Infrastructure
ಬೀಕನ್‌ಗಳಿಂದ ಹೆಗ್ಗುರುತುಗಳವರೆಗೆ
ಭಾರತದ ಬದಲಾಗುತ್ತಿರುವ ಲೈಟ್‌ಹೌಸ್ ಕಥೆ
Posted On:
10 OCT 2026 3:17PM
ದೂರದ ಕಾವಲುಗೋಪುರಗಳಿಂದ ಸಾಂಸ್ಕೃತಿಕ ತಾಣಗಳವರೆಗೆ: ಭಾರತದ ಲೈಟ್‌ಹೌಸ್‌ಗಳ ಹೊಸ ರೂಪ
ಪೀಳಿಗೆಯಿಂದ ಪೀಳಿಗೆಗೆ, ಭಾರತದ ಲೈಟ್‌ಹೌಸ್‌ಗಳು ಜನರಿಗೆ ಕೇವಲ ದೂರದಿಂದ ಕಾಣುವ ಕಾವಲುಗೋಪುರಗಳಾಗಿದ್ದವು. ಸಮುದ್ರದಂಚಿನಲ್ಲಿ ನಿಂತು, ಅಪಾಯಕಾರಿ ಕರಾವಳಿ ಭಾಗಗಳನ್ನು ಸೂಚಿಸುತ್ತಾ ಮತ್ತು ಕತ್ತಲಲ್ಲಿ ನೌಕೆಗಳಿಗೆ ದಾರಿ ತೋರಿಸುತ್ತಾ ಬಂದಿದ್ದವು. ಅವುಗಳ ಬೆಳಕು ನಾವಿಕರಿಗೆ ಸೇರಿದ್ದರೆ, ಆ ಭವ್ಯ ಗೋಪುರಗಳು ನೈಸರ್ಗಿಕ ಕಡಲ ತೀರದ ಅವಿಭಾಜ್ಯ ಅಂಗವಾಗಿದ್ದವು.
11,000 ಕಿ.ಮೀ ಗೂ ಅಧಿಕ ಕರಾವಳಿ ಮತ್ತು 205 ಲೈಟ್‌ಹೌಸ್‌ಗಳನ್ನು ಹೊಂದಿರುವ ಭಾರತವು, ಈಗ ಈ ಐತಿಹಾಸಿಕ ಕಡಲ ಕಾವಲುಗಾರರನ್ನು ಹೊಸ ರೀತಿಯಲ್ಲಿ ಮರುರೂಪಿಸುತ್ತಿದೆ. ಲೈಟ್‌ಹೌಸ್‌ಗಳ ಮೂಲ ಉದ್ದೇಶ – ಅಂದರೆ ಕರಾವಳಿಯಲ್ಲಿ ಹಡಗುಗಳು ಸುರಕ್ಷಿತವಾಗಿ ಸಂಚರಿಸಲು ಸಹಾಯ ಮಾಡುವುದು – ಇಂದಿಗೂ ಬದಲಾಗಿಲ್ಲ. ಆದರೆ ಇದರ ಜೊತೆಗೆ ಒಂದು ಹೊಸ ಅಧ್ಯಾಯವು ರೂಪುಗೊಳ್ಳುತ್ತಿದೆ. ಲೈಟ್‌ಹೌಸ್ ಸ್ಟೇಷನ್‌ಗಳನ್ನು ನವೀಕರಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುತ್ತಿದೆ. ಅವುಗಳ ಕಡಲ ಇತಿಹಾಸಕ್ಕೆ ಮ್ಯೂಸಿಯಂಗಳಲ್ಲಿ ಸ್ಥಾನ ಕಲ್ಪಿಸಲಾಗುತ್ತಿದ್ದು, ಸುತ್ತಮುತ್ತಲಿನ ಪ್ರದೇಶಗಳನ್ನು ಕಾಲ್ದಾರಿಗಳು, ಉದ್ಯಾನಗಳು, ಆಂಫಿಥೇಟರ್‌ಗಳು ಮತ್ತು ಇತರ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಆಧುನಿಕ ವ್ಯವಸ್ಥೆಗಳು ಅವುಗಳ ಬೆಳಕು ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸುವಂತೆ ಮೂಲಸೌಕರ್ಯವನ್ನು ಬಲಪಡಿಸುತ್ತಿವೆ.
ಲೈಟ್‌ಹೌಸ್ ಪ್ರವಾಸೋದ್ಯಮದ ಬೆಳೆವಣಿಗೆ:
ಲೈಟ್‌ಹೌಸ್ ಪ್ರವಾಸೋದ್ಯಮವು 2014 ರಲ್ಲಿ ಸುಮಾರು 4 ಲಕ್ಷವಿದ್ದ ಸಂದರ್ಶಕರ ಸಂಖ್ಯೆಯಿಂದ 2024–25 ರಲ್ಲಿ 18.63 ಲಕ್ಷಕ್ಕೆ ಏರಿಕೆಯಾಗಿದೆ. ದೇಶಾದ್ಯಂತ 75 ಲೈಟ್‌ಹೌಸ್‌ಗಳನ್ನು ಅವುಗಳ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಮಹತ್ವವನ್ನು ಸಂರಕ್ಷಿಸಲು ಪ್ರವಾಸೋದ್ಯಮ ತಾಣಗಳಾಗಿ ಅಭಿವೃದ್ಧಿಪಡಿಸಲಾಗಿದೆ. ಇವುಗಳಲ್ಲಿ ಗುಜರಾತ್‌ನ ಮಾಂಡ್ವಿ ಲೈಟ್‌ಹೌಸ್ ಮತ್ತು ದ್ವಾರಕಾ ಲೈಟ್‌ಹೌಸ್, ಕರ್ನಾಟಕದ ತದ್ರಿ ಲೈಟ್‌ಹೌಸ್, ತಮಿಳುನಾಡಿನ ಪಂಬನ್ ಲೈಟ್‌ಹೌಸ್, ಮತ್ತು ಕೇರಳದ ವಿಝಿಂಜಮ್ ಲೈಟ್‌ಹೌಸ್ ಮುಂತಾದವು ಸೇರಿವೆ.
