ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರೈತರ ಸಮೃದ್ಧಿ ಹೆಚ್ಚಳಕ್ಕೆ ಮತ್ತು ಗ್ರಾಮೀಣ ಭಾರತದ ಬಲವರ್ಧನೆಗೆ ಕೈಗೊಂಡ ಪರಿವರ್ತನಾತ್ಮಕ ಉಪಕ್ರಮಗಳ ಕುರಿತ ಲೇಖನವೊಂದನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 20 NOV 2026 1:37PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ಲೇಖನವೊಂದನ್ನು ಹಂಚಿಕೊಂಡಿದ್ದಾರೆ. ಕಳೆದ 12 ವರ್ಷಗಳಲ್ಲಿ, ಸ್ಥಳೀಯವಾಗಿ ತಯಾರಿಸಲಾದ ಲಸಿಕೆಗಳು, ಜಾನುವಾರುಗಳು ಮತ್ತು ಕೋಳಿಗಳನ್ನು ಸಾಂಕ್ರಾಮಿಕ ರೋಗಗಳಿಂದ ರಕ್ಷಿಸುವಲ್ಲಿ ಹೇಗೆ ನಿರ್ಣಾಯಕ ಪಾತ್ರ ವಹಿಸುತ್ತಿವೆ ಎಂಬುದನ್ನು ಈ ಲೇಖನ ವಿವರಿಸಿದೆ. ಪ್ರಾಣಿಗಳ ಆರೋಗ್ಯ ಕಾಪಾಡಲು, ರೋಗ ಸಂಬಂಧಿತ ನಷ್ಟ ತಗ್ಗಿಸಲು, ರೈತರ ಆದಾಯ ಹೆಚ್ಚಿಸಲು ಮತ್ತು ಕೃಷಿ ಸಮುದಾಯಗಳ ಒಟ್ಟಾರೆ ಜೀವನಮಟ್ಟವನ್ನು ಸುಧಾರಿಸಲು ಈ ಪ್ರಯತ್ನಗಳು ಸಹಾಯಕವಾಗಿವೆ.

ಪಶು ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿ ಭಾರತದ ಬೆಳೆಯುತ್ತಿರುವ ಸಾಮರ್ಥ್ಯ ಹಾಗೂ ಸುಸ್ಥಿರ ಮತ್ತು ಸ್ವಾವಲಂಬಿ ಕೃಷಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿನ ಭಾರತದ ಬದ್ಧತೆಯನ್ನು ಸ್ವದೇಶಿ ಲಸಿಕೆಗಳ ಅಭಿವೃದ್ಧಿಯು ಪ್ರತಿಬಿಂಬಿಸಿದೆ ಎಂದು ಶ್ರೀ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಶ್ರೀ ಮೋದಿ ಅವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

पिछले 12 वर्षों में किसान भाई-बहनों की समृद्धि और ग्रामीण भारत को सशक्त बनाने की दिशा में कई ऐतिहासिक कदम उठाए गए हैं।

केंद्रीय कृषि एवं किसान कल्याण मंत्री @ChouhanShivraj जी ने अपने इस आलेख में विस्तार से बताया है कि कैसे स्वदेशी टीकों के विकसित होने से पशु-पक्षियों को संक्रामक रोगों से सुरक्षित रखने में मदद मिल रही है। इससे न केवल किसानों की आय बढ़ी है, बल्कि उनका जीवन भी बेहतर और आसान हुआ है।

 

*****


(ಪ್ರಕಟಣೆ ಐ.ಡಿ.: 2338997) ವಿಸಿಟರ್ ಕೌಂಟರ್ : 2
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati , Tamil , Malayalam