ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
azadi ka amrit mahotsav

ವಾಹನದ ವಯಸ್ಸು ಮತ್ತು ಹೊರಸೂಸುವಿಕೆ ಮಾನದಂಡಗಳ  ಆಧಾರದ ಮೇಲೆ 'ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ'ಗಳ  ಸಿಂಧುತ್ವ ಅವಧಿಯನ್ನು ಪರಿಷ್ಕರಿಸಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 

ಪ್ರಕಟಣಾ ದಿನಾಂಕ: 19 NOV 2026 4:12PM by PIB Bengaluru

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (ಎಂ.ಒ.ಆರ್.ಟಿ.ಹೆಚ್.), ನಿಯಮ 115ರ ಉಪ-ನಿಯಮ (7)ಕ್ಕೆ ತಿದ್ದುಪಡಿಯನ್ನು ಪ್ರಸ್ತಾಪಿಸಿದೆ. ವಾಹನಗಳ ಹೊರಸೂಸುವಿಕೆ ಪರೀಕ್ಷೆಯ ಆವರ್ತನವನ್ನು   ವಾಹನಗಳ ವಯಸ್ಸಿಗೆ ಅನುಗುಣವಾಗಿ ಹೊಂದಿಸುವುದು, ಹೊಸ ಮತ್ತು ಕಡಿಮೆ ಮಾಲಿನ್ಯ ಉಂಟುಮಾಡುವ ವಾಹನಗಳ ಮಾಲೀಕರ ಮೇಲಿನ ನಿಯಮ ಪಾಲನೆಯ ಹೊರೆಯನ್ನು ಕಡಿಮೆ ಮಾಡುವುದು, ಹಾಗೂ ವಾಹನಗಳ ಹೊರಸೂಸುವಿಕೆಯ ಮೇಲೆ ನಿರಂತರ ನಿಗಾ ಇಡುವುದರ ಜೊತೆಗೆ, ಪರಿಣಾಮಕಾರಿ 'ಮಾಲಿನ್ಯ ನಿಯಂತ್ರಣ ಪ್ರಮಾಣೀಕರಣ' (ಪಿಯುಸಿ ಸರ್ಟಿಫಿಕೇಷನ್) ವ್ಯವಸ್ಥೆಯನ್ನು ಉತ್ತೇಜಿಸುವುದು ಈ ತಿದ್ದುಪಡಿಯ ಉದ್ದೇಶವಾಗಿದೆ.

ಈ ತಿದ್ದುಪಡಿಯು ಈ ಕೆಳಗಿನ ಅಂಶಗಳನ್ನು ಒಳಗೊಂಡಿದೆ:

1.    ಪರಿಷ್ಕೃತ ಸಿಂಧುತ್ವ ಅವಧಿಗಳನ್ನು ಈ ಕೆಳಗಿನಂತೆ ಪ್ರಸ್ತಾಪಿಸಲಾಗಿದೆ:

  • ಬಿಎಸ್ -I, ಬಿಎಸ್ -II ಮತ್ತು ಬಿಎಸ್ -III ವಾಹನಗಳು: 3 ತಿಂಗಳುಗಳು.
  • ಬಿಎಸ್ -IV ವಾಹನಗಳು: 6 ತಿಂಗಳುಗಳು.
  • ಬಿಎಸ್ -VI ಸಾರಿಗೆಯೇತರ (ನಾನ್ - ಟ್ರಾನ್ಸ್ಫೋರ್ಟ್) ವಾಹನಗಳು
  • ಮೊದಲ ನೋಂದಣಿ ದಿನಾಂಕದಿಂದ 6 ವರ್ಷಗಳವರೆಗೆ – 3 ವರ್ಷಗಳು;
  • 6 ವರ್ಷಕ್ಕಿಂತ ಹೆಚ್ಚು ಆದರೆ 10 ವರ್ಷಗಳವರೆಗೆ – 1 ವರ್ಷ; ಮತ್ತು
  • 10 ವರ್ಷಕ್ಕಿಂತ ಹೆಚ್ಚು – 6 ತಿಂಗಳುಗಳು.
  • ಬಿಎಸ್ -VI ಸಾರಿಗೆ (Transport) ವಾಹನಗಳು:
    • ಮೊದಲ ನೋಂದಣಿ ದಿನಾಂಕದಿಂದ 6 ವರ್ಷಗಳವರೆಗೆ – 2 ವರ್ಷಗಳು;
    • 6 ವರ್ಷಕ್ಕಿಂತ ಹೆಚ್ಚು ಆದರೆ 10 ವರ್ಷಗಳವರೆಗೆ – 1 ವರ್ಷ; ಮತ್ತು
    • 10 ವರ್ಷಕ್ಕಿಂತ ಹೆಚ್ಚು – 6 ತಿಂಗಳುಗಳು.


2. ಈ ನೂತನ ಪರಿವರ್ತನಾ ವ್ಯವಸ್ಥೆಯಡಿ, ಈ ತಿದ್ದುಪಡಿ ಜಾರಿಗೆ ಬರುವ ಮೊದಲು ನೀಡಲಾದ 'ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ'ಗಳಿಗೆ (ಪಿಯುಸಿಸಿ), ತಿದ್ದುಪಡಿ ಜಾರಿಗೆ ಬಂದ ನಂತರದ ಮೊದಲ ನವೀಕರಣ ದಿನಾಂಕದಿಂದ ಪರಿಷ್ಕೃತ ಸಿಂಧುತ್ವ ಅವಧಿಗಳು ಅನ್ವಯಿಸುತ್ತವೆ.

3.  ಪ್ರಸ್ತುತ ಪ್ರಮಾಣಪತ್ರದ ಅವಧಿ ಮುಗಿಯುವ ಹತ್ತು ದಿನಗಳ ಮೊದಲು 'ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ'ಗಳಿಗೆ (ಪಿಯುಸಿಸಿ),  ಅನ್ನು ನವೀಕರಿಸಿದರೆ, ನವೀಕರಿಸಿದ ಪ್ರಮಾಣಪತ್ರವು ಹಳೆಯ ಪ್ರಮಾಣಪತ್ರದ ಅವಧಿ ಮುಗಿದ ದಿನಾಂಕದಿಂದಲೇ ಜಾರಿಗೆ ಬರುತ್ತದೆ ಎಂದು ಹೊಸ ನಿಯಮ ತಿಳಿಸುತ್ತದೆ. ಆದರೆ, ಹಳೆಯ ಪ್ರಮಾಣಪತ್ರದ ಅವಧಿ ಮುಗಿದ ನಂತರ ನವೀಕರಣವನ್ನು ಕೋರಿದರೆ, ನವೀಕರಿಸಿದ ಪ್ರಮಾಣಪತ್ರವು ನವೀಕರಣ ಮಾಡಿದ ದಿನಾಂಕದಿಂದ ಜಾರಿಗೆ ಬರುತ್ತದೆ.

 

*****


(ಪ್ರಕಟಣೆ ಐ.ಡಿ.: 2338518) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: English , Gujarati , Urdu , हिन्दी , Nepali