Social Welfare
ಭಾರತದ ಉನ್ನತ ಶಿಕ್ಷಣ ಕ್ಷೇತ್ರ
प्रविष्टि तिथि:
30 AUG 2026 10:08 AM
ಬೆಳವಣಿಗೆ, ಪ್ರವೇಶ ಮತ್ತು ಒಳಗೊಳ್ಳುವಿಕೆಯ ಒಂದು ದಶಕ
ಭಾರತದ ಜ್ಞಾನದ ಪರಿಸರ ವ್ಯವಸ್ಥೆಯ ನಿರ್ಮಾಣ: ದಶಕದ ಪ್ರಗತಿ
ಉನ್ನತ ಶಿಕ್ಷಣವು ಜ್ಞಾನ ಆಧಾರಿತ ಅರ್ಥವ್ಯವಸ್ಥೆಯತ್ತ ಭಾರತದ ಪ್ರಯಾಣದ ಪ್ರಮುಖ ಆಧಾರಸ್ತಂಭವಾಗಿದೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ಪ್ರಮುಖ ಬುನಾದಿಯಾಗಿದೆ. ಈ ನೀತಿಯು ಸಮಗ್ರ, ಬಹುಶಿಸ್ತೀಯ ಕಲಿಕೆಯನ್ನು ಉತ್ತೇಜಿಸುವ ಮತ್ತು ಸುಸ್ಥಿರ ಅಭಿವೃದ್ಧಿ ಗುರಿ (SDG) 4 ರ ಗುರಿಗಳನ್ನು ಮುನ್ನಡೆಸುವ ಶಿಕ್ಷಣ ವ್ಯವಸ್ಥೆಯನ್ನು ಪ್ರಸ್ತಾವಿಸುತ್ತದೆ. ಸುಸ್ಥಿರ ಅಭಿವೃದ್ಧಿ ಗುರಿ 4 ಎಲ್ಲರಿಗೂ ಸಮಗ್ರ ಮತ್ತು ಸಮಾನ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸುವುದು ಮತ್ತು ಎಲ್ಲಾ ಸಮಯದಲ್ಲೂ ಕಲಿಕೆಯ ಅವಕಾಶಗಳನ್ನು ಉತ್ತೇಜಿಸುವುದರ ಮೇಲೆ ಗಮನ ಹರಿಸುತ್ತದೆ. ಶಿಕ್ಷಣ ಸಚಿವಾಲಯವು ಭಾರತದಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಸಮೀಕ್ಷೆಯನ್ನು ನಡೆಸುತ್ತದೆ.
ಶಿಕ್ಷಣ ಸಚಿವಾಲಯವು ಪ್ರತಿವರ್ಷ ನಡೆಸುವ ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ (ಎ.ಐ.ಎಸ್.ಹೆಚ್.ಇ), ದೇಶಾದ್ಯಂತ ಇರುವ ಉನ್ನತ ಶಿಕ್ಷಣ ಸಂಸ್ಥೆಗಳ (HEIs) ಕುರಿತು ಸಮಗ್ರ ಸಾಕ್ಷ್ಯಾಧಾರಿತ ತಳಹದಿಯನ್ನು ಒದಗಿಸುತ್ತದೆ. ಈ ದತ್ತಾಂಶವು ಎನ್.ಇ.ಪಿ 2020 ರ ಅಡಿಯಲ್ಲಿ ಉನ್ನತ ಶಿಕ್ಷಣ ಸುಧಾರಣೆಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು, ಹಲವು ಕೊರತೆಗಳನ್ನು ಗುರುತಿಸಲು ಮತ್ತು ನೀತಿ ರೂಪಿಸಲು ನೆರವಾಗುತ್ತದೆ.
ವಿಸ್ತರಿಸುತ್ತಿರುವ ಉನ್ನತ ಶಿಕ್ಷಣದ ಹೆಜ್ಜೆಗುರುತು
AISHE ವರದಿಗಳ ಪ್ರಕಾರ, ಭಾರತದ ಉನ್ನತ ಶಿಕ್ಷಣ ಜಾಲವು ದಶಕದಲ್ಲಿ ಗಮನಾರ್ಹವಾಗಿ ವಿಸ್ತರಿಸಿದೆ.
- ವಿಶ್ವವಿದ್ಯಾನಿಲಯಗಳ ಸಂಖ್ಯೆಯು 2014–15 ರಲ್ಲಿ 760 ಇದ್ದದ್ದು 2023–24 ರಲ್ಲಿ 1,289 ಕ್ಕೆ ಏರಿಕೆಯಾಗಿದೆ, ಅಂದರೆ ಶೇ. 69.6 ರಷ್ಟು ಬೆಳವಣಿಗೆ ಕಂಡಿದೆ.
