ಗ್ರಾಮೀಣಾಭಿವೃದ್ಧಿ ಸಚಿವಾಲಯ
azadi ka amrit mahotsav

ವಿಬಿ -ಜಿ ರಾಮ್ ಜಿ ಅಡಿಯಲ್ಲಿ ಮೇವು ಉತ್ಪಾದನೆ ಹೆಚ್ಚಿಸಲು, ಜಾನುವಾರು ಮೂಲಸೌಕರ್ಯ ಬಲವರ್ಧನೆಗೊಳಿಸಲು ಮತ್ತು ಗ್ರಾಮೀಣ ಜೀವನೋಪಾಯ ಬೆಂಬಲಿಸಲು  ಡಿ ಎ ಎಚ್ ಡಿ ಜತೆ ಕೈಜೋಡಿಸಿದ ಗ್ರಾಮೀಣಾಭಿವೃದ್ಧಿ ಇಲಾಖೆ


ಕೇಂದ್ರ ಸರ್ಕಾರದಿಂದ ಗ್ರಾಮೀಣ ಪ್ರದೇಶಗಳಲ್ಲಿ ಮೇವಿನ ಲಭ್ಯತೆ ಸುಧಾರಿಸಲು ಮತ್ತು ಜಾನುವಾರು ಅಭಿವೃದ್ಧಿ ಉತ್ತೇಜಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಜಂಟಿ ಸಲಹೆ

ಮೇವು ಕೃಷಿ, ಹುಲ್ಲುಗಾವಲು ಅಭಿವೃದ್ಧಿ, ಡೈರಿ ಮೂಲಸೌಕರ್ಯ ಮತ್ತು ಪಶುವೈದ್ಯಕೀಯ ಸೌಲಭ್ಯಗಳಿಗಾಗಿ ಗುರುತಿಸಲಾದ 22 ಕಾಮಗಾರಿ ಕೈಗೊಳ್ಳಲು ಅನುಮತಿ

ಮೇವಿನ ಭದ್ರತೆ, ಜಾನುವಾರು ಅಭಿವೃದ್ಧಿ ಮತ್ತು ಸುಸ್ಥಿರ ಗ್ರಾಮೀಣ ಜೀವನೋಪಾಯ ವೃದ್ಧಿಗೆ ವಿಕಸಿತ ಗ್ರಾಮ ಪಂಚಾಯತ್ ಯೋಜನೆಗಳು

ಪ್ರಕಟಣಾ ದಿನಾಂಕ: 05 NOV 2026 10:22AM by PIB Bengaluru

ಗ್ರಾಮೀಣಾಭಿವೃದ್ಧಿ ಇಲಾಖೆ (ಡಿ ಒ ಆರ್ ಡಿ), ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ (ಡಿ ಎ ಎಚ್ ಡಿ) ವಿಕಸಿತ ಭಾರತ - ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) : ವಿಬಿ–ಜಿ ರಾಮ್ ಜಿ ಕಾಯ್ದೆ 2025 ಅಡಿಯಲ್ಲಿ ಮೇವು ಭದ್ರತೆ, ಹುಲ್ಲುಗಾವಲು ಅಭಿವೃದ್ಧಿ ಮತ್ತು ಜಾನುವಾರು-ಬೆಂಬಲಿತ ಮೂಲಸೌಕರ್ಯ ಬಲಪಡಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಜಂಟಿ ಸಲಹೆಯನ್ನು ನೀಡಿವೆ.