ಡೈರೆಕ್ಟರೇಟ್ ಜನರಲ್ ಆಫ್ ಲೈಟ್‌ಹೌಸಸ್ ಅಂಡ್ ಲೈಟ್‌ಶಿಪ್ಸ್ ಅಡಿಯಲ್ಲಿ ಡಿಜಿಟಲ್ ಟಿಕಿಂಗ್ ಪೋರ್ಟಲ್ ಅನ್ನು ಸಹ ಪ್ರಾರಂಭಿಸಲಾಗಿದೆ, ಇದು ಸಂದರ್ಶಕರ ಅನುಭವವನ್ನು ಸಾಮಾನ್ಯ ಡಿಜಿಟಲ್ ವೇದಿಕೆಗೆ ತಂದಿದೆ. ಲೈಟ್‌ಹೌಸ್ ಪ್ರವಾಸೋದ್ಯಮದಲ್ಲಿ ಹೆಚ್ಚುತ್ತಿರುವ ಆಸಕ್ತಿಯು ಭಾರತದ ಕಡಲ ಪರಂಪರೆಯನ್ನು ಪ್ರದರ್ಶಿಸಲು ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಈ ಬೆಳವಣಿಗೆಗಳು ಹತ್ತಿರದ ಹೋಟೆಲ್ ಗಳು, ರೆಸ್ಟೋರೆಂಟ್‌ಗಳು, ಟೂರ್ ಆಪರೇಟರ್‌ಗಳು, ಸಾರಿಗೆ ಸೇವೆಗಳು, ಸ್ಥಳೀಯ ಅಂಗಡಿಗಳು ಮತ್ತು ಕರಕುಶಲಕರ್ಮಿಗಳಿಗೆ ಉದ್ಯೋಗಾವಕಾಶಗಳನ್ನು ಸಹ ಸೃಷ್ಟಿಸಿವೆ.

ಬೆಳಕು ಇನ್ನೂ ದಾರಿ ತೋರಿಸುತ್ತದೆ
ದೂರದಿಂದ ನೋಡಲು ಲೈಟ್‌ಹೌಸ್ ಒಂದೇ ರೀತಿಯಾಗಿ ಕಾಣಿಸಬಹುದು, ಆದರೆ ಅದರ ಪರಿಚಿತ ಬೆಳಕಿನ ಹಿಂದಿನ ತಂತ್ರಜ್ಞಾನವು ಗಣನೀಯವಾಗಿ ಬದಲಾಗಿದೆ. ಹಿಂದೆ ಬೆಂಕಿ ಮತ್ತು ಎಣ್ಣೆಯನ್ನು ಅವಲಂಬಿಸಿದ್ದು ಈಗ ಸೂರ್ಯನಕ್ತಿಯಿಂದ ಚಾಲನೆಗೊಳ್ಳುತ್ತದೆ ಮತ್ತು ಆಧುನಿಕ ತಂತ್ರಜ್ಞಾನದಿಂದ ಬಲಗೊಳ್ಳುತ್ತದೆ. ದೇಶದ ಎಲ್ಲಾ ಲೈಟ್‌ಹೌಸ್‌ಗಳು ಸೌರಶಕ್ತಿ ಚಾಲಿತವಾಗಿವೆ, ಇದು ನ್ಯಾವಿಗೇಷನ್ ದೀಪಗಳು ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸುವಂತೆ ಮಾಡುವ ಮೂಲಸೌಕರ್ಯದ ಪ್ರಮುಖ ಭಾಗವಾಗಿದೆ.
