Economy
ಕಾರ್ಮಿಕ ಸಂಹಿತೆಗಳು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ವ್ಯವಸ್ಥೆಯನ್ನು ಪರಿವರ್ತಿಸುವುದು
प्रविष्टि तिथि:
04 DEC 2025 14:13 PM
- ಯಾವುದೇ ಉದ್ಯೋಗದಾತನು ಯಾವುದೇ ಉದ್ಯೋಗಿಗೆ ಕನಿಷ್ಠ ವೇತನಕ್ಕಿಂತ ಕಡಿಮೆ ಹಣವನ್ನು ಪಾವತಿಸುವಂತಿಲ್ಲ.
- ನಿಶ್ಚಿತ ತಳಮಟ್ಟದ ವೇತನ ಮತ್ತು ಸಮಯೋಚಿತ ವೇತನ ಪಾವತಿಗಾಗಿ ನಿಯಮಗಳು.
- ಉಚಿತ ವಾರ್ಷಿಕ ಆರೋಗ್ಯ ತಪಾಸಣೆಗಳು, ವಲಸೆ ಕಾರ್ಮಿಕರಿಗೆ ಪ್ರಯೋಜನಗಳ ಪೋರ್ಟೆಬಿಲಿಟಿ ಮತ್ತು ಲಿಂಗ ತಾರತಮ್ಯದ ನಿಷೇಧ.
- ನೇಮಕಾತಿ ಪತ್ರಗಳ ಮೂಲಕ ಉದ್ಯೋಗದ ಔಪಚಾರಿಕೀಕರಣ.
- ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಗಾಗಿ ಎಲ್ಲಾ ಸಂಸ್ಥೆಗಳಿಗೆ ಸಾರ್ವತ್ರಿಕ ವ್ಯಾಪ್ತಿ ಮತ್ತು ಅಸಂಘಟಿತ ಕಾರ್ಮಿಕರಿಗಾಗಿ ಕಲ್ಯಾಣ ಯೋಜನೆಗಳು.
|
ನಾಲ್ಕು ಸಂಹಿತೆಗಳು: ಒಂದು ಸುಸಂಘಟಿತ ವ್ಯವಸ್ಥೆ
ಇತ್ತೀಚಿನ ಕಾರ್ಮಿಕ ಸುಧಾರಣೆಗಳೊಂದಿಗೆ, ಭಾರತವು ಎಲ್ಲಾ ವಲಯಗಳಲ್ಲಿ ಕಾರ್ಮಿಕ ಆಡಳಿತವನ್ನು ಬಲಪಡಿಸಿದೆ. ವೇತನ ಸಂಹಿತೆ 2019, ದ್ಯೋಗಿಕ ಸಂಬಂಧ ಸಂಹಿತೆ 2020, ಸಾಮಾಜಿಕ ಭದ್ರತಾ ಸಂಹಿತೆ 2020, ಮತ್ತು ವೃತ್ತಿ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿಗತಿಗಳ ಸಂಹಿತೆ 2020 ಎಂಬ ನಾಲ್ಕು ಕಾರ್ಮಿಕ ಸಂಹಿತೆಗಳು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ವಲಯಕ್ಕೆ ನಿರ್ದಿಷ್ಟ ಮಹತ್ವವನ್ನು ಹೊಂದಿವೆ. ಏಕೆಂದರೆ ಈ ವಲಯವು ದೊಡ್ಡ ಕಾರ್ಮಿಕ ಸಮೂಹವನ್ನು ಮತ್ತು ಸಂಕೀರ್ಣವಾದ, ತಾಣ-ಕೇಂದ್ರಿತ ನಿರ್ಮಾಣ ಚಟುವಟಿಕೆಯ ಸ್ವರೂಪವನ್ನು ಹೊಂದಿದೆ. ಈ ಸುಧಾರಣೆಗಳು ವೇತನ ಸಂರಕ್ಷಣೆ, ಕೆಲಸದ ಸ್ಥಳದ ಸುರಕ್ಷತೆ, ಸಾಮಾಜಿಕ ಭದ್ರತೆ, ಮತ್ತು ಔಪಚಾರಿಕ ದಾಖಲೆಗಳನ್ನು ಒಂದೇ ಸಮಗ್ರ ವಿಧಾನದ ಅಡಿಯಲ್ಲಿ ತರುತ್ತವೆ. ಪರಿಣಾಮವಾಗಿ, ನಿರ್ಮಾಣ ಕಾರ್ಮಿಕರು ಹೆಚ್ಚು ಸ್ಥಿರವಾದ ಕೆಲಸದ ಮಾನದಂಡಗಳು, ಕಲ್ಯಾಣ ಕ್ರಮಗಳಿಗೆ ಸುಧಾರಿತ ಪ್ರವೇಶ, ಮತ್ತು ಭಾರತದ ಅಭಿವೃದ್ಧಿ ಪಯಣದಲ್ಲಿ ತಮ್ಮ ಪಾತ್ರಕ್ಕೆ ಉತ್ತಮ ಮನ್ನಣೆಯನ್ನು ನಿರೀಕ್ಷಿಸಬಹುದು.
ಬಿಒಸಿಡಬ್ಲು ಕಾರ್ಮಿಕರಿಗೆ ಬಲವಾದ ಕಲ್ಯಾಣ
ಈ ಕಾರ್ಮಿಕ ಸಂಹಿತೆಗಳು ಬಿಒಸಿಡಬ್ಲು ಕಾರ್ಮಿಕರಿಗಾಗಿ ಬಲಪಡಿಸಿದ ಕಲ್ಯಾಣ ಚೌಕಟ್ಟನ್ನು ಪರಿಚಯಿಸುವ ಮೂಲಕ, ಕೆಲಸದ ಸ್ಥಳದ ಪರಿಸ್ಥಿತಿಗಳನ್ನು ಸುಧಾರಿಸುವ ಮೂಲಕ ಮತ್ತು ಹೆಚ್ಚಿನ ರಕ್ಷಣೆಗಳನ್ನು ಖಚಿತಪಡಿಸಿಕೊಳ್ಳುವ ಮೂಲಕ ಭಾರತದ ನಿರ್ಮಾಣ ಕಾರ್ಯಪಡೆಗೆ ಒಂದು ಸುಸಂಘಟಿತ ಸುರಕ್ಷತಾ ಜಾಲವನ್ನು ಸೃಷ್ಟಿಸುತ್ತವೆ.
ವೇತನ ಮತ್ತು ಪರಿಹಾರ
ಈ ಸುಧಾರಣೆಗಳು ಆದಾಯದ ಸ್ಥಿರತೆಯನ್ನು ಹೆಚ್ಚಿಸುತ್ತವೆ, ಸಮಯಕ್ಕೆ ಸರಿಯಾಗಿ ವೇತನವನ್ನು ಖಚಿತಪಡಿಸುತ್ತವೆ, ಕಾರ್ಮಿಕರ ದುರ್ಬಲತೆಗಳನ್ನು ಕಡಿಮೆ ಮಾಡುತ್ತವೆ ಮತ್ತು ಈ ವಲಯದಾದ್ಯಂತ ಆರ್ಥಿಕ ಭದ್ರತೆಯನ್ನು ಬಲಪಡಿಸುತ್ತವೆ.
