Rural Prosperity
ಛಲದ ಪಯಣ, ಬೆಳವಣಿಗೆಯ ಹಾದಿಗಳು
ಆರ್‌ಎಸ್‌ಇಟಿಐಗಳು ಉದ್ಯಮಶೀಲತೆಯ ಮೂಲಕ ಗ್ರಾಮೀಣ ಆಕಾಂಕ್ಷೆಗಳಿಗೆ ಶಕ್ತಿ ತುಂಬುತ್ತಿವೆ
Posted On:
21 JUL 2026 11:55AM
ವಿಷ್ಣು ಬಾಯಿ ಅವರು ತಮ್ಮ ಜೀವನದ ಪಯಣವನ್ನು ರೂಪಿಸಿದ ಒಂದು ನಂಬಿಕೆಯನ್ನು ನೆನಪಿಸಿಕೊಳ್ಳುತ್ತಾರೆ: ಯಾರು ಮೇಲಕ್ಕೆ ಏರುತ್ತಾರೋ ಅವರಿಗೆ ಈ ಜುಗತಿಯು ಇನ್ನಷ್ಟು ಮೇಲಕ್ಕೆ ತಳ್ಳುತ್ತದೆ (ಬೆಂಬಲಿಸುತ್ತದೆ) ಎಂಬುದು ಅದು. ಅವರು ಬಡ ಕೃಷಿ ಕುಟುಂಬದಲ್ಲಿ ಜನಿಸಿದರು, ಅಲ್ಲಿ ಕನಸುಗಳು ಅಪರೂಪವಾಗಿ ದೈನಂದಿನ ಬದುಕುಳಿಯುವಿಕೆಯನ್ನು ಮೀರಿ ಬೆಳೆಯುತ್ತಿದ್ದವು. ಎಂಟನೇ ತರಗತಿಯ ನಂತರ ಅವರ ಶಾಲಾ ಶಿಕ್ಷಣ ನಿಂತುಹೋಯಿತು, ಆರಂಭಿಕ ಮದುವೆ ಮತ್ತು ಹೊಸ ಜವಾಬ್ದಾರಿಗಳಿಂದಾಗಿ ಅದು ಅರ್ಧಕ್ಕೆ ಮುರಿಯಿತು. ಹದಿನೆಂಟು ತಿಂಗಳೊಳಗೆ, ಅವರ ದಾಂಪತ್ಯ ಜೀವನವು ಆರ್ಥಿಕ ಮುಗ್ಗಟ್ಟಿನಲ್ಲಿ ಮುಳುಗಿದ್ದರಿಂದ ಅವರು ಮತ್ತೆ ಮನೆಗೆ ಹಿಂದಿರುಗಿದರು. ಅವರ ಸಹೋದರರು ಆರ್ಥಿಕ ನೆರವು ನೀಡಲು ನಿರಾಕರಿಸಿದಾಗ, ಅವರು ಸ್ವಾವಲಂಬನೆಯನ್ನು ಅಳವಡಿಸಕೊಂಡು ಮನೆಯಲ್ಲೇ ಬಟ್ಟೆಗಳನ್ನು ಹೊಲಿಯಲು ಪ್ರಾರಂಭಿಸಿದರು. ಪ್ರತಿಯೊಂದು ಸಣ್ಣ ಸಂಪಾದನೆಯು ಕೇವಲ ಆದಾಯವನ್ನಲ್ಲ, ಬದಲಿಗೆ ಸ್ವಾತಂತ್ರ್ಯದ ಸೂಕ್ಷ್ಮ ಭಾವನೆಯನ್ನು ತಂದಿತು.

