ಔಷಧೀಯ ಇಲಾಖೆ
azadi ka amrit mahotsav

1,364 ಕ್ಯಾನ್ಸರ್ ನಿಗ್ರಹ ಔಷಧಗಳ ಪರಿಷ್ಕೃತ ಎಂಆರ್‌ಪಿ ಇಂದಿನಿಂದ ಜಾರಿಗೆ ಬಂದಿದೆ


ಗ್ರಾಹಕರಿಗೆ ವಾರ್ಷಿಕವಾಗಿ 3,540.38 ಕೋಟಿ ರೂ. ಉಳಿತಾಯ

ಪ್ರಕಟಣಾ ದಿನಾಂಕ: 09 NOV 2026 11:51AM by PIB Bengaluru

ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಔಷಧೀಯ ಇಲಾಖೆಯ ಅಧೀನದಲ್ಲಿರುವ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (ಎನ್‌ಪಿಪಿಎ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ (ಡಿಜಿಎಚ್ಎಸ್) ರಚಿಸಿದ ತಜ್ಞರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ 137 ಕ್ಯಾನ್ಸರ್ ನಿಗ್ರಹ ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ) ಮೇಲೆ ವ್ಯಾಪಾರ ಲಾಭಾಂಶವನ್ನು 17ನೇ ಅಕ್ಟೋಬರ್, 2026 ರಂದು ಮಿತಿಗೊಳಿಸಿದೆ. ಈ ಔಷಧಗಳ ಪರಿಷ್ಕೃತ ‘ಎಂಆರ್‌ಪಿ’ ಇಂದಿನಿಂದ ಅಂದರೆ, 9ನೇ ನವೆಂಬರ್, 2026 ರಿಂದ ಜಾರಿಗೆ ಬರುತ್ತವೆ.

ನವೆಂಬರ್ 8, 2026 ರಂತೆ, 85 ಔಷಧೀಯ ಕಂಪನಿಗಳು 121 ಔಷಧಗಳನ್ನು ಒಳಗೊಂಡಿರುವ 1,364 ಕ್ಯಾನ್ಸರ್ ನಿಗ್ರಹ ಸೂತ್ರೀಕರಣಗಳಿಗೆ ಪರಿಷ್ಕೃತ ಎಂಆರ್‌ಪಿಗಳನ್ನು ವರದಿ ಮಾಡಿವೆ. 679 ಬ್ರ್ಯಾಂಡ್‌ಗಳು ಶೇ.50 ಕ್ಕಿಂತ ಹೆಚ್ಚು ಬೆಲೆ  ಇಳಿಕೆಯನ್ನು ವರದಿ ಮಾಡಿವೆ. ಇದರಿಂದ ‘ಎಂಆರ್‌ಪಿ’ಯಲ್ಲಿ ಅತ್ಯಧಿಕ ಶೇ.96.45ರಷ್ಟು ಇಳಿಕೆಯಾಗಿದೆ.  ಬೆಲೆ ಇಳಿಕೆಯ ಪರಿಣಾಮವಾಗಿ, ಗ್ರಾಹಕರಿಗೆ ಅಂದಾಜು ವಾರ್ಷಿಕ 3,540.38 ಕೋಟಿ ರೂ. ಉಳಿತಾಯ ಆಗಲಿದೆ  ಎಂದು ನಿರೀಕ್ಷಿಸಲಾಗಿದೆ.

ಗ್ರಾಹಕರು ಔಷಧ ಪ್ಯಾಕ್‌ನಲ್ಲಿ ಮುದ್ರಿಸಲಾದ ಪರಿಷ್ಕೃತ ‘ಎಂಆರ್‌ಪಿ’ಯನ್ನು ಪರಿಶೀಲಿಸಬಹುದು ಮತ್ತು ಫಾರ್ಮಾ ಸಾಹಿ ದಾಮ್ ಮೊಬೈಲ್  ತಂತ್ರಾಂಶ ಅಥವಾ ಎನ್‌ಪಿಪಿಎ ವೆಬ್‌ಸೈಟ್ (nppa.gov.in) ಮೂಲಕ ಬೆಲೆಗಳನ್ನು ಪರಿಶೀಲಿಸಬಹುದು. ಯಾವುದೇ ಔಷಧ ಮಾರಾಟಗಾರರು ಅಥವಾ ಆಸ್ಪತ್ರೆಯ ಔಷಧಾಲಯವು ಪರಿಷ್ಕೃತ ಎಂಆರ್‌ಪಿಗಿಂತ ಹೆಚ್ಚು ದರದಲ್ಲಿ ಮಾರಾಟ ಮಾಡುವಂತಿಲ್ಲ. ಹೆಚ್ಚಿನ ದರ ವಿಧಿಸುವ ಅಥವಾ ಇತರ ಯಾವುದೇ ಬೆಲೆಗೆ ಸಂಬಂಧಿಸಿದ ದೂರಿನ ಸಂದರ್ಭದಲ್ಲಿ, ಗ್ರಾಹಕರು ತಮ್ಮ ಕುಂದುಕೊರತೆಯನ್ನು ಫಾರ್ಮಾ ಜನ ಸಮಾಧಾನ್ ಪೋರ್ಟಲ್ ಮೂಲಕ ನೋಂದಾಯಿಸಬಹುದು ಅಥವಾ 1800-111-255 ಸಂಖ್ಯೆಯ ಮೂಲಕ ‘ಎನ್‌ಪಿಪಿಎ’ ಸಹಾಯವಾಣಿಯನ್ನು ಸಂಪರ್ಕಿಸಬಹುದು.

 

*****


(ಪ್ರಕಟಣೆ ಐ.ಡಿ.: 2334327) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: हिन्दी , Gujarati , Malayalam , Assamese , English , Urdu , Marathi , Tamil