ಈ ವಿಕಾಸವನ್ನು ಪ್ರತ್ಯೇಕ ಸ್ಟೇಷನ್‌ಗಳ ಮೂಲಕ ಗುರುತಿಸಬಹುದು. ಗುಜರಾತ್ನ ಸಮಿಯಾನಿ ದ್ವೀಪದಲ್ಲಿ, ಎಣ್ಣೆ ದೀಪವು ಸೌರಶಕ್ತಿ ಚಾಲಿತ ಎಲೆಕ್ಟ್ರಾನಿಕ್ ಫ್ಲಾಶರ್‌ಗೆ ದಾರಿ ಮಾಡಿಕೊಟ್ಟಿತು, ನಂತರ 2016 ರಲ್ಲಿ ಎಲ್‌ಇಡಿ ಲ್ಯಾಂಟರ್ನ್ ಅನ್ನು ಅಳವಡಿಸಲಾಯಿತು. ಜೋಡಿಯಾದಲ್ಲಿ, ಸೌರಶಕ್ತಿ ಚಾಲಿತ ಫ್ಲಾಶಿಂಗ್ ಲೈಟ್ ಅನ್ನು ಪರಿಚಯಿಸಲಾಯಿತು ಮತ್ತು 2021 ರಲ್ಲಿ ಉನ್ನತ-ತೀವ್ರತೆಯ ಎಲ್‌ಇಡಿ ಲ್ಯಾಂಟರ್ನ್ ಆಗಿ ಮೇಲ್ಮದ್ಟೇರಿಸಲಾಯಿತು. ಲೈಟ್‌ಹೌಸ್‌ಗಳು ಭಾರತದ ವಿಶಾಲವಾದ ಕಡಲ ಮಾಹಿತಿ ಜಾಲದ ಭಾಗವಾಗಿವೆ. ಕರಾವಳಿಯ ಉದ್ದಕ್ಕೂ ಲೈಟ್‌ಹೌಸ್‌ಗಳಲ್ಲಿ 87 ಸ್ವಯಂಚಾಲಿತ ಗುರುತಿಸುವಿಕೆ ವ್ಯವಸ್ಥೆ ಶೋರ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದೆ. ಇದು ಬೆಳಕು ವಿಶ್ವಾಸಾರ್ಹವಾಗಿ, ಸ್ಪಂದನಾತ್ಮಕವಾಗಿ ಮತ್ತು ನಾವೆಗಳಿಗೆ ಸುರಕ್ಷಿತವಾಗಿ ಮಾರ್ಗದರ್ಶನ ಮಾಡಲು ಸಿದ್ಧವಾಗಿರುವುದನ್ನು ಖಚಿತಪಡಿಸುತ್ತದೆ. ಎಐಎಸ್ ಎಂಬುದು ಸೊಲಾಸ್ ಗೆ ಅನುಗುಣವಾಗಿ ಹಡಗು ಮತ್ತು ದಡ ಆಧಾರಿತ ಡೇಟಾ ಪ್ರಸಾರ ವ್ಯವಸ್ಥೆಯಾಗಿದೆ. ಇದು ಪರಿಸ್ಥಿತಿಯ ಜಾಗೃತಿಯನ್ನು ಹೆಚ್ಚಿಸಲು ಒಂದು ಶಕ್ತಿಶಾಲಿ ಸಾಧನವಾಗಿದೆ, ಆ ಮೂಲಕ ನಾವಿಗೇಷನ್ ಸುರಕ್ಷತೆ ಮತ್ತು ಶಿಪ್ಪಿಂಗ್ ಟ್ರಾಫಿಕ್ ನಿರ್ವಹಣೆಯ ದಕ್ಷತೆಗೆ ಕೊಡುಗೆ ನೀಡುತ್ತದೆ.
ಲೈಟ್‌ಹೌಸ್ ಮ್ಯೂಸಿಯಂಗಳು: ಕಡಲ ಇತಿಹಾಸವನ್ನು ಹತ್ತಿರಕ್ಕೆ ತರುವುದು
ತಂತ್ರಜ್ಞಾನವು ಲೈಟ್‌ಹೌಸ್‌ನ ಕಾರ್ಯನಿರತ ಪಾತ್ರವನ್ನು ಬಲಪಡಿಸುತ್ತಿದ್ದಂತೆ, ಅದರ ಹಳೆಯ ಕಥೆಗಳು ತಮ್ಮದೇ ಆದ ಪ್ರತ್ಯೇಕ ಸ್ಥಾನವನ್ನು ಕಂಡುಕೊಳ್ಳುತ್ತಿವೆ. ಭಾರತವು ಚೆನ್ನೈ, ಮಹಾಬಲಿಪುರಂ, ಆಲಪ್ಪುಳ, ಕಣ್ಣೂರು, ಮುಟ್ಟೋಮ್, ದ್ವಾರಕಾ ಮತ್ತು ಗೋಪ್ನಾಥ್‌ನಲ್ಲಿ ಮೀಸಲಾದ ಲೈಟ್‌ಹೌಸ್ ಮ್ಯೂಸಿಯಂಗಳನ್ನು ಹೊಂದಿದೆ.