ಅವರ ಜೀವನದ ಮಹತ್ವದ ತಿರುವು 'ಶ್ರೀ ರಾಮ್ ಸ್ವಸಹಾಯ ಗುಂಪು' ಮೂಲಕ ಬಂದಿತು, ಇದು ಭೋಪಾಲ್‌ನಲ್ಲಿರುವ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ತರಬೇತಿ ಅವಕಾಶಗಳನ್ನು ಪರಿಚಯಿಸಿತು. ಅವರು ಇತರ ಮಹಿಳೆಯರೊಂದಿಗೆ ಟೈಲರಿಂಗ್ ಕಲಿಯಲು ಬಯಸಿದ್ದರು, ಆದರೆ ಸಾಮಾಜಿಕ ಅಡೆತಡೆಗಳು ಗಟ್ಟಿಯಾಗಿ ನಿಂತಿದ್ದವು. ಓಡಾಟದ ಮೇಲಿನ ನಿರ್ಬಂಧಗಳನ್ನು ಎದುರಿಸುತ್ತಾ, ಅವರು ತಮ್ಮ ಗ್ರಾಮದಲ್ಲೇ ತರಬೇತಿ ನೀಡುವಂತೆ ವಿನಂತಿಸಿದರು. ಸಂಸ್ಥೆಯು ಸ್ಪಂದಿಸಿತು ಮತ್ತು ಪಂಚಾಯತ್ ಭವನವು ಆಶಾದಾಯಕ ತರಗತಿ ಕೋಣೆಯಾಯಿತು. ಮಹಿಳೆಯರು ಅಲ್ಲಿ ಸೇರಿ, ಸಣ್ಣ ವ್ಯವಹಾರವನ್ನು ನಡೆಸುವ ಮೂಲಭೂತ ಅಂಶಗಳೊಂದಿಗೆ ಹೊಲಿಗೆಯನ್ನು ಕಲಿತರು. ಅನೇಕರಿಗೆ, ಇದು ಮನೆಯ ಗಡಿಯಾಚೆಗಿನ ಜಗತ್ತಿಗೆ ಅವರ ಮೊದಲ ಹೆಜ್ಜೆಯಾಗಿತ್ತು.
ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ವಿಷ್ಣು ಬಾಯಿ ಅವರು ತಮ್ಮ ಗ್ರಾಮದಲ್ಲಿ ಒಂದು ಸಣ್ಣ ಟೈಲರಿಂಗ್ ಅಂಗಡಿಯನ್ನು ತೆರೆದರು.
ಅವರ ಕೆಲಸವು ನಿಧಾನವಾಗಿ ವಿಸ್ತರಿಸಿ ಪುರುಷರ ಬಟ್ಟೆಗಳನ್ನೂ ಒಳಗೊಂಡಿತು. ಶಾಲಾ ಸಮವಸ್ತ್ರಗಳಿಗಾಗಿ ಬಂದ ಸರ್ಕಾರಿ ಆರ್ಡರ್ ಸ್ಥಿರ ಆದಾಯವನ್ನು ಮತ್ತು ಹೊಸ ಆತ್ಮವಿಶ್ವಾಸವನ್ನು ತಂದುಕೊಟ್ಟಿತು. ಸ್ವಲ್ಪ ಸಮಯದ ನಂತರ, ಅವರು ಕೈಗಾರಿಕಾ (ಇಂಡಸ್ಟ್ರಿಯಲ್) ಸಿರ್ವಿಂಗ್ ಯಂತ್ರಗಳನ್ನು ಹೊಂದಿದರು ಮತ್ತು ತಮ್ಮ ಬೆಳೆಯುತ್ತಿರುವ ಉದ್ಯಮದ ಮೂಲಕ ಸ್ಥಿರವಾದ ಜೀವನೋಪಾಯವನ್ನು ಕಟ್ಟಿಕೊಂಡರು. ಅವರ ಪಯಣವು ಹಠಾತ್ ಬದಲಾವಣೆಯಿಂದಲ್ಲದೆ, ನಿರಂತರ ದೃಢನಿಶ್ಚಯದಿಂದ ರೂಪುಗೊಂಡ ಮೂಕ ಧೈರ್ಯವನ್ನು ಪ್ರತಿಬಿಂಬಿಸುತ್ತದೆ. ಅವರಂತಹ ಕಥೆಗಳು ಗ್ರಾಮೀಣ ಭಾರತದಾದ್ಯಂತ ಪ್ರತಿಧ್ವನಿಸುತ್ತವೆ, ಅಲ್ಲಿ ಬದಲಾವಣೆಯು ಸಾಮಾನ್ಯವಾಗಿ ಗದ್ದಲ ಅಥವಾ ಆಡಂಬರವಿಲ್ಲದೆ ತೆರೆದುಕೊಳ್ಳುತ್ತದೆ.