- ಕನಿಷ್ಠ ವೇತನಗಳ ಸಾರ್ವತ್ರಿಕೀಕರಣ: ಯಾವುದೇ ಉದ್ಯೋಗದಾತನು ಸರ್ಕಾರವು ಅಧಿಸೂಚಿಸಿದ ಕನಿಷ್ಠ ವೇತನಕ್ಕಿಂತ ಕಡಿಮೆ ಯಾವುದೇ ಉದ್ಯೋಗಿಗೆ ಪಾವತಿಸುವಂತಿಲ್ಲ. ಈ ಹಿಂದೆ "ನಿಗದಿತ ಉದ್ಯೋಗಗಳಿಗೆ" ಮಾತ್ರ ಅನ್ವಯವಾಗುತ್ತಿದ್ದ ಕನಿಷ್ಠ ವೇತನಗಳು, ಈಗ ಎಲ್ಲಾ ವರ್ಗಗಳ ನೌಕರರಿಗೆ ಅನ್ವಯಿಸುತ್ತವೆ. ಸರ್ಕಾರವು ಈ ದರಗಳನ್ನು ಐದು ವರ್ಷಗಳನ್ನು ಮೀರದ ಮಧ್ಯಂತರದಲ್ಲಿ ಪರಿಷ್ಕರಿಸುತ್ತದೆ ಅಥವಾ ವಿಮರ್ಶಿಸುತ್ತದೆ. ಕಾರ್ಮಿಕರ ಕೌಶಲ್ಯ ಮಟ್ಟ ಮತ್ತು ಕೆಲಸದ ಸ್ವರೂಪದ ಆಧಾರದ ಮೇಲೆ ಗಂಟೆ, ದೈನಂದಿನ ಅಥವಾ ಮಾಸಿಕ ವೇತನ ಅವಧಿಗಳಿಗೆ ಸಮಯಾಧಾರಿತ ಕೆಲಸ ಮತ್ತು ತುಂಡು ಕೆಲಸ ಎರಡಕ್ಕೂ ಕನಿಷ್ಠ ವೇತನವನ್ನು ನಿಗದಿಪಡಿಸಲಾಗುತ್ತದೆ.
- ತಳಮಟ್ಟದ ವೇತನ: ಆಹಾರ ಮತ್ತು ಬಟ್ಟೆಯಂತಹ ಉದ್ಯೋಗಿಯ ಜೀವನ ಮಟ್ಟವನ್ನು ಆಧರಿಸಿ, ಸರ್ಕಾರವು ನಿಶ್ಚಿತ ತಳಮಟ್ಟದ ವೇತನವನ್ನು ನಿರ್ಧರಿಸುತ್ತದೆ ಮತ್ತು ಅದನ್ನು ನಿಯಮಿತ ಮಧ್ಯಂತರದಲ್ಲಿ ಪರಿಷ್ಕರಿಸುತ್ತದೆ. ಸೂಕ್ತ ಸರ್ಕಾರವು (ಕೇಂದ್ರ/ರಾಜ್ಯ) ನಿಗದಿಪಡಿಸಿದ ಕನಿಷ್ಠ ವೇತನ ದರಗಳು 'ತಳಮಟ್ಟದ ವೇತನಕ್ಕಿಂತ' ಕಡಿಮೆಯಿರಬಾರದು. ಸೂಕ್ತ ಸರ್ಕಾರವು ಈ ಹಿಂದೆ ನಿಗದಿಪಡಿಸಿದ ಕನಿಷ್ಠ ವೇತನ ದರಗಳು "ತಳಮಟ್ಟದ ವೇತನ"ಕ್ಕಿಂತ ಹೆಚ್ಚಿದ್ದರೆ, ಅವುಗಳನ್ನು ಕಡಿಮೆ ಮಾಡುವಂತಿಲ್ಲ.
- ಹೆಚ್ಚುವರಿ ಸಮಯದ ವೇತನ: ಸಾಮಾನ್ಯ ಕೆಲಸದ ಸಮಯವನ್ನು ಮೀರಿ ನಿರ್ವಹಿಸಿದ ಯಾವುದೇ ಕೆಲಸಕ್ಕೆ ನಿಯಮಿತ ವೇತನ ದರದ ಕನಿಷ್ಠ ಎರಡರಷ್ಟು ಪರಿಹಾರವನ್ನು ನೀಡಬೇಕು.

- ವೇತನ ಪಾವತಿಗೆ ಕಾಲಮಿತಿ: ಉದ್ಯೋಗದಾತನು ಈ ಕೆಳಗಿನ ನಿಗದಿತ ಕಾಲಮಿತಿಯ ಅಡಿಯಲ್ಲಿ ವೇತನವನ್ನು ಪಾವತಿಸಬೇಕು:
|
ಕ್ರ.ಸಂ.
|
ನೌಕರನ ವಿಧ
|
ವೇತನ ಪಾವತಿಗಾಗಿ ಕಾಲಮಿತಿ
|
|
1.
|
ದೈನಂದಿನ ವೇತನದ ನೌಕರ
|
ಪಾಳಿಯ ಕೊನೆಯಲ್ಲಿ
|
|
2.
|
ವಾರದ ವೇತನದ ನೌಕರ
|
ವಾರದ ರಜೆಯ ಮೊದಲು
|
|
3.
|
ಪಾಕ್ಷಿಕ ವೇತನದ ನೌಕರ
|
ಪಾಕ್ಷಿಕ ಅವಧಿಯ ಅಂತ್ಯದ 2 ದಿನಗಳ ಒಳಗೆ
|
|
4.
|
ಮಾಸಿಕ ವೇತನದ ನೌಕರ
|
ಮುಂದಿನ ತಿಂಗಳ 7 ದಿನಗಳ ಒಳಗೆ
|
|
5.
|
ಸೇವೆಯ ಅಂತ್ಯ ಅಥವಾ ರಾಜೀನಾಮೆ
|
2 ಕೆಲಸದ ದಿನಗಳ ಒಳಗೆ
|
- ಬಾಕಿಗಳ ಪಾವತಿಯ ಜವಾಬ್ದಾರಿ: ಪ್ರತಿ ಉದ್ಯೋಗಿಗೆ ವೇತನ ಪಾವತಿಸುವ ಜವಾಬ್ದಾರಿ ಉದ್ಯೋಗದಾತನದ್ದಾಗಿರುತ್ತದೆ. ಉದ್ಯೋಗದಾತನು ಬಾಕಿಗಳನ್ನು ಪಾವತಿಸಲು ವಿಫಲವಾದರೆ, ಆ ಸಂಸ್ಥೆ, ಕಂಪನಿ, ಅಥವಾ ಸಂಸ್ಥೆಯ ಮಾಲೀಕರಾದ ಇತರ ಯಾವುದೇ ವ್ಯಕ್ತಿಯು ಅಂತಹ ಪಾವತಿಸದ ವೇತನಗಳಿಗೆ ಜವಾಬ್ದಾರರಾಗಿರುತ್ತಾರೆ.
- ಸಮಯೋಚಿತ ವೇತನ ಪಾವತಿ: ವೇತನಗಳ ಸಮಯೋಚಿತ ಪಾವತಿ ಮತ್ತು ವೇತನಗಳಿಂದ ಅನಧಿಕೃತ ಕಡಿತಗಳಿಗೆ ಸಂಬಂಧಿಸಿದ ನಿಯಮಗಳು ಈಗ ವೇತನದ ಮಟ್ಟವನ್ನು ಲೆಕ್ಕಿಸದೆ ಎಲ್ಲಾ ನೌಕರರಿಗೂ ಅನ್ವಯಿಸುತ್ತವೆ (ಹಿಂದೆ ಇದು ತಿಂಗಳಿಗೆ ₹24,000 ವರೆಗೆ ಗಳಿಸುವ ನೌಕರರಿಗೆ ಮಾತ್ರ ಅನ್ವಯವಾಗಿತ್ತು).
