ಬೆಲ್ಜಿಯಮ್ ನ ಚಲನಚಿತ್ರ ನಿರ್ಮಾಪಕಿ ಇಸಬೆಲ್ ಟೊಲ್ಲೆನೇರ್ ಅವರು ತಮ್ಮ ಚಿತ್ರ ಪ್ಯಾರಿಸ್ ಪ್ಯಾರಿಸ್, ಅದರ ಸೃಜನಾತ್ಮಕ ಪ್ರಯಾಣ ಮತ್ತು ವಲಸೆ, ಸ್ಥಳಾಂತರ ಮತ್ತು ಸೇರಿಕೆಯ ವಿಷಯಗಳ ಬಗ್ಗೆ ಗೋವಾದಲ್ಲಿ ಆಯೋಜಿಸಲಾದ 57ನೇ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವ (ಐಎಫ್ ಎಫ್ಐ) ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡರು. ಅಂತಾರಾಷ್ಟ್ರೀಯ ಸಿನೆಮಾ ವಿಭಾಗದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವು ಫ್ರೆಂಚ್ ರಾಜಧಾನಿಯಲ್ಲಿ ವಾಸಿಸುವ ಮೂರು ಪುರುಷರ ಜೀವನದ ಮೂಲಕ ಮನೆಯ ಅರ್ಥವನ್ನು ಅನ್ವೇಷಿಸುತ್ತದೆ.

ಪ್ಯಾರಿಸ್ ನ ಒಂದು ಕಟ್ಟಡದಲ್ಲಿ ಸ್ಥಾಪಿತವಾಗಿರುವ ಪ್ಯಾರಿಸ್, ವಿಭಿನ್ನ ಹಿನ್ನೆಲೆಯ ಮೂರು ಪುರುಷರನ್ನು ಅನುಸರಿಸುತ್ತದೆ. ಅವರು ತಮ್ಮ ಮನೆ ನಿರ್ಮಿಸಲು ಯತ್ನಿಸುತ್ತಾರೆ. ಸೀಮಿತ ಸಂಪನ್ಮೂಲಗಳನ್ನು ಹಂಚಿಕೊಳ್ಳುತ್ತಾ ಮತ್ತು ತಮ್ಮ ಭೂತಕಾಲ ಮತ್ತು ಭವಿಷ್ಯದ ಬಗ್ಗೆ ಸಂಭಾಷಣೆಗಳನ್ನು ವಿನಿಮಯ ಮಾಡಿಕೊಂಡು, ಈ ಪುರುಷರು ಗುರುತು, ಸ್ಥಳಾಂತರ ಮತ್ತು ಸೇರಿಕೆಯ ಪ್ರಶ್ನೆಗಳನ್ನು ಮಾರ್ಗದರ್ಶನ ಮಾಡುತ್ತಾ, ಸಂಸ್ಕೃತಿಗಳ ನಡುವೆ ಜನರನ್ನು ಸಂಪರ್ಕಿಸುವ ಮಾನವ ಅನುಭವಗಳನ್ನು ಹೊರತರುತ್ತಾರೆ.
ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಟೊಲ್ಲೆನೇರ್, ಐಎಫ್ಎಫ್ಐ ನಲ್ಲಿ ತಮ್ಮ ಚಿತ್ರವನ್ನು ಪ್ರಸ್ತುತಪಡಿಸುವ ಅವಕಾಶವನ್ನು ಗೌರವವೆಂದು ವರ್ಣಿಸಿದರು. ಹಿಂದಿನ ದಿನ ನಡೆದ ಪ್ರದರ್ಶನಕ್ಕೆ ಪ್ರೋತ್ಸಾಹಕಾರಿ ಪ್ರತಿಕ್ರಿಯೆ ದೊರಕಿದ್ದು, ಸಭಾಂಗಣ ಸಂಪೂರ್ಣ ಭರ್ತಿಯಾಗಿತ್ತು ಎಂದು ಅವರು ನೆನಪಿಸಿಕೊಂಡರು. ನಂತರ ನಡೆದ ಆಕರ್ಷಕ ಪ್ರಶ್ನೋತ್ತರ ಅಧಿವೇಶನವು ಭಾರತೀಯ ಪ್ರೇಕ್ಷಕರೊಂದಿಗೆ ಸಂವಹನ ನಡೆಸಲು ಮತ್ತು ಚಿತ್ರದ ಬಗ್ಗೆ ಅವರ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳಲು ಅವಕಾಶ ನೀಡಿತು.
