• Skip to Content
  • Sitemap
  • Advance Search
Economy

ತೋಟಗಾರಿಕಾ ಕಾರ್ಮಿಕರ ಹಕ್ಕುಗಳನ್ನು ಪರಿವರ್ತಿಸುತ್ತಿರುವ ಹೊಸ ಕಾರ್ಮಿಕ ಸಂಹಿತೆಗಳು

प्रविष्टि तिथि: 07 DEC 2025 10:35 AM

ಪ್ರಮುಖ ಮಾರ್ಗಸೂಚಿಗಳು

  • ಹೊಸ ಕಾರ್ಮಿಕ ಸಂಹಿತೆಗಳು ತೋಟಗಾರಿಕಾ ವಲಯದಲ್ಲಿ ಕಾರ್ಮಿಕರ ರಕ್ಷಣೆಯನ್ನು ಬಲಪಡಿಸುವ ಮತ್ತು ಅನುಸರಣೆಯನ್ನು ಸರಳೀಕರಿಸುವ ಏಕರೂಪದ ಮಾನದಂಡಗಳನ್ನು ಸೃಷ್ಟಿಸುತ್ತವೆ. 
  • ಹಳೆಯ ಚೌಕಟ್ಟಿನಿಂದ ಹೊಸ ಕಾರ್ಮಿಕ ಸಂಹಿತೆಗಳಿಗೆ ಬದಲಾವಣೆಯು ವಿಭಜಿತ ನಿಬಂಧನೆಗಳನ್ನು ತೋಟಗಾರಿಕಾ ವಲಯಕ್ಕೆ ಸಮಗ್ರ ಸುಧಾರಣೆಗಳೊಂದಿಗೆ ಬದಲಾಯಿಸುತ್ತದೆ.
  • ಕಲ್ಯಾಣ, ಸುರಕ್ಷಿತ ಕೆಲಸದ ಸ್ಥಳಗಳು ಮತ್ತು ವಿಸ್ತೃತ ಸಾಮಾಜಿಕ ಭದ್ರತಾ ನಿಬಂಧನೆಗಳ ಮೂಲಕ ಕಾರ್ಮಿಕರು ಮತ್ತು ಅವರ ಕುಟುಂಬದ ಯೋಗಕ್ಷೇಮವು ಸುಧಾರಿಸುತ್ತದೆ.
  • ಮಹಿಳೆಯರು, ವಲಸಿಗರು ಮತ್ತು ಕಾಲೋಚಿತ ಕಾರ್ಮಿಕರು ಒಂದು ಸಮಗ್ರ, ಆಧುನೀಕರಿಸಿದ ರಕ್ಷಣಾತ್ಮಕ ಚೌಕಟ್ಟಿನ ಅಡಿಯಲ್ಲಿ ಹೆಚ್ಚಿನ ಪ್ರವೇಶ, ಸ್ಥಿರತೆ ಮತ್ತು ಅವಕಾಶವನ್ನು ಪಡೆಯುತ್ತಾರೆ.

ಪೀಠಿಕೆ

ಭಾರತದ ಕಾರ್ಮಿಕ ಬಲದಲ್ಲಿ ತೋಟಗಾರಿಕಾ ಕಾರ್ಮಿಕರು ಪ್ರಮುಖ ಭಾಗವಾಗಿದ್ದು, ಕೃಷಿ ಉತ್ಪಾದನೆ, ರಫ್ತು ಆದಾಯ ಮತ್ತು ಗ್ರಾಮೀಣ ಜೀವನೋಪಾಯಕ್ಕೆ ಬೆಂಬಲ ನೀಡುತ್ತಾರೆ. ದಶಕಗಳಿಂದ, ಅವರ ಕೆಲಸದ ಪರಿಸ್ಥಿತಿಗಳು, ವಸತಿ, ಕಲ್ಯಾಣ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ತೋಟಗಾರಿಕಾ ಕಾರ್ಮಿಕರ ಕಾಯಿದೆ, 1951 ರ ಅಡಿಯಲ್ಲಿ ರೂಪಿಸಲಾಗಿತ್ತು. ಇದು ಈ ವಲಯದಲ್ಲಿ ಕಾರ್ಮಿಕರ ರಕ್ಷಣೆಗೆ ಅಡಿಪಾಯ ಹಾಕಿತು. ಆದಾಗ್ಯೂ, ಇದು ತನ್ನ ಕಾಲಕ್ಕೆ ಪ್ರಮುಖ ರಕ್ಷಣೆಗಳನ್ನು ಒದಗಿಸಿದ್ದರೂ, ಅದರ ವ್ಯಾಪ್ತಿಯು ಸೀಮಿತವಾಗಿತ್ತು, ಸಾಮಾಜಿಕ ಭದ್ರತಾ ಕ್ರಮಗಳು ವಿಭಜಿತವಾಗಿದ್ದವು ಮತ್ತು ಕಾಲೋಚಿತ ಮತ್ತು ವಲಸೆ ಕಾರ್ಮಿಕರಿಗೆ ಕನಿಷ್ಠ ಬೆಂಬಲವಿತ್ತು.