|
ಆರ್‌ಎಸ್‌ಇಟಿಐಗಳು: ಆಕಾಂಕ್ಷೆಗಳಿಂದ ಉದ್ಯಮಶೀಲತೆಯವರೆಗಿನ ಸೇತುವೆ
ದೀನ್ದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಬರುವ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಗಳು ಈ ರೂಪಾಂತರದ ಕೇಂದ್ರಬಿಂದುವಾಗಿವೆ. ಇವು ಸ್ವಯಂ ಉದ್ಯೋಗವನ್ನು ಉತ್ತೇಜಿಸಲು ಮತ್ತು ಸೂಕ್ಷ್ಮ ಉದ್ಯಮಗಳನ್ನು ಪೋಷಿಸಲು ಹಿನ್ನೆಲೆಯಲ್ಲಿ ಸ್ಥಿರವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಜಿಲ್ಲಾ ಮಟ್ಟದ ಸಂಸ್ಥೆಗಳು ಹದಿನಾರರಿಂದ (ಹದಿನೆಂಟರಿಂದ) ಐವತ್ತು ವರ್ಷ ವಯಸ್ಸಿನ ನಿರುದ್ಯೋಗಿ ಗ್ರಾಮೀಣ ಜನರಿಗೆ ಉಚಿತ, ಅಲ್ಪಾವಧಿಯ, ಪ್ರಾಯೋಗಿಕ ಮತ್ತು ವಸತಿಯುತ ತರಬೇತಿಯನ್ನು ನೀಡುತ್ತವೆ. ಗ್ರಾಮೀಣ ಅಭಿವೃದ್ಧಿ ಸಚಿವಾಲಯ, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಮತ್ತು ಪ್ರಾಯೋಜಕ ಬ್ಯಾಂಕ್‌ಗಳನ್ನು ಜೋಡಿಸುವ ಮೂರುಮುಖಿ ಪಾಲುದಾರಿಕೆಗಳ ಮೂಲಕ, ಇವುಗಳ ಪಾತ್ರವು ತರಗತಿ ಕೋಣೆಗಳನ್ನು ಮೀರಿ, ಸಾಲ ಬೆಂಬಲ ಮತ್ತು ನಿರಂತರ ಮಾರ್ಗದರ್ಶನದ ಮೂಲಕ ಜೀವನೋಪಾಯದವರೆಗೂ ವಿಸ್ತರಿಸುತ್ತದೆ.
ಕೃಷಿ, ಉತ್ಪಾದನೆ, ಸೇವೆಗಳು ಮತ್ತು ಉದ್ಯಮಶೀಲತೆಯನ್ನು ಒಳಗೊಂಡ ಎಪ್ಪತ್ಮೂರು ಕೋರ್ಸ್‌ಗಳು ರಾಷ್ಟ್ರೀಯ ಕೌಶಲ್ಯ ಮಾನದಂಡಗಳಿಗೆ ಅನುಗುಣವಾಗಿವೆ. ತರಬೇತಿದಾರರು ಕಾರ್ಯಸಾಧ್ಯವಾದ ಉದ್ಯಮಗಳನ್ನು ನಿರ್ಮಿಸಲು ಸಾಲವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಪ್ರಾಯೋಜಕ ಬ್ಯಾಂಕ್‌ಗಳು ನಿರ್ಣಾಯಕ ಪಾತ್ರವಹಿಸುತ್ತವೆ. ಈ ಸಮಗ್ರ ವಿಧಾನವು ಕೌಶಲ್ಯಗಳು ಕೇವಲ ಸೈದ್ಧಾಂತಿಕವಾಗಿ ಉಳಿಯದೆ ನೈಜ ಆರ್ಥಿಕ ಚಟುವಟಿಕೆಯಾಗಿ ಪರಿವರ್ತನೆಗೊಳ್ಳುವುದನ್ನು ಖಚಿತಪಡಿಸುತ್ತದೆ. ಅನೇಕರಿಗೆ, ಈ ಬೆಂಬಲ ವ್ಯವಸ್ಥೆಯು ಸಾಧ್ಯತೆಯು ಆಕಾರ ತಾಳಲು ಪ್ರಾರಂಭಿಸುವ ನಿರ್ಣಾಯಕ ತಿರುವಾಗಿ ಪರಿಣಮಿಸುತ್ತದೆ.