ಮೇವಿನ ಕೊರತೆ ಪರಿಹರಿಸಲು ಈ ಉಪಕ್ರಮವು ಸಮಗ್ರ ಸರ್ಕಾರಿ ವಿಧಾನವನ್ನು ಅಳವಡಿಸಿಕೊಂಡಿದೆ, ಜಾನುವಾರು ಸಂಬಂಧಿತ ಮೂಲಸೌಕರ್ಯ ಬಲಪಡಿಸುವುದು ಮತ್ತು ಗ್ರಾಮೀಣ ಕುಟುಂಬಗಳು, ವಿಶೇಷವಾಗಿ ಸಣ್ಣ ಮತ್ತು ಅತಿಸಣ್ಣ ರೈತರು ಮತ್ತು ಜಾನುವಾರು ಮತ್ತು ಹೈನುಗಾರಿಕೆ ಚಟುವಟಿಕೆ ಅವಲಂಬಿಸಿರುವ ಭೂಹೀನ ಕುಟುಂಬಗಳ ಜೀವನೋಪಾಯ ಬೆಂಬಲಿಸುವುದು ಇದರ ಉದ್ದೇಶವಾಗಿದೆ. ಇದು ಗ್ರಾಮೀಣ ಉದ್ಯೋಗ ಮತ್ತು ಆಸ್ತಿ ಸೃಷ್ಟಿಯನ್ನು ಜಾನುವಾರು ಸಾಕಾಣಿಕೆ ವಲಯದ ಅವಶ್ಯಕತೆಗಳೊಂದಿಗೆ ಸಂಯೋಜಿಸಲು ಪ್ರಯತ್ನಿಸುತ್ತದೆ, ಜತೆಗೆ ಕಾಯಿದೆಯ ನಿಬಂಧನೆಗಳು ಮತ್ತು ಯೋಜನಾ ಚೌಕಟ್ಟಿನ ಪಾಲನೆಯನ್ನು ಖಾತ್ರಿಪಡಿಸುತ್ತದೆ.

2026ರ ಜುಲೈ 1 ರಿಂದ ಜಾರಿಗೆ ಬಂದಿರುವ ವಿಬಿ-ಜಿ ರಾಮ್ ಜಿ ಕಾಯಿದೆಯು ಗ್ರಾಮೀಣ ಕುಟುಂಬಕ್ಕೆ 125 ದಿನಗಳ ವೇತನ ಉದ್ಯೋಗದ ಶಾಸನಬದ್ಧ ಖಾತ್ರಿಯನ್ನು ಒದಗಿಸುತ್ತದೆ ಮತ್ತು ಜೀವನೋಪಾಯ-ಸಂಬಂಧಿತ ಮೂಲಸೌಕರ್ಯ ಮತ್ತು ಪ್ರತಿಕೂಲ ಹವಾಮಾನದಿಂದಾಗುವ ಅನಾಹುತಗಳನ್ನು ತಗ್ಗಿಸುವುದು ಸೇರಿದಂತೆ ನಾಲ್ಕು ವಿಷಯಾಧಾರಿತ ಕ್ಷೇತ್ರಗಳಲ್ಲಿ ಬಾಳಿಕೆ ಬರುವ ಸ್ವತ್ತುಗಳ ಸೃಷ್ಟಿಯ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುತ್ತದೆ. ಈ ಜಂಟಿ ಸಲಹೆಯು, ಮೇವು ಉತ್ಪಾದನೆಗೆ ಉತ್ತೇಜನ, ಸಮುದಾಯ ಹುಲ್ಲುಗಾವಲುಗಳ ಅಭಿವೃದ್ಧಿ ಮತ್ತು ಜಾನುವಾರು-ಬೆಂಬಲಿತ ಮೂಲಸೌಕರ್ಯ ಬಲವರ್ಧನೆ ಚೌಕಟ್ಟನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತದೆ.

ಮೇವು ಮತ್ತು ಜಾನುವಾರು ಸಂಬಂಧಿತ ಮೂಲಸೌಕರ್ಯಕ್ಕಾಗಿ ಗುರುತಿಸಿ ಅನುಮತಿ ನೀಡಿರುವ  22 ಕಾಮಗಾರಿಗಳು