ಹೊಸ ಕಾರ್ಮಿಕ ಸಂಹಿತೆಗಳ ಅನುಷ್ಠಾನದೊಂದಿಗೆ, ವಿಶೇಷವಾಗಿ ವೇತನ ಸಂಹಿತೆ 2019, ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳು ಸಂಹಿತೆ 2020 ಮತ್ತು ಸಾಮಾಜಿಕ ಭದ್ರತೆ ಸಂಹಿತೆ 2020, ತೋಟಗಾರಿಕಾ ಕಾರ್ಮಿಕರನ್ನು ನಿಯಂತ್ರಿಸುವ ಚೌಕಟ್ಟನ್ನು ನವೀಕರಿಸಲಾಗಿದೆ, ವಿಸ್ತರಿಸಲಾಗಿದೆ ಮತ್ತು ಬಲಪಡಿಸಲಾಗಿದೆ. ಈ ಸಂಹಿತೆಗಳು ಸಂಬಂಧಿತ ಅಸ್ತಿತ್ವದಲ್ಲಿರುವ ರಕ್ಷಣೆಗಳನ್ನು ಉಳಿಸಿಕೊಂಡಿವೆ ಮತ್ತು ಅವುಗಳನ್ನು ವಿಸ್ತರಿಸಿವೆ. ಅವು ಆಧುನಿಕ ಕಾರ್ಮಿಕ ಅಗತ್ಯತೆಗಳಿಗೆ ಅನುಗುಣವಾಗಿ, ತೋಟಗಾರಿಕಾ ಕಾರ್ಮಿಕರನ್ನು ರಕ್ಷಣೆಯ ಏಕೀಕೃತ ರಾಷ್ಟ್ರೀಯ ವ್ಯವಸ್ಥೆಯ ಅಡಿಯಲ್ಲಿ ತರುತ್ತವೆ. ಅವು ಆರೋಗ್ಯ, ಸುರಕ್ಷತೆ, ಕಲ್ಯಾಣ, ಸಾಮಾಜಿಕ ಭದ್ರತೆ ಮತ್ತು ಪ್ರಯೋಜನಗಳ ಪೋರ್ಟಬಿಲಿಟಿಯನ್ನು ಒಳಗೊಂಡಿರುವ ವ್ಯಾಪಕ ಮತ್ತು ಏಕರೂಪದ ವ್ಯವಸ್ಥೆಯೊಳಗೆ ತೋಟಗಾರಿಕಾ ಕಾರ್ಮಿಕರನ್ನು ಸೇರಿಸುತ್ತವೆ.

