ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಬಿಆರ್‌ಇ ಶೃಂಗಸಭೆ ಮತ್ತು ಎಕ್ಸ್ಪೋ 2026 ಜಾಗತಿಕ ಹೂಡಿಕೆದಾರರು ಮತ್ತು ಉದ್ಯಮದ ಗಣ್ಯರನ್ನು ಒಗ್ಗೂಡಿಸಿದೆ


ದೇಶದ ಪಾಲುದಾರರು ಮತ್ತು 13 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಹೂಡಿಕೆ ಮತ್ತು ಸಹಯೋಗದ ಅವಕಾಶಗಳನ್ನು ಪ್ರದರ್ಶಿಸುತ್ತವೆ

ಒಡಿಶಾ ₹1.17 ಲಕ್ಷ ಕೋಟಿ ಮೌಲ್ಯದ 18 ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಿದೆ

ಪ್ರಕಟಣಾ ದಿನಾಂಕ: 03 NOV 2026 8:00PM by PIB Bengaluru

ಭಾರತ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್ಪೋ 2026ರ ಎರಡನೇ ದಿನದಂದು, ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ, ಕೇಂದ್ರ ಇಂಧನ ಹಾಗೂ ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾದ ಶ್ರೀ ಮನೋಹರ್ ಲಾಲ್ ಖಟ್ಟರ್ ಹಾಗು ಹೊಸ ಮತ್ತು ನವೀಕರಿಸಬಹುದಾದ ಇಂಧನ ಹಾಗೂ ಇಂಧನ ಇಲಾಖೆಯ ರಾಜ್ಯ ಸಚಿವರಾದ ಶ್ರೀ ಶ್ರೀಪಾದ್ ಯಸ್ಸೋ ನಾಯಕ್ ಅವರು ‘ದಿ ನೆಕ್ಸ್ಟ್ ಟೆರಾವಾಟ್’ ಉನ್ನತ ಮಟ್ಟದ ಸಚಿವರ ಚರ್ಚೆಯಲ್ಲಿ   ಭಾಗವಹಿಸಿದರು. ಈ ಉನ್ನತ ಮಟ್ಟದ ಸಂವಾದವನ್ನು ಅಂತರರಾಷ್ಟ್ರೀಯ ಸೌರ ಒಕ್ಕೂಟ, ಸಿಇಇಡಬ್ಲ್ಯೂ ಮತ್ತು ಎನರ್ಜಿವಾ ವೆಂಚರ್ಸ್ ಆಯೋಜಿಸಿದ್ದವು. ಮುಂಬರುವ ದಶಕಗಳಲ್ಲಿ ಅಂತಾರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಅನುಷ್ಠಾನ ವ್ಯವಸ್ಥೆಯನ್ನು ರೂಪಿಸಲು ಈ ವೇದಿಕೆಯು ಸರ್ಕಾರಿ ಮತ್ತು ಉದ್ಯಮ ಕ್ಷೇತ್ರದ ಪ್ರಮುಖ ಧ್ವನಿಗಳನ್ನು ಒಂದೆಡೆ ತಂದಿತು.

ಜಾಗತಿಕ ನವೀಕರಿಸಬಹುದಾದ ಇಂಧನ ವಿಸ್ತರಣೆಯ ಮುಂದಿನ ಹಂತವನ್ನು ಕ್ಷಿಪ್ರಗೊಳಿಸಲು ಅತ್ಯಂತ ಮಹತ್ವದ ನಾಲ್ಕು ಪ್ರಮುಖ ಆದ್ಯತೆಯ ಕ್ಷೇತ್ರಗಳ ಕುರಿತು ಚರ್ಚೆಗಳು ನಡೆದವು: ಸಮಗ್ರ ಇಂಧನ ಯೋಜನೆ, ಪೂರೈಕೆ ಮತ್ತು ಸಂಗ್ರಹಣೆ; ಇಂಧನ ಮೂಲಸೌಕರ್ಯ ವಿಸ್ತರಣೆ ಮತ್ತು ಚೇತರಿಕೆ; ಯೋಜನೆಗಳು ಮತ್ತು ವ್ಯವಸ್ಥೆಗಳ ಟೆರಾವಾಟ್-ಮಟ್ಟದ ಹಣಕಾಸು ಒದಗಿಸುವಿಕೆ; ಹಾಗೂ ಸುರಕ್ಷಿತ ಮತ್ತು ಕೈಗೆಟುಕುವ ಇಂಧನಕ್ಕಾಗಿ ಡಿಜಿಟಲೀಕರಣ ಮತ್ತು ಎಐ. ಈ ಚರ್ಚೆಗಳು ಭಾರತದ ‘ವಿಕಸಿತ ಭಾರತ 2047’ರ ದೃಷ್ಟಿಕೋನಕ್ಕೆ ಅನುಗುಣವಾಗಿ, ಈಗಿನಿಂದ 2050ರವರೆಗಿನ ಕಾರ್ಯತಂತ್ರದ ಮಾರ್ಗಸೂಚಿಯನ್ನು ರೂಪಿಸಿದವು.

ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಮತ್ತು ಉಪಮುಖ್ಯಮಂತ್ರಿ ಕನಕ್ ವರ್ಧನ್ ಸಿಂಗ್ ದೇವ್ ಅವರ ಸಮ್ಮುಖದಲ್ಲಿ ಒಡಿಶಾ ರಾಜ್ಯವೂ ಒಟ್ಟು ಸುಮಾರು ₹1.17 ಲಕ್ಷ ಕೋಟಿ  ಹೂಡಿಕೆಯನ್ನು ಪ್ರತಿನಿಧಿಸುವ 18 ತಿಳುವಳಿಕೆ ಒಪ್ಪಂದಗಳಿಗೆ   ಸಹಿ ಹಾಕಿತು.

ಮತ್ತೊಂದು ಬೆಳವಣಿಗೆಯಲ್ಲಿ, ಬೊಂಡಾಡ ಗ್ರೂಪ್ ನ ಭಾಗವಾದ ಬೊಂಡಾಡ ಇಂಜಿನಿಯರಿಂಗ್ ಲಿಮಿಟೆಡ್, ಗೋವಾ ಹೂಡಿಕೆ ಉತ್ತೇಜನಾ ಮತ್ತು ಸೌಲಭ್ಯ ಮಂಡಳಿ (ಗೋವಾ-ಐಪಿಬಿ) ಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಗೋವಾದಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳಿಗಾಗಿ ಸುಮಾರು ₹3,000 ಕೋಟಿ ಉದ್ದೇಶಿತ ಹೂಡಿಕೆಗೆ ಬದ್ಧತೆ ವ್ಯಕ್ತಪಡಿಸಿದೆ.

ಬಿಆರ್‌ಇ ಶೃಂಗಸಭೆ ಮತ್ತು ಎಕ್ಸ್ಪೋ 2026 ಸಂಸ್ಥೆಯು 40ಕ್ಕೂ ಹೆಚ್ಚು ಸಚಿವರು, ಹಿರಿಯ ನೀತಿ ನಿರೂಪಕರು, ಹೂಡಿಕೆದಾರರು, ಹಣಕಾಸು ಸಂಸ್ಥೆಗಳು ಮತ್ತು ಉದ್ಯಮದ ಗಣ್ಯರು ಸೇರಿದಂತೆ 130ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳನ್ನು ಒಂದೆಡೆ ಸೇರಿಸಿದೆ. ಆಸ್ಟ್ರೇಲಿಯಾ, ಡೆನ್ಮಾರ್ಕ್, ಯುರೋಪಿಯನ್ ಯೂನಿಯನ್, ಫ್ರಾನ್ಸ್, ಜರ್ಮನಿ, ನೆದರ್ಲ್ಯಾಂಡ್ಸ್, ನಾರ್ವೆ, ಸ್ವೀಡನ್ ಮತ್ತು ಯುನೈಟೆಡ್ ಕಿಂಗ್ ಡಮ್ ದೇಶಗಳು ಪಾಲುದಾರ ದೇಶಗಳಾಗಿ ಭಾಗವಹಿಸುತ್ತಿದ್ದು, ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲು ಮತ್ತು ಸ್ವಚ್ಛ ಇಂಧನ ಮೌಲ್ಯವರ್ಧನೆ ಸರಣಿಯಲ್ಲಿ ಹೂಡಿಕೆ ಹಾಗೂ ತಂತ್ರಜ್ಞಾನ ಪಾಲುದಾರಿಕೆಯನ್ನು ಸುಗಮಗೊಳಿಸಲು ಅವಕಾಶಗಳನ್ನು ಒದಗಿಸುತ್ತಿವೆ.

ಹದಿಮೂರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ನವೀಕರಿಸಬಹುದಾದ ಇಂಧನ ಸಾಮರ್ಥ್ಯ, ಯೋಜನೆಗಳ ಹರಿವು, ಉತ್ಪಾದನಾ ಸಾಮರ್ಥ್ಯಗಳು ಮತ್ತು ನೀತಿ ಉಪಕ್ರಮಗಳನ್ನು ಪ್ರದರ್ಶಿಸುತ್ತಿವೆ, ಭಾರತದಾದ್ಯಂತ ಇರುವ ಹೂಡಿಕೆ ಅವಕಾಶಗಳ ವ್ಯಾಪ್ತಿ ಮತ್ತು ವೈವಿಧ್ಯತೆಯನ್ನು ಉಲ್ಲೇಖಿಸುತ್ತಿವೆ.