ತಮ್ಮ ಸೃಜನಶೀಲ ವಿಧಾನದ ಕುರಿತು ಮಾತನಾಡುತ್ತಾ, ಸಾಕ್ಷ್ಯಚಿತ್ರ ನಿರ್ಮಾಣದ ಹಿನ್ನೆಲೆಯು ಪಾತ್ರವರ್ಗದ ಆಯ್ಕೆಯ ಮೇಲೆ ಹೇಗೆ ಪ್ರಭಾವ ಬೀರಿತು ಎಂಬುದನ್ನು ಟೊಲೆನೇರ್ ವಿವರಿಸಿದರು. ಅವರು ಅಂತಹ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡರು. ಅವರ ವೈಯಕ್ತಿಕ ಹಿನ್ನೆಲೆ ಮತ್ತು ಜೀವನಾನುಭವಗಳು ಅವರು ನಿರ್ವಹಿಸುವ ಪಾತ್ರಗಳೊಂದಿಗೆ ಹೊಂದಿಕೆಯಾಗುತ್ತಿದ್ದವು; ಇದು ಕಥನಕ್ಕೆ ನೈಜತೆಯನ್ನು ಮತ್ತು ಆಳವನ್ನು ತಂದುಕೊಟ್ಟಿತು.

ಚಿತ್ರ ನಿರ್ಮಾಪಕಿ ನಿರ್ಮಾಣದಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ವಿಶೇಷವಾಗಿ ಸೀಮಿತ ಬಜೆಟ್ ಮತ್ತು ಸೂಕ್ತ ಚಿತ್ರೀಕರಣ ಸ್ಥಳಗಳನ್ನು ಗುರುತಿಸುವ ಪ್ರಕ್ರಿಯೆಯ ಬಗ್ಗೆ ಮಾತನಾಡಿದರು. ಚಿತ್ರದ ಹಿಂದೆ ಇರುವ ವೈಯಕ್ತಿಕ ಪ್ರೇರಣೆಯನ್ನು ಹಂಚಿಕೊಂಡು. ಅವರು ತಮ್ಮ ಅಜ್ಜಮ್ಮ-ಅಪ್ಪಮ್ಮರು ವಲಸಿಗರು ಎಂದು ಬಹಿರಂಗಪಡಿಸಿದರು. ಇದು ವಲಸೆ, ಸ್ಥಳಾಂತರ ಮತ್ತು ಸೇರಿದಿಕೆ ಹುಡುಕಾಟದಲ್ಲಿ ಅವರ ಆಸಕ್ತಿಯನ್ನು ರೂಪಿಸಿತು.
ಈ ಚಲನಚಿತ್ರದ ಕುರಿತಾದ ತಮ್ಮ ಆಶಯಗಳನ್ನು ವ್ಯಕ್ತಪಡಿಸಿದ ಟೊಲೆನೇರ್, ಈ ಚಿತ್ರವು ವಿವಿಧ ದೇಶಗಳು ಮತ್ತು ಸಂಸ್ಕೃತಿಗಳಾದ್ಯಂತ ಸಂಚರಿಸಿ, ತನ್ನ ಸಾರ್ವತ್ರಿಕ ವಿಷಯಗಳು ಹಾಗೂ ಮಾನವ ಸಹಜ ಅನುಭವಗಳ ಮೂಲಕ ಪ್ರಪಂಚದಾದ್ಯಂತದ ಪ್ರೇಕ್ಷಕರೊಂದಿಗೆ ಬೆಸೆಯುವುದನ್ನು ನೋಡಲು ತಾವು ಬಯಸುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯನ್ನು ಆಂಡ್ರ್ಯೂ ಲಾಲ್ಚಂದಮಾ ನಿರ್ವಹಿಸಿದರು.
ಪೂರ್ಣ ಪತ್ರಿಕಾಗೋಷ್ಠಿಯನ್ನು ವೀಕ್ಷಿಸಿ:
Read IFFILOID here: https://www.pib.gov.in/iffi/57/iffiLoid.aspx?yr=2026&lang=1®=48
*****