ತೋಟಗಾರಿಕಾ ಕಾರ್ಮಿಕರ ಬದಲಾಗುತ್ತಿರುವ ಪರಿಕಲ್ಪನೆಗಳು

ತೋಟಗಾರಿಕಾ ಕಾರ್ಮಿಕರ ಕಾಯಿದೆ, 1951 ರ ಅಡಿಯಲ್ಲಿನ ರಕ್ಷಣೆಗಳು

ತೋಟಗಾರಿಕಾ ಕಾರ್ಮಿಕರ ಕಾಯಿದೆ, 1951 ವೈದ್ಯಕೀಯ ಆರೈಕೆ, ವಸತಿ, ಕ್ಯಾಂಟೀನ್‌ಗಳು, ಶಿಶುಪಾಲನಾ ಕೇಂದ್ರಗಳು ಮತ್ತು ಕೆಲಸದ ಸಮಯ/ರಜೆಗಳಂತಹ ರಕ್ಷಣೆಗಳನ್ನು ನಿಯಂತ್ರಿಸಲು ಮೊದಲ ಸಮಗ್ರ ಚೌಕಟ್ಟನ್ನು ಸೃಷ್ಟಿಸಿತು. ಆದಾಗ್ಯೂ, ವರ್ಷಗಳಲ್ಲಿ, ಅದರ ಅಂತರಗಳು ಸ್ಪಷ್ಟವಾದವು: ಸೀಮಿತ ವ್ಯಾಪ್ತಿ, ವಿಭಜಿತ ಸಾಮಾಜಿಕ-ಭದ್ರತಾ ವ್ಯವಸ್ಥೆಗಳು, ಮತ್ತು ಕಾಲೋಚಿತ ಮತ್ತು ವಲಸೆ ಕಾರ್ಮಿಕರಿಗೆ ಕನಿಷ್ಠ ಬೆಂಬಲ. ಈ ಕಾಯಿದೆಯು ಈ ಕೆಳಗಿನ ಪ್ರಮುಖ ನಿಬಂಧನೆಗಳನ್ನು ಒಳಗೊಂಡಿತ್ತು:

·  ಕಾನೂನು ಅನ್ವಯಿಸುವಿಕೆ: ಈ ಕಾಯಿದೆಯು 15 ಕ್ಕಿಂತ ಕಡಿಮೆ ಅಥವಾ ಸಮಾನ ಕಾರ್ಮಿಕರು ಅಥವಾ 5 ಹೆಕ್ಟೇರ್ ಮತ್ತು ಅದಕ್ಕಿಂತ ಹೆಚ್ಚಿನ ಭೂಮಿ ಹೊಂದಿರುವ ತೋಟಗಳಿಗೆ ಮಾತ್ರ ಅನ್ವಯವಾಗುತ್ತಿತ್ತು.

·  ಸೌಲಭ್ಯಗಳು ಮತ್ತು ಕಲ್ಯಾಣ ನಿಬಂಧನೆಗಳು: ಉದ್ಯೋಗದಾತರು ತೋಟಗಳಲ್ಲಿ ವೈದ್ಯಕೀಯ ನೆರವು, ಕುಡಿಯುವ ನೀರು, ನೈರ್ಮಲ್ಯ ಮತ್ತು ವಸತಿ ಒದಗಿಸಬೇಕಾಗಿತ್ತು; ಕಲ್ಯಾಣ ಸೌಲಭ್ಯಗಳಲ್ಲಿ 150 ಕ್ಕಿಂತ ಹೆಚ್ಚು ಕಾರ್ಮಿಕರಿರುವ ಸಂಸ್ಥೆಗಳಿಗೆ ಕ್ಯಾಂಟೀನ್‌ಗಳು, 50 ಕ್ಕಿಂತ ಹೆಚ್ಚು ಮಹಿಳಾ ಕಾರ್ಮಿಕರಿರುವ ಸಂಸ್ಥೆಗಳಿಗೆ ಶಿಶುಪಾಲನಾ ಕೇಂದ್ರಗಳು ಮತ್ತು ಶಿಕ್ಷಣಕ್ಕೆ ಬೆಂಬಲ ಸೇರಿವೆ.

·  ಕೆಲಸದ ಸಮಯ, ರಜೆ ಮತ್ತು ಸಾಮಾಜಿಕ ಭದ್ರತೆ: ದೈನಂದಿನ/ಸಾಪ್ತಾಹಿಕ ಕೆಲಸದ ಸಮಯವನ್ನು ಓವರ್‌ಟೈಮ್ ಮತ್ತು ವೇತನ ಸಹಿತ ವಾರ್ಷಿಕ ರಜೆಗಾಗಿ ನಿಬಂಧನೆಗಳೊಂದಿಗೆ ನಿಗದಿಪಡಿಸಲಾಗಿತ್ತು. ಸಾಮಾಜಿಕ ಭದ್ರತೆಯು ಗ್ರಾಚ್ಯುಟಿ (5 ವರ್ಷಗಳ ನಂತರ) ಮತ್ತು ಹೆರಿಗೆ ರಜೆಗೆ ಸೀಮಿತವಾಗಿತ್ತು (ಇದು ಪ್ರತ್ಯೇಕ ಕಾಯಿದೆಯ ಅಡಿಯಲ್ಲಿ ಒಳಗೊಂಡಿತ್ತು). ಮೇಲಾಗಿ, ಉದ್ಯೋಗಿ ರಾಜ್ಯ ವಿಮಾ ಮತ್ತು ಭವಿಷ್ಯ ನಿಧಿ ಯ ನಿಬಂಧನೆಗಳು ಎಲ್ಲರಿಗೂ ಅನ್ವಯವಾಗುತ್ತಿರಲಿಲ್ಲ.