ಬ್ಲೂಮ್ ಬರ್ಗ್ ಎನ್ ಇ ಎಫ್ ಸಹಯೋಗದೊಂದಿಗೆ ಆಯೋಜಿಸಲಾದ ಆಹ್ವಾನಿತರ ಆಲೋಚನಾ ವೇದಿಕೆ ‘ವಾಟ್ಸ್ ನೆಕ್ಸ್ಟ್: ಇಂಡಿಯಾಸ್ ಎನರ್ಜಿ ಸೆಕ್ಯುರಿಟಿ, ಅಜೆಂಡಾ 2047ಕ್ಕಾಗಿ ನಾವೀನ್ಯಕಾರರ ಕಲ್ಪನೆಗಳು’ ಕಾರ್ಯಕ್ರಮದ ಮೊದಲ ಹಂತವೂ ಇಂದಿನ ದಿನದ ಪ್ರಮುಖ ಆಕರ್ಷಣೆಯಾಗಿತ್ತು. ಸಾಂಪ್ರದಾಯಿಕ ಪ್ಯಾನಲ್ ಚರ್ಚೆಗಳಿಂದಾಚೆಗೆ, ಈ ಗೋಷ್ಠಿಯು ಪ್ರಮುಖ ನಾವೀನ್ಯಕಾರರು, ಉದ್ಯಮಿಗಳು ಮತ್ತು ಉದ್ಯಮದ ಗಣ್ಯರನ್ನು ಒಂದೆಡೆ ತಂದು, ಭಾರತವು ತನ್ನ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಸಮೀಪಿಸುತ್ತಿದ್ದಂತೆ ದೇಶದ ಇಂಧನ ವ್ಯವಸ್ಥೆಯನ್ನು ರೂಪಿಸಬಲ್ಲ ತಂತ್ರಜ್ಞಾನ, ಹಣಕಾಸು ಮತ್ತು ನೀತಿಯ ಕುರಿತು ಧೈರ್ಯದ ಮತ್ತು ಕಾರ್ಯಸಾಧ್ಯವಾದ ಕಲ್ಪನೆಗಳನ್ನು ಮಂಡಿಸಿತು. ಭಾಷಣಕಾರರಲ್ಲಿ ಸುಮಂತ್ ಸಿನ್ಹಾ (ಸಂಸ್ಥಾಪಕ, ಅಧ್ಯಕ್ಷ ಮತ್ತು ಸಿಇಒ, ರೆನ್ಯೂ), ಶ್ರೇಯಾ ಮಿಶ್ರಾ (ಸಹ-ಸಂಸ್ಥಾಪಕಿ ಮತ್ತು ಸಿಇಒ, ಸೋಲಾರ್ ಸ್ಕ್ವೇರರ್), ಗಿರೀಶ್ ಆರ್ ತಾಂತಿ (ಸಹ-ಸಂಸ್ಥಾಪಕ, ಸುಜ್ಲಾನ್ ಗ್ರೂಪ್), ಪ್ರೊ. ಅಶೋಕ್ ಝುಂಜುನ್ವಾಲಾ (ಐಐಟಿ ಮದ್ರಾಸ್) ಮತ್ತು ಮೆರೆಡಿತ್ ಅನೆಕ್ಸ್ (ಕ್ಲೀನ್ ಪವರ್ ರಿಸರ್ಚ್ ಮುಖ್ಯಸ್ಥರು, ಬ್ಲೂಮ್ಬರ್ಗ್ಎನ್ಇಎಫ್) ಸೇರಿದ್ದಾರೆ.

ಭಾರತದ ನವೀಕರಿಸಬಹುದಾದ ಇಂಧನ ವಿಸ್ತರಣೆಗೆ ವಿದ್ಯುತ್ ಉತ್ಪಾದನಾ ಸಾಮರ್ಥ್ಯ, ಇಂಧನ ಸಂಗ್ರಹಣೆ, ಪ್ರಸರಣ ಜಾಲಗಳು, ದೇಶೀಯ ಉತ್ಪಾದನೆ ಮತ್ತು ಪೋಷಕ ಮೂಲಸೌಕರ್ಯಗಳಲ್ಲಿ ನಿರಂತರ ಹೂಡಿಕೆಯ ಅಗತ್ಯವಿದೆ. ಸಾರ್ವಜನಿಕ ಮತ್ತು ಖಾಸಗಿ ವಲಯದ ಪಾಲುದಾರರಿಗೆ ನವೀನ ಹಣಕಾಸು ಮಾದರಿಗಳನ್ನು ಅನ್ವೇಷಿಸಲು, ಹೂಡಿಕೆ ಪಾಲುದಾರಿಕೆಯನ್ನು ಬಲಪಡಿಸಲು ಮತ್ತು ಯೋಜನೆಗಳ ಅನುಷ್ಠಾನವನ್ನು ವೇಗಗೊಳಿಸಲು ಪರಿಹಾರಗಳನ್ನು ಕಂಡುಕೊಳ್ಳಲು ಈ ಶೃಂಗಸಭೆಯು ಉತ್ತಮ ವೇದಿಕೆಯನ್ನು ಒದಗಿಸುತ್ತಿದೆ.

2ನೇ ದಿನದ ನೋಟಗಳು

 

*****


(ಪ್ರಕಟಣೆ ಐ.ಡಿ.: 2332354) ವಿಸಿಟರ್ ಕೌಂಟರ್ : 22
ಪ್ರಕಟಣೆಯನ್ನು ಇದರಲ್ಲಿ ಓದಿ: English , Gujarati , Urdu , हिन्दी , Odia , Malayalam