ಈ ಜಂಟಿ ಸಲಹೆಯು ವಿಬಿ–ಜಿ ರಾಮ್ ಜಿ ಚೌಕಟ್ಟಿನ ಅಡಿಯಲ್ಲಿ ಅನುಮತಿಸಲಾದ 375 ಕೆಲಸಗಳ ಪಟ್ಟಿಯಿಂದ 22 ಸಂಬಂಧಿತ ಕಾಮಗಾರಿಗಳನ್ನು  ಗುರುತಿಸುತ್ತದೆ. ಅವು ಮೇವು ಕೃಷಿ ಮತ್ತು ಸಂಗ್ರಹಣೆ, ಹುಲ್ಲುಗಾವಲು ಅಭಿವೃದ್ಧಿ, ಜಾನುವಾರುಗಳಿಗೆ ಆಶ್ರಯ ಕಲ್ಪಿಸುವುದು, ಡೈರಿ ಮೂಲಸೌಕರ್ಯ ಮತ್ತು ಪಶುವೈದ್ಯಕೀಯ ಆರೋಗ್ಯ ಸೌಲಭ್ಯಗಳಿಗೆ ಸಂಬಂಧಿಸಿದ ಮಧ್ಯಸ್ಥಿಕೆಗಳನ್ನು ಒಳಗೊಂಡಿವೆ.

ಪ್ರಮುಖ ಮಧ್ಯಸ್ಥಿಕೆಗಳು ಇವುಗಳನ್ನು ಒಳಗೊಂಡಿವೆ:

  • ವೈಯಕ್ತಿಕ ಮನೆಗಳು ಮತ್ತು ಸಮುದಾಯಗಳಿಗೆ ಮೇವು ಕೃಷಿ.
  • ಸಮುದಾಯ ಮೇವು ಸಂಪನ್ಮೂಲಗಳು, ಹುಲ್ಲುಗಾವಲುಗಳು, ಮೇಯುವ ಭೂಮಿಗಳು ಮತ್ತು ಅರಣ್ಯ ಹುಲ್ಲುಗಾವಲುಗಳ ಅಭಿವೃದ್ಧಿ.
  • ಮೇವು ಸಂಗ್ರಹಣಾ ಸೌಲಭ್ಯಗಳು, ಮೇವು ಬ್ಯಾಂಕುಗಳು, ಸೈಲೇಜ್ ಘಟಕಗಳು ಮತ್ತು ಇತರ ಅರ್ಹ ಮೇವು-ಸಂಬಂಧಿತ ಸ್ವತ್ತುಗಳು.
  • ಅನುಮೋದಿತ ಪಟ್ಟಿಯಲ್ಲಿ ನಿರ್ದಿಷ್ಟಪಡಿಸಿದಂತೆ ಜಾನುವಾರುಗಳು, ಮೇಕೆ, ಹಂದಿ ಮತ್ತು ಕೋಳಿ ಗಳಿಗೆ ಸೂರು ಒದಗಿಸುವುದು ಸೇರಿದಂತೆ ಅರ್ಹ ಫಲಾನುಭವಿಗಳು ಮತ್ತು ಸಮುದಾಯಗಳಿಗೆ ಜಾನುವಾರು ಆಶ್ರಯಗಳ ನಿರ್ಮಾಣ, ದುರಸ್ತಿ ಮತ್ತು ನಿರ್ವಹಣೆ. 
  • ಸಮುದಾಯ ಹಾಲು ಸಂಗ್ರಹಣಾ ಕೇಂದ್ರಗಳ ನಿರ್ಮಾಣ ಮತ್ತು ದುರಸ್ತಿ.
  • ಸಮುದಾಯ ಪಶುವೈದ್ಯಕೀಯ ಆರೋಗ್ಯ ಕೇಂದ್ರಗಳ ನಿರ್ಮಾಣ ಮತ್ತು ದುರಸ್ತಿ.
  • ಸಮುದಾಯ ಜಾನುವಾರು ಮತ್ತು ಪ್ರಾಣಿಗಳ ತೊಟ್ಟಿಗಳ ನಿರ್ಮಾಣ.
  • ಅನುಮೋದಿತ ಪಟ್ಟಿಯಲ್ಲಿ ಸೇರಿಸಲಾದ ವೈಯಕ್ತಿಕ ಫಲಾನುಭವಿಗಳಿಗೆ ಅಜೋಲ್ಲಾ ಟ್ಯಾಂಕ್‌ಗಳ ನಿರ್ಮಾಣ.