·  ಮಹಿಳಾ ಕಾರ್ಮಿಕರು ಮತ್ತು ವಲಸೆ/ಕಾಲೋಚಿತ ಕಾರ್ಮಿಕರು: ಮಹಿಳೆಯರು ಸಂಜೆ 7 ರಿಂದ ಬೆಳಿಗ್ಗೆ 6 ರ ನಡುವೆ ಕೆಲಸ ಮಾಡುವುದನ್ನು ನಿರ್ಬಂಧಿಸಲಾಗಿತ್ತು, ಮತ್ತು ವಲಸೆ/ಕಾಲೋಚಿತ ಕಾರ್ಮಿಕರಿಗೆ ಪ್ರಯೋಜನಗಳ ಪೋರ್ಟಬಿಲಿಟಿ ಇರಲಿಲ್ಲ.

·  ತರಬೇತಿ ಮತ್ತು ಸುರಕ್ಷತಾ ಮಾನದಂಡಗಳು: ರಾಸಾಯನಿಕ ನಿರ್ವಹಣೆಗೆ ಸಂಬಂಧಿಸಿದ ತರಬೇತಿ ಅಥವಾ ಸುರಕ್ಷತಾ ಕ್ರಮಗಳಿಗಾಗಿ ಯಾವುದೇ ನಿರ್ದಿಷ್ಟ ಕಾನೂನು ನಿಬಂಧನೆಗಳು ಇರಲಿಲ್ಲ.

ವಿಸ್ತೃತ ಕಾನೂನು ಛತ್ರಿಯಡಿಯಲ್ಲಿ ವ್ಯಾಪ್ತಿ ಮತ್ತು ಮಾನ್ಯತೆ

ಹೊಸ ಕಾರ್ಮಿಕ ಸಂಹಿತೆಗಳೊಂದಿಗೆ, ತೋಟಗಾರಿಕಾ ಕಾರ್ಮಿಕರ ರಕ್ಷಣೆಗಳು ಸೀಮಿತ, ವಿಭಜಿತ ಸುರಕ್ಷತೆಗಳಿಂದ ಏಕೀಕೃತ, ವಿಸ್ತೃತ ಮತ್ತು ಕಲ್ಯಾಣ-ಆಧಾರಿತ ವ್ಯವಸ್ಥೆಗೆ ವಿಕಸನಗೊಂಡಿವೆ.10 ಅಥವಾ ಅದಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಅಥವಾ 5 ಹೆಕ್ಟೇರ್ ಅಥವಾ ಅದಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಹರಡಿರುವ ಎಲ್ಲಾ ತೋಟಗಳಿಗೆ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ.

ಇದು ತೋಟಗಾರಿಕಾ ಕಾರ್ಮಿಕರನ್ನು ಒಂದು ಏಕೀಕೃತ ಕಾರ್ಮಿಕ ಪರಿಸರ ವ್ಯವಸ್ಥೆಗೆ ತರುತ್ತದೆ. ಅಲ್ಲಿ ವೇತನ, ಸುರಕ್ಷತೆ, ಕೆಲಸದ ಪರಿಸ್ಥಿತಿಗಳು, ಪ್ರಯೋಜನಗಳು ಮತ್ತು ಸಾಮಾಜಿಕ ಭದ್ರತೆಯಂತಹ ಎಲ್ಲಾ ಪ್ರಮುಖ ಅಂಶಗಳನ್ನು ಒಟ್ಟಾಗಿ ನಿರ್ವಹಿಸಲಾಗುತ್ತದೆ.

ಕಾರ್ಮಿಕ ಸಂಹಿತೆಗಳು: ಕಾರ್ಮಿಕರು ಮತ್ತು ಕುಟುಂಬದ ಯೋಗಕ್ಷೇಮವನ್ನು ಬಲಪಡಿಸುವುದು

ಈ ಸಂಹಿತೆಗಳು ಬಲವಾದ ಆರೋಗ್ಯ ಮತ್ತು ಕಲ್ಯಾಣ ಮಾನದಂಡಗಳನ್ನು ಪರಿಚಯಿಸುತ್ತವೆ. ಇದು ತೋಟಗಾರಿಕಾ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಜೀವನ ಪರಿಸ್ಥಿತಿಗಳನ್ನು ನೇರವಾಗಿ ಸುಧಾರಿಸುತ್ತದೆ. ಈ ನಿಬಂಧನೆಗಳು ಯೋಗಕ್ಷೇಮವನ್ನು ಸುಧಾರಿಸುತ್ತವೆ ಮತ್ತು ಕಾರ್ಮಿಕರಿಗೆ ಆರೋಗ್ಯಕರ, ಹೆಚ್ಚು ಸಮತೋಲಿತ ವಾತಾವರಣವನ್ನು ಸೃಷ್ಟಿಸುತ್ತವೆ.

