ಪ್ರಕಟಣಾ ದಿನಾಂಕ:
23 NOV 2026 1:00PM by PIB Bengaluru

ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು, 'ಮೇರಾ ಯುವ ಭಾರತ್' (MY Bharat) ಮೂಲಕ, ಸಂವಿಧಾನ ದಿನದ ಅಂಗವಾಗಿ 2026ರ ನವೆಂಬರ್ 24 ರಿಂದ 26ರವರೆಗೆ 'ವಿಕಸಿತ ಭಾರತ ಯುವ ಸಂವಾದ'ವನ್ನು ಆಯೋಜಿಸಲಿದೆ. ಈ ಕಾರ್ಯಕ್ರಮವು 30ಕ್ಕೂ ಅಧಿಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 600ಕ್ಕೂ ಅಧಿಕ ಜಿಲ್ಲೆಗಳಲ್ಲಿರುವ 500ಕ್ಕೂ ಅಧಿಕ ಕಾಲೇಜುಗಳಲ್ಲಿ ನಡೆಯಲಿದೆ. ಈ ರಾಷ್ಟ್ರವ್ಯಾಪಿ ಉಪಕ್ರಮದ ಉದ್ದೇಶ 15 ರಿಂದ 29 ವರ್ಷ ವಯಸ್ಸಿನ ಯುವ ಜನರನ್ನು ಭಾರತದ ಅಭಿವೃದ್ಧಿ ಪಯಣ, ಸಾಧನೆಗಳು ಮತ್ತು ಭವಿಷ್ಯದ ಆಶೋತ್ತರಗಳೊಂದಿಗೆ ಬೆಸೆಯುವುದಾಗಿದೆ. ಅಲ್ಲದೆ, 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಪರಿವರ್ತಿಸುವ ಪ್ರಕ್ರಿಯೆಯಲ್ಲಿ ಯುವಜನರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅವರನ್ನು ಪ್ರೇರೇಪಿಸುವ ಗುರಿಯನ್ನು ಹೊಂದಲಾಗಿದೆ.
ಸಂವಿಧಾನ ದಿನದ ಆಶಯಕ್ಕೆ ಅನುಗುಣವಾಗಿ, ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಭಾಗವಹಿಸುವವರು ಒಗ್ಗೂಡಿ ಭಾರತದ ಸಂವಿಧಾನದ ಪೀಠಿಕೆಯನ್ನು ಪಠಿಸಲಿದ್ದಾರೆ. ಈ ಮೂಲಕ ಅವರು ಸಾಂವಿಧಾನಿಕ ಮೌಲ್ಯಗಳು ಮತ್ತು ಸಂವಿಧಾನದಲ್ಲಿ ಅಡಕವಾಗಿರುವ ಆದರ್ಶಗಳಿಗೆ ತಮ್ಮ ಬದ್ಧತೆ ಪುನರುಚ್ಚರಿಸಲಿದ್ದಾರೆ. ಈ ಕಾರ್ಯಕ್ರಮವು ಯುವಜನರಿಗೆ ಸಂವಾದಗಳು ಮತ್ತು ಜಾಗೃತಿ ಗೋಷ್ಠಿಗಳ ಮೂಲಕ ತೊಡಗಿಸಿಕೊಳ್ಳಲು ದೇಶಾದ್ಯಂತ ಒಂದು ವೇದಿಕೆ ಒದಗಿಸುತ್ತದೆ. ಇದು ಭಾರತದ ಪ್ರಗತಿ, ಉದಯೋನ್ಮುಖ ಅವಕಾಶಗಳು ಮತ್ತು ದೇಶದ ಭವಿಷ್ಯವನ್ನು ರೂಪಿಸುವಲ್ಲಿ ತಮ್ಮ ಪಾತ್ರದ ಬಗ್ಗೆ ಚಿಂತಿಸಲು ಯುವಜನರನ್ನು ಪ್ರೋತ್ಸಾಹಿಸುತ್ತದೆ.