- ಕಾಲೇಜುಗಳ ಸಂಖ್ಯೆಯು 38,498 ರಿಂದ 48,246 ಕ್ಕೆ ಏರಿಕೆಯಾಗಿದೆ, ಇದು ಶೇ. 25.3 ರಷ್ಟು ಹೆಚ್ಚಳವಾಗಿದೆ.
- ಸ್ವತಂತ್ರ ಸಂಸ್ಥೆಗಳು 12,276 ರಿಂದ 15,221 ಕ್ಕೆ ಹೆಚ್ಚಳವಾಗಿದ್ದು, ಸುಮಾರು ಶೇ. 24 ರಷ್ಟು ಬೆಳವಣಿಗೆಯನ್ನು ದಾಖಲಿಸಿವೆ.

ಈ ವಿಸ್ತರಣೆಯು ಹೆಚ್ಚುತ್ತಿರುವ ಸಾಂಸ್ಥಿಕ ತಳಹದಿ ಮತ್ತು ದೇಶಾದ್ಯಂತ ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುವ ಹೆಚ್ಚಿನ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಇದು ಉನ್ನತ ಶಿಕ್ಷಣದ ವ್ಯಾಪ್ತಿಯನ್ನು ಬಲಪಡಿಸಿದೆ, ವ್ಯಾಪಕ ಭಾಗವಹಿಸುವಿಕೆಗೆ ಬೆಂಬಲ ನೀಡಿದೆ ಮತ್ತು ಭಾರತದ ಭವಿಷ್ಯಕ್ಕಾಗಿ ಹೆಚ್ಚು ಪ್ರವೇಶಿಸಬಹುದಾದ, ವೈವಿಧ್ಯಮಯ ಮತ್ತು ಸಮಗ್ರ ಜ್ಞಾನದ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಕೊಡುಗೆ ನೀಡಿದೆ.
ಹೆಚ್ಚುತ್ತಿರುವ ವಿದ್ಯಾರ್ಥಿಗಳ ದಾಖಲಾತಿ: ಸಮಾನತೆ ಮತ್ತು ಒಳಗೊಳ್ಳುವಿಕೆಯ ಮುನ್ನಡೆ
ಭಾರತದಲ್ಲಿ ಉನ್ನತ ಶಿಕ್ಷಣ ದಾಖಲಾತಿಯು ಕಳೆದ ದಶಕದಲ್ಲಿ ಸ್ಥಿರವಾಗಿ ಏರಿಕೆಯಾಗಿದ್ದು, 2014-15 ರಲ್ಲಿ 3.42 ಕೋಟಿ ಇದ್ದ ವಿದ್ಯಾರ್ಥಿಗಳ ಸಂಖ್ಯೆ 2023-24 ರಲ್ಲಿ 4.50 ಕೋಟಿ ಗೆ ಏರಿಕೆಯಾಗುವುದರ ಮೂಲಕ ಶೇ. 31.5 ರಷ್ಟು ಹೆಚ್ಚಿದೆ.
- ಉನ್ನತ ಶಿಕ್ಷಣದಲ್ಲಿ ಮೊತ್ತ ದಾಖಲಾತಿ ಅನುಪಾತ (ಜಿ.ಇ.ಆರ್) 2014-15 ರಲ್ಲಿ ಶೇ. 23.7 ಇದ್ದದ್ದು 2022-23 ರಲ್ಲಿ ಶೇ.29.5 ಕ್ಕೆ ಮತ್ತು 2023-24 ರಲ್ಲಿ ಶೇ.30 ಕ್ಕೆ ಮತ್ತಷ್ಟು ಹೆಚ್ಚಾಗಿದೆ. ಈ ಸ್ಥಿರ ಹೆಚ್ಚಳವು ಉನ್ನತ ಶಿಕ್ಷಣದಲ್ಲಿ ಹೆಚ್ಚುತ್ತಿರುವ ಪ್ರವೇಶ ಮತ್ತು ಭಾಗವಹಿಸುವಿಕೆಯನ್ನು ಪ್ರತಿಬಿಂಬಿಸುತ್ತದೆ ಹಾಗೂ 2035 ರ ವೇಳೆಗೆ ಜಿ.ಇ.ಆರ್ ಅನ್ನು ಶೇ.50 ಕ್ಕೆ ಹೆಚ್ಚಿಸುವ ಎನ್.ಇ.ಪಿ 2020 ರ ಗುರಿಗೆ ಬೆಂಬಲ ನೀಡುತ್ತದೆ.