  • ಕಡ್ಡಾಯ ಇಎಸ್‌ಐಸಿ ವ್ಯಾಪ್ತಿ: ನೌಕರರ ರಾಜ್ಯ ವಿಮಾ ವ್ಯಾಪ್ತಿಯನ್ನು ತೋಟಗಾರಿಕಾ ಕಾರ್ಮಿಕರಿಗೆ ವಿಸ್ತರಿಸಲಾಗಿದೆ. ಇದು ಕಾರ್ಮಿಕರು ಮತ್ತು ಅವರ ಕುಟುಂಬಗಳು ಉದ್ಯೋಗದಾತರಿಂದ ಅಥವಾ ಇಎಸ್‌ಐಸಿ ಮೂಲಕ ವೈದ್ಯಕೀಯ ಸೌಲಭ್ಯಗಳನ್ನು ಪಡೆಯುವುದನ್ನು ಖಚಿತಪಡಿಸುತ್ತದೆ.
  • ಸುಧಾರಿತ ವಸತಿ ಮಾನದಂಡಗಳು: ಉದ್ಯೋಗದಾತರು ಕಾರ್ಮಿಕರು ಮತ್ತು ಅವರ ಕುಟುಂಬಕ್ಕೆ ನೀರು, ಅಡುಗೆ ಮನೆ ಮತ್ತು ಶೌಚಾಲಯ ಸೌಲಭ್ಯಗಳೊಂದಿಗೆ ವಸತಿ ಯನ್ನು ನೇರವಾಗಿ ಅಥವಾ ಸರ್ಕಾರಿ/ಪುರಸಭೆ ಯೋಜನೆಗಳ ಮೂಲಕ ಒದಗಿಸಬೇಕು.
  • ಕುಟುಂಬಗಳಿಗಾಗಿ ಕಲ್ಯಾಣ ಸೌಲಭ್ಯಗಳು: ಗುತ್ತಿಗೆ ಕಾರ್ಮಿಕರು ಸೇರಿದಂತೆ 100 ಅಥವಾ ಅದಕ್ಕಿಂತ ಹೆಚ್ಚು ಕಾರ್ಮಿಕರನ್ನು ನೇಮಿಸುವ ತೋಟಗಳಲ್ಲಿ ಕ್ಯಾಂಟೀನ್ ಒದಗಿಸಬೇಕು.
  • 50 ಅಥವಾ ಅದಕ್ಕಿಂತ ಹೆಚ್ಚು ನೌಕರರನ್ನು ನೇಮಕ ಮಾಡಿದ ಕಡೆಗಳಲ್ಲಿ, ಸಾಮಾನ್ಯ ಶಿಶುಪಾಲನಾ ಕೇಂದ್ರದ ಸೌಲಭ್ಯಗಳು ಅಥವಾ ಒಟ್ಟುಗೂಡಿಸಿದ ಸಂಪನ್ಮೂಲಗಳ ಮೂಲಕ ಶಿಶುಪಾಲನಾ ಕೇಂದ್ರದ (crèche) ಸೌಲಭ್ಯ ಅಗತ್ಯವಿದೆ.
  • ಕಾರ್ಮಿಕರ 6 ರಿಂದ 12 ವರ್ಷ ವಯಸ್ಸಿನ 25 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳಿರುವ ಕಡೆಗಳಲ್ಲಿ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಬೇಕು.
  • ಉದ್ಯೋಗದಾತರು ಈ ಕಲ್ಯಾಣ ಸೌಲಭ್ಯಗಳನ್ನು ನೇರವಾಗಿ ಅಥವಾ ಸರ್ಕಾರಿ/ಪುರಸಭೆ ಯೋಜನೆಗಳ ಮೂಲಕ ಒದಗಿಸಬೇಕು.

