• Sitemap
  • Advance Search
Technology

ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಮಹತ್ವಾಕಾಂಕ್ಷೆಗಳಿಗೆ ಚಾಲನೆ ನೀಡಲು 'ಸಮಗ್ರ-ಉದ್ಯಮ' ವಿಧಾನ

Posted On: 23 SEP 2026 11:38AM

ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಕ್ಷೇತ್ರವು ಒಂದು ಹೊಸ ಅಧ್ಯಾಯವನ್ನು ಪ್ರವೇಶಿಸುತ್ತಿದೆ. ಪ್ರಮುಖ ಹೂಡಿಕೆಗಳು ಹರಿದುಬರುತ್ತಿರುವುದರಿಂದ, ಉತ್ಪಾದನಾ ಸಾಮರ್ಥ್ಯಗಳು ವಿಸ್ತರಿಸುತ್ತಿರುವುದರಿಂದ ಮತ್ತು ಜಾಗತಿಕ ಕಂಪನಿಗಳು ತಮ್ಮ ಉಪಸ್ಥಿತಿಯನ್ನು ಹೆಚ್ಚಿಸುತ್ತಿರುವುದರಿಂದ, ಈ ಪರಿಸರ ವ್ಯವಸ್ಥೆಯು ಅಭೂತಪೂರ್ವ ವೇಗದಲ್ಲಿ ಬೆಳೆಯುತ್ತಿದೆ. ಉದ್ಯಮವು ಮೇಲ್ಮುಖವಾಗಿ ಬೆಳೆಯುತ್ತಿದ್ದಂತೆ, ವೈಯಕ್ತಿಕ ಸಾಮರ್ಥ್ಯಗಳನ್ನು ಸಾಮೂಹಿಕ ರಾಷ್ಟ್ರೀಯ ಸಾಮರ್ಥ್ಯವನ್ನಾಗಿ ಪರಿವರ್ತಿಸಲು ಉದ್ಯಮ ಸಂಘಟನೆಗಳ ನಡುವೆ ಬಲವಾದ ಮತ್ತು ಹೆಚ್ಚು ಸಮನ್ವಯತೆಯ ವಿಧಾನವನ್ನು ಅನುಸರಿಸುವಂತೆ ನಾಯಕರು ಹೆಚ್ಚಾಗಿ ಪ್ರತಿಪಾದಿಸುತ್ತಿದ್ದಾರೆ.

ಉದ್ಯಮದ ನಾಯಕರಿಂದ ಹೊರಹೊಮ್ಮುತ್ತಿರುವ ಪ್ರಮುಖ ಸಂದೇಶವೆಂದರೆ, ಮುಂದಿನ ಹಂತದ ಬೆಳವಣಿಗೆಯು ಯಾವುದೇ ಒಂದು ವಿಭಾಗದಿಂದ ಮಾತ್ರ ಸಾಧ್ಯವಿಲ್ಲ. ಸೆಮಿಕಂಡಕ್ಟರ್‌ಗಳು, ಎಲೆಕ್ಟ್ರಾನಿಕ್ಸ್ ಉತ್ಪಾದನೆ, ಘಟಕಗಳು, ಸಾಮಗ್ರಿಗಳು, ವಿನ್ಯಾಸ, ಪ್ಯಾಕೇಜಿಂಗ್ ಮತ್ತು ಅಂತಿಮ ಬಳಕೆಯ ಅನ್ವಯಿಕೆಗಳು ಹೆಚ್ಚು ಪರಸ್ಪರ ಅವಲಂಬಿತವಾಗುತ್ತಿವೆ. ಆದ್ದರಿಂದ ಯಶಸ್ಸು ತಾಂತ್ರಿಕ ಸಾಮರ್ಥ್ಯಗಳು ಮತ್ತು ಮೂಲಭೂತ ಸೌಕರ್ಯಗಳ ಮೇಲೆ ಮಾತ್ರವಲ್ಲದೆ, ಒಟ್ಟಾಗಿ ಕೆಲಸ ಮಾಡುವ ಉದ್ಯಮದ ಸಾಮರ್ಥ್ಯದ ಮೇಲೂ ಅವಲಂಬಿತವಾಗಿರುತ್ತದೆ.