ಮಹಾಬಲಿಪುರಂ (ಇದನ್ನು ಮಮಲ್ಲಪುರಂ ಎಂದೂ ಕರೆಯಲಾಗುತ್ತದೆ) ತಮಿಳುನಾಡಿನ ಕರಾವಳಿಯುದ್ದಕ್ಕೂ ಶತಮಾನಗಳ ಕಡಲ ಚಟುವಟಿಕೆಗಳಿಂದ ರೂಪುಗೊಂಡ ಅತ್ಯಂತ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಏಳನೇ ಶತಮಾನದಲ್ಲಿ ಪಲ್ಲವರು ಇದನ್ನು ದಕ್ಷಿಣ ಆಷ್ಯಾ ಮತ್ತು ಭೂಮಧ್ಯಸಾಗರ ದೇಶಗಳೊಂದಿಗೆ ಕಡಲ ವ್ಯಾಪಾರಕ್ಕಾಗಿ ಪ್ರಮುಖ ಬಂದರಾಗಿ ಅಭಿವೃದ್ಧಿಪಡಿಸಿದರು. ಹಿಂದೆ ಕರಾವಳಿಯನ್ನು ಸಮೀಪಿಸುತ್ತಿದ್ದ ನೌಕೆಗಳಿಗೆ ಮಾರ್ಗದರ್ಶನ ನೀಡಲು ಮರದ ಬೆಂಕಿಯನ್ನು ಬಳಸಲಾಗುತ್ತಿತ್ತು. 4ನೇ-ಶ್ರೇಣಿಯ ಆಪ್ಟಿಕ್ ಮತ್ತು ಲ್ಯಾಂಟರ್ನ್ ಒಳಗೆ ವಿಕ್ ದೀಪವನ್ನು ಇರಿಸುವ ಮೂಲಕ 1887 ರಲ್ಲಿ ಒಲಕ್ಕನೇಶ್ವರ ದೇವಸ್ಥಾನದ ಮೇಲ್ಛಾವಣಿಯ ಮೇಲೆ ಮೊದಲ ಸಾಂಪ್ರದಾಯಿಕ ಲೈಟ್‌ಹೌಸ್ ಅನ್ನು ಸ್ಥಾಪಿಸಲಾಯಿತು. 2004 ರಲ್ಲಿ ಮುಖ್ಯ ಬೆಳಕು ಮತ್ತು ತುರ್ತು ಬೆಳಕಿನ ಮೂಲವನ್ನು ಮೂರು 150 W, 230 V ಮೆಟಲ್ ಹಾಲೈಡ್ ದೀಪಗಳ ಗುಂಪಾಗಿ ಮಾರ್ಪಡಿಸಲಾಯಿತು.
ಪ್ರಸ್ತುತ ಲೈಟ್‌ಹೌಸ್ ಕಲ್ಲು ಗಾರಿಕೆಯಿಂದ ನಿರ್ಮಿಸಲಾದ 26 ಮೀಟರ್ ಎತ್ತರದ ವೃತ್ತಾಕಾರದ ಗೋಪುರವಾಗಿದೆ. ಈ ಗೋಪುರವು ತಾನು ಸಂರಕ್ಷಿಸುತ್ತಿರುವ ಇತಿಹಾಸದೊಂದಿಗೆ ಕಾಲಕಾಲಕ್ಕೆ ವಿಕಾಸಗೊಳ್ಳುತ್ತಾ ಬಂದಿದೆ. ಇದರ ಮುಖ್ಯ ಬೆಳಕನ್ನು 2020 ರಲ್ಲಿ 236-ವ್ಯಾಟ್ ಎಲ್‌ಇಡಿ ಶ್ರೇಣಿಗೆ ಮೇಲ್ದರ್ಜೆಗೇರಿಸಲಾಯಿತು, ಇದು ತನ್ನ ರೀತಿಯಲ್ಲಿ ಮೊದಲನೆಯದಾಗಿದೆ. ಇದರ ಪರಿಣಾಮವಾಗಿ ಜೀವಂತ ಪರಂಪರೆ ಮತ್ತು ಕಾರ್ಯನಿರತ ತಂತ್ರಜ್ಞಾನದ ಸುಂದರ ಸಂಗಮವು ಇಲ್ಲಿ ಮೂಡಿಬಂದಿದೆ. ಈ ಮ್ಯೂಸಿಯಂ ಆಕರ್ಷಕ ಪ್ರದರ್ಶನಗಳು ಮತ್ತು ಅಪರೂಪದ ಕಲಾಕೃತಿಗಳ ಮೂಲಕ ಲೈಟ್‌ಹೌಸ್‌ಗಳ ಇತಿಹಾಸವನ್ನು ಬಿಂಬಿಸುತ್ತದೆ. ಇದರ ರಾಷ್ಟ್ರೀಯ ಪರಂಪರೆ ಮತ್ತು ಕಡಲ ಮ್ಯೂಸಿಯಂ ಸ್ಥಳದ ಭೂತಕಾಲವನ್ನು ಸಂದರ್ಶಕರ ಅನುಭವಕ್ಕೆ ತರುತ್ತದೆ.
