ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಫಿಲಿಪ್ಪೈನ್ಸ್‌ ನ ಮನಿಲಾದಲ್ಲಿರುವ ಖಾಲ್ಸಾ ದಿವಾನ್ ಗುರುದ್ವಾರಕ್ಕೆ ಪ್ರಧಾನಮಂತ್ರಿ ಭೇಟಿ

ಪ್ರಕಟಣಾ ದಿನಾಂಕ: 17 NOV 2026 12:01PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮನಿಲಾದ ಖಾಲ್ಸಾ ದಿವಾನ್ ಗುರುದ್ವಾರಕ್ಕೆ ಭೇಟಿ ನೀಡಿದರು ಮತ್ತು 'ಪಂಚ್ ಪ್ಯಾರೆ' ಯವರ (ಸಾಂಪ್ರದಾಯಿಕ ವಿಧಿ ವಿಧಾನ ಕೈಗೊಳ್ಳುವ ಐವರು) ಸಮ್ಮುಖದಲ್ಲಿ, ಗುರುದ್ವಾರದ ಪುನರಾಭಿವೃದ್ಧಿಗಾಗಿ ಶಿಲಾನ್ಯಾಸ ಸಮಾರಂಭದ ನೇತೃತ್ವ ವಹಿಸಿದರು. ಈ ಸಂದರ್ಭದಲ್ಲಿ ಸೆನೆಟರ್ ಮಾನ್ಯ ಫ್ರಾನ್ಸಿಸ್ ಜೋಸೆಫ್ ಎಸ್ಕುಡೆರೊ, ಮನಿಲಾ ನಗರದ ಮೇಯರ್ ಮಾನ್ಯ ಫ್ರಾನ್ಸಿಸ್ಕೊ ಇಸ್ಕೊ ಮೊರೆನೊ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಮೂಲತಃ 1901ರಲ್ಲಿ ಸ್ಥಾಪನೆಗೊಂಡು, 1903ರಲ್ಲಿ ಔಪಚಾರಿಕವಾಗಿ ಸಂಘಟಿತವಾದ ಈ ಸಂಸ್ಥೆಯು, 1924ರಲ್ಲಿ 'ಖಾಲ್ಸಾ ದಿವಾನ್' ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿತು. ಫಿಲಿಪ್ಪೈನ್ಸ್‌ ನಲ್ಲಿರುವ ಅತ್ಯಂತ ಹಳೆಯ ಗುರುದ್ವಾರ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಈ 'ಖಾಲ್ಸಾ ದಿವಾನ್ ಗುರುದ್ವಾರ', ಮನಿಲಾದಲ್ಲಿರುವ ಸಿಖ್ ಹಾಗೂ ಇತರ ಸಮುದಾಯಗಳಿಗಾಗಿ ತನ್ನ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಲೋಕೋಪಕಾರಿ ಚಟುವಟಿಕೆಗಳ ಮೂಲಕ ಪ್ರಮುಖ ಪಾತ್ರ ವಹಿಸುತ್ತಲಿದೆ.

ಖಾಲ್ಸಾ ದಿವಾನ್ ಗುರುದ್ವಾರವು ಭಾರತೀಯ-ಸಿಖ್ ಸಮುದಾಯ ಮತ್ತು ಫಿಲಿಪ್ಪೈನ್ ಸಮಾಜದ ನಡುವೆ ಪ್ರಮುಖ ಕೊಂಡಿಯಾಗಿದೆ.

 

*****


(ಪ್ರಕಟಣೆ ಐ.ಡಿ.: 2337318) ವಿಸಿಟರ್ ಕೌಂಟರ್ : 31