ಈ ಸಹಕಾರದ ಮನೋಭಾವವೇ 'ಸೆಮಿಕಾನ್ ಇಂಡಿಯಾ 2026' ಸಮಯದಲ್ಲಿ ನಡೆದ "ಭಾರತದ ರಾಷ್ಟ್ರೀಯ ಕಾರ್ಯಸೂಜಿಯನ್ನು ಮುನ್ನಡೆಸುತ್ತಿರುವ ಉದ್ಯಮ ಸಂಘಟನೆಗಳು" ಎಂಬ ಸಮಿತಿ ಚರ್ಚೆಯ ಪ್ರಮುಖ ಕೇಂದ್ರಬಿಂದುವಾಗಿತ್ತು. ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದ ಶ್ರೀ ಅಮಿsೇಶ್ ಕುಮಾರ್ ಸಿನ್ಹಾ ಅವರ ನೇತೃತ್ವದಲ್ಲಿ ನಡೆದ ಈ ಅಧಿವೇಶನದಲ್ಲಿ, ಭಾರತದ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಮಹತ್ವಾಕಾಂಕ್ಷೆಗಳನ್ನು ವೇಗಗೊಳಿಸಲು ಆಳವಾದ ಸಹಕಾರವು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಚರ್ಚಿಸಲು ಪ್ರಮುಖ ಉದ್ಯಮ ಸಂಘಟನೆಗಳ ಹಿರಿಯ ಪ್ರತಿನಿಧಿಗಳು ಒಂದೆಡೆ ಸೇರಿದ್ದರು.

ಉದ್ಯಮವು ಹೆಚ್ಚು ಸಮನ್ವಯತೆಯುಳ್ಳ, "ಸಮಗ್ರ-ಉದ್ಯಮ" (ಹೋಲ್-ಆಫ್-ಇಂಡಸ್ಟ್ರಿ) ವಿಧಾನದತ್ತ ಸಾಗಬೇಕು ಎಂಬ ಬೆಳೆಯುತ್ತಿರುವ ಒಮ್ಮುಖವನ್ನು ಈ ಚರ್ಚೆಯು ಪ್ರತಿಬಿಂಬಿಸಿತು. ವಿಭಿನ್ನ ಉದ್ಯಮ ಸಂಘಟನೆಗಳು ಪರಿಸರ ವ್ಯವಸ್ಥೆಯ ವಿಭಿನ್ನ ವಿಭಾಗಗಳನ್ನು ಪ್ರತಿನಿಧಿಸಿದರೂ, ಅವೆಲ್ಲವೂ ಅಂತಿಮವಾಗಿ ಭಾರತದಲ್ಲಿ ಜಾಗತಿಕವಾಗಿ ಸ್ಪರ್ಧಾತ್ಮಕವಾದ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಕ್ಷೇತ್ರವನ್ನು ನಿರ್ಮಿಸುವ ಸಾಮಾನ್ಯ ಗುರಿಯತ್ತ ಕೆಲಸ ಮಾಡುತ್ತಿವೆ ಎಂದು ಭಾಗವಹಿಸಿದವರು ಅಭಿಪ್ರಾಯಪಟ್ಟರು.