- ಮಿತಿ ಅವಧಿ: ನೌಕರನಿಂದ ಹಕ್ಕುಗಳನ್ನು ಸಲ್ಲಿಸಲು ಇರುವ ಮಿತಿ ಅವಧಿಯನ್ನು ಹಿಂದಿನ ಆರು ತಿಂಗಳಿಂದ ಎರಡು ವರ್ಷಗಳಿಗಿಂತ ಹೆಚ್ಚಿಸಿ ಮೂರು ವರ್ಷಗಳಿಗೆ ವಿಸ್ತರಿಸಲಾಗಿದೆ.
- ಕೆಲಸದ ಸಮಯವನ್ನು ನಿಗದಿಪಡಿಸುವುದು: ಸಾಕಷ್ಟು ಪರಿಹಾರವಿಲ್ಲದೆ ನೌಕರರು ಹೆಚ್ಚು ಕೆಲಸ ಮಾಡುವುದನ್ನು ತಡೆಯಲು, ಸಾಮಾನ್ಯ ಕೆಲಸದ ಗಂಟೆಗಳ ಸಂಖ್ಯೆಯನ್ನು ಈಗ ಮಿತಿಗೊಳಿಸಲಾಗಿದೆ. ಯಾವುದೇ ನೌಕರನು ದಿನಕ್ಕೆ 8 ಗಂಟೆಗಳಿಗಿಂತ ಹೆಚ್ಚು ಅಥವಾ ವಾರಕ್ಕೆ 48 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಲು ಕೇಳುವಂತಿಲ್ಲ.

ನೌಕರರ ಸುರಕ್ಷತೆ, ಆರೋಗ್ಯ ಮತ್ತು ಕಲ್ಯಾಣ ಕುರಿತ ಕಾರ್ಮಿಕ ಸಂಹಿತೆಗಳು
ಬಲವಾದ ಸುರಕ್ಷತಾ ಮಾನದಂಡಗಳು ಮತ್ತು ಸುಧಾರಿತ ಕಲ್ಯಾಣ ನಿಬಂಧನೆಗಳು ಸುರಕ್ಷಿತ ಕೆಲಸದ ತಾಣಗಳು ಮತ್ತು ಆರೋಗ್ಯಕರ ಕೆಲಸದ ಪರಿಸ್ಥಿತಿಗಳನ್ನು ಸೃಷ್ಟಿಸುತ್ತವೆ, ಇದು ಕಾರ್ಮಿಕರ ದೀರ್ಘಾವಧಿಯ ಯೋಗಕ್ಷೇಮ ಮತ್ತು ಘನತೆಯನ್ನು ಬಲಪಡಿಸುತ್ತದೆ.
ನೌಕರರ ಸುರಕ್ಷತೆ, ಆರೋಗ್ಯ ಮತ್ತು ಕಲ್ಯಾಣ
- ಪ್ರಯಾಣದ ಸಮಯದಲ್ಲಿ ಸಂಭವಿಸುವ ಅಪಘಾತಗಳನ್ನು ನೌಕರರ ಪರಿಹಾರದ ಅಡಿಯಲ್ಲಿ ಸೇರ್ಪಡೆ: ನೌಕರನು ಕರ್ತವ್ಯಕ್ಕಾಗಿ ತನ್ನ ನಿವಾಸದಿಂದ ಕೆಲಸದ ಸ್ಥಳಕ್ಕೆ ಪ್ರಯಾಣಿಸುವಾಗ ಅಥವಾ ಕರ್ತವ್ಯ ನಿರ್ವಹಿಸಿದ ನಂತರ ಹಿಂದಿರುಗುವಾಗ ಸಂಭವಿಸುವ ಅಪಘಾತಗಳನ್ನು ಈಗ ನೌಕರರ ಪರಿಹಾರದ ಅಡಿಯಲ್ಲಿ ಸೇರಿಸಲಾಗಿದೆ.
- ಉಚಿತ ವಾರ್ಷಿಕ ಆರೋಗ್ಯ ತಪಾಸಣೆಗಳು: ಎಲ್ಲಾ ನೌಕರರಿಗೆ ಉಚಿತ ವಾರ್ಷಿಕ ಆರೋಗ್ಯ ತಪಾಸಣೆಗಳನ್ನು ನೀಡಲಾಗುತ್ತದೆ.
- ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಗಾಗಿ ಎಲ್ಲಾ ಸಂಸ್ಥೆಗಳ ಸಾರ್ವತ್ರಿಕ ವ್ಯಾಪ್ತಿ: ವೃತ್ತಿ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿಗತಿಗಳ ಸಂಹಿತೆ ಆರೋಗ್ಯ ಮತ್ತು ಸುರಕ್ಷತಾ ನಿಬಂಧನೆಗಳನ್ನು ಎಲ್ಲಾ ವಲಯಗಳ ಕಾರ್ಮಿಕರಿಗೆ ವಿಸ್ತರಿಸುತ್ತದೆ.
- ಆರೋಗ್ಯ, ಸುರಕ್ಷತೆ ಮತ್ತು ಕಲ್ಯಾಣ ಸೌಲಭ್ಯಗಳು: ಕಾರ್ಖಾನೆಗಳು ಮತ್ತು ಗಣಿಗಳಲ್ಲಿ (50 ಅಥವಾ ಅದಕ್ಕಿಂತ ಹೆಚ್ಚು ಕಾರ್ಮಿಕರನ್ನು ಬಳಸುವ) ಮತ್ತು ಸಂಸ್ಥೆಗಳಲ್ಲಿ (ಗುತ್ತಿಗೆ ಕಾರ್ಮಿಕರು ಸೇರಿದಂತೆ 100 ಅಥವಾ ಅದಕ್ಕಿಂತ ಹೆಚ್ಚು ಕಾರ್ಮಿಕರನ್ನು ಬಳಸುವ) ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯಗಳು, ವಿಶ್ರಾಂತಿ ಕೊಠಡಿಗಳು ಮತ್ತು ಕ್ಯಾಂಟೀನ್‌ಗಳಿಗಾಗಿ ಸರ್ಕಾರವು ಏಕರೂಪದ ನಿಬಂಧನೆಗಳನ್ನು ನಿಗದಿಪಡಿಸುತ್ತದೆ.
- ಕಲ್ಯಾಣ ಯೋಜನೆಗಳು: ಅಸಂಘಟಿತ ಕಾರ್ಮಿಕರಿಗಾಗಿ ಕಲ್ಯಾಣ ಯೋಜನೆಗಳು ಇರುತ್ತವೆ, ಉದಾಹರಣೆಗೆ ಜೀವ ಮತ್ತು ಅಂಗವೈಕಲ್ಯ ವಿಮೆ, ಆರೋಗ್ಯ ಮತ್ತು ಹೆರಿಗೆ ಪ್ರಯೋಜನ ಹಾಗೂ ವೃದ್ಧಾಪ್ಯ ರಕ್ಷಣೆ ಇತ್ಯಾದಿ.
ನೌಕರರ ಹಕ್ಕುಗಳು ಮತ್ತು ಔಪಚಾರಿಕೀಕರಣ
ನೇಮಕಾತಿ ಪತ್ರಗಳು ಮತ್ತು ಪಾರದರ್ಶಕ ದಾಖಲೆಗಳ ಮೂಲಕ ಔಪಚಾರಿಕೀಕರಣದ ಕಡೆಗೆ ಬದಲಾವಣೆಯು ಸ್ಪಷ್ಟ ಹಕ್ಕುಗಳು ಮತ್ತು ಆರೋಗ್ಯಕರ ಉದ್ಯೋಗ ಪರಿಸ್ಥಿತಿಗಳೊಂದಿಗೆ ಕಾರ್ಮಿಕರನ್ನು ಸಬಲೀಕರಣಗೊಳಿಸುತ್ತದೆ.
