ಪ್ರಕಟಣಾ ದಿನಾಂಕ:
16 NOV 2026 3:55PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಸ್ರೋ ಮಾಜಿ ಅಧ್ಯಕ್ಷರಾದ ಶ್ರೀ ಸೋಮನಾಥ ಶ್ರೀಧರ ಪಣಿಕ್ಕರ್ ಅವರು ಬರೆದಿರುವ ಲೇಖನವನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಯವರ ನಾಯಕತ್ವ ಮತ್ತು ಸ್ಪಷ್ಟ ರಾಷ್ಟ್ರೀಯ ಮುನ್ನೋಟವು, ಭಾರತದ ಬಾಹ್ಯಾಕಾಶ ಆಕಾಂಕ್ಷೆಗಳನ್ನು ಕಾರ್ಯಸಾಧ್ಯವಾಗಿಸಲು ಹೇಗೆ ಪೂರಕವಾಗಿವೆ ಎಂಬುದನ್ನು ಈ ಲೇಖನ ವಿವರಿಸುತ್ತದೆ. ಬಾಹ್ಯಾಕಾಶ ವಲಯವನ್ನು ಖಾಸಗಿ ಸಂಸ್ಥೆಗಳಿಗೆ ಮುಕ್ತಗೊಳಿಸುವಲ್ಲಿ 'ಭಾರತೀಯ ಬಾಹ್ಯಾಕಾಶ ನೀತಿ 2023' ರ ಮಹತ್ವವನ್ನು ತಿಳಿಸುತ್ತಾ, ಮಾನವ ಸಹಿತ ಬಾಹ್ಯಾಕಾಶ ಯಾನ, 'ಭಾರತೀಯ ಅಂತರಿಕ್ಷ ನಿಲ್ದಾಣ' ಮತ್ತು ಚಂದ್ರನ ಕುರಿತಾದ ಇನ್ನಷ್ಟು ಆಳವಾದ ಅನ್ವೇಷಣೆಗಳು ಸೇರಿದಂತೆ ಭಾರತದ ಮುಂದಿನ ಬಾಹ್ಯಾಕಾಶ ಕಾರ್ಯಾಚರಣೆಗಳ ಮಾರ್ಗಸೂಚಿಯ ಬಗ್ಗೆಯೂ ಲೇಖನ ಚರ್ಚಿಸಿದೆ.
ಪ್ರಧಾನಮಂತ್ರಿಗಳ ಕಾರ್ಯಾಲಯದ ಎಕ್ಸ್ ಪೋಸ್ಟ್ ಹೀಗಿದೆ:
“ಚಂದ್ರನತ್ತ ಬೃಹತ್ ಜಿಗಿತ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಭವಿಷ್ಯಕ್ಕಾಗಿ ಇನ್ನೂ ದೊಡ್ಡದಾದ ಮುನ್ನೋಟ!
ಪ್ರಧಾನಮಂತ್ರಿ @narendramodi ಅವರ ನಾಯಕತ್ವ ಮತ್ತು ಸ್ಪಷ್ಟವಾದ ರಾಷ್ಟ್ರೀಯ ಮುನ್ನೋಟವು, ಭಾರತದ ಬಾಹ್ಯಾಕಾಶ ಆಕಾಂಕ್ಷೆಗಳನ್ನು ನನಸಾಗಿಸಲು ಹೇಗೆ ಪೂರಕವಾಗಿವೆ ಎಂಬ ಬಗ್ಗೆ @isro ದ ಮಾಜಿ ಅಧ್ಯಕ್ಷರಾದ ಸೋಮನಾಥ್ ಶ್ರೀಧರ ಪಣಿಕ್ಕರ್ ಅವರು ಬರೆದಿದ್ದಾರೆ.
ಖಾಸಗಿ ವಲಯದವರಿಗೆ ಬಾಹ್ಯಾಕಾಶ ವಲಯವನ್ನು ಮುಕ್ತಗೊಳಿಸುವಲ್ಲಿ ಭಾರತೀಯ ಬಾಹ್ಯಾಕಾಶ ನೀತಿ 2023 ರ ಮಹತ್ವವನ್ನು ಅವರು ವಿವರಿಸಿದ್ದಾರೆ ಮತ್ತು ಮಾನವ ಬಾಹ್ಯಾಕಾಶಯಾನ, ಭಾರತೀಯ ಅಂತರಿಕ್ಷ ನಿಲ್ದಾಣ, ಆಳವಾದ ಚಂದ್ರನ ಪರಿಶೋಧನೆ ಸೇರಿದಂತೆ ಭಾರತದ ಭವಿಷ್ಯದ ಕಾರ್ಯಾಚರಣೆಗಳ ಮಾರ್ಗಸೂಚಿಯನ್ನೂ ಅವರು ಚರ್ಚಿಸಿದ್ದಾರೆ.
ನೀವೂ ಓದಿ!
timesofindia.indiatimes.com/science/from-c…”
*****