ಚರ್ಚೆಯ ಸಮಯದಲ್ಲಿ ಪದೇ ಪದೇ ಕೇಳಿಬಂದ ಮತ್ತೊಂದು ಪ್ರಮುಖ ವಿಷಯವೆಂದರೆ ತಂತ್ರಜ್ಞಾನ ಕ್ಷೇತ್ರಗಳ ನಡುವಿನ ಹೆಚ್ಚುತ್ತಿರುವ ಪರಸ್ಪರ ಒಡನಾಟ. ಇಂದಿನ ಚಿಪ್‌ಗಳು ಪ್ರತ್ಯೇಕವಾಗಿಲ್ಲದೆ, ಸಾಧನಗಳು, ಉತ್ಪನ್ನಗಳು ಮತ್ತು ಸಿಸ್ಟಮ್‌ಗಳೊಂದಿಗೆ ಸಂಯೋಜನೆಗೊಳ್ಳುವುದರ ಮೂಲಕ ಮೌಲ್ಯವನ್ನು ಪಡೆದುಕೊಳ್ಳುತ್ತವೆ. ಉತ್ಪಾದನೆಯಲ್ಲಿನ ಪ್ರಗತಿಯು ಪೂರಕ ಸಾಮಗ್ರಿಗಳು ಮತ್ತು ಉಪಕರಣಗಳ ಮೇಲೆ ಅವಲಂಬಿತವಾಗಿದೆ, ಆದರೆ ಉತ್ಪಾದನಾ ಪ್ರಕ್ರಿಯೆಯು ಪ್ಯಾಕೇಜಿಂಗ್, ಪರೀಕ್ಷೆ ಮತ್ತು ವಿಶಾಲವಾದ ಎಲೆಕ್ಟ್ರಾನಿಕ್ಸ್ ಸಾಮರ್ಥ್ಯಗಳನ್ನು ಅವಲಂಬಿಸಿದೆ. ಉದ್ಯಮದ ಈ ಪರಸ್ಪರ ಅವಲಂಬನೆಯ ಸ್ವಭಾವವು ಮೌಲ್ಯ ಸರಪಳಿಯಾದ್ಯಂತ ಬಲವಾದ ಸಂಪರ್ಕಗಳು ಮತ್ತು ಹೆಚ್ಚು ವ್ಯವಸ್ಥಿತ ಸಹಕಾರವನ್ನು ಕೋರುತ್ತದೆ.

ವ್ಯಕ್ತಿಗತ ಸಮ್ಮೇಳನಗಳು ಮತ್ತು ಕಾರ್ಯಕ್ರಮಗಳನ್ನು ಮೀರಿ ನಿರಂತರ ಒಡನಾಟವನ್ನು ಕಾಯ್ದುಕೊಳ್ಳುವ ಅಗತ್ಯತೆಯು ಚರ್ಚೆಯ ಮತ್ತೊಂದು ವಿಷಯವಾಗಿತ್ತು. ನಿರಂತರ ಸಂಭಾಷಣೆಯನ್ನು ಸುಲಭಗೊಳಿಸಲು, ಸಂಘಟನೆಗಳ ನಡುವೆ ಸಮನ್ವಯವನ್ನು ಉತ್ತೇಜಿಸಲು ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳ ಮೇಲೆ ಸಾಮೂಹಿಕ ಕ್ರಮಗಳನ್ನು ಕೈಗೊಳ್ಳಲು ಸಹಾಯ ಮಾಡುವ ಶಾಶ್ವತ ಸಮುದಾಯದ ಕಾರ್ಯವಿಧಾನವನ್ನು ರಚಿಸುವ ಕಲ್ಪನೆಯನ್ನು ಉದ್ಯಮದ ನಾಯಕರು ಪರಿಶೀಲಿಸಿದರು.