- ನೇಮಕಾತಿ ಪತ್ರಗಳ ಮೂಲಕ ಔಪಚಾರಿಕೀಕರಣ: ಪ್ರತಿಯೊಬ್ಬ ನೌಕರನಿಗೆ ನಿಗದಿತ ನಮೂನೆಯಲ್ಲಿ ನೇಮಕಾತಿ ಪತ್ರಗಳನ್ನು ನೀಡಲಾಗುತ್ತದೆ. ಇದರಲ್ಲಿ ನೌಕರನ ವಿವರಗಳು, ಹುದ್ದೆ, ವರ್ಗ, ವೇತನದ ವಿವರಗಳು, ಸಾಮಾಜಿಕ ಭದ್ರತೆಯ ವಿವರಗಳು ಇತ್ಯಾದಿಗಳನ್ನು ನಿರ್ದಿಷ್ಟಪಡಿಸಲಾಗುತ್ತದೆ.
- "ಕುಟುಂಬ" ವ್ಯಾಖ್ಯಾನದ ವಿಸ್ತರಣೆ: ಮಹಿಳಾ ನೌಕರರ ಸಂದರ್ಭದಲ್ಲಿ, ಸರ್ಕಾರವು ನಿಗದಿಪಡಿಸಿದ ಆದಾಯದ ಆಧಾರದ ಮೇಲೆ "ಕುಟುಂಬ" ದ ವ್ಯಾಖ್ಯಾನವು ಅವರ ಅತ್ತೆ-ಮಾವಂದಿರನ್ನೂ ಒಳಗೊಂಡಿದೆ.
ವಲಸೆ ಕಾರ್ಮಿಕರ ಕಲ್ಯಾಣ
ಪ್ರಯೋಜನಗಳ ವರ್ಧಿತ ಪೋರ್ಟೆಬಿಲಿಟಿಯು ವಲಸೆ ಕಾರ್ಮಿಕರು ಹೆಚ್ಚು ಅಂತರ್ಗತ ಕಾರ್ಮಿಕ ಪರಿಸರ ವ್ಯವಸ್ಥೆಗೆ ಪ್ರವೇಶವನ್ನು ಉಳಿಸಿಕೊಳ್ಳುವುದನ್ನು ಖಚಿತಪಡಿಸುತ್ತದೆ.
- ಅಂತರ-ರಾಜ್ಯ ವಲಸೆ ಕಾರ್ಮಿಕ: ಅಂತರ-ರಾಜ್ಯ ವಲಸೆ ಕಾರ್ಮಿಕರ ವ್ಯಾಖ್ಯಾನವನ್ನು ವಿಸ್ತರಿಸಲಾಗಿದೆ. ಇದು ನೇರವಾಗಿ ಅಥವಾ ಗುತ್ತಿಗೆದಾರರ ಮೂಲಕ ಉದ್ಯೋಗದಲ್ಲಿರುವವರನ್ನು ಒಳಗೊಂಡಿರುತ್ತದೆ ಮತ್ತು ಸ್ವಂತವಾಗಿ ವಲಸೆ ಹೋಗುವ ಕಾರ್ಮಿಕರನ್ನು ಸಹ ಒಳಗೊಳ್ಳುತ್ತದೆ. ವಲಸೆ ನಿರ್ಮಾಣ ಕಾರ್ಮಿಕರು ಬಿಒಸಿಡಬ್ಲು ಸೆಸ್ ನಿಧಿ ಮತ್ತು ಪಿಡಿಎಸ್ ಪಡಿತರದ ಅಡಿಯಲ್ಲಿ ಪ್ರಯೋಜನಗಳ ಪೋರ್ಟೆಬಿಲಿಟಿಯನ್ನು ಸಹ ಪಡೆಯುತ್ತಾರೆ.