ಈ ಮಧ್ಯಸ್ಥಿಕೆಗಳು ಮೇವಿನ ಲಭ್ಯತೆ ಸುಧಾರಿಸಲು, ಜಾನುವಾರುಗಳಿಗೆ ಆಧಾರವಾಗಿರುವ ಮೂಲಸೌಕರ್ಯ ಬಲವರ್ಧನೆಗೊಳಿಸುವುದು ಮತ್ತು ಹೆಚ್ಚು ಸುಸ್ಥಿರ ಜಾನುವಾರು ಆಧಾರಿತ ಜೀವನೋಪಾಯಕ್ಕೆ ಕೊಡುಗೆ ನೀಡಲು ಉದ್ದೇಶಿಸಿವೆ. ಎಲ್ಲಾ ಕೆಲಸಗಳನ್ನು ಅನುಮತಿಸಲಾದ ಕಾಮಗಾರಿಗಳ ಅನುಮೋದಿತ ಪಟ್ಟಿ ಮತ್ತು ಕಾಯ್ದೆ, ನಿಯಮಗಳು ಮತ್ತು ಮಾರ್ಗಸೂಚಿಗಳ ಅನ್ವಯವಾಗುವ ನಿಬಂಧನೆಗಳಿಗೆ ಅನುಗುಣವಾಗಿ ಕೈಗೊಳ್ಳಲಾಗುತ್ತದೆ.

ವಿಕಸಿತ ಗ್ರಾಮ ಪಂಚಾಯತ್ ಗಳಿಂದ ಸ್ಥಳೀಯ ಆದ್ಯತೆಗಳಿಗೆ ಒತ್ತು ನೀಡುವ ಯೋಜನೆಗಳು

ಸಲಹೆಯಲ್ಲಿ ವಿಕೇಂದ್ರೀಕೃತ, ತಳಮಟ್ಟದ ಮತ್ತು ಪಂಚಾಯತ್ ರಾಜ್ ಸಂಸ್ಥೆ (ಪಿಆರ್ ಐ) ನೇತೃತ್ವದ ಯೋಜನೆಗೆ ಒತ್ತು ನೀಡಲಾಗುವುದು, ಅವುಗಳಲ್ಲಿ ಮೇವು ಅಭಿವೃದ್ಧಿ ಮತ್ತು ಜಾನುವಾರು-ಪೋಷಣೆ ಮೂಲಸೌಕರ್ಯವನ್ನು ವಿಕಸಿತ ಗ್ರಾಮ ಪಂಚಾಯತ್ ಯೋಜನೆಗಳಲ್ಲಿ (ವಿಜಿಪಿಪಿ) ಸಂಯೋಜಿಸಲಾಗಿದೆ ಮತ್ತು ಗ್ರಾಮ ಸಭೆಯ ಮೂಲಕ ಅನುಮೋದಿಸಲಾದ ಸ್ಥಳೀಯ ಅಭಿವೃದ್ಧಿ ಆದ್ಯತೆಗಳೊಂದಿಗೆ ಹೊಂದಿಸಲಾಗಿದೆ.

ಸ್ಥಳೀಯ ಅಗತ್ಯತೆಗಳು, ಅನುಮೋದಿತ ಯೋಜನೆಗಳು ಮತ್ತು ಅನ್ವಯವಾಗುವ ಮಾರ್ಗಸೂಚಿಗಳಿಂದ ಬೆಂಬಲಿತವಾದಲ್ಲೆಲ್ಲಾ, ಒಟ್ಟು ಕಾರ್ಯಕ್ರಮದ ವೆಚ್ಚದ ಕನಿಷ್ಠ ಶೇ.5 ರಷ್ಟು ಮೇವು ಮತ್ತು ಜಾನುವಾರು-ಪೋಷಣೆ ಕಾರ್ಯಗಳ ಮೇಲಿನ ವೆಚ್ಚವನ್ನು ಹಂತಹಂತವಾಗಿ ಹೆಚ್ಚಿಸಲು ಪ್ರಯತ್ನಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರೋತ್ಸಾಹಿಸಲಾಗುವುದು.