ಈ ಮ್ಯೂಸಿಯಂ-ಆಧಾರಿತ ವಿಧಾನವನ್ನು ದೊಡ್ಡ ಯೋಜನೆಗಳಿಗೂ ವಿಸ್ತರಿಸಲಾಗುತ್ತಿದೆ
ಗುಜರಾತ್‌ನ ಲೋಥಲ್‌ನಲ್ಲಿ, ರಾಷ್ಟ್ರೀಯ ಕಡಲ ಪರಂಪರೆ ಸಂಕೀರ್ಣವು 77 ಮೀಟರ್ ಎತ್ತರದ ಲೈಟ್‌ಹೌಸ್ ಮ್ಯೂಸಿಯಂ ಅನ್ನು ಒಳಗೊಳ್ಳಲು ಸಿದ್ಧವಾಗಿದೆ. ಅಂದಾಜು ₹266.11 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಇದು, ವಿಶ್ವದಲ್ಲೇ ಅತ್ಯಂತ ಎತ್ತರದ ಲೈಟ್‌ಹೌಸ್ ಮ್ಯೂಸಿಯಂ ಮತ್ತು ಅತಿದೊಡ್ಡ ಕಡಲ ಮ್ಯೂಸಿಯಂಗಳಲ್ಲಿ ಒಂದಾಗಲು ಯೋಜಿಸಲಾಗಿದೆ. ಎನ್‌ಎಂಎಚ್‌ಸಿ ಅತ್ಯಂತ ಮಹತ್ವದ ಸಾಂಸ್ಕೃತಿಕ ಮತ್ತು ಕಡಲ ಉಪಕ್ರಮಗಳಲ್ಲಿ ಒಂದಾಗಿದೆ. ಇದು ಐದು ಸಹಸ್ರಮಾನಗಳಿಗೂ ಹೆಚ್ಚಿನ ಭಾರತದ ಕಡಲ ಪರಂಪರೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಪ್ರದರ್ಶಿಸಲು ಪ್ರಯತ್ನಿಸುತ್ತದೆ. ಇದು 5D ಡೋಮ್ ಥಿಯೇಟರ್, ಕರಾವಳಿ ರಾಜ್ಯಗಳ ಪೆವಿಲಿಯನ್, ಮ್ಯೂಸೋಟೆಲ್, ಇಕೋ ರಿಸಾರ್ಟ್ ಮತ್ತು ಇಂಡಿಯನ್ ಮ್ಯಾರಿಟೈಮ್ ಯೂನಿವರ್ಸಿಟಿಯೊಂದಿಗೆ ಅಭಿವೃದ್ಧಿಪಡಿಸುತ್ತಿರುವ ಕಡಲ ಸಂಶೋಧನಾ ಸಂಸ್ಥೆಯನ್ನು ಸಹ ಒಳಗೊಂಡಿರುತ್ತದೆ. ಈ ಲೈಟ್‌ಹೌಸ್ ಮ್ಯೂಸಿಯಂ ಸಂಪೂರ್ಣ ಸಂಕೀರ್ಣದ ವಿಹಂಗಮ ನೋಟದಿಂದ ಸಂದರ್ಶಕರನ್ನು ಮೋಡಿ ಮಾಡಲಿದೆ. ಇದರ ವಿನ್ಯಾಸವು ಭಾರತದ ಅತ್ಯಂತ ಹಳೆಯ ಲೈಟ್‌ಹೌಸ್‌ಗಳಲ್ಲಿ ಒಂದಾದ ಮಹಾಬಲಿಪುರಂ ಲೈಟ್‌ಹೌಸ್‌ನಿಂದ ಸ್ಫೂರ್ತಿ ಪಡೆದಿದೆ. ಈ ಮ್ಯೂಸಿಯಂ ಕಲ್ಲಿನ ವ್ಯಾಪಕ ಬಳಕೆಯೊಂದಿಗೆ ತನ್ನ ವಿಶಿಷ್ಟ ವಾಸ್ತುಶಿಲ್ಪದ ಪಾತ್ರವನ್ನು ಉಳಿಸಿಕೊಳ್ಳುತ್ತದೆ. ಎಚ್ಚರಿಕೆಯಿಂದ ಸಂಗ್ರಹಿಸಲಾದ ವರ್ಚುವಲ್ ರಿಯಾಲಿಟಿ ವಾಕ್‌ಥ್ರೂಗಳು ವಿಶಾಲವಾದ ಕರಾವಳಿಯುದ್ದಕ್ಕೂ ಭಾರತೀಯ ಲೈಟ್‌ಹೌಸ್‌ಗಳ ಇತಿಹಾಸದ ಒಂದು ನೋಟವನ್ನು ಸಂದರ್ಶಕರಿಗೆ ನೀಡುತ್ತವೆ. ಅತ್ಯಾಧುನಿಕ ಧ್ವನಿ ಮತ್ತು ಬೆಳಕಿನ ಪ್ರದರ್ಶನವು ಪ್ರೊಜೆಕ್ಷನ್ ಮ್ಯಾಪಿಂಗ್ ತಂತ್ರಜ್ಞಾನವನ್ನು ಬಳಸಿ ಲೈಟ್‌ಹೌಸ್ ಅನ್ನು ಬೆಳಗಿಸಲಿದೆ.
ಲೋಥಲ್ ಸ್ವತಃ ಪ್ರಾಚೀನ ಕಡಲ ವ್ಯಾಪಾರದೊಂದಿಗೆ ಸಂಬಂಧ ಹೊಂದಿರುವ ದೇಶದ ಅತ್ಯಂತ ಪ್ರಮುಖ ಪುರಾತತ್ವ ತಾಣಗಳಲ್ಲಿ ಒಂದಾಗಿದೆ. ಇಂತಹ ಲೈಟ್‌ಹೌಸ್ ಮ್ಯೂಸಿಯಂ ಸಮುದ್ರಯಾನದ ಅತ್ಯಂತ ಪ್ರಾಚೀನ ಸಂಪ್ರದಾಯಗಳನ್ನು ಆಧುನಿಕ ನ್ಯಾವಿಗೇಷನ್ ಸಾಧನಗಳ ವಿಕಾಸದೊಂದಿಗೆ ಸಂಪರ್ಕಿಸುತ್ತದೆ. ಈ ಕಥೆಯು ಭಾರತದ ಪೂರ್ವ ಕರಾವಳಿಯಲ್ಲೂ ವಿಸ್ತರಿಸುತ್ತಿದೆ. ವಿಶಾಖಪಟ್ಟಣದ ಹಳೆಯ ಲೈಟ್‌ಹೌಸ್ ಪ್ರದೇಶದಲ್ಲಿ ಹೊಸ ಲೈಟ್‌ಹೌಸ್ ಮ್ಯೂಸಿಯಂ ಅನ್ನು ಯೋಜಿಸಲಾಗಿದ್ದು, ಈ ಯೋಜನೆಗಾಗಿ 3,156 ಚದರ ಮೀಟರ್ ಭೂತಿಯನ್ನು ಮೀಸಲಿಡಲಾಗಿದೆ.