ಈ ಪ್ರಸ್ತಾಪವು ಅಸ್ತಿತ್ವದಲ್ಲಿರುವ ಸಂಘಟನೆಗಳ ವಿಶೇಷ ಪಾತ್ರವನ್ನು ಬದಲಿಸುವುದರ ಕುರಿತಲ್ಲ. ಬದಲಾಗಿ, ಕ್ಷೇತ್ರಗಳು ಮತ್ತು ಮೌಲ್ಯ ಸರಪಳಿಗಳನ್ನು ಮೀರಿರುವ ವಿಷಯಗಳ ಮೇಲೆ ಅವು ಸಹಕರಿಸಲು ಸಾಧ್ಯವಾಗುವ ಸಾಮಾನ್ಯ ವೇದಿಕೆಯನ್ನು ಒದಗಿಸುವ ಮೂಲಕ ಅವುಗಳ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲು ಇದು ಪ್ರಯತ್ನಿಸುತ್ತದೆ. ಭಾರತದ ಮಹತ್ವಾಕಾಂಕ್ಷೆಗಳು ಉತ್ಪಾದನಾ ಘಟಕಗಳನ್ನು ಸ್ಥಾಪಿಸುವುದರಿಂದ ಹಿಡಿದು ಸಮಗ್ರ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವವರೆಗೆ ವಿಕಸನಗೊಳ್ಳುತ್ತಿರುವಂತೆ, ಇಂತಹ ಸಾಂಸ್ಥಿಕ ಸಹಕಾರವನ್ನು ಕಾರ್ಯತಂತ್ರದ ಅಗತ್ಯತೆಯಾಗಿ ಹೆಚ್ಚು ನೋಡಲಾಗುತ್ತಿದೆ.

ವಿನ್ಯಾಸ, ಉತ್ಪಾದನೆ, ಪ್ಯಾಕೇಜಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಪರಿಹಾರಗಳು ಬಲವಾದ ಹಾಗೂ ಹೆಚ್ಚು ಸ್ಥಿತಿಸ್ಥಾಪಕತ್ವವುಳ್ಳ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಲು ಒಟ್ಟಾಗಿ ಕೆಲಸ ಮಾಡುವ ವಿಶಾಲವಾದ "ಸಿಲಿಕಾನ್‌ನಿಂದ ಸಿಸ್ಟಮ್‌ಗಳಿಗೆ" ಎಂಬ ದೃಷ್ಟಿಕೋನವನ್ನು ಈ ಚರ್ಚೆಯು ಮತ್ತಷ್ಟು ಗಟ್ಟಿಗೊಳಿಸಿತು. ಭಾರತವು ತನ್ನ ಸೆಮಿಕಂಡಕ್ಟರ್ ಮಹತ್ವಾಕಾಂಕ್ಷೆಗಳನ್ನು ಮುನ್ನಡೆಸುತ್ತಿದ್ದಂತೆ, ಬೆಳವಣಿಗೆಯ ಮುಂದಿನ ಹಂತವನ್ನು ರೂಪಿಸುವಲ್ಲಿ ಬಂಡವಾಳ ಹೂಡಿಕೆಗಳು ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಷ್ಟೇ ಸಹಕಾರವೂ ಸಹ ಸಮಾನವಾಗಿ ಪ್ರಮುಖವೆಂದು ಉದ್ಯಮದ ನಾಯಕರು ಸೂಚಿಸಿದ್ದಾರೆ.

ಈ ವೇಗಕ್ಕೆ ಬೆಂಬಲವಾಗಿ, 'ಸೆಮಿಕಾನ್ ಇಂಡಿಯಾ 2026' ಸುಮಾರು 300 ಅಂತಾರಾಷ್ಟ್ರೀಯ ಕಂಪನಿಗಳು ಸೇರಿದಂತೆ 600 ಕ್ಕೂ ಹೆಚ್ಚು ಪ್ರದರ್ಶಕರನ್ನು ಒಂದೇ ವೇದಿಕೆಗೆ ತಂದಿತು, ಇದು ಭಾರತದ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಪರಿಸರ ವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ ಜಾಗತಿಕ ಆಸಕ್ತಿಯನ್ನು ಪ್ರದರ್ಶಿಸಿತು. ಈ ಕಾರ್ಯಕ್ರಮದಲ್ಲಿ ಉತ್ಪಾದನೆ, ವಿನ್ಯಾಸ, ಪ್ಯಾಕೇಜಿಂಗ್, ಕೃತಕ ಬುದ್ಧಿಮತ್ತೆ, ಸಂಶೋಧನೆ ಮತ್ತು ಅಭಿವೃದ್ಧಿ, ಲಾಜಿಸ್ಟಿಕ್ಸ್ ಮತ್ತು ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ 56 ತಿಳಿವಳಿಕೆ ಒಪ್ಪಂದಗಳು, ಕಾರ್ಯತಂತ್ರದ ಉಪಕ್ರಮಗಳು  ಮತ್ತು ಉದ್ಯಮದ ಪ್ರಕಟಣೆಗಳಿಗೆ ಸಾಕ್ಷಿಯಾಯಿತು.