ಸಾಮರಸ್ಯದ, ಸುರಕ್ಷಿತ ಮತ್ತು ಹೆಚ್ಚು ನಿಯಂತ್ರಿತ ಕೆಲಸದ ಸ್ಥಳಗಳು

ಕಾರ್ಮಿಕ ಸಂಹಿತೆಗಳು ತೋಟಗಳಾದ್ಯಂತ ಸುರಕ್ಷಿತ, ಹೆಚ್ಚು ಸ್ಥಿರವಾದ ಮತ್ತು ಕಾರ್ಮಿಕ-ಸ್ನೇಹಿ ವಾತಾವರಣವನ್ನು ಸೃಷ್ಟಿಸುತ್ತವೆ.

  • ಕೆಲಸದ ಸಮಯ ಮತ್ತು ರಜೆ: ಪ್ರಮಾಣಿತ ಕೆಲಸದ ಸಮಯ, ಹೆಚ್ಚುವರಿ ವೇತನ, ವಿಶ್ರಾಂತಿ ಮಧ್ಯಂತರಗಳು ಮತ್ತು ವೇತನ ಸಹಿತ ರಜೆ ಈಗ ಕೈಗಾರಿಕೆಗಳಾದ್ಯಂತ ಸಾಮರಸ್ಯಗೊಂಡಿವೆ.
  • ಸುರಕ್ಷತೆ ಮತ್ತು ತರಬೇತಿ ಅಗತ್ಯತೆಗಳು: ಒಎಸ್‌ಚ್‌&ಡಬ್ಲುಸಿ ಸಂಹಿತೆಯ ಅಡಿಯಲ್ಲಿ, ಅಪಘಾತಗಳು/ಸಂಪರ್ಕವನ್ನು ತಡೆಗಟ್ಟಲು ರಕ್ಷಣಾತ್ಮಕ ಉಪಕರಣಗಳನ್ನು ಉದ್ಯೋಗದಾತರು ಒದಗಿಸಬೇಕು. ಜೊತೆಗೆ ರಾಸಾಯನಿಕಗಳ ಸುರಕ್ಷಿತ ನಿರ್ವಹಣೆ, ಸಂಗ್ರಹಣೆ ಮತ್ತು ಬಳಕೆಯ ಬಗ್ಗೆ ಕಡ್ಡಾಯ ತರಬೇತಿ ನೀಡಬೇಕು.

ತೋಟಗಾರಿಕಾ ಕಾರ್ಮಿಕರು ಸ್ಪಷ್ಟವಾದ ಮತ್ತು ಹೆಚ್ಚು ಊಹಿಸಬಹುದಾದ ಕೆಲಸದ ವೇಳಾಪಟ್ಟಿಗಳಿಂದ ಪ್ರಯೋಜನ ಪಡೆಯುತ್ತಾರೆ. ಇದು ಆರೋಗ್ಯಕರ ಕೆಲಸದ ಸಮತೋಲನವನ್ನು ಖಚಿತಪಡಿಸುತ್ತದೆ. ಅಲ್ಲದೆ, ಸುಧಾರಿತ ಸುರಕ್ಷತಾ ಮಾನದಂಡಗಳು ಮತ್ತು ಉತ್ತಮ ತರಬೇತಿ ಬೆಂಬಲದೊಂದಿಗೆ, ಒಟ್ಟಾರೆ ಕೆಲಸದ ಸ್ಥಳದ ಯೋಗಕ್ಷೇಮ ಮತ್ತು ಭದ್ರತೆಯು ಹೆಚ್ಚು ಸ್ಥಿರವಾಗಿದೆ.