ಲೈಟ್‌ಹೌಸ್ ಒಂದು ಉತ್ಸವವಾದಾಗ
ಈ ಪರಿವರ್ತನೆಯು ಸಾಂಪ್ರದಾಯಿಕ ಯೋಜನೆಯು ವಿರಳವಾಗಿ ಉತ್ಪಾದಿಸುವ ಮತ್ತೊಂದು ವಿಷಯವನ್ನು ಸೃಷ್ಟಿಸಿದೆ: ಅದೇ ಲೈಟ್‌ಹೌಸ್ ಸುತ್ತಲಿನ ಒಂದು ಉತ್ಸವ. ಮೊದಲ ಆವೃತ್ತಿಯನ್ನು 2023 ರಲ್ಲಿ ಗೋವಾದ ಫೋರ್ಟ್ ಅಗುವಾದಲ್ಲಿ ನಡೆಸಲಾಯಿತು. ಎರಡನೆಯದು 2024 ರಲ್ಲಿ ಒಡಿಶಾದ ಪುರಿಗೆ ಸ್ಥಳಾಂತರಗೊಂಡರೆ, ಮೂರನೇ ಆವೃತ್ತಿಯನ್ನು 2026 ರಲ್ಲಿ ವಿಶಾಖಪಟ್ಟಣದಲ್ಲಿ ನಡೆಸಲಾಯಿತು. ಈ ಉತ್ಸವಗಳು ಲೈಟ್‌ಹೌಸ್‌ಗಳನ್ನು ವಿಶಾಲವಾದ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕವಾಗಿ ಇರಿಸಿವೆ. ಮೊದಲ ಭಾರತೀಯ ಲೈಟ್‌ಹೌಸ್ ಉತ್ಸವವು ಸಾಂಸ್ಕೃತಿಕ ಪ್ರದರ್ಶನಗಳು, ಕಡಲ ಇತಿಹಾಸದ ಕುರಿತು ಅಧಿವೇಶನಗಳು, ಶಾಸ್ತ್ರೀಯ ಪ್ರದರ್ಶನಗಳು, ಸೆಲೆಬ್ರಿಟಿ ಗಾಯಕರು ಒಳಗೊಂಡ ಸಂಗೀತ ಸಂಜೆಗಳು ಮತ್ತು ಕರಾವಳಿ ಪಾಕಪದ್ಧತಿಯ ಮೂಲಕ ಕಡಲ ಪರಂಪರೆಗೆ ಜೀವ ತುಂಬಿತು.

ಗೋವಾದಲ್ಲಿ ಭಾರತೀಯ ಲೈಟ್‌ಹೌಸ್ ಉತ್ಸವ
ಉತ್ಸವಗಳ ಮೂಲಕ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆಗೆ ಹೇಗೆ ಪ್ರಾಮುಖ್ಯತೆ ನೀಡಲಾಯಿತು ಎಂಬುದನ್ನು ಇದರ ಮುಂದುವರಿದ ಭಾಗವು ಸ್ಪಷ್ಟಪಡಿಸುತ್ತದೆ: ಪುರಿ ಉತ್ಸವದ ವಿಶೇಷತೆ (ಎರಡನೇ ಆವೃತ್ತಿ): ಒಡಿಶಾದ ಪುರಿಯಲ್ಲಿ ನಡೆದ ಎರಡನೇ ಆವೃತ್ತಿಯ ಉತ್ಸವದಲ್ಲಿ ಲೈಟ್‌ಹೌಸ್ ಪರಂಪರೆಯೊಂದಿಗೆ ಮರಳು ಕಲೆ, ದೋಣಿ ಕಲೆ, ಯೋಗ, ಹಾಗೂ ಸ್ಥಳೀಯ ಜಾನಪದ ನೃತ್ಯ ಮತ್ತು ಸಂಗೀತವನ್ನು ಸಂಯೋಜಿಸಲಾಯಿತು. ಅಲ್ಲದೆ, ಒಡಿಶಾದ ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿಪಡಿಸಲಾದ ಗೋಪಾಲ್‌ಪುರ, ಪುರಿ, ಚಂದ್ರಭಾಗಾ, ಪ್ಯಾರಾದೀಪ್ ಮತ್ತು ಫಾಲ್ಸ್ ಪಾಯಿಂಟ್ ಎಂಬ ಐದು ಪ್ರಮುಖ ಲೈಟ್‌ಹೌಸ್‌ಗಳನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಪರಿಚಯಿಸಲಾಯಿತು. ಲೈಟ್‌ಹೌಸ್ ತಾಣಗಳನ್ನು ಸಂರಕ್ಷಿಸುವ, ರಕ್ಷಿಸುವ ಮತ್ತು ಉತ್ತೇಜಿಸುವಲ್ಲಿ ಕರಾವಳಿ ಸಮುದಾಯಗಳನ್ನೂ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಯೋಜನೆಯನ್ನು ಸರ್ಕಾರ ಘೋಷಿಸಿತು.