- 2014-15 ರಿಂದ 2023-24 ರವರೆಗೆ ವಿವಿಧ ಹಂತದ ಒಟ್ಟು ದಾಖಲಾತಿಯ ಶೇಕಡಾವಾರು ಹೆಚ್ಚಳ:
- ಪಿಹೆಚ್.ಡಿ: 1.17 ಲಕ್ಷದಿಂದ 3.43 ಲಕ್ಷ (192.89%); ಸ್ನಾತಕೋತ್ತರ: 38.53 ಲಕ್ಷದಿಂದ 57.85 ಲಕ್ಷ (50.15%); ಸ್ನಾತಕ/ಪದವಿ: 2.71 ಕೋಟಿಯಿಂದ 3.45 ಕೋಟಿ (27.27%);
- ಡಿಪ್ಲೊಮಾ: 25.08 ಲಕ್ಷದಿಂದ 33.15 ಲಕ್ಷ (32.22%); ಪ್ರಮಾಣಪತ್ರ : 1.70 ಲಕ್ಷದಿಂದ 2.08 ಲಕ್ಷ (22.55%); ಸಂಯೋಜಿತ : 1.41 ಲಕ್ಷದಿಂದ 5.69 ಲಕ್ಷ (301.36%)

ಉನ್ನತ ಶಿಕ್ಷಣದಲ್ಲಿ ಮಹಿಳೆಯರ ದಾಖಲಾತಿಯು ಕಳೆದ ದಶಕದಲ್ಲಿ ಸ್ಥಿರ ಬೆಳವಣಿಗೆಗೆ ಸಾಕ್ಷಿಯಾಗಿದೆ. ಇದು 2014-15 ರಲ್ಲಿ 1.57 ಕೋಟಿ ಇದ್ದದ್ದು 2023-24 ರಲ್ಲಿ 2.24 ಕೋಟಿಗೆ ಏರಿಕೆಯಾಗುವ ಮೂಲಕ ಶೇ. 42.2 ರಷ್ಟು ಬೆಳೆದಿದೆ. ಇದು ದಶಕದ ಒಟ್ಟು ದಾಖಲಾತಿ ಬೆಳವಣಿಗೆಯನ್ನು ಹಿಂದಿಕ್ಕಿದೆ. 2023-24 ರಲ್ಲಿ ವಿವಿಧ ಕೋರ್ಸ್‌ಗಳಿಗೆ ದಾಖಲಾದ ಮಹಿಳಾ ವಿದ್ಯಾರ್ಥಿಗಳ ಸಂಖ್ಯೆ:
ಪಿಹೆಚ್.ಡಿ: 1.71 ಲಕ್ಷ; ಸ್ನಾತಕೋತ್ತರ: 32.53 ಲಕ್ಷ; ಸ್ನಾತಕ/ಪದವಿ: 1.71 ಕೋಟಿ;
ಪಿಜಿ ಡಿಪ್ಲೊಮಾ: 91,332; ಡಿಪ್ಲೊಮಾ: 13.27 ಲಕ್ಷ; ಪ್ರಮಾಣಪತ್ರ: 1.10 ಲಕ್ಷ; ಸಂಯೋಜಿತ: 2.73 ಲಕ್ಷ
- ಮಹಿಳಾ ಜಿ.ಇ.ಆರ್ 2014-15 ರಲ್ಲಿ ಶೇ. 22.9 ಇದ್ದದ್ದು 2023-24 ರಲ್ಲಿ ಶೇ.31.2 ಕ್ಕೆ ಹೆಚ್ಚಾಗಿದೆ. ಇದು ಸತತ ಏಳನೇ ವರ್ಷವೂ ಪುರುಷರ ಜಿ.ಇ.ಆರ್ (28.9%) ಅನ್ನು ಮೀರಿದೆ.
