ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಂವಿಧಾನ ದಿನದಂದು ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಇತರ ಪ್ರಮುಖರಿಗೆ ಗೌರವ ಸಲ್ಲಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ

ಪ್ರಕಟಣಾ ದಿನಾಂಕ: 26 NOV 2026 8:58AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂವಿಧಾನ ದಿನದ ಸಂದರ್ಭದಲ್ಲಿ ಎಲ್ಲಾ ನಾಗರಿಕರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದ್ದಾರೆ. ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಸಂವಿಧಾನ ಸಭೆಯ ಎಲ್ಲಾ ಮಹಾನ್ ವ್ಯಕ್ತಿಗಳಿಗೆ ಗೌರವ ಸಲ್ಲಿಸಿ, ಅವರು ನೀಡಿದ ಸಂವಿಧಾನವು ಭಾರತೀಯ ಪ್ರಜಾಸತ್ತಾತ್ಮಕತೆಯ ಅಮೂಲ್ಯ ಪರಂಪರೆಯಾಗಿದ್ದು, ಅಭಿವೃದ್ಧಿ ಭಾರತದ ಸಂಕಲ್ಪವನ್ನು ಸಾಧಿಸುವಲ್ಲಿ ರಾಷ್ಟ್ರವನ್ನು ಮುಂದುವರೆಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ಶ್ರೀ ನರೇಂದ್ರ ಮೋದಿ ಅವರು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳನ್ನು ಬಲಪಡಿಸುವ ಬದ್ಧತೆಯನ್ನು ಪುನಃ ದೃಢಪಡಿಸಿ, ಜ್ಞಾನಿಗಳಾದ ಪಂಡಿತರಿಂದ ಸಂಪೂರ್ಣವಾಗಿ ಚರ್ಚಿಸಿ ಉತ್ತಮವಾಗಿ ವ್ಯಾಖ್ಯಾನಿಸಿದ ನೀತಿಗಳು ಮತ್ತು ತತ್ವಗಳು ಶಾಶ್ವತವಾಗಿ ಹೇಗೆ ಉಳಿಯುತ್ತವೆ ಎಂಬುದನ್ನು ಪ್ರತಿಬಿಂಬಿಸುವ ಸಂಸ್ಕೃತ ಸುಭಾಷಿತಮವನ್ನು ಹಂಚಿಕೊಂಡರು.

ಪ್ರಧಾನಮಂತ್ರಿ ಅವರು ಎಕ್ಸ್ ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ:

"सभी देशवासियों को संविधान दिवस की हार्दिक शुभकामनाएं।

इस पावन अवसर पर पूज्य बाबासाहेब एवं संविधान सभा की समस्त महान विभूतियों को मेरा नमन और वंदन।

संविधान के रूप में उनके द्वारा दी गई सौगात भारतीय लोकतंत्र की अनमोल धरोहर है, जो विकसित भारत के संकल्प को साकार करने में हमारा मार्गदर्शन करती रहेगी।

ಸಂವಿಧಾನ ದಿನದ ಶುಭಾಶಯಗಳು, ನಮ್ಮ ಸಂವಿಧಾನ ರಚನೆಕಾರರಿಗೆ ಗೌರವ ಸಲ್ಲಿಸುವ ದಿನ ಮತ್ತು ಅದರಲ್ಲಿ ಪ್ರತಿಷ್ಠಿತ ಮೌಲ್ಯಗಳನ್ನು ಬಲಪಡಿಸುವ ನಮ್ಮ ಬದ್ಧತೆಯನ್ನು ಪುನಃ ದೃಢಪಡಿಸುವ ಸಂದರ್ಭವಾಗಿದೆ.’’

बहुधा बहुभिः सार्धं चिन्तिताः सुनिरूपिताः।

कथञ्चिन्न विलीयन्ते विद्वद्भिश्चिन्तिता नयाः॥"

 

*****


(ಪ್ರಕಟಣೆ ಐ.ಡಿ.: 2341866) ವಿಸಿಟರ್ ಕೌಂಟರ್ : 18