ಸರ್ಕಾರದ ಬೆಂಬಲವು ಈ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸುವುದನ್ನು ಮುಂದುವರಿಸಿದೆ. ಉತ್ಪಾದನೆ ಆಧಾರಿತ ಉತ್ತೇಜನ ಯೋಜನೆಗಳು ಮತ್ತು ಇಂಡಿಯಾ ಸೆಮಿಕಂಡಕ್ಟರ್ ಮಿಷನ್‌ನಂತಹ ಉಪಕ್ರಮಗಳ ಮೂಲಕ, ದೇಶೀಯ ಸಾಮರ್ಥ್ಯಗಳನ್ನು ಬಲಪಡಿಸಲು ಮತ್ತು ದೃಢವಾದ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಪ್ರಯತ್ನಗಳು ನಡೆಯುತ್ತಿವೆ. 'ಸೆಮಿಕಾನ್ ಇಂಡಿಯಾ' ಕಾರ್ಯಕ್ರಮದಡಿ ಸರ್ಕಾರವು 12 ಸೆಮಿಕಂಡಕ್ಟರ್ ಯೋಜನೆಗಳಿಗೆ ಅನುಮೋದನೆ ನೀಡಿದ್ದು, 2026ರ ಸೆಪ್ಟೆಂಬರ್ ವೇಳೆಗೆ ಐದು ವಾಣಿಜ್ಯ ಸೆಮಿಕಂಡಕ್ಟರ್ ಘಟಕಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ.

ಒಟ್ಟಾರೆಯಾಗಿ, ಈ ಬೆಳವಣಿಗೆಗಳು ಒಂದು ವಿಶಾಲವಾದ ಸತ್ಯವನ್ನು ಉಲ್ಲೇಖಿಸುತ್ತವೆ: ಭಾರತದ ಸೆಮಿಕಂಡಕ್ಟರ್ ಕಥೆಯು ಇನ್ನು ಮುಂದೆ ಕೇವಲ ಕಾರ್ಖಾನೆಗಳನ್ನು ನಿರ್ಮಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ದೇಶದ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಬೆಳವಣಿಗೆಯ ಮುಂದಿನ ಹಂತಕ್ಕೆ ಸಹಕಾರವೇ ಬುನಾದಿಯಾಗಿ ಹೊರಹೊಮ್ಮುವುದರೊಂದಿಗೆ, ಉದ್ಯಮಗಳು, ಸಂಸ್ಥೆಗಳು ಮತ್ತು ತಂತ್ರಜ್ಞಾನಗಳ ನಡುವೆ ಸಂಪರ್ಕಗಳನ್ನು ನಿರ್ಮಿಸುವುದರ ಕುರಿತಾಗಿದೆ.

ಪಿಡಿಎಫ್ ವೀಕ್ಷಿಸಲು ಕ್ಲಿಕ್ ಮಾಡಿ

******

 

(Features ID: 160140) आगंतुक पटल : 19
Provide suggestions / comments
इस विज्ञप्ति को इन भाषाओं में पढ़ें: Urdu , English , हिन्दी , Bengali , Malayalam