಸುಧಾರಣೆಗಳ ಸರಣಿಯ ಬೆಂಬಲದೊಂದಿಗೆ, ಬೆಳವಣಿಗೆಯ ಭರವಸೆಯ ಹಂತವನ್ನು ಪ್ರವೇಶಿಸುತ್ತಿದೆ. ಈ ಕ್ರಮಗಳು ಮೂಲಸೌಕರ್ಯವನ್ನು ಆಧುನೀಕರಿಸಲು, ದೇಶೀಯ ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ಜಾಗತಿಕ ಹೂಡಿಕೆಯನ್ನು ಆಕರ್ಷಿಸಲು ಗುರಿಯಿರಿಸಿದ್ದು, ದೀರ್ಘಕಾಲೀನ ಅಭಿವೃದ್ಧಿಗೆ ಬಲವಾದ ಅಡಿಪಾಯವನ್ನು ಹಾಕುತ್ತಿವೆ. ಆವಿಷ್ಕಾರ, ಸುಸ್ಥಿರತೆ ಮತ್ತು ಕೌಶಲ್ಯ ಅಭಿವೃದ್ಧಿಯ ಮೇಲೆ ಗಮನಹರಿಸುವುದರಿಂದ, ಈ ವಲಯವು ಭಾರತದ ಕಡಲ ದೃಷ್ಟಿ 2030 (ಮ್ಯಾರಿಟೈಮ್ ಇಂಡಿಯಾ ವಿಷನ್ 2030) ರಲ್ಲಿ ವಿವರಿಸಿರುವ ಕಾರ್ಯತಂತ್ರದ ಗುರಿಗಳನ್ನು ಪೂರೈಸಲು ಉತ್ತಮ ಸ್ಥಾನದಲ್ಲಿದೆ. ಇದಲ್ಲದೆ, ಇದರ ವಿಸ್ತರಣೆಯು ವಿಕಸಿತ ಭಾರತ 2047 ರ ವಿಶಾಲ ರಾಷ್ಟ್ರೀಯ ಆಕಾಂಕ್ಷೆಯೊಂದಿಗೆ ಸಲೀಸಾಗಿ ಹೊಂದಿಕೊಳ್ಳುತ್ತದೆ, ಇದು ಆರ್ಥಿಕ ದೃಢತೆ, ಉದ್ಯೋಗ ಸೃಷ್ಟಿ ಮತ್ತು ಜಾಗತಿಕ ಸ್ಪರ್ಧಾತ್ಮಕತೆಗೆ ಕೊಡುಗೆ ನೀಡುತ್ತದೆ. ಉದ್ಯಮ ಮತ್ತು ಸರ್ಕಾರದ ನಡುವಿನ ನಿರಂತರ ಸಹಯೋಗದೊಂದಿಗೆ, ಭಾರತದ ಹಡಗು ನಿರ್ಮಾಣ ಉದ್ಯಮವು ದೇಶದ ಕಡಲ ಶಕ್ತಿಯ ಒಂದು ಪ್ರಮುಖ ಸ್ತಂಭವಾಗಿ ಮತ್ತು ಒಳಗೊಳ್ಳುವ ಬೆಳವಣಿಗೆಯ ಚಾಲಕಶಕ್ತಿಯಾಗಲು ಸಿದ್ಧವಾಗಿದೆ.

References:

Press Information Bureau:

https://www.pib.gov.in/Pressreleaseshare.aspx?PRID=2035583

https://www.pib.gov.in/PressReleasePage.aspx?PRID=2168994

https://www.pib.gov.in/PressReleaseIframePage.aspx?PRID=2085228

https://www.pib.gov.in/PressReleasePage.aspx?PRID=2110319

https://www.pib.gov.in/PressReleseDetailm.aspx?PRID=2172488  

https://www.pib.gov.in/PressReleasePage.aspx?PRID=2170575

Click here for pdf file.

 

*****

(Backgrounder ID: 155568) Visitor Counter : 11
Provide suggestions / comments
Link mygov.in
National Portal Of India
STQC Certificate