|
ದಿನಗೂಲಿ ಕಾರ್ಮಿಕನಿಂದ ಉದ್ಯೋಗ ಸೃಷ್ಟಿಕರ್ತನಾಗಿ ಬೆಳೆದ ಉಮೇಶ್ ಶಿವಾಜಿ ಇಂಗ್ಳೆ ಅವರ ಮತ್ತೊಂದು ಪಯಣವು, ಆರ್‌ಎಸ್‌ಇಟಿಐಗಳು ಹೇಗೆ ಶಕ್ತಿಯೊಂದಿಗೆ ಜೀವನವನ್ನು ಮರುರೂಪಿಸುತ್ತವೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಆರ್ಥಿಕ ಮುಗ್ಗಟ್ಟಿನ ಕುಟುಂಬದಿಂದ ಬಂದ ಅವರು ಹತ್ತನೇ ತರಗತಿಯವರೆಗೆ ಮಾತ್ರ ಓದಲು ಸಾಧ್ಯವಾಯಿತು. ಸುಮಾರು ಐದು ವರ್ಷಗಳ ಕಾಲ ಅವರು ನೂಡಲ್ಸ್ ಕಾರ್ಖಾನೆಯಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡಿದರು. ದೀರ್ಘಕಾಲ ಕೆಲಸ ಮಾಡಿದರೂ, ಅವರ ಸಂಪಾದನೆಯು ಅವರ ಕುಟುಂಬದ ಅಗತ್ಯಗಳನ್ನು ಕಷ್ಟಪಟ್ಟು ಪೂರೈಸುತ್ತಿತ್ತು. ಸ್ನೇಹಿತರೊಬ್ಬರ ಸಲಹೆಯು ಅವರನ್ನು ಆರ್‌ಎಸ್‌ಇಟಿಐ ತರಬೇತಿ ಕಾರ್ಯಕ್ರಮಕ್ಕೆ ಪರಿಚಯಿಸಿತು, ಇದು ಅನಿರೀಕ್ಷಿತ ಬಾಗಿಲನ್ನು ತೆರೆಯಿತು. ಕಾರ್ಖಾನೆಯಲ್ಲಿದ್ದ ತಮ್ಮ ಅನುಭವವನ್ನು ಬಳಸಿ ಕಲಿಕೆಯನ್ನು ಗಂಭೀರವಾಗಿ ಮುಂದುವರಿಸಲು ಅವರು 'ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ'ದಲ್ಲಿ ನೋಂದಾಯಿಸಿಕೊಂಡರು.ತರಬೇತಿಯ ನಂತರ, ಅವರು ಸೆಕೆಂಡ್ ಹ್ಯಾಂಡ್ ಯಂತ್ರ ಮತ್ತು ಮೂಲಭೂತ ಉಪಕರಣಗಳೊಂದಿಗೆ ಸಣ್ಣ ನೂಡಲ್ಸ್ ಘಟಕವನ್ನು ಪ್ರಾರಂಭಿಸಿದರು. ಆರಂಭದಲ್ಲಿ ಅವರು ಪ್ರತಿದಿನ ಸುಮಾರು 1,000 ರಿಂದ 1,200 ಕೆಜಿ ನೂಡಲ್ಸ್ ಉತ್ಪಾದಿಸುತ್ತಿದ್ದರು. ಕ್ರಮೇಣ ಬೇಡಿಕೆ ಹೆಚ್ಚಾಯಿತು, ಮತ್ತು ಅವರ ಉದ್ಯಮವು ತಿಂಗಳಿಗೆ ಸುಮಾರು ಮೂl (ಮೂವತ್ತು) ಸಾವಿರ ರೂಪಾಯಿಗಳಷ್ಟು ಲಾಭ ಗಳಿಸಲು ಪ್ರಾರಂಭಿಸಿತು. ಅವರು ದುರ್ಬಲ ಹಿನ್ನೆಲೆಯ ನಾಲ್ಕು ಮಹಿಳೆಯರಿಗೆ ಉದ್ಯೋಗ ನೀಡುವ ಮೂಲಕ ತಮ್ಮ ಸ್ವಂತ ಕುಟುಂಬದ ಹೊರತಾಗಿಯೂ ಅವಕಾಶವನ್ನು ವಿಸ್ತರಿಸಿದರು. ಬ್ಯಾಂಕ್‌ನಿಂದ ಪಡೆದ ಎಂಟು ಲಕ್ಷ ರೂಪಾಯಿಗಳ ಸಾಲವು ತಮ್ಮ ವ್ಯವಹಾರವನ್ನು ವಿಸ್ತರಿಸಲು ಅವರಿಗೆ ಸಹಾಯ ಮಾಡಿತು. ಅವರು ಎಂಐಡಿಸಿ ಅಕೋಲಾದಲ್ಲಿ ದೊಡ್ಡ ಘಟಕಕ್ಕೆ ಬದಲಾಯಿಸಿಕೊಂಡು, ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಉತ್ಪಾದನೆಯನ್ನು ವಿಸ್ತರಿಸಿದರು. ದಿನಗೂಲಿ ಕಾರ್ಮಿಕನಿಂದ ಮಾಲೀಕನಾಗಿ (ಉದ್ಯೋಗದಾತನಾಗಿ) ಬೆಳೆದ ಅವರ ಪಯಣವು, ಇತರರಿಗೂ ಜೀವನೋಪಾಯವನ್ನು ಸೃಷ್ಟಿಸುವ ಮೂಲಕ ತಮ್ಮ ಜೀವನದ ಉದ್ದೇಶವನ್ನು ಮರುರೂಪಿಸಿಕೊಂಡಿತು.

ಕೆಲವು ಪಯಣಗಳು ಆರ್ಥಿಕ ಅಗತ್ಯಗಳಿಂದ ಪ್ರಾರಂಭವಾದರೆ, ಇನ್ನು ಕೆಲವು ಸೃಜನಶೀಲ ಆಕಾಂಕ್ಷೆಗಳಿಂದ ಮೂಡಿಬರುತ್ತವೆ. ಧಾರವಾಡದಲ್ಲಿ, ಸಂಜಯ್ ಮಾಲಗಿ ಅವರ ಕಥೆಯು ಆರ್‌ಎಸ್‌ಇಟಿಐಗಳು ವಿವಿಧ ರೀತಿಯ ಕನಸುಗಳು ಉದ್ಯಮಗಳಾಗಿ ಬೆಳೆಯಲು ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ ಮುಗಿಸಿದ ನಂತರ, ಅವರು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿದರು. ಕಾಲಾನಂತರದಲ್ಲಿ ಅತೃಪ್ತಿ ಹೆಚ್ಚಾಗಿ, ಅವರು ಆ ಕೆಲಸವನ್ನು ಬಿಟ್ಟು ಉದ್ದೇಶವನ್ನು ಹುಡುಕುತ್ತಾ ಮನೆಗೆ ಹಿಂತಿರುಗಲು ಪ್ರೇರೇಪಿಸಲ್ಪಟ್ಟರು. ಈ ಅನಿಶ್ಚಿತ ಹಂತದಲ್ಲಿ, ಅವರು ಆರ್‌ಎಸ್‌ಇಟಿಐ ಧಾರವಾಡ ನೀಡುತ್ತಿದ್ದ ಫೋಟೋಗ್ರಫಿ ಕೋರ್ಸ್ ಅನ್ನು ಕಂಡುಕೊಂಡರು. ಅವರು ಅದರಲ್ಲಿ ಸೇರಿಕೊಂಡರು, ಮತ್ತು ಕುತೂಹಲವಾಗಿ ಪ್ರಾರಂಭವಾದದ್ದು ಶೀಘ್ರದಲ್ಲೇ ಸ್ಪಷ್ಟ ಉದ್ಯಮಶೀಲತೆಯ ದೃಷ್ಟಿಕೋನವಾಗಿ ಬದಲಾಯಿತು. 2019 ರಲ್ಲಿ, ಅವರು 'ಸಿನೆವಿಂಕ್ಸ್' ಎಂಬ ತಮ್ಮ ಕಂಪನೆಯನ್ನು ಸ್ಥಾಪಿಸಿ, ಕಥೆ ಹೇಳುವ ಜಗತ್ತಿಗೆ ಕಾಲಿಟ್ಟರು. ಅವರ ಕೆಲಸವು ವೀಡಿಯೊಗ್ರಫಿ, ಎಡಿಟಿಂಗ್ ಮತ್ತು ನಿರ್ದೇಶನವನ್ನು ಒಳಗೊಂಡಿದ್ದು, ಬಹು ಭಾರತೀಯ ಭಾಷೆಗಳಲ್ಲಿ ನಿರೂಪಣೆಗಳನ್ನು ಹೆಣೆಯುತ್ತದೆ. ಅವರ ಚಲನಚಿತ್ರಗಳು ವಲಸೆ, ರಾಜಕೀಯ ಮತ್ತು ತಂತ್ರಜ್ಞಾನದ ದುರ್ಬಳಕೆಯನ್ನು ಗಮನಾರ್ಹವಾದ ಭಾವನಾತ್ಮಕ ಆಳದೊಂದಿಗೆ ಅನ್ವೇಷಿಸುತ್ತವೆ.