- ಉನ್ನತ ಶಿಕ್ಷಣದಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಸಂಖ್ಯೆ 2014-15 ರಲ್ಲಿ 88.28 ಲಕ್ಷ ಇದ್ದದ್ದು 2023-24 ರಲ್ಲಿ 1.09 ಕೋಟಿಗೂ ಮೀರಿದ್ದು, ಶೇ.24.06 ಹೆಚ್ಚಳವಾಗಿದೆ. ಈ ಬೆಳವಣಿಗೆಯು ಸುಧಾರಿತ ಕೋರ್ಸ್ ಪೂರ್ಣಗೊಳಿಸುವಿಕೆ, ವಿದ್ಯಾರ್ಥಿಗಳನ್ನು ಉಳಿಸಿಕೊಳ್ಳುವಿಕೆ, ಹೆಚ್ಚುತ್ತಿರುವ ದಾಖಲಾತಿ ಮತ್ತು ವಿಸ್ತರಿತ ಸಾಂಸ್ಥಿಕ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಸರ್ಕಾರದ ಉಪಕ್ರಮಗಳ ಬೆಂಬಲದೊಂದಿಗೆ, ಈ ಪ್ರವೃತ್ತಿಯು ಉನ್ನತ ಶಿಕ್ಷಣದಲ್ಲಿ ಪ್ರವೇಶ, ಸಮಗ್ರ, ಗುಣಮಟ್ಟ ಮತ್ತು ಕಾರ್ಯಕ್ಷಮತೆಯ ಪ್ರಗತಿಯನ್ನು ತೋರಿಸಿದೆ.
ಉನ್ನತ ಶಿಕ್ಷಣದ ಔಟ್ಟರ್ನ್ ಎಂದರೆ ನೀಡಲಾದ ಶೈಕ್ಷಣಿಕ ವರ್ಷದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಉತ್ತೀರ್ಣರಾಗಿ ಹೊರಬರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯನ್ನು ಸೂಚಿಸುತ್ತದೆ.
- ಉನ್ನತ ಶಿಕ್ಷಣದಲ್ಲಿ ಲಿಂಗ ಸಮಾನತೆ ಸೂಚ್ಯಂಕ (ಜಿಪಿಐ) ಗಮನಾರ್ಹವಾಗಿ ಸುಧಾರಿಸಿದ್ದು, 2014-15 ರಲ್ಲಿ 0.92 ಇದ್ದದ್ದು 2023-24 ರಲ್ಲಿ 1.08 ಕ್ಕೆ ಏರಿದೆ. ಅದೇ ಅವಧಿಯಲ್ಲಿ ಪ.ಜಾ. ವರ್ಗದ ಜಿಪಿಐ 0.91 ರಿಂದ 1.11 ಕ್ಕೆ ಹೆಚ್ಚಾದರೆ, ಪ.ಪಂ ವರ್ಗದ ಜಿಪಿಐ 0.81 ರಿಂದ 1.08 ಕ್ಕೆ ಏರಿದೆ.
- ಹೆಚ್ಚುತ್ತಿರುವ ಲಿಂಗ ಸಮಾನತೆ ಸೂಚ್ಯಂಕ ಮಹಿಳೆಯರಿಗೆ ಅನುಕೂಲಕರವಾದ ಸಮಾನತೆಯ ಹೆಚ್ಚಳವನ್ನು ತೋರಿಸುತ್ತದೆ. ಈ ಪ್ರಗತಿಯು ಉನ್ನತ ಶಿಕ್ಷಣದಲ್ಲಿ ಸಮಾನತೆ, ಒಳಗೊಳ್ಳುವಿಕೆ ಮತ್ತು ಸಮತೋಲಿತ ಭಾಗವಹಿಸುವಿಕೆಯನ್ನು ಉತ್ತೇಜಿಸುವಲ್ಲಿ ಸರ್ಕಾರದ ಉಪಕ್ರಮಗಳ ಪ್ರಭಾವವನ್ನು ತೋರಿಸುತ್ತದೆ.
ಲಿಂಗ ಸಮಾನತೆ ಸೂಚ್ಯಂಕ (GPI)
ಲಿಂಗ ಸಮಾನತೆ ಸೂಚ್ಯಂಕ (ಜಿಪಿಐ) ಎಂಬುದು ಪುರುಷರ ಜಿಪಿಐಗೆ ಮಹಿಳೆಯರ ಜಿ.ಇ.ಆರ್ ನ ಅನುಪಾತವಾಗಿದ್ದು, ಶಿಕ್ಷಣ ವ್ಯವಸ್ಥೆಯಲ್ಲಿ ಮಹಿಳೆಯರ ಸಮಾನ ಭಾಗವಹಿಸುವಿಕೆಯನ್ನು ಪ್ರತಿಬಿಂಬಿಸುತ್ತದೆ.
- 1 ರ ಜಿಪಿಐ ಲಿಂಗಗಳ ನಡುವಿನ ಸಮಾನತೆಯನ್ನು ಸೂಚಿಸುತ್ತದೆ.
