ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಷ್ಟ್ರೀಯ ಎಚ್ ಪಿ ವಿ ಲಸಿಕೆ ಅಭಿಯಾನವನ್ನು ಶ್ಲಾಘಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 23 NOV 2026 2:35PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಂಬತ್ತು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ 1 ಕೋಟಿ ಎಚ್ ಪಿ ವಿ ಲಸಿಕೆ ಡೋಸ್‌ಗಳನ್ನು ದಾಟುವ ಮೂಲಕ, ಅರ್ಹ ಹುಡುಗಿಯರ ವಾರ್ಷಿಕ ಸಮೂಹದ ಸುಮಾರು ಶೇ.87 ರಷ್ಟು ವ್ಯಾಪ್ತಿಯನ್ನು ತಲುಪುವ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದ್ದಕ್ಕಾಗಿ ರಾಷ್ಟ್ರೀಯ ಎಚ್ ಪಿ ವಿ ಲಸಿಕೆ ಅಭಿಯಾನವನ್ನು ಶ್ಲಾಘಿಸಿದ್ದಾರೆ.

ಈ ಸಾಧನೆಯು  ಆರೋಗ್ಯ ರಕ್ಷಣೆಯ ಮುನ್ನೆಚ್ಚರಿಕೆಯ ಮೂಲಕ ಭಾರತದ ಹೆಣ್ಣುಮಕ್ಕಳಿಗೆ ಆರೋಗ್ಯಕರ ಭವಿಷ್ಯ ನಿರ್ಮಿಸುವತ್ತ ಒಂದು ಪ್ರಮುಖ ಹೆಜ್ಜೆಯನ್ನು ಗುರುತಿಸುತ್ತದೆ ಮತ್ತು ಈ ಅಭಿಯಾನದ ಯಶಸ್ವಿ ಅನುಷ್ಠಾನವನ್ನು ಖಾತ್ರಿಪಡಿಸಿಕೊಂಡ ಎಲ್ಲಾ ಪಾಲುದಾರರ ಸಾಮೂಹಿಕ ಬದ್ಧತೆ ಮತ್ತು ಸಂಘಟಿತ ಪ್ರಯತ್ನಗಳನ್ನು ಈ ಮೈಲಿಗಲ್ಲು ಪ್ರತಿಬಿಂಬಿಸುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ಶ್ರೀ ಮೋದಿ ತಮ್ಮ X ಪೋಸ್ಟ್ ನಲ್ಲಿ  ಹೀಗೆ ಹೇಳಿದ್ದಾರೆ;

ಆರೋಗ್ಯ ರಕ್ಷಣೆಯ ಮುನ್ನೆಚ್ಚರಿಕೆಯತ್ತ ನಮ್ಮ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲು.

ಪ್ರತಿ ಡೋಸ್ ಹುಡುಗಿಯರನ್ನು ಗರ್ಭಕಂಠದ ಕ್ಯಾನ್ಸರ್‌ನಿಂದ ರಕ್ಷಿಸುವ ಮತ್ತು ಅವರಿಗೆ ಆರೋಗ್ಯಕರ ಭವಿಷ್ಯ ಖಾತ್ರಿಪಡಿಸುವತ್ತ ಒಂದು ಹೆಜ್ಜೆಯಾಗಿದೆ.

ಈ ಗಮನಾರ್ಹ ಸಾಧನೆಯನ್ನು ಖಾತ್ರಿಪಡಿಸಿದ ಎಲ್ಲಾ ಪಾಲುದಾರರನ್ನು ನಾನು ಶ್ಲಾಘಿಸುತ್ತೇನೆ.

 

*****


(ಪ್ರಕಟಣೆ ಐ.ಡಿ.: 2340312) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Bengali , Gujarati , Malayalam