ಮೇವು ಮತ್ತು ಜಾನುವಾರು-ಸಂಬಂಧಿತ ಸ್ವತ್ತುಗಳ ಅಗತ್ಯವಿರುವ ಅರ್ಹ ಮನೆಗಳು ಮತ್ತು ಸಮುದಾಯಗಳನ್ನು ಗುರುತಿಸಲು ಅಗತ್ಯತೆ ಅಧರಿಸಿ ಗರಿಷ್ಠ ಬಳಕೆ ವಿಧಾನವನ್ನು ಸಹ ಪ್ರೋತ್ಸಾಹಿಸಲಾಗುತ್ತದೆ. ಸ್ಥಳೀಯ ಅವಶ್ಯಕತೆಗಳು ಮತ್ತು ಆದ್ಯತೆಗಳ ಆಧಾರದ ಮೇಲೆ, ಜನಸಂಖ್ಯೆಯ ಶೇ.30 ಕ್ಕಿಂತ ಹೆಚ್ಚು ಜಾನುವಾರು-ಅವಲಂಬಿತವಾಗಿರುವ ಗ್ರಾಮ ಪಂಚಾಯತ್‌ಗಳು ಸೇರಿ ಗಮನಾರ್ಹ ಜಾನುವಾರು ಅವಲಂಬನೆಯನ್ನು ಹೊಂದಿರುವ ಪ್ರದೇಶಗಳಿಗೆ ಗ್ರಾಮ ಪಂಚಾಯತ್‌ಗಳು ನಿರ್ದಿಷ್ಟ ಗಮನ ನೀಡಬಹುದು.

ಐಸಿಎಆರ್–ಭಾರತೀಯ ಹುಲ್ಲುಗಾವಲು ಮತ್ತು ಮೇವು ಸಂಶೋಧನಾ ಸಂಸ್ಥೆ (ICAR–IGFRI) ಸಿದ್ಧಪಡಿಸಿದ ರಾಜ್ಯ-ನಿರ್ದಿಷ್ಟ ಮೇವು ಸಂಪನ್ಮೂಲ ಅಭಿವೃದ್ಧಿ ಯೋಜನೆಗಳು ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ ಯೋಜನೆಗಾಗಿ ಮಾರ್ಗದರ್ಶಿ ದಾಖಲೆಗಳಾಗಿ ಕಾರ್ಯನಿರ್ವಹಿಸಬಹುದು. ಸಂಬಂಧಿತ ಮತ್ತು ಅನುಮತಿಸಲಾದ ಕಾಮಗಾರಿಗಳ ಅಡಿಯಲ್ಲಿ, ಸೂಕ್ತವಾದ ಮೇವಿನ ಪ್ರಭೇದಗಳು, ದೀರ್ಘಕಾಲಿಕ ಹುಲ್ಲುಗಳು ಮತ್ತು ಸಮಗ್ರ ಬೆಳೆ-ಜಾನುವಾರು ವ್ಯವಸ್ಥೆಗಳು ಸೇರಿ ಹವಾಮಾನ-ನಿಗ್ರಹ ಮಧ್ಯಸ್ಥಿಕೆಗಳತ್ತ ಗಮನ ಹರಿಸಲು ಸಲಹೆಯು ಪ್ರೋತ್ಸಾಹಿಸುತ್ತದೆ.

ಅಂತರ್ ಇಲಾಖಾ ಸಮನ್ವಯ ಮತ್ತು ಮೇಲ್ವಿಚಾರಣೆ

ಈ ಸಲಹೆಯಡಿ ಗ್ರಾಮೀಣಾಭಿವೃದ್ಧಿ, ಪಶುಸಂಗೋಪನೆ, ಕೃಷಿ ಮತ್ತು ಇತರ ಸಂಬಂಧಿತ ವಲಯಗಳ ಇಲಾಖೆಗಳ ನಡುವೆ ಸಮನ್ವಯದ ಮೂಲಕ ಮೇವು ಭದ್ರತೆ ಮತ್ತು ಜಾನುವಾರು ಮೂಲಸೌಕರ್ಯಕ್ಕಾಗಿ ಸಮಗ್ರ ರಾಜ್ಯ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕರೆ ನೀಡುತ್ತದೆ.

