ಪ್ರಕಟಣಾ ದಿನಾಂಕ:
20 NOV 2026 6:50PM by PIB Bengaluru
ಕರ್ನಾಟಕದ ನಾಗಮಂಗಲದಲ್ಲಿರುವ ಕೇಂದ್ರೀಯ ಸಂಶೋಧನಾ ಸಂಸ್ಥೆ (ಸಿ.ಆರ್.ಐ.ವೈ.ಎನ್) ಯಲ್ಲಿ ನವೆಂಬರ್ 18, 2026 ರಂದು ನಡೆದ ರಾಷ್ಟ್ರೀಯ ಮಟ್ಟದ 9ನೇ ಪ್ರಕೃತಿ ಚಿಕಿತ್ಸಾ ದಿನ ಆಚರಣೆಯನ್ನು ಪರಿಸರ ಸುಸ್ಥಿರತೆ ಮತ್ತು ಪರಿಸರ ಸ್ನೇಹಿ ಅಭ್ಯಾಸಗಳ ಮೇಲೆ ಬಲವಾದ ಒತ್ತು ನೀಡಿ, 'ಪ್ರಕೃತಿ ಚಿಕಿತ್ಸಾ, ಸ್ವಸ್ಥ ಭಾರತ' ಎಂಬ ಪರಿಕಲ್ಪನೆಗೆ ಅನುಗುಣವಾಗಿ ಆಯೋಜಿಸಲಾಯಿತು.
ಕಾರ್ಯಕ್ರಮವು ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತ ವಿಧಾನವನ್ನು ಅಳವಡಿಸಿಕೊಂಡಿತು. ಬ್ಯಾನರ್ ಗಳ ಕನಿಷ್ಠ ಬಳಕೆ ಮತ್ತು ಅಲಂಕಾರಗಳು, ಕಾರ್ಯಕ್ರಮದ ಸ್ಮರಣಿಕೆಗಳು ಅಥವಾ ಭಾಗವಹಿಸುವವರ ಕಿಟ್ ಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಲಿಲ್ಲ. ಮರುಬಳಕೆ ಮಾಡಬಹುದಾದ ಉಕ್ಕಿನ ತಟ್ಟೆಗಳು ಮತ್ತು ಬಾಳೆ ಎಲೆಗಳಲ್ಲಿ ಆಹಾರವನ್ನು ಬಡಿಸಲಾಗುತ್ತಿತ್ತು, ಬಳಸಿ ಬಿಸಾಡಬಹುದಾದ ಪ್ಲಾಸ್ಟಿಕ್ ಅನ್ನು ತಪ್ಪಿಸಿ ಸಾಂಪ್ರದಾಯಿಕ, ಪರಿಸರ ಪೂರಕ ಜವಾಬ್ದಾರಿಯುತ ಅಭ್ಯಾಸಗಳನ್ನು ಉತ್ತೇಜಿಸಲಾಯಿತು.
ತ್ಯಾಜ್ಯವನ್ನು ಕಡಿಮೆ ಮಾಡಲು ಮತ್ತು ಮರುಬಳಕೆ ಮಾಡಬಹುದಾದ ಮತ್ತು ನೈಸರ್ಗಿಕ ಪರ್ಯಾಯಗಳ ಬಳಕೆಯನ್ನು ಪ್ರೋತ್ಸಾಹಿಸಲು ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಲಾಗಿದೆ. ಅನಗತ್ಯ ಕಾರ್ಯಕ್ರಮ ಸಾಮಗ್ರಿಗಳನ್ನು ಕಡಿಮೆ ಮಾಡುವ ಮೂಲಕ ಮತ್ತು ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ತಪ್ಪಿಸುವ ಮೂಲಕ, ಆಚರಣೆಯು ತಮ್ಮ ಪರಿಸರ ಪೂರಕ ಹೆಜ್ಜೆಗುರುತನ್ನು ಗಮನದಲ್ಲಿಟ್ಟುಕೊಂಡು ದೊಡ್ಡ ಪ್ರಮಾಣದ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳನ್ನು ಹೇಗೆ ನಡೆಸಬಹುದು ಎಂಬುದನ್ನು ಈ ಕಾರ್ಯಕ್ರಮವು ಪ್ರದರ್ಶಿಸಿತು.
ಈ ಕ್ರಮ ಹಾಗೂ ಉಪಕ್ರಮಗಳ ಮೂಲಕ, ಕೇಂದ್ರ ಆಯುಷ್ ಸಚಿವಾಲಯವು ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಆಚರಣೆಗಳಲ್ಲಿ ಸುಸ್ಥಿರ ಅಭ್ಯಾಸಗಳನ್ನು ಸೇರಿಸುವ ಮಹತ್ವವನ್ನು ಪುನರುಚ್ಚರಿಸಿತು, ಆರೋಗ್ಯಕರ ಮತ್ತು ಹೆಚ್ಚು ಸುಸ್ಥಿರ ಭಾರತವನ್ನು ಉತ್ತೇಜಿಸುವಲ್ಲಿ ಪರಿಸರ ಜವಾಬ್ದಾರಿಯು ಅವಿಭಾಜ್ಯ ಅಂಗವಾಗಿದೆ ಎಂಬುದನ್ನು ಪ್ರದರ್ಶಿಸಿತು.
*****