ಈ ದೂರದೃಷ್ಟಿಯನ್ನು ತಳಮಟ್ಟದಲ್ಲಿ ಅರ್ಥಪೂರ್ಣ ಚಟುವಟಿಕೆಯನ್ನಾಗಿ ಪರಿವರ್ತಿಸಲು, ಹೆಸರಾಂತ 'ಯುವ ಐಕಾನ್ಗಳು' (Youth Icons) ವಿವಿಧ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ನಡೆಯುವ ಗೋಷ್ಠಿಗಳನ್ನು ಮುನ್ನಡೆಸಲಿದ್ದಾರೆ. ಈ ಕಾರ್ಯಕ್ರಮದ ಪ್ರಮುಖ ಭಾಗವಾಗಿ, ಪ್ರತಿಯೊಬ್ಬ ಯುವ ಐಕಾನ್ 'ವಿಕಸಿತ ಭಾರತ @ 2047' ವಿಷಯದ ಕುರಿತು ವಿಶೇಷ ಪ್ರಾತ್ಯಕ್ಷಿಕೆಯನ್ನು ನೀಡಲಿದ್ದಾರೆ. ಅದರಲ್ಲಿ ಭಾರತದ ಅಭಿವೃದ್ಧಿ ಪಯಣ, ಇತ್ತೀಚಿನ ವರ್ಷಗಳಲ್ಲಿನ ಸಾಧನೆಗಳು ಮತ್ತು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುತ್ತದೆ. ಈ ಪ್ರಾತ್ಯಕ್ಷಿಕೆಯು ಬಡತನ ನಿರ್ಮೂಲನೆ ಮತ್ತು ಸಾಮಾಜಿಕ-ಆರ್ಥಿಕ ಪರಿವರ್ತನೆಯಲ್ಲಿ ದೇಶ ಸಾಧಿಸಿರುವ ಪ್ರಗತಿಯನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತದೆ. ಅದರಲ್ಲಿ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳ ಮೂಲಕ ಲಕ್ಷಾಂತರ ಜನರ ಜೀವನಮಟ್ಟ ಹಾಗೂ ಜೀವನೋಪಾಯದ ಅವಕಾಶಗಳನ್ನು ಸುಧಾರಿಸಲು ಕೈಗೊಂಡಿರುವ ಪ್ರಯತ್ನಗಳೂ ಸೇರಿವೆ. ನಕ್ಸಲಿಸಂ ನಿಮೂರ್ಲನೆಯಲ್ಲಿ, ಶಾಂತಿಯನ್ನು ಪುನಃಸ್ಥಾಪಿಸುವಲ್ಲಿ ಮತ್ತು ಹಿಂದೆ ಪೀಡಿತ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವಲ್ಲಿ ಭಾರತದ ಗಮನಾರ್ಹ ಪ್ರಗತಿಯನ್ನು ಇದು ಪ್ರದರ್ಶಿಸುತ್ತದೆ. ಅಲ್ಲದೆ, ಇದು ಆರೋಗ್ಯಕರ, ಸಬಲೀಕರಣಗೊಂಡ ಮತ್ತು ವ್ಯಸನ-ಮುಕ್ತ ಸಮಾಜವನ್ನು ನಿರ್ಮಿಸುವ ಮಹತ್ವವನ್ನು ಒತ್ತಿಹೇಳುತ್ತದೆ, ಮಾದಕ ದ್ರವ್ಯ ಸೇವನೆಯು ವೈಯಕ್ತಿಕ ಸಾಮರ್ಥ್ಯ, ಕುಟುಂಬದ ಯೋಗಕ್ಷೇಮ, ಸಾಮಾಜಿಕ ಪ್ರಗತಿ ಮತ್ತು ರಾಷ್ಟ್ರೀಯ ಉತ್ಪಾದಕತೆಯನ್ನು ಹೇಗೆ ದುರ್ಬಲಗೊಳಿಸುತ್ತದೆ ಎಂಬುದನ್ನು ಉಲ್ಲೇಖಿಸುತ್ತದೆ. ವಿಕಸಿತ ಭಾರತ@2047ರ ದೂರದೃಷ್ಟಿಯನ್ನು ಸಾಕಾರಗೊಳಿಸಲು ನಶ ಮುಕ್ತ ಭಾರತವು ಮೂಲಭೂತವಾಗಿದೆ ಮತ್ತು ಈ ಪರಿವರ್ತನೆಗೆ ಚಾಲನೆ ನೀಡವಲ್ಲಿ ಯುವಕರು ನಿರ್ಣಾಯಕ ಪಾತ್ರ ವಹಿಸುತ್ತಾರೆ ಎಂಬುದನ್ನು ಇದು ಒತ್ತಿಹೇಳುತ್ತದೆ.