ವಿಸ್ತೃತ ಸಾಮಾಜಿಕ ಭದ್ರತೆ ಮತ್ತು ಪೋರ್ಟಬಿಲಿಟಿ

  • ಸಮಗ್ರ ಸಾಮಾಜಿಕ-ಭದ್ರತಾ ವ್ಯಾಪ್ತಿ: ಸಾಮಾಜಿಕ ಭದ್ರತಾ ಸಂಹಿತೆಯ ಅಡಿಯಲ್ಲಿ, ಭವಿಷ್ಯ ನಿಧಿ ಮತ್ತು ಪಿಂಚಣಿ/ವೃದ್ಧಾಪ್ಯ ರಕ್ಷಣೆಯನ್ನು ಸೇರಿಸಲು ಸಾಮಾಜಿಕ-ಭದ್ರತಾ ಪ್ರಯೋಜನಗಳನ್ನು ವಿಸ್ತರಿಸಲಾಗಿದೆ. ಐದು ವರ್ಷಗಳ ಸೇವೆಯ ನಂತರ ಅಥವಾ ನಿಶ್ಚಿತ-ಅವಧಿಯ ಉದ್ಯೋಗದ ಸಂದರ್ಭದಲ್ಲಿ ಒಂದು ವರ್ಷದ ನಂತರ ಗ್ರಾಚ್ಯುಟಿ ಪಾವತಿಸಲಾಗುತ್ತದೆ.
  • ವಲಸೆ ಮತ್ತು ಕಾಲೋಚಿತ ಕಾರ್ಮಿಕರಿಗೆ ಪೋರ್ಟಬಿಲಿಟಿ: ವಲಸೆ ಮತ್ತು ಕಾಲೋಚಿತ ಕಾರ್ಮಿಕರಿಗೆ ಆಧಾರ್-ಸಂಯೋಜಿತ ನೋಂದಣಿ ಮೂಲಕ ಪ್ರಯೋಜನಗಳ ಪೋರ್ಟಬಿಲಿಟಿಯನ್ನು ಸಕ್ರಿಯಗೊಳಿಸಲಾಗಿದೆ. ಆಧಾರ್-ಆಧಾರಿತ ಡಿಜಿಟಲ್ ನೋಂದಣಿಯು ಪಿಎಫ್, ಇಎಸ್‌ಐ, ಮತ್ತು ಗ್ರಾಚ್ಯುಟಿಯನ್ನು ರಾಜ್ಯಗಳು ಮತ್ತು ಉದ್ಯೋಗದಾತರಾದ್ಯಂತ ಕೊಂಡೊಯ್ಯಲು ಖಚಿತಪಡಿಸುತ್ತದೆ.

ಹೊಸ ನಿಬಂಧನೆಗಳು ತೋಟಗಾರಿಕಾ ಕಾರ್ಮಿಕರಿಗೆ ದೀರ್ಘಕಾಲೀನ ಆರ್ಥಿಕ ಭದ್ರತೆ ಮತ್ತು ಹೆಚ್ಚಿನ ಸ್ಥಿರತೆಯನ್ನು ಖಚಿತಪಡಿಸುತ್ತವೆ. ಹಕ್ಕುಗಳ ತಡೆರಹಿತ ನಿರಂತರತೆಯು ವಲಸೆ ಮತ್ತು ಕಾಲೋಚಿತ ಕಾರ್ಮಿಕರಿಗೆ ಅವರು ಎಲ್ಲಿ ಕೆಲಸ ಮಾಡಿದರೂ ತಮ್ಮ ಪ್ರಯೋಜನಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.

ಮಹಿಳಾ ಕಾರ್ಮಿಕರಿಗೆ ಹೆಚ್ಚಿನ ಪ್ರವೇಶ, ಸುರಕ್ಷತೆ ಮತ್ತು ಸಮಾನತೆ

ಕಾರ್ಮಿಕ ಸಂಹಿತೆಗಳು ಕೆಲಸ ಮತ್ತು ಕೌಟುಂಬಿಕ ಜೀವನದ ಪ್ರತಿಯೊಂದು ಹಂತದಲ್ಲಿಯೂ ಮಹಿಳೆಯರ ಅಗತ್ಯಗಳನ್ನು ಗುರುತಿಸುವ ಮೂಲಕ, ತೋಟಗಾರಿಕಾ ಕೆಲಸದಲ್ಲಿರುವ ಮಹಿಳೆಯರಿಗೆ ಅವಕಾಶಗಳು ಮತ್ತು ಬೆಂಬಲ ವ್ಯವಸ್ಥೆಗಳನ್ನು ಗಮನಾರ್ಹವಾಗಿ ಬಲಪಡಿಸುತ್ತವೆ.

