ಪ್ರಕಟಣಾ ದಿನಾಂಕ:
06 NOV 2026 1:50PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಧನ್ತೆರಸ್ ಸಂದರ್ಭದಲ್ಲಿ ಕೇಂದ್ರ ಆಯುಷ್ ರಾಜ್ಯ ಖಾತೆ ಸಚಿವರಾದ ಶ್ರೀ ಪ್ರತಾಪರಾವ್ ಜಾಧವ್ ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ.
ಆಯುರ್ವೇದವು ಆರೋಗ್ಯ ಸಂರಕ್ಷಣೆ ಮತ್ತು ಆರೋಗ್ಯ ರಕ್ಷಣೆಯ ಮುನ್ನೆಚ್ಚರಿಕೆ ಮಹತ್ವವನ್ನು ಹೇಗೆ ಒತ್ತಿಹೇಳುತ್ತದೆ ಎಂಬುದನ್ನು ಲೇಖನದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ. ಇದು ಎಚ್ಚರಿಕೆಯಿಂದ ತಿನ್ನುವುದು, ನಿಯಮಿತ ಯೋಗ, ಸಾಕಷ್ಟು ನಿದ್ರೆ ಮತ್ತು ಸಕಾಲಿಕ ಆರೋಗ್ಯ ತಪಾಸಣೆ ಸೇರಿ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಕುಟುಂಬಗಳನ್ನು ಪ್ರೋತ್ಸಾಹಿಸುತ್ತದೆ.
ಇದು ಪ್ರೀತಿಪಾತ್ರರ ಆರೋಗ್ಯದಲ್ಲಿ ಹೂಡಿಕೆ ಮಾಡುವ ಮತ್ತು ಕುಟುಂಬಗಳಿಗೆ ಆರೋಗ್ಯಕರ ಭವಿಷ್ಯವನ್ನು ನಿರ್ಮಿಸುವ ಮಹತ್ವವನ್ನು ಮತ್ತಷ್ಟು ಒತ್ತಿಹೇಳುತ್ತದೆ.
ಪ್ರಧಾನಮಂತ್ರಿಗಳ ಕಾರ್ಯಾಲಯ ತನ್ನ X ಪೋಸ್ಟ್ ನಲ್ಲಿ ಹೀಗೆ ಹೇಳಿದೆ;
“ಈ ಧನ್ತೆರಸ್, ಉತ್ತಮ ಆರೋಗ್ಯಕ್ಕೆ ಬದ್ಧರಾಗಿರಿ!
ಕೇಂದ್ರ ಆಯುಷ್ ರಾಜ್ಯ ಖಾತೆ ಸಚಿವರಾದ ಶ್ರೀ @mpprataprao ಅವರ ಲೇಖನವು ಆಯುರ್ವೇದವು ಹೇಗೆ ಆರೋಗ್ಯ ಸಂರಕ್ಷಣೆಯನ್ನು ಒತ್ತಿಹೇಳುತ್ತದೆ ಮತ್ತು ಆರೋಗ್ಯ ರಕ್ಷಣೆ ಮುನ್ನಚ್ಚರಿಕೆ ಏಕೆ ಮುಖ್ಯ ಎಂಬುದನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತದೆ. ಅವರು ಎಚ್ಚರಿಕೆಯಿಂದ ತಿನ್ನುವುದು ಮತ್ತು ನಿಯಮಿತ ಯೋಗ, ಸಾಕಷ್ಟು ನಿದ್ರೆ ಮತ್ತು ಸಕಾಲಿಕ ಆರೋಗ್ಯ ತಪಾಸಣೆಯವರೆಗೆ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಕುಟುಂಬಗಳನ್ನು ಪ್ರೋತ್ಸಾಹಿಸಿದ್ದಾರೆ.
ನಮ್ಮ ಪ್ರೀತಿಪಾತ್ರರ ಆರೋಗ್ಯ ಮತ್ತು ನಮ್ಮ ಕುಟುಂಬಗಳಿಗೆ ಆರೋಗ್ಯಕರ ಭವಿಷ್ಯದಂತಹ ಅತ್ಯಂತ ಮುಖ್ಯವಾದ ವಿಷಯದಲ್ಲಿ ಹೂಡಿಕೆ ಮಾಡೋಣ.
*****