ಅಲ್ಲದೆ, ಮಾದಕವಸ್ತುಗಳ ದುರ್ಬಳಕೆಯು ವ್ಯಕ್ತಿಯ ಸಾಮರ್ಥ್ಯ, ಕುಟುಂಬದ ಯೋಗಕ್ಷೇಮ, ಸಾಮಾಜಿಕ ಪ್ರಗತಿ ಮತ್ತು ರಾಷ್ಟ್ರೀಯ ಉತ್ಪಾದಕತೆಯನ್ನು ಹೇಗೆ ಕುಗ್ಗಿಸುತ್ತದೆ ಎಂಬುದನ್ನು ಪ್ರಮುಖವಾಗಿ ಬಿಂಬಿಸುವ ಮೂಲಕ, ಆರೋಗ್ಯಕರ, ಸಬಲ ಮತ್ತು ವ್ಯಸನಮುಕ್ತ ಸಮಾಜವನ್ನು ನಿರ್ಮಿಸುವ ಮಹತ್ವವನ್ನು ಇದು ಒತ್ತಿಹೇಳುತ್ತದೆ. 'ವಿಕಸಿತ ಭಾರತ @ 2047' ಎಂಬ ದೂರದೃಷ್ಟಿಯನ್ನು ಸಾಕಾರಗೊಳಿಸಲು 'ನಶ ಮುಕ್ತ ಭಾರತ' ಅತ್ಯಗತ್ಯವಾಗಿದೆ ಮತ್ತು ಈ ಪರಿವರ್ತನೆಯಲ್ಲಿ ಯುವಜನರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ ಎಂಬುದನ್ನು ಈ ಪ್ರಸ್ತುತಿಯು ಪ್ರತಿಪಾದಿಸುತ್ತದೆ.
ಈ ಸಂವಾದಗಳನ್ನು ಮತ್ತಷ್ಟು ಪರಿಣಾಮಕಾರಿಗೊಳಿಸಲು ಪದ್ಮ ಪ್ರಶಸ್ತಿ ಪುರಸ್ಕೃತರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಅವರು ತಮ್ಮ ಜೀವನ ಪಯಣ, ವೈಯಕ್ತಿಕ ಅನುಭವಗಳು ಮತ್ತು ಒಳನೋಟಗಳನ್ನು ಹಂಚಿಕೊಳ್ಳಲಿದ್ದು, ತಾವು ಎದುರಿಸಿದ ಸವಾಲುಗಳು, ಸಾಧಿಸಿದ ಮೈಲಿಗಲ್ಲುಗಳು ಮತ್ತು ತಮ್ಮ ಜೀವನ ಪಯಣಕ್ಕೆ ಮಾರ್ಗದರ್ಶನ ನೀಡಿದ ಮೌಲ್ಯಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ. ಇಂತಹ ಸಂವಾದಗಳು ಯುವ ಭಾಗವಹಿಸುವವರಿಗೆ, ಅವರ ಅನುಭವಗಳಿಂದ ಸ್ಫೂರ್ತಿ ಪಡೆಯಲು ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಸಮರ್ಪಣಾ ಭಾವ, ಪರಿಶ್ರಮ ಮತ್ತು ಬದ್ಧತೆಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತವೆ.
ಈ ಉಪಕ್ರಮವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ಸ್ಫೂರ್ತಿ ಪಡೆದಿದೆ. 2023ರ ಆಗಸ್ಟ್ 15ರಂದು ಕೆಂಪು ಕೋಟೆಯಿಂದ ಮಾಡಿದ ಭಾಷಣದಲ್ಲಿ, 'ವಿಕಸಿತ ಭಾರತ @ 2047' ಅನ್ನು ಸಾಕಾರಗೊಳಿಸುವಲ್ಲಿ 'ಯುವ ಶಕ್ತಿ' ನಿರ್ಣಾಯಕ ಪಾತ್ರ ವಹಿಸಬೇಕೆಂದು ಅವರು ಕರೆ ನೀಡಿದ್ದರು. 'ಅಮೃತ ಪೀಳಿಗೆ'ಯನ್ನು ರಾಷ್ಟ್ರ ನಿರ್ಮಾಣದ ಪ್ರಮುಖ ಚಾಲಕ ಶಕ್ತಿಯನ್ನಾಗಿ ಗುರುತಿಸಿರುವ ಈ ಕಾರ್ಯಕ್ರಮವು, ಯುವಜನರ ಶಕ್ತಿ ಮತ್ತು ನಾಯಕತ್ವವನ್ನು ಈ ರಾಷ್ಟ್ರೀಯ ಗುರಿಯ ಸಾಧನೆಯತ್ತ ಸಜ್ಜುಗೊಳಿಸುವ ಗುರಿ ಹೊಂದಿದೆ.