ಸಂಘಟಿತ ವಿಧಾನವು ಯೋಜನೆಗಳನ್ನು ಸುಧಾರಿಸಲು, ಲಭ್ಯವಿರುವ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆ ಸುಗಮಗೊಳಿಸಲು ಮತ್ತು ಹೂಡಿಕೆಗಳು ಸ್ಥಳೀಯ ಅವಶ್ಯಕತೆಗಳಿಗೆ ಸ್ಪಂದಿಸುವಂತೆ ಮಾಡುವುದು ಮತ್ತು ಸುಸ್ಥಿರ ಜಾನುವಾರು ಆಧಾರಿತ ಜೀವನೋಪಾಯ ಬೆಂಬಲಿಸಲು ಉದ್ದೇಶಿಸಲಾಗಿದೆ.

ಶಾಸನಬದ್ಧ ಸುರಕ್ಷತಾ ಕ್ರಮಗಳ ಕಟ್ಟುನಿಟ್ಟು ಪಾಲನೆ

ಎಲ್ಲಾ ಮೇವು ಅಭಿವೃದ್ಧಿ ಮತ್ತು ಜಾನುವಾರು-ಪೋಷಣೆ ಕಾಮಗಾರಿಗಳು ವಿಬಿ ಜಿ-ರಾಮ್-ಜಿ ಕಾಯ್ದೆ, 2025 ರ ಅನ್ವಯವಾಗುವ ನಿಬಂಧನೆಗಳನ್ನು ಪಾಲಿಸಬೇಕು ಎಂದು ಸಲಹೆಯು ಪುನರುಚ್ಚರಿಸುತ್ತದೆ. ಅವುಗಳಲ್ಲಿ ವಿಕೇಂದ್ರೀಕೃತ ಮತ್ತು ಪಿಆರ್ ಐ ನೇತೃತ್ವದ ಯೋಜನೆ, ಕಡ್ಡಾಯ ಸಾಮಾಜಿಕ ಲೆಕ್ಕಪರಿಶೋಧನೆ, ಕಾಮಗಾರಿಗೆ ಬಳಸುವ ವಸ್ತುಗಳ ಮೇಲೆ ಜಿಲ್ಲಾ ಮಟ್ಟದ ಶೇ.40ರ ಮಿತಿ, ಶೆಡ್ಯೂಲ್ I ರಡಿಯಲ್ಲಿ ನಿಬಂಧನೆಗಳಿಗೆ ಅನುಗುಣವಾಗಿ ವೈಯಕ್ತಿಕ ಫಲಾನುಭವಿಗಳ ಆಯ್ಕೆ, ಸಾಪ್ತಾಹಿಕ ಸಾರ್ವಜನಿಕ ಬಹಿರಂಗಪಡಿಸುವಿಕೆ ಮತ್ತು ಕುಂದುಕೊರತೆ ಪರಿಹಾರ ಸೇರಿವೆ.

ಪರಿಣಾಮಕಾರಿ ಯೋಜನೆ ಮತ್ತು ಅನುಷ್ಠಾನವನ್ನು ಸುಗಮಗೊಳಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅನುಮೋದಿತ ಸಲಹೆಯನ್ನು ಸಂಬಂಧಪಟ್ಟ ಇಲಾಖೆಗಳು, ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ತಳಮಟ್ಟದ ಕಾರ್ಯಕರ್ತರ ನಡುವೆ ಸಂಯೋಜನೆಯನ್ನು ಖಾತ್ರಿಪಡಿಸಿಕೊಳ್ಳುವಂತೆ ಒತ್ತಾಯಿಸಲಾಗಿದೆ.