- 0 ಮತ್ತು 1 ರ ನಡುವಿನ ಜಿಪಿಐ ಸಾಮಾನ್ಯವಾಗಿ ಪುರುಷರಿಗೆ ಅನುಕೂಲಕರವಾದ ಅಸಮಾನತೆಯನ್ನು ಸೂಚಿಸುತ್ತದೆ.
- 1 ಕ್ಕಿಂತ ಹೆಚ್ಚಿನ ಜಿಪಿಐ ಮಹಿಳೆಯರಿಗೆ ಅನುಕೂಲಕರವಾದ ಅಸಮಾನತೆಯನ್ನು (ಸಂಖ್ಯೆಯ ಮೇಲುಗೈ) ಸೂಚಿಸುತ್ತದೆ.
- ಒಟ್ಟು ದಾಖಲಾತಿಯಲ್ಲಿ ಪ.ಜಾ. ದಾಖಲಾತಿಯ ಪಾಲು 2014-15 ರಲ್ಲಿ ಶೇ. 13.44 ಇದ್ದದ್ದು 2023-24 ರಲ್ಲಿ ಶೇ.15.5ಕ್ಕೆ ಏರಿದೆ. ಇದೇ ಅವಧಿಯಲ್ಲಿ, ಪ.ಪಂ. ದಾಖಲಾತಿಯ ಪಾಲು ಶೇ. 4.8 ರಿಂದ ಶೇ.6.4ಕ್ಕೆ ಹೆಚ್ಚಾಗಿದೆ. OBC ಭಾಗವಹಿಸುವಿಕೆಯು ಶೇ.32.8 ರಿಂದ ಶೇ.40.1ಕ್ಕೆ ಏರಿದ್ದು, ಎಲ್ಲಾ ಸಾಮಾಜಿಕ ವರ್ಗಗಳಲ್ಲಿ ದಾಖಲಾತಿ ಪಾಲಿನಲ್ಲಿ ಅತಿ ದೊಡ್ಡ ಹೆಚ್ಚಳವನ್ನು ದಾಖಲಿಸಿದೆ.
- ಪ.ಜಾ. ವಿದ್ಯಾರ್ಥಿಗಳ ಜಿಇಆರ್ 2014-15 ರಲ್ಲಿ ಶೇ.18.9 ಇದ್ದದ್ದು 2023-24 ರಲ್ಲಿ ಶೇ.27.8ಕ್ಕೆ ಹೆಚ್ಚಾಗಿದೆ. ಪ.ಪಂ. ವಿದ್ಯಾರ್ಥಿಗಳಿಗೆ ಇದು 2014-15 ರಲ್ಲಿ ಶೇ.13.5 ಇದ್ದದ್ದು 2023-24 ರಲ್ಲಿ ಶೇ.22.8ಕ್ಕೆ ಹೆಚ್ಚಾಗಿದೆ. ಪ.ಜಾ., ಪ.ಪಂ. ಮತ್ತು ಒಬಿಸಿ ವರ್ಗಗಳ ವಿದ್ಯಾರ್ಥಿಗಳ ಹೆಚ್ಚುತ್ತಿರುವ ಭಾಗವಹಿಸುವಿಕೆಯು ಉನ್ನತ ಶಿಕ್ಷಣದಲ್ಲಿ ಹೆಚ್ಚುತ್ತಿರುವ ಒಳಗೊಳ್ಳುವಿಕೆಯನ್ನು ಪ್ರತಿಬಿಂಬಿಸುತ್ತದೆ.
- ನಿಯಮಾವಳಿ ಪ್ರಕಾರ ಅಂಗವಿಕಲತೆ ಹೊಂದಿರುವ ವ್ಯಕ್ತಿಗಳ (PwBD) ದಾಖಲಾತಿಯು 2014-15 ರಲ್ಲಿ 64,298 ಇದ್ದದ್ದು 2022-23 ರಲ್ಲಿ 88,816 ಕ್ಕೆ ಹೆಚ್ಚಾಗಿದ್ದು, ಶೇ.38.1ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಈ ಅವಧಿಯಲ್ಲಿ ಪುರುಷ ಮತ್ತು ಮಹಿಳೆಯರ ದಾಖಲಾತಿಯು ಕ್ರಮವಾಗಿ ಶೇ. 54.4 ಮತ್ತು ಶೇ.19.0 ರಷ್ಟು ಬೆಳೆದಿದೆ.
