ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನಾಗಪುರದಲ್ಲಿ ರೈತರೊಂದಿಗೆ ದೀಪಾವಳಿ ಆಚರಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ನಡೆಗೆ ಪ್ರಧಾನಮಂತ್ರಿ ಶ್ಲಾಘನೆ

ಪ್ರಕಟಣಾ ದಿನಾಂಕ: 08 NOV 2026 10:20AM by PIB Bengaluru

ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್ ಅವರು ನಾಗ್ಪುರದ ನಾರ್ಖೇಡ್‌ ನಲ್ಲಿರುವ ಲೋಹರಿ ಸವಂಗಾ ಗ್ರಾಮದಲ್ಲಿ ರೈತರೊಂದಿಗೆ ದೀಪಾವಳಿ ಆಚರಿಸಿದ ಬಗೆ ಹಾಗೂ ಅರುಣಾಬಾಯಿ ಮತ್ತು ರಂಭಾವು ಬಲ್ಪಾಂಡೆ ಅವರ ನಿವಾಸದಲ್ಲಿ ತಂಗಿದ್ದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.

ಮಹಾರಾಷ್ಟ್ರದ ಎನ್‌ಡಿಎ ಸರ್ಕಾರವು ರೈತರಿಗಾಗಿ ಮತ್ತು ಅವರ ಯೋಗಕ್ಷೇಮ ಖಾತರಿಪಡಿಸಿಕೊಳ್ಳಲು ಸಹಾನುಭೂತಿ ಹೊಂದಿರುವುದನ್ನು ಈ ಹೃದಯಸ್ಪರ್ಶಿ ನಡೆಯು ಸಾರುತ್ತದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:

"ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್ ಅವರು ಲೋಹರಿ ಸವಂಗಾ ಗ್ರಾಮದಲ್ಲಿ (ನಾರ್ಖೇಡ್, ನಾಗ್ಪುರ) ರೈತರೊಂದಿಗೆ ದೀಪಾವಳಿ ಆಚರಿಸಿ, ಅರುಣಾಬಾಯಿ ಮತ್ತು ರಂಭಾವು ಬಾಲ್ಪಾಂಡೆ ಅವರ ನಿವಾಸದಲ್ಲಿ ತಂಗಿದ್ದ ನಡೆಯು ಅತ್ಯಂತ ಹೃದಯಸ್ಪರ್ಶಿಯಾಗಿದೆ. ಇದು ರೈತರಿಗಾಗಿ ಶ್ರಮಿಸುತ್ತಿರುವ ಮತ್ತು ಅವರ ಕಲ್ಯಾಣ ಖಾತರಿಪಡಿಸುತ್ತಿರುವ ಮಹಾರಾಷ್ಟ್ರದ ಎನ್‌ಡಿಎ ಸರ್ಕಾರದ ದಯಾಮಯ ಮನೋಭಾವವನ್ನು ಒತ್ತಿಹೇಳಿದೆ."

महाराष्ट्राचे मुख्यमंत्री श्री देवेंद्र फडणवीस जी यांनी लोहारी सावंगा गावात (नरखेड, नागपूर) शेतकऱ्यांसोबत दिवाळी साजरी केली आणि त्यांनी अरुणाबाई आणि रामभाऊ बालपांडे यांच्या घरी मुक्काम ही केला, ही त्यांची कृती मनाला स्पर्श करणारी आहे. महाराष्ट्रातील एनडीए सरकार शेतकऱ्यांसाठी संवेदनशीलतेने कार्य करत आहे आणि त्यांच्या कल्याणासाठी प्रयत्नशील आहे, हे या कृतीतून अधोरेखित होते.”

 

*****


(ಪ್ರಕಟಣೆ ಐ.ಡಿ.: 2334122) ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Manipuri , Bengali , Gujarati , Tamil , Malayalam