'ವಿಕಸಿತ ಭಾರತ @ 2047' ಎಂಬ ದೂರದೃಷ್ಟಿಯನ್ನು ಸಾಕಾರಗೊಳಿಸಲು, 'MY Bharat' ಪೋರ್ಟಲ್ (mybharat.gov.in) ನೋಂದಣಿ ಮತ್ತು ಕಾರ್ಯಕ್ರಮಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಡಿಜಿಟಲ್ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಹೆಚ್ಚಿನ ಸಂಖ್ಯೆಯ ಯುವಜನರು ಭಾಗವಹಿಸಲು ಮತ್ತು 'MY Bharat' ಪೂರಕ ವ್ಯವಸ್ಥೆಯ ಭಾಗವಾಗಲು ಅನುವು ಮಾಡಿಕೊಡುತ್ತದೆ. ಸಾಂಸ್ಥಿಕ ಸಂಪರ್ಕ ಮತ್ತು ಡಿಜಿಟಲ್ ತೊಡಗಿಸಿಕೊಳ್ಳುವಿಕೆಯನ್ನು ಸಂಯೋಜಿಸುವ ಮೂಲಕ, ಈ ಉಪಕ್ರಮವು ದೇಶಾದ್ಯಂತದ ಯುವಜನರಿಗೆ ಭಾಗವಹಿಸಲು ಅವಕಾಶಗಳನ್ನು ವಿಸ್ತರಿಸಲು ಮತ್ತು ಅರ್ಥಪೂರ್ಣ ಸ್ವಯಂಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವರನ್ನು ಪ್ರೋತ್ಸಾಹಿಸಲು ಪ್ರಯತ್ನಿಸುತ್ತದೆ.
ಈ ಕಾರ್ಯಕ್ರಮವು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳೊಂದಿಗೆ ನಿರಂತರ ಸಾಂಸ್ಥಿಕ ಸಂಪರ್ಕವನ್ನು ಸ್ಥಾಪಿಸುತ್ತದೆ. ಯುವಜನರ ನಿರಂತರ ಒಳಗೊಳ್ಳುವಿಕೆಯನ್ನು ಉತ್ತೇಜಿಸಲು, ಸ್ವಯಂಸೇವೆಯನ್ನು ಪ್ರೋತ್ಸಾಹಿಸಲು ಮತ್ತು ಭವಿಷ್ಯದ 'MY Bharat' ಉಪಕ್ರಮಗಳ ಅನುಷ್ಠಾನಕ್ಕೆ ಬೆಂಬಲ ನೀಡಲು, ಈ ಶಿಕ್ಷಣ ಸಂಸ್ಥೆಗಳಲ್ಲಿ 'MY Bharat' ಘಟಕಗಳನ್ನು ಸ್ಥಾಪಿಸಬಹುದು. ಇದು ಸಾಮಾಜಿಕ ಜವಾಬ್ದಾರಿಯುತ ಮತ್ತು ಪ್ರೇರಿತ ಯುವ ನಾಗರಿಕರ ಜಾಲವನ್ನು ರೂಪಿಸಲು ಸಹಾಯ ಮಾಡುತ್ತದೆ; ಇವರು ಕಾರ್ಯಕ್ರಮದ ನಂತರವೂ ಭಾಗವಹಿಸುವಿಕೆ, ನಾಯಕತ್ವ ಮತ್ತು ಸೇವಾ ಮನೋಭಾವವನ್ನು ಮುಂದುವರಿಸಿಕೊಂಡು ಹೋಗಬಲ್ಲರು.