ಅವರ ‘ತಮಸೋ ಮಾ ಜ್ಯೋತಿರ್ಗಮಯ’ ಚಲನಚಿತ್ರವು ನೇಕಾರರ ಕಷ್ಟಗಳನ್ನು ಚಿತ್ರಿಸಿದ್ದಕ್ಕಾಗಿ ಎರಡು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿತು. ಮತ್ತೊಂದು ಕೃತಿಯಾದ ‘ಹಿನ್ನೋಟ’, 2020-21 ನೇ ಸಾಲಿನಲ್ಲಿ ಕೊಚ್ಚಿ ಅಂತರರಾಷ್ಟ್ರೀಯ ಕಿರುಚಿತ್ರ ಉತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ತಂದುಕೊಟ್ಟಿತು. ಕಾಲಾನಂತರದಲ್ಲಿ, ಅವರು ಸುಮಾರು ಹತ್ತು ಪ್ರಶಸ್ತಿಗಳನ್ನು ಗೆದ್ದು, ತಮ್ಮ ಸೃಜನಶೀಲ ಧ್ವನಿಗೆ ಮಾನ್ಯತೆ ಗಳಿಸಿದರು. ಅವರ ಕಂಪನಿಯು ಅನೇಕ ನಗರಗಳಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು ಮತ್ತು ವಿವಿಧ ವೃತ್ತಿಪರ ಯೋಜನೆಗಳನ್ನು ಕೈಗೊಳ್ಳುವುದರ ಜೊತೆಗೆ ಸ್ಥಳೀಯ ಉದ್ಯೋಗವನ್ನು ಸೃಷ್ಟಿಸಿತು.
ಒಟ್ಟಾರೆಯಾಗಿ, ಈ ಪಯಣಗಳು ದೇಶದಾದ್ಯಂತ ತೆರೆದುಕೊಳ್ಳುತ್ತಿರುವ ದೊಡ್ಡ ಕಥೆಯನ್ನು ಬಹಿರಂಗಪಡಿಸುತ್ತವೆ.
ಇವು ಪ್ರತ್ಯೇಕ ಯಶಸ್ಸನ್ನು ಮಾತ್ರವಲ್ಲದೆ, ಸ್ಥೈರ್ಯ ಮತ್ತು ಅವಕಾಶಗಳ ಬೆಳೆಯುತ್ತಿರುವ ಪರಿಸರ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತವೆ. 2026ರ ಮಾರ್ಚ್ ಅಂತ್ಯದ ವೇಳೆಗೆ, 33 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 632 ಆರ್‌ಎಸ್‌ಇಟಿಐಗಳು ಕಾರ್ಯನಿರ್ವಹಿಸುತ್ತಿವೆ. ಇವು 619 ಜಿಲ್ಲೆಗಳನ್ನು ಒಳಗೊಂಡಿದ್ದು, ದೇಶಾದ್ಯಂತ 25 ಪ್ರಾಯೋಜಕ ಬ್ಯಾಂಕ್‌ಗಳ ಬೆಂಬಲವನ್ನು ಹೊಂದಿವೆ. 2009 ರಲ್ಲಿ ಪ್ರಾರಂಭವಾದಾಗಿನಿಂದ 2026ರ ಫೆಬ್ರವರಿಯವರೆಗೆ, ಆರ್‌ಎಸ್‌ಇಟಿಐಗಳು ರಾಷ್ಟ್ರವ್ಯಾಪಿ ನಿರಂತರ ಮತ್ತು ಪರಿಣಾಮಕಾರಿ ಪ್ರಗತಿಯನ್ನು ಪ್ರದರ್ಶಿಸಿವೆ. 