ರಕ್ಷಣಾ ಸಚಿವಾಲಯ
azadi ka amrit mahotsav

ಏರೋ ಇಂಡಿಯಾ 2027 ಮಾಧ್ಯಮ ನೋಂದಣಿ ಆರಂಭ

ಪ್ರಕಟಣಾ ದಿನಾಂಕ: 19 NOV 2026 3:10PM by PIB Bengaluru

'ಏರೋ ಇಂಡಿಯಾ 2027' ವೈಮಾನಿಕ ಪ್ರದರ್ಶನಕ್ಕಾಗಿ ಮಾಧ್ಯಮ ಪ್ರತಿನಿಧಿಗಳ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಏಷ್ಯಾದ ಅತಿದೊಡ್ಡ ಏರ್ ಶೋ (ವೈಮಾನಿಕ ಪ್ರದರ್ಶನ) ಹಾಗೂ ವಿಶ್ವದ ಪ್ರಮುಖ ಬಾಹ್ಯಾಕಾಶ (ಏರೋಸ್ಪೇಸ್) ಮತ್ತು ರಕ್ಷಣಾ ಪ್ರದರ್ಶನಗಳಲ್ಲಿ ಒಂದಾದ ಇದರ 16ನೇ ಆವೃತ್ತಿಯು, 2027ರ ಫೆಬ್ರವರಿ 8 ರಿಂದ 12 ರವರೆಗೆ ಕರ್ನಾಟಕದ ಬೆಂಗಳೂರಿನ ಯಲಹಂಕದಲ್ಲಿರುವ ವಾಯುಪಡೆ ನಿಲ್ದಾಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ವರದಿ ಮಾಡುವ ಆಸಕ್ತಿ ಹೊಂದಿರುವ ಮಾಧ್ಯಮ ಪ್ರತಿನಿಧಿಗಳು https://aeroindia.gov.in/ ಜಾಲತಾಣದಲ್ಲಿ ನೋಂದಾಯಿಸಿಕೊಳ್ಳಬಹುದು. ನೋಂದಣಿಯು 2027ರ ಜನವರಿ 4 ರಂದು ಮುಕ್ತಾಯಗೊಳ್ಳಲಿದೆ.

ನೋಂದಣಿಗಾಗಿ ಅರ್ಜಿದಾರರು ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು:

  • ಮಾನ್ಯತೆ ಪಡೆದ ಪತ್ರಕರ್ತರಿಗೆ ಪಿಐಬಿ ಅಥವಾ ರಾಜ್ಯ ಸರ್ಕಾರದ ಮಾನ್ಯತಾ ಪತ್ರ (Accreditation card) ಹಾಗೂ ಮಾನ್ಯತೆ ಪಡೆಯದ ಮಾಧ್ಯಮ ಪ್ರತಿನಿಧಿಗಳಿಗೆ ಮಾನ್ಯವಾದ ಮಾಧ್ಯಮ ಗುರುತಿನ ಚೀಟಿ. (ಫೈಲ್ ಗಾತ್ರ 1 MB ಮೀರುವಂತಿಲ್ಲ)
  • ಎಲ್ಲಾ ಮಾಧ್ಯಮ ಪ್ರತಿನಿಧಿಗಳಿಗೆ ಸರ್ಕಾರ ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿ. (ಫೈಲ್ ಗಾತ್ರ 1 MB ಮೀರುವಂತಿಲ್ಲ)
  • ಇತ್ತೀಚಿನ ಸ್ವಯಂ ಭಾವಚಿತ್ರ (ಫೋಟೋ). (ಫೈಲ್ ಗಾತ್ರ 512 KB ಮೀರುವಂತಿಲ್ಲ)
  • ವಿದೇಶಿ ಪತ್ರಕರ್ತರಿಗೆ ಮಾನ್ಯವಾದ 'ಜೆ' ವೀಸಾ. (ಫೈಲ್ ಗಾತ್ರ 1 MB ಮೀರುವಂತಿಲ್ಲ)

ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆಯಿಂದ ಆಯೋಜಿಸಲ್ಪಡುತ್ತಿರುವ ಏರೋ ಇಂಡಿಯಾ 2027 ಪ್ರಮುಖ ಬಾಹ್ಯಾಕಾಶ ಮತ್ತು ರಕ್ಷಣಾ ಕಂಪನಿಗಳು, ನೀತಿ ನಿರೂಪಕರು, ತಂತ್ರಜ್ಞಾನ ತಜ್ಞರು, ನಾವೀನ್ಯಕಾರರು, ಉದ್ಯಮ ಪ್ರತಿನಿಧಿಗಳು ಮತ್ತು ರಕ್ಷಣಾ ಸಿಬ್ಬಂದಿಯನ್ನು ಒಗ್ಗೂಡಿಸುವ ಪ್ರಮುಖ ಜಾಗತಿಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಐದು ದಿನಗಳ ಈ ವೈಮಾನಿಕ ಮೇಳವು ವ್ಯಾಪಾರ ಮತ್ತು ಕಾರ್ಯತಂತ್ರದ ಒಳಗೊಳ್ಳುವಿಕೆಗಳ ಸರಣಿಯ ಜೊತೆಗೆ ವ್ಯಾಪಕ ಪ್ರದರ್ಶನ ಒಳಗೊಂಡಿರುತ್ತದೆ, ಉದ್ಯಮ ಸಹಯೋಗಗಳನ್ನು ಸುಗಮಗೊಳಿಸುತ್ತದೆ, ಸರ್ಕಾರ-ಉದ್ಯಮ ಸಂವಹನಗಳು, ತಂತ್ರಜ್ಞಾನ ಪ್ರದರ್ಶನಗಳು ಮತ್ತು ಜ್ಞಾನ ವಿನಿಮಯಕ್ಕೆ ವೇದಿಕೆ ಒದಗಿಸಲಿದೆ. ಭಾರತೀಯ ವಾಯುಪಡೆ ಮತ್ತು ಭಾಗವಹಿಸುವ ಅಂತಾರಾಷ್ಟ್ರೀಯ ವೈಮಾನಿಕ ತಂಡಗಳಿಂದ ಅದ್ಭುತವಾದ ವೈಮಾನಿಕ ಪ್ರದರ್ಶನಗಳು ಪ್ರಮುಖ ಪ್ರಮುಖ ಅಂಶವಾಗಿರುತ್ತವೆ, ಇದು ಅತ್ಯಾಧುನಿಕ ವಾಯುಯಾನ ತಂತ್ರಜ್ಞಾನಗಳು ಮತ್ತು ಸಾಮರ್ಥ್ಯಗಳನ್ನು ಪ್ರದರ್ಶನದ ಅತಿ ದೊಡ್ಡ ವೇದಿಕೆಯಾಗಿದೆ.

16 ನೇ ಏರೋ ಇಂಡಿಯಾ ಆತ್ಮನಿರ್ಭರ ಭಾರತ ಕನಸು ಸಾಕಾರಕ್ಕೆ ಭಾರತದ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಜಾಗತಿಕ ಬಾಹ್ಯಾಕಾಶ ಮತ್ತು ರಕ್ಷಣಾ ಪೂರೈಕೆ ಸರಣಿಯಲ್ಲಿ ವಿಶ್ವಾಸಾರ್ಹ ಪಾಲುದಾರನಾಗಿ ತನ್ನ ಸ್ಥಾನವನ್ನು ಬಲಪಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಪ್ರದರ್ಶನವು ಎಂಎಸ್ ಎಂಇಗಳು ಮತ್ತು ನವೋದ್ಯಮಗಳು ಸೇರಿ ಭಾರತೀಯ ರಕ್ಷಣಾ ಕೈಗಾರಿಕೆಗಳಿಗೆ ತಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸಲು, ಹೊಸ ವ್ಯಾಪಾರ ಅವಕಾಶಗಳನ್ನು ಅನ್ವೇಷಿಸಲು ಮತ್ತು ಪಾಲುದಾರಿಕೆಗಳನ್ನು ರೂಪಿಸಲು, ಹೂಡಿಕೆಗಳು, ರಫ್ತುಗಳು ಮತ್ತು ತಂತ್ರಜ್ಞಾನ ಸಹಯೋಗಗಳನ್ನು ಬೆಳೆಸಲು ಪ್ರಮುಖ ವೇದಿಕೆ ಒದಗಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2338467) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Nepali , Gujarati