'ವಿಕಸಿತ ಭಾರತ ಯುವ ಸಂವಾದ' ದ ಮೂಲಕ, 'ಮೈ ಭಾರತ್' ಸಂಸ್ಥೆಯು 'ಅಮೃತ ಪೀಳಿಗೆ'ಯ ಶಕ್ತಿ, ಆಲೋಚನೆಗಳು ಮತ್ತು ಸಾಮರ್ಥ್ಯವನ್ನು 'ವಿಕಸಿತ ಭಾರತ @ 2047' ಎಂಬ ರಾಷ್ಟ್ರೀಯ ದೃಷ್ಟಿಕೋನದತ್ತ ಸಜ್ಜುಗೊಳಿಸಲು ಪ್ರಯತ್ನಿಸುತ್ತಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಭಾರತದ ಪಯಣವು ಎಲ್ಲರನ್ನೂ ಒಳಗೊಂಡ ಪ್ರಗತಿ, , ಸಾಮಾಜಿಕ ಪರಿವರ್ತನೆ, ಶಾಂತಿ ಮತ್ತು ಭದ್ರತೆ ಹಾಗೂ ನಾಗರಿಕರ ಸಬಲೀಕರಣದ ತಳಹದಿಯ ಮೇಲೆ ನಿಂತಿದೆ. ಮಾದಕವಸ್ತು ಮುಕ್ತ ಭಾರತವು ಕೇವಲ ಒಂದು ಸಾಮಾಜಿಕ ಆಕಾಂಕ್ಷೆಯಲ್ಲ; ಇದೊಂದು ರಾಷ್ಟ್ರೀಯ ಅಗತ್ಯವಾಗಿದ್ದು, ಅದಕ್ಕಾಗಿ ಪ್ರತಿಯೊಬ್ಬ ಯುವ ನಾಗರಿಕನ ಸಕ್ರಿಯ ಭಾಗವಹಿಸುವಿಕೆ ಅತ್ಯಗತ್ಯವಾಗಿದೆ. 'ವಿಕಸಿತ ಭಾರತಕ್ಕಾಗಿ ನಶ ಮಕ್ತ ಯುವಜನತೆ' ಎಂಬ ಸಂದೇಶದೊಂದಿಗೆ, ಈ ಕಾರ್ಯಕ್ರಮವು ಜಾಗೃತಿಯನ್ನು ಕಾರ್ಯರೂಪಕ್ಕೆ ತರುವುದು, ಸಂವಾದವನ್ನು ದೃಢಸಂಕಲ್ಪವನ್ನಾಗಿ ಮಾಡುವುದು ಮತ್ತು ಯುವಜನರ ಭಾಗವಹಿಸುವಿಕೆಯನ್ನು ಬದಲಾವಣೆಗಾಗಿನ ರಾಷ್ಟ್ರವ್ಯಾಪಿ ಆಂದೋಲನವನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ.
ಈ ಸಂವಿಧಾನ ದಿನದಂದು, 'ಮೈ ಭಾರತ್' ಭಾರತದ ಯುವಜನರನ್ನು ಒಗ್ಗೂಡಿ ಸಂವಿಧಾನದ ಪೀಠಿಕೆಯನ್ನು ಒಗ್ಗೂಡಿ ಫಠಿಸಲು, ಸಂವಿಧಾನದಲ್ಲಿ ಅಡಕವಾಗಿರುವ ಆದರ್ಶಗಳಿಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಲು ಮತ್ತು ಆರೋಗ್ಯಕರ, ಬಲಶಾಲಿ ಹಾಗೂ ಮಾದಕವಸ್ತು ಮುಕ್ತ ಭಾರತಕ್ಕಾಗಿ ಧ್ವನಿ ಎತ್ತಲು ಆಹ್ವಾನಿಸುತ್ತದೆ. 'ವಿಕಸಿತ ಭಾರತ @ 2047'ರ ನಿಟ್ಟಿನಲ್ಲಿ ಪಯಣವು ನಮ್ಮ ಯುವಜನರ ಆಕಾಂಕ್ಷೆಗಳಿಂದಷ್ಟೇ ಅಲ್ಲದೆ, ಅವರು ಇಂದು ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ಕೈಗೊಳ್ಳುವ ಕ್ರಮಗಳಿಂದಲೂ ರೂಪಿತವಾಗುತ್ತದೆ.
ನೋಂದಣಿ, ಕಾರ್ಯಕ್ರಮದ ಇತ್ತೀಚಿನ ಮಾಹಿತಿ ಮತ್ತು 'ಮೈ ಭಾರತ್' ಉಪಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶಗಳಿಗಾಗಿ www.mybharat.gov.in. ಜಾಲತಾಣಕ್ಕೆ ಭೇಟಿ ನೀಡಿ.
*****