ವಿಶಾಖಪಟ್ಟಣಂ ಉತ್ಸವ (ಮೂರನೇ ಆವೃತ್ತಿ - 2026): ಮೂರನೇ ಭಾರತೀಯ ಲೈಟ್‌ಹೌಸ್ ಉತ್ಸವದ ಸಮಯದಲ್ಲಿ, ಲೈಟ್‌ಹೌಸ್ ಕೇವಲ ಪ್ರವಾಸಿ ತಾಣವಾಗಿರದೆ ಕರಾವಳಿ ಕನ್ನಡಿಯಂತೆ ಎಲ್ಲರನ್ನೂ ಸೆಳೆಯುವ ಕೇಂದ್ರವಾಯಿತು. ಸ್ಥಳೀಯ ಕರಕುಶಲ ವಸ್ತುಗಳು, ಕರಾವಳಿ ಪಾಕಪದ್ಧತಿ ಮತ್ತು ರಾತ್ರಿಯ ವೇಳೆ ಗೋಪುರಕ್ಕಿಡಲಾಗುವ ವರ್ಣರಂಜಿತ ದೀಪಾಲಂಕಾರಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು. ಕುಟುಂಬಗಳು, ಯುವಕರು, ಕಲಾವಿದರು, ಉದ್ಯಮಿಗಳು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಈ ಉತ್ಸವವನ್ನು ಅತ್ಯಂತ ಜೀವಂತ ಹಾಗೂ ಎಲ್ಲರನ್ನೂ ಒಳಗೊಂಡ ಸಮುದಾಯದ ಹಬ್ಬವನ್ನಾಗಿ ಬದಲಾಯಿಸಿದರು.
ಗೋವಾದ ಅಧುನಿಕ ಸ್ಪರ್ಶ: ಗೋವಾದ ಅಗುವಾದಲ್ಲಿ ಈ ಪರಿವರ್ತನೆಯು ಅತ್ಯಂತ ಆಧುನಿಕ ರೂಪವನ್ನು ಪಡೆದುಕೊಂಡಿದೆ. ಐತಿಹಾಸಿಕ ಲೈಟ್‌ಹೌಸ್ ಕಟ್ಟಡದ ಮೇಲೆಯೇ ಪ್ರೊಜೆಕ್ಷನ್ ಮ್ಯಾಪಿಂಗ್ ತಂತ್ರಜ್ಞಾನವನ್ನು ಬಳಸಿ ನಡೆಸಲಾಗುವ 'ಲೈಟ್-ಅಂಡ್-ಸೌಂಡ್ ಶೋ', ಹಳೆಯ ಹೆಗ್ಗುರುತಿಗೆ ಹೊಸ ಕಥೆಯ ಸ್ಪರ್ಶವನ್ನು ನೀಡುತ್ತಿದೆ.

ಅಗುವಾದ ಲೈಟ್‌ಹೌಸ್
ಲೈಟ್‌ಹೌಸ್‌ಗಾಗಿ ಹೊಸ ಹಾದಿ
ಈ ಕಲ್ಪನೆಯು ಇನ್ನು ಮುಂದೆ ಭಾರತದ ಕರಾವಳಿ ಗೋಪುರಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದು ಹೊಸ ಸ್ಥಳಗಳನ್ನು ತಲುಪುತ್ತಿರುವುದಲ್ಲದೆ, ಅಸ್ತಿತ್ವದಲ್ಲಿರುವ ಲೈಟ್‌ಹೌಸ್ ತಾಣಗಳಿಗೆ ಸಾರ್ವಜನಿಕ ಜೀವನದಲ್ಲಿ ವಿಶಾಲವಾದ ಪಾತ್ರವನ್ನು ನೀಡುತ್ತಿದೆ. ಪ್ರವಾಸಿಗರಿಗಾಗಿ ಈಗಾಗಲೇ ತೆರೆಯಲಾಗಿರುವ 75 ತಾಣಗಳ ಜಾಲವನ್ನು ವಿಸ್ತರಿಸಿ, ಹೆಚ್ಚುವರಿಯಾಗಿ 25 ಲೈಟ್‌ಹೌಸ್‌ಗಳನ್ನು ಪ್ರವಾಸೋದ್ಯಮ ತಾಣಗಳಾಗಿ ಅಭಿವೃದ್ಧಿಪಡಿಸಲು ಪ್ರಸ್ತಾಪಿಸಲಾಗಿದೆ. ಅಲ್ಲದೆ, ಬ್ರಹ್ಮಪುತ್ರ ನದಿಯ ಉದ್ದಕ್ಕೂ ಪಾಂಡು, ಬೋಗಿಬೀಲ್, ಸಿಲ್ಘಾಟ್ ಮತ್ತು ಬಿಸ್ವನಾಥ್ ಘಾಟ್ ಗಳಲ್ಲಿ ನಾಲ್ಕು ಲೈಟ್‌ಹೌಸ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಸುಮಾರು ₹84 ಕೋಟಿ ಒಟ್ಟು ವೆಚ್ಚದೊಂದಿಗೆ ನಿರ್ಮಾಣವಾಗಲಿರುವ ಇವು ಒಳನಾಡಿನ ಜಲಮಾರ್ಗದಲ್ಲಿ ಭಾರತದ ಪ್ರಥಮ ಲೈಟ್‌ಹೌಸ್ ಮೂಲಸೌಕರ್ಯವಾಗಲಿವೆ. ಪ್ರತಿಯೊಂದು ಲೈಟ್‌ಹೌಸ್ 20 ಮೀಟರ್ ಎತ್ತರವಿರಲಿದೆ. ಸೌರಶಕ್ತಿ ಮತ್ತು ಹವಾಮಾನ ಅವಲೋಕನ ಸಂವೇದಕಗಳು ನ್ಯಾವಿಗೇಷನ್ ಮೂಲಸೌಕರ್ಯಕ್ಕೆ ಆಧುನಿಕ ಸಾಮರ್ಥ್ಯಗಳನ್ನು ಸೇರಿಸಲಿವೆ.