ಗ್ರಾಮೀಣ ಅಭಿವೃದ್ಧಿ ಯೋಜನೆಯಲ್ಲಿ ಮೇವು ಭದ್ರತೆ ಮತ್ತು ಜಾನುವಾರು-ಪೋಷಕ ಮೂಲಸೌಕರ್ಯಕ್ಕೆ ಸೂಕ್ತ ಗಮನ ಹರಿಸುವುದನ್ನು ಖಾತ್ರಿಪಡಿಸಿಕೊಳ್ಳಲು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಘಟಿತ ಕ್ರಮದ ಮಹತ್ವವನ್ನು ಸಲಹೆಯು ಒತ್ತಿಹೇಳುತ್ತದೆ.

ವಿಕಸಿತ ಭಾರತ@2047 ಕಡೆಗೆ ಗ್ರಾಮೀಣ ಜೀವನೋಪಾಯ ಬಲವರ್ಧನೆ

ಜಂಟಿ ಸಲಹೆಯು ಗ್ರಾಮೀಣ ಉದ್ಯೋಗ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಮತ್ತು ಜಾನುವಾರು ಅಭಿವೃದ್ಧಿಯನ್ನು ಸಂಯೋಜಿಸುವ ಕಡೆಗೆ ಒಂದು ಪ್ರಮುಖ ಹೆಜ್ಜೆಯನ್ನು ಸೂಚಿಸುತ್ತದೆ. ವಿಬಿ-ಜಿ ರಾಮ್ ಜಿ ಅಡಿಯಲ್ಲಿ ಅನುಮತಿಸಲಾದ ಕಾಮಗಾರಿಗಳನ್ನು ಸ್ಥಳೀಯ ಮೇವು ಮತ್ತು ಜಾನುವಾರು ಮೂಲಸೌಕರ್ಯ ಅಗತ್ಯಗಳೊಂದಿಗೆ ಸಂಯೋಜಿಸುವ ಮೂಲಕ, ಈ ಉಪಕ್ರಮವು ಮೇವಿನ ಲಭ್ಯತೆ ಸುಧಾರಿಸಲು, ಡೈರಿ ಮತ್ತು ಪಶುಸಂಗೋಪನೆ ಚಟುವಟಿಕೆಗಳನ್ನು ಬೆಂಬಲಿಸಲು ಮತ್ತು ಗ್ರಾಮೀಣ ಕುಟುಂಬಗಳಿಗೆ ಜೀವನೋಪಾಯದ ಅವಕಾಶಗಳನ್ನು ಬಲಪಡಿಸಲು ಪ್ರಯತ್ನಿಸುತ್ತದೆ.

ಈ ಉಪಕ್ರಮವು ಸಮನ್ವಯ, ವಿಕೇಂದ್ರೀಕೃತ ಯೋಜನೆ ಮತ್ತು ಸಂಘಟಿತ ಅನುಷ್ಠಾನದ ಮೂಲಕ, ರಾಜ್ಯಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳು ಸ್ಥಳೀಯ ಅಗತ್ಯಗಳಿಗೆ ಸ್ಪಂದಿಸಲು, ಹವಾಮಾನ-ನಿಗ್ರಹ ಗ್ರಾಮೀಣ ಅಭಿವೃದ್ಧಿ ಬೆಂಬಲಿಸುವ ಮತ್ತು ವಿಕಸಿತ ಭಾರತ @2047 ರ ವಿಶಾಲ ದೂರದೃಷ್ಟಿಗೆ ಕೊಡುಗೆ ನೀಡುವ ಬಾಳಿಕೆ ಬರುವ ಸ್ವತ್ತುಗಳನ್ನು ಸೃಷ್ಟಿಸಲು ಸಹಾಯ ಮಾಡುವ ಗುರಿ ಹೊಂದಿದೆ.

 

*****


(ಪ್ರಕಟಣೆ ಐ.ಡಿ.: 2332921) ವಿಸಿಟರ್ ಕೌಂಟರ್ : 25
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali , Gujarati