  • ವಿಸ್ತೃತ ಕೆಲಸದ ಅವಕಾಶಗಳು: ಮಹಿಳಾ ಕಾರ್ಮಿಕರಿಗೆ ರಾತ್ರಿ, ಬೆಳಿಗ್ಗೆ 6 ಗಂಟೆಗೆ ಮೊದಲು ಮತ್ತು ಸಂಜೆ 7 ಗಂಟೆಯ ನಂತರವೂ ಕೆಲಸ ಮಾಡಲು ಅನುಮತಿ ನೀಡಲಾಗಿದೆ. ಇದು ಅವರ ಒಪ್ಪಿಗೆಗೆ ಒಳಪಟ್ಟಿರುತ್ತದೆ ಮತ್ತು ಉದ್ಯೋಗದಾತರು ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಖಚಿತಪಡಿಸಿಕೊಳ್ಳಬೇಕು.
  • ಬೆಂಬಲಿತ ಮೂಲಸೌಕರ್ಯ: ಮಹಿಳಾ ಕಾರ್ಮಿಕರಿಗೆ ಶಿಶುಪಾಲನಾ ಕೇಂದ್ರ ಮತ್ತು ಹೆರಿಗೆ ರಕ್ಷಣೆಗಳನ್ನು ಖಾತರಿಪಡಿಸಲಾಗಿದೆ. ಹೆರಿಗೆ ಪ್ರಯೋಜನಗಳು 26 ವಾರಗಳ ರಜೆ ಮತ್ತು ನರ್ಸಿಂಗ್ ವಿರಾಮಗಳನ್ನು ಒಳಗೊಂಡಿವೆ.

ಮಹಿಳೆಯರು ಈಗ ವ್ಯಾಪಕ ಮತ್ತು ಸುರಕ್ಷಿತ ಕೆಲಸದ ಅವಕಾಶಗಳಿಗೆ ಹೆಚ್ಚಿನ ಪ್ರವೇಶವನ್ನು ಹೊಂದಿದ್ದಾರೆ. ಹೆರಿಗೆ ಮತ್ತು ಮಕ್ಕಳ ಆರೈಕೆಗಾಗಿ ವರ್ಧಿತ ಬೆಂಬಲವು ಮಹಿಳೆಯರಿಗೆ ಕೆಲಸ ಮತ್ತು ಕುಟುಂಬವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ, ಜೀವನೋಪಾಯದಲ್ಲಿ ಸ್ಥಿರತೆಯನ್ನು ಖಚಿತಪಡಿಸುತ್ತದೆ.

ಉಪಸಂಹಾರ

ಹೊಸ ಕಾರ್ಮಿಕ ಸಂಹಿತೆಗಳು ದೇಶದ ಕ್ಷೇತ್ರಗಳನ್ನು ಪೋಷಿಸಿದವರಿಗೆ ಒಂದು ಪ್ರಮುಖ ತಿರುವು ನೀಡುತ್ತವೆ. ಉತ್ತಮ ಆರೋಗ್ಯ ರಕ್ಷಣೆ, ಸುರಕ್ಷಿತ ಕೆಲಸದ ಸ್ಥಳಗಳು, ಸುಧಾರಿತ ವಸತಿ ಮತ್ತು ಸಮಗ್ರ ರಕ್ಷಣೆಗಳೊಂದಿಗೆ, ಈ ಸಂಹಿತೆಗಳು ಕುಟುಂಬಗಳು, ಮಹಿಳೆಯರು ಮತ್ತು ವಲಸಿಗರಿಗೆ ಅವಕಾಶ ಮತ್ತು ಭದ್ರತೆಯನ್ನು ತರುತ್ತವೆ. ಇದು ಹೆಚ್ಚು ಸಮಾನವಾದ ಕಾರ್ಯಪಡೆಯನ್ನು ನಿರ್ಮಿಸುತ್ತದೆ.

ಈ ಬದಲಾವಣೆಗಳು ತೋಟಗಾರಿಕಾ ಕಾರ್ಮಿಕರಿಗೆ ಹೆಚ್ಚು ಸುರಕ್ಷಿತ ಮತ್ತು ವಿಶ್ವಾಸಾರ್ಹ ಪ್ರಯಾಣದ ಆರಂಭವನ್ನು ಸೂಚಿಸುತ್ತವೆ. ಇಲ್ಲಿ ಸುಧಾರಿತ ರಕ್ಷಣೆಗಳು ಕೇವಲ ಸುರಕ್ಷತೆಯನ್ನು ಮಾತ್ರವಲ್ಲದೆ, ಮುಂದಿನ ವರ್ಷಗಳಿಗೆ ಪ್ರಗತಿ ಮತ್ತು ಸಾಧ್ಯತೆಯ ಅರ್ಥವನ್ನು ತರುತ್ತವೆ.

See in PDF

 

*****

 

(तथ्य सामग्री आईडी: 150547) आगंतुक पटल : 10


Provide suggestions / comments
इस विश्लेषक को इन भाषाओं में पढ़ें : English , हिन्दी , Bengali , Manipuri , Odia
Link mygov.in
National Portal Of India
STQC Certificate