ಆದರೆ ಈ ಲೈಟ್‌ಹೌಸ್‌ಗಳನ್ನು ಕೇವಲ ನ್ಯಾವಿಗೇಷನ್‌ಗಾಗಿ ಮಾತ್ರ ವಿನ್ಯಾಸಗೊಳಿಸಲಾಗುತ್ತಿಲ್ಲ. ಪ್ರತಿಯೊಂದು ತಾಣವು ಮ್ಯೂಸಿಯಂ, ಆಂಫಿಥೇಟರ್, ಕೆಫೆಟೇರಿಯಾ, ಮಕ್ಕಳ ಆಟಿಕೆ ವಲಯ, ಸ್ಮರಣಿಕೆ ಅಂಗಡಿ ಮತ್ತು ಸುಂದರವಾಗಿ ಭೂದೃಶ್ಯಗೊಳಿಸಿದ ಸಾರ್ವಜನಿಕ ಸ್ಥಳಗಳನ್ನು ಒಳಗೊಂಡಿರುತ್ತದೆ. ಇದರ ಹಿಂದಿನ ಕಲ್ಪನೆಯು ಸರಳವಾದರೂ ಅತ್ಯಂತ ಮಹತ್ವದ್ದಾಗಿದೆ: ಲೈಟ್‌ಹೌಸ್ ಎನ್ನುವುದು ಇನ್ನು ಮುಂದೆ ದೂರದಿಂದ ಹಡಗಿನ ಮಾರ್ಗವನ್ನು ಗುರುತಿಸುವ ವಸ್ತುವಾಗಿ ಮಾತ್ರ ಇರಬೇಕಾಗಿಲ್ಲ. ಇದು ಜನರನ್ನು ನೀರು, ಅದರ ಇತಿಹಾಸ ಮತ್ತು ಬದಲಾಗುತ್ತಿರುವ ಸಾಧ್ಯತೆಗಳಿಗೆ ಹತ್ತಿರ ತರುವಂತಹ ಸ್ಥಳವಾಗಿಯೂ ಬದಲಾಗಬಹುದು. ತಲೆಮಾರುಗಳಿಂದ ನಿಂತಿರುವ ಕರಾವಳಿ ಗೋಪುರಗಳಿಂದ ಹಿಡಿದು ಬ್ರಹ್ಮಪುತ್ರ ನದಿಯ ತೀರದಲ್ಲಿ ಎದ್ದು ನಿಲ್ಲುತ್ತಿರುವ ಹೊಸ ದೀಪಗಳವರೆಗೆ, ಭಾರತದ ಲೈಟ್‌ಹೌಸ್ ಕಥೆಯು ಹೊಸ ಅರಿವಿನತ್ತ ಸಾಗುತ್ತಿದೆ. ಲೈಟ್‌ಹೌಸ್ ತನ್ನ ಸ್ವಂತ ತಾಣವಾಗಿಯೂ ರೂಪುಗೊಳ್ಳುತ್ತಾ, ದೀಪವು ತನ್ನ ಮೂಲ ಉದ್ದೇಶವನ್ನು ಎಂದಿನಂತೆ ಮುಂದುವರೆಸಿದೆ.
References
Ministry of Ports, Shipping and Waterways
https://dgll.nic.in/DGLL-light-house-location/about-chennai/mahabalipuram-lighthouse
https://dgll.nic.in/about-DGLL/Service-reminders/nais
https://www.dgll.nic.in/DGLL-light-house-location/about-vts-gandhi-dham/samiyani-island-lighthouse-station
https://nmhc.in/about-us/
https://www.dgll.nic.in/DGLL-light-house-location/about-vts-gandhi-dham/jodiya-lighthouse
https://www.pib.gov.in/PressReleasePage.aspx?PRID=2066548®=48&lang=2
https://www.pib.gov.in/PressReleasePage.aspx?PRID=2297603®=48&lang=2
https://www.pib.gov.in/PressReleasePage.aspx?PRID=2213361&lang=1®=3
https://x.com/shipmin_india/status/2009198735956566313
https://www.pib.gov.in/PressReleasePage.aspx?PRID=2063453&lang=2
https://www.pib.gov.in/PressReleasePage.aspx?PRID=2200943&lang=1
https://www.pib.gov.in/PressReleasePage.aspx?PRID=2235574®=3&lang=1
Ministry of Culture
https://culture.gov.in/photo-gallery/mamallapuram-lighthouse
Please See PDF
*****
(Features ID: 160428)
आगंतुक पटल : 9
Provide suggestions / comments