- 2023-24 ರಲ್ಲಿ, 34,080 ಪುರುಷರು ಮತ್ತು 20,000 ಮಹಿಳೆಯರು ಸೇರಿದಂತೆ 54,080 PwBD ವಿದ್ಯಾರ್ಥಿಗಳು ದಾಖಲಾಗಿದ್ದಾರೆ. PwBD ಯಲ್ಲಿ ಹೆಚ್ಚಿನ ಪುರುಷ ದಾಖಲಾತಿಯು ಉನ್ನತ ಶಿಕ್ಷಣದ ಪ್ರವೇಶದಲ್ಲಿ ನಿರಂತರ ಲಿಂಗ ಅಸಮತೋಲನವನ್ನು ತೋರಿಸುತ್ತದೆ. ಪ್ರವೇಶಾವಕಾಶಗಳಲ್ಲಿನ ಸುಧಾರಣೆಗಳು ಎಲ್ಲಾ ಲಿಂಗಗಳಾದ್ಯಂತ ಸಮಾನವಾಗಿ ತಲುಪಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.
ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ದಾಖಲಾತಿ
ಉನ್ನತ ಶಿಕ್ಷಣದಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ದಾಖಲಾತಿಗಳು ಕಳೆದ ದಶಕದಲ್ಲಿ ಸ್ಥಿರವಾಗಿ ಹೆಚ್ಚಾಗಿವೆ.
ಒಟ್ಟು ದಾಖಲಾತಿಯು 2014-15 ರಲ್ಲಿ 91.5 ಲಕ್ಷ ಇದ್ದದ್ದು 2023-24 ರಲ್ಲಿ 1.02 ಕೋಟಿಗೆ ಏರಿಕೆಯಾಗಿದೆ, ಇದು ಈ ಅವಧಿಯಲ್ಲಿ ಒಟ್ಟಾರೆಯಾಗಿ ಸುಮಾರು ಶೇ.11.5 ರಷ್ಟು ಹೆಚ್ಚಳವನ್ನು ಕಂಡಿದೆ.
ಈ ಬೆಳವಣಿಗೆಯು ಸಾಂಸ್ಥಿಕ ಸಾಮರ್ಥ್ಯದ ವಿಸ್ತರಣೆ ಮತ್ತು STEM ವಿಷಯಗಳಲ್ಲಿ ವಿದ್ಯಾರ್ಥಿಗಳ ನಿರಂತರ ಆಸಕ್ತಿಯನ್ನು ಪ್ರತಿಬಿಂಬಿಸುತ್ತದೆ. ಸರ್ಕಾರದ ಉಪಕ್ರಮಗಳು, ಡಿಜಿಟಲ್ ತಂತ್ರಜ್ಞಾನಗಳು, ನಾವೀನ್ಯತೆ, ಸಂಶೋಧನೆ ಮತ್ತು ಉದ್ಯೋಗಾವಕಾಶಗಳು ಭಾರತದ ಜ್ಞಾನದ ಅರ್ಥವ್ಯವಸ್ಥೆಯನ್ನು ಬಲಪಡಿಸುತ್ತಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ.

ಉನ್ನತ ಶಿಕ್ಷಣದಲ್ಲಿ ವಿದೇಶಿ ವಿದ್ಯಾರ್ಥಿಗಳ ದಾಖಲಾತಿ
- ವಿದೇಶಿ ವಿದ್ಯಾರ್ಥಿಗಳ ದಾಖಲಾತಿಯು 2014-15 ರಲ್ಲಿ 42,293 ಇದ್ದದ್ದು 2023-24 ರಲ್ಲಿ 58,134 ಕ್ಕೆ ಏರಿಕೆಯಾಗಿದೆ, ಕಳೆದ ದಶಕದಲ್ಲಿ ಇದು ಸುಮಾರು ಶೇ.37.5ರಷ್ಟು ಹೆಚ್ಚಳವಾಗಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ ಉನ್ನತ ಕಲಿಕೆಯ ತಾಣವಾಗಿ ಭಾರತದ ಹೆಚ್ಚುತ್ತಿರುವ ಆಕರ್ಷಣೆಯನ್ನು ಇದು ಪ್ರತಿಬಿಂಬಿಸುತ್ತದೆ.
- ಇದು ಉನ್ನತ ಶಿಕ್ಷಣದ ಹೆಚ್ಚುತ್ತಿರುವ ಅಂತಾರಾಷ್ಟ್ರೀಕರಣ, ಸುಧಾರಿತ ಶೈಕ್ಷಣಿಕ ಸಹಯೋಗಗಳು ಮತ್ತು ಭಾರತೀಯ ಸಂಸ್ಥೆಗಳ ಜಾಗತಿಕ ಗುರುತಿಸುವಿಕೆಯನ್ನು ಸೂಚಿಸುತ್ತದೆ.