60.81 ಲಕ್ಷದ ತರಬೇತಿ ಗುರಿಯ ವಿರುದ್ಧ ಸುಮಾರು 99.7% ರಷ್ಟು ಸಾಧನೆಯಾಗಿದ್ದು, 60.63 ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ. ಇವರಲ್ಲಿ, 43.89 ಲಕ್ಷ ಅಭ್ಯರ್ಥಿಗಳು ಸುಸ್ಥಿರ ಜೀವನೋಪಾಯವನ್ನು ಪಡೆದುಕೊಂಡಿದ್ದಾರೆ. ಸಾಂಸ್ಥಿಕ ಬೆಂಬಲವು 22.52 ಲಕ್ಷ ಫಲಾನುಭವಿಗಳಿಗೆ ಬ್ಯಾಂಕ್ ಹಣಕಾಸು ಸೌಲಭ್ಯವನ್ನು ಪಡೆಯಲು ಮತ್ತಷ್ಟು ಅನುವು ಮಾಡಿಕೊಟ್ಟಿದೆ. ಇತ್ತೀಚಿನ ವರ್ಷಗಳು ಗಣನೀಯ ಬೆಳಕಿಗೆ ಸಾಕ್ಷಿಯಾಗಿವೆ, ಇದು ವಿಸ್ತರಿಸುತ್ತಿರುವ ತಲುಪುವಿಕೆ ಮತ್ತು ಸುಧಾರಿತ ಸಾಂಸ್ಥಿಕ ಪರಿಣಾಮಕಾರಿತ್ವವನ್ನು ಸೂಚಿಸುತ್ತದೆ. ಗಮನಾರ್ಹವಾಗಿ, 2024-25 ನೇ ಸಾಲಿನಲ್ಲಿ ಅತಿ ಹೆಚ್ಚು ವಾರ್ಷಿಕ ತರಬೇತಿ ಸಾಧನೆ ದಾಖಲಾಗಿದ್ದು, 6.21 ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ.

ಈ ಸಂಖ್ಯೆಗಳು ಒಂದು ಕಥೆಯನ್ನು ಹೇಳುತ್ತವೆ, ಆದರೆ ಆಳವಾದ ನಿರೂಪಣೆಯು ಮಾನವ ರೂಪಾಂತರದಲ್ಲಿದೆ.
ಆರ್‌ಎಸ್‌ಇಟಿಐಗಳು ಕೇವಲ ತರಬೇತಿ ಕೇಂದ್ರಗಳಲ್ಲ, ಬದಲಿಗೆ ಆಕಾಂಕ್ಷೆಗಳು ಬೇರೂರುವ ಸ್ಥಳಗಳಾಗಿವೆ. ಹಳ್ಳಿಗಳಾದ್ಯಂತ, ಸಣ್ಣ ಉದ್ಯಮಗಳು ಸ್ಥಳೀಯ ಆರ್ಥಿಕತೆಯನ್ನು ಮರುರೂಪಿಸುತ್ತ ಮತ್ತು ಘನತೆಯನ್ನು ಮರುಸ್ಥಾಪಿಸುತ್ತಿವೆ. ಪ್ರತಿಯೊಂದು ಯಶಸ್ಸಿನ ಕಥೆಯೊಂದಿಗೆ, ಹಿಂಜರಿಕೆಯು ಆತ್ಮವಿಶ್ವಾಸದಿಂದ ಬದಲಾಗುತ್ತದೆ ಮತ್ತು ಭರವಸೆಯು ಮೂರ್ತರೂಪ ತಾಳುತ್ತದೆ. ಈ ನಿಶ್ಯಬ್ಧ ಬದಲಾವಣೆಗಳಲ್ಲಿ, ಗ್ರಾಮೀಣ ಭಾರತವು ಸ್ವಾವಲಂಬನೆ ಮತ್ತು ನಂಬಿಕೆಯಿಂದ ರೂಪುಗೊಂಡ ಭವಿಷ್ಯದತ್ತ ಸ್ಥಿರವಾಗಿ ಸಾಗುತ್ತಿದೆ.
References
Ministry of Rural Development
NITI Aayog
Click here for pdf file
*****
(Features ID: 159293)
आगंतुक पटल : 14
Provide suggestions / comments