ಸಮಾನತೆ ಮತ್ತು ತಾರತಮ್ಯರಹಿತತೆ
ಕಟ್ಟುನಿಟ್ಟಾದ ತಾರತಮ್ಯರಹಿತ ಮಾನದಂಡಗಳು ಕೆಲಸದ ಸ್ಥಳದಲ್ಲಿ ನ್ಯಾಯಸಮ್ಮತತೆಯನ್ನು ಹೆಚ್ಚಿಸುತ್ತವೆ, ಎಲ್ಲಾ ಕಾರ್ಮಿಕರಿಗೆ ಸಮಾನ ಚಿಕಿತ್ಸೆಯನ್ನು ಉತ್ತೇಜಿಸುತ್ತವೆ ಮತ್ತು ಘನತೆ ಹಾಗೂ ಸಮಾನ ಅವಕಾಶದ ಸಂಸ್ಕೃತಿಯನ್ನು ಬಲಪಡಿಸುತ್ತವೆ.
- ಲಿಂಗ ತಾರತಮ್ಯದ ನಿಷೇಧ: ಒಂದೇ ಅಥವಾ ಅದೇ ಸ್ವರೂಪದ ಕೆಲಸಕ್ಕೆ ಸಂಬಂಧಿಸಿದಂತೆ ನೇಮಕಾತಿ, ವೇತನ ಅಥವಾ ಕೆಲಸದ ಪರಿಸ್ಥಿತಿಗಳ ವಿಷಯಗಳಲ್ಲಿ ಉದ್ಯೋಗದಾತರು ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡಬಾರದು.
ಸುರಕ್ಷಿತ ಮತ್ತು ಭದ್ರ ಬಿಒಸಿಡಬ್ಲು ಕಾರ್ಯಪಡೆ
ಈ ಕಾರ್ಮಿಕ ಸುಧಾರಣೆಗಳು ವೇತನಗಳಲ್ಲಿ ಹೆಚ್ಚಿನ ಸ್ಪಷ್ಟತೆ, ಬಲವಾದ ಆರೋಗ್ಯ ಮತ್ತು ಸುರಕ್ಷತಾ ರಕ್ಷಣೆಗಳು, ಮತ್ತು ಔಪಚಾರಿಕ ಉದ್ಯೋಗ ಹಾಗೂ ಕಲ್ಯಾಣ ವ್ಯವಸ್ಥೆಗಳಿಗೆ ಸುಧಾರಿತ ಪ್ರವೇಶವನ್ನು ಪರಿಚಯಿಸುತ್ತವೆ. ಈ ಪ್ರಗತಿಯು ದೇಶಾದ್ಯಂತ ಕಾರ್ಮಿಕರ ರಕ್ಷಣೆಯನ್ನು ಹೆಚ್ಚಿಸಿದೆ, ಬಿಒಸಿಡಬ್ಲು ವಲಯದ ಕಾರ್ಮಿಕರ ಸಾಮಾಜಿಕ ರಕ್ಷಣೆ ಮತ್ತು ಕಲ್ಯಾಣವನ್ನು ಬಲಪಡಿಸಿದೆ. ವ್ಯವಸ್ಥೆಯಲ್ಲಿ ಪಾರದರ್ಶಕತೆ, ಕಾನೂನು ಹೊಣೆಗಾರಿಕೆ ಮತ್ತು ಸಾರ್ವತ್ರಿಕ ವ್ಯಾಪ್ತಿಯನ್ನು ಅಳವಡಿಸುವುದರ ಮೂಲಕ, ಈ ಸುಧಾರಣೆಗಳು ಸುರಕ್ಷಿತ ಕೆಲಸದ ತಾಣಗಳು, ಸಬಲೀಕೃತ ಕಾರ್ಮಿಕರು ಮತ್ತು ಕೆಲಸದ ಸ್ಥಳದಲ್ಲಿ ವರ್ಧಿತ ಘನತೆಯ ಕಡೆಗೆ ಅರ್ಥಪೂರ್ಣ ಹೆಜ್ಜೆಯನ್ನು ಗುರುತಿಸುತ್ತವೆ.
Click here for pdf file.
*****
(तथ्य सामग्री आईडी: 150533)
आगंतुक पटल : 20
Provide suggestions / comments