ಉನ್ನತ ಶಿಕ್ಷಣದಲ್ಲಿ ಬೋಧಕರ ಹೆಚ್ಚಳ
ಉನ್ನತ ಶಿಕ್ಷಣದಲ್ಲಿ ಶಿಕ್ಷಕರ ಸಂಖ್ಯೆ 2014-15 ರಲ್ಲಿ 14.73 ಲಕ್ಷ ಇದ್ದದ್ದು 2023-24 ರಲ್ಲಿ 17.32 ಲಕ್ಷ ಕ್ಕೆ ಹೆಚ್ಚಾಗಿದೆ. ಇದು ಒಟ್ಟಾರೆಯಾಗಿ 2.59 ಲಕ್ಷ ಶಿಕ್ಷಕರ ಹೆಚ್ಚಳ ಅಥವಾ ಈ ಅವಧಿಯಲ್ಲಿ ಸುಮಾರು ಶೇ. 17.6 ಬೆಳವಣಿಗೆಯನ್ನು ಕಂಡಿದೆ.

- ಮಹಿಳಾ ಶಿಕ್ಷಕರ ನಿರ್ದಿಷ್ಟ ಸಂಖ್ಯೆಯು 2014-15 ಮತ್ತು 2023-24 ರ ನಡುವೆ ಶೇ.36.7 ರಷ್ಟು ಹೆಚ್ಚಿದ್ದು, ಈ ಕ್ಷೇತ್ರದಲ್ಲಿ ಮಹಿಳೆಯರಿಗೆ ಉದ್ಯೋಗಾವಕಾಶಗಳಲ್ಲಿ ಹೆಚ್ಚುತ್ತಿರುವ ಸಮಾನತೆಯನ್ನು ಪ್ರತಿಬಿಂಬಿಸುತ್ತದೆ.
- 2022-23 ಮತ್ತು 2023-24 ಎರಡರಲ್ಲೂ, ಒಟ್ಟು ಬೋಧನಾ ಪಡೆಯಲ್ಲಿ ಪುರುಷ ಶಿಕ್ಷಕರ ಪಾಲು ಮಹಿಳಾ ಶಿಕ್ಷಕರಿಗಿಂತ ಹೆಚ್ಚಾಗಿಯೇ ಇತ್ತು.
- 2022-23 ರಲ್ಲಿ ಮಹಿಳಾ ಶಿಕ್ಷಕರ ಪಾಲು ಶೇ.44.3 ಇತ್ತು, ಅದು 2023-24 ರಲ್ಲಿ ಶೇ.44.9ಕ್ಕೆ ಬೆಳೆದಿದೆ.
ಮೂಲಸೌಕರ್ಯ ಸೌಲಭ್ಯಗಳು
2014-15 ಮತ್ತು 2023-24 ರ ನಡುವೆ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಸೌಕರ್ಯ ಸೌಲಭ್ಯಗಳು ಗಮನಾರ್ಹವಾಗಿ ಸುಧಾರಿಸಿವೆ. ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯ, ಹಸಿರು ಮೂಲಸೌಕರ್ಯ ಮತ್ತು ಮಹಿಳೆಯರು ಹಾಗೂ PwBD ಗಳಿಗಾಗಿ ಪ್ರತ್ಯೇಕ ಸೌಲಭ್ಯಗಳನ್ನು ಸಂಸ್ಥೆಗಳಾದ್ಯಂತ ಅಭಿವೃದ್ಧಿಪಡಿಸಲಾಗಿದೆ. 2023–24 ರಲ್ಲಿ:
- ಶೇ.94 ವಿಶ್ವವಿದ್ಯಾನಿಲಯಗಳು, ಶೇ.95 ಕಾಲೇಜುಗಳು ಮತ್ತು ಶೇ.91 ಸ್ವತಂತ್ರ ಸಂಸ್ಥೆಗಳು ಆಟದ ಮೈದಾನವನ್ನು ಹೊಂದಿದ್ದವು.
- ಶೇ.98 ವಿಶ್ವವಿದ್ಯಾನಿಲಯಗಳು, ಶೇ.98 ಕಾಲೇಜುಗಳು ಮತ್ತು ಶೇ.98 ಸ್ವತಂತ್ರ ಸಂಸ್ಥೆಗಳು ಗ್ರಂಥಾಲಯ ಸೌಲಭ್ಯವನ್ನು ಹೊಂದಿದ್ದವು.
- ಶೇ.89 ವಿಶ್ವವಿದ್ಯಾನಿಲಯಗಳು, ಶೇ.85 ಕಾಲೇಜುಗಳು ಮತ್ತು ಶೇ.94 ಸ್ವತಂತ್ರ ಸಂಸ್ಥೆಗಳು ಪ್ರಯೋಗಾಲಯಗಳನ್ನು ಹೊಂದಿದ್ದವು.
ಹೆಚ್ಚುವರಿಯಾಗಿ, ಹೆಚ್ಚಿನ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಮತ್ತು ಸ್ವತಂತ್ರ ಸಂಸ್ಥೆಗಳು ಆರೋಗ್ಯ ಕೇಂದ್ರಗಳು, ಕೌಶಲ್ಯ ಅಭಿವೃದ್ಧಿ ಮತ್ತು ಕಂಪ್ಯೂಟರ್ ಕೇಂದ್ರಗಳು, ಸಭಾಂಗಣಗಳು ಮತ್ತು ಸಮ್ಮೇಳನ ಭವನಗಳಂತಹ ಸೌಲಭ್ಯಗಳನ್ನು ಹೊಂದಿದ್ದವು.
ಭವಿಷ್ಯಕ್ಕೆ ಸಿದ್ಧವಿರುವ ಉನ್ನತ ಶಿಕ್ಷಣ ಪರಿಸರ ವ್ಯವಸ್ಥೆಯತ್ತ
ಭಾರತದ ಉನ್ನತ ಶಿಕ್ಷಣ ಕ್ಷೇತ್ರವು ಕಳೆದ ದಶಕದಲ್ಲಿ ಸಂಸ್ಥೆಗಳು, ದಾಖಲಾತಿ, ಬೋಧಕರ ಬಲ ಮತ್ತು ಉತ್ತೀರ್ಣರಾಗುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಮನಾರ್ಹವಾಗಿ ಹೆಚ್ಚಿಸಿವೆ. ಮೊತ್ತ ದಾಖಲಾತಿ ಅನುಪಾತ, ಮಹಿಳೆಯರ ಭಾಗವಹಿಸುವಿಕೆ, ಲಿಂಗ ಸಮಾನತೆ ಮತ್ತು ಪ.ಜಾ., ಪ.ಪಂ., ಹಾಗೂ ಇತರ ಹಿಂದುಳಿದ ವರ್ಗಗಳ ಒಳಗೊಳ್ಳುವಿಕೆಯ ಸುಧಾರಣೆಗಳು ಸುಧಾರಿತ ಪ್ರವೇಶ ಮತ್ತು ಸಮಾನತೆಯನ್ನು ಪ್ರತಿಬಿಂಬಿಸುತ್ತವೆ. STEM ಮತ್ತು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಹೆಚ್ಚುತ್ತಿರುವ ದಾಖಲಾತಿಯು ಭಾರತದ ಜ್ಞಾನದ ಪರಿಸರ ವ್ಯವಸ್ಥೆಯು ಬಲಗೊಳ್ಳುತ್ತಿರುವುದನ್ನು ಸೂಚಿಸುತ್ತದೆ. ಒಟ್ಟಾರೆಯಾಗಿ, ಈ ಸಾಧನೆಗಳು ಗುಣಮಟ್ಟ, ಸಮಗ್ರ ಮತ್ತು ಶ್ರೇಷ್ಠತೆಯನ್ನು ಉತ್ತೇಜಿಸುವಲ್ಲಿ ಎನ್.ಇ.ಪಿ 2020 ರ ಪ್ರಭಾವವನ್ನು ಪ್ರಮುಖವಾಗಿ ತೋರಿಸುತ್ತವೆ.
References
Ministry of Education
https://www.pib.gov.in/PressReleasePage.aspx?PRID=2282525®=48&lang=1
https://cdnbbsr.s3waas.gov.in/s392049debbe566ca5782a3045cf300a3c/uploads/2025/06/202506041473712372.pdf
https://cdnbbsr.s3waas.gov.in/s392049debbe566ca5782a3045cf300a3c/uploads/2026/07/20260708401535366.pdf
https://cdnbbsr.s3waas.gov.in/s392049debbe566ca5782a3045cf300a3c/uploads/2026/07/202607131602421770.pdf
Click to see pdf
*****
(तथ्य सामग्री आईडी: 150988)
आगंतुक पटल : 9
Provide suggestions / comments