ಪ್ರಕಟಣಾ ದಿನಾಂಕ:
31 OCT 2026 11:33AM by PIB Bengaluru
'ಆತ್ಮನಿರ್ಭರ ಪಂಚಾಯತ್'ಗಳು (ಸ್ವಾವಲಂಬಿ ಪಂಚಾಯತ್ಗಳು) ಮತ್ತು 'ವಿಕಸಿತ ಪಂಚಾಯತ್'ಗಳನ್ನು (ಅಭಿವೃದ್ಧಿ ಹೊಂದಿದ ಪಂಚಾಯತ್ಗಳು) ರೂಪಿಸುವ ಪ್ರಯತ್ನಗಳಲ್ಲಿ ಎಲ್ಲಾ ಪಾಲುದಾರರು ಸಕ್ರಿಯವಾಗಿ ಭಾಗವಹಿಸುವಂತೆ ಕೇಂದ್ರ ಪಂಚಾಯತ್ ರಾಜ್ ಹಾಗೂ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್ (ಲಾಲನ್ ಸಿಂಗ್) ಕರೆ ನೀಡಿದರು. 2026ರ ಅಕ್ಟೋಬರ್ 30ರಂದು ನವದೆಹಲಿಯಲ್ಲಿ ಪಂಚಾಯತ್ ರಾಜ್ ಸಚಿವಾಲಯವು ಆಯೋಜಿಸಿದ್ದ 'ಪೀಪಲ್ಸ್ ಪ್ಲಾನ್ ಕ್ಯಾಂಪೇನ್' (ಪಿಪಿಸಿ) 2026-27 ಕುರಿತ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಅವರು ಮಾತನಾಡುತ್ತಿದ್ದರು. ದೇಶಾದ್ಯಂತದಿಂದ 400ಕ್ಕೂ ಅಧಿಕ ಪ್ರತಿನಿಧಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಇದೇ ವೇಳೆ, ಪಿಪಿಸಿ 2026–27ರ ಕಿರುಹೊತ್ತಿಗೆಯನ್ನು ಇಂಗ್ಲಿಷ್/ಹಿಂದಿ ಆವೃತ್ತಿ (English/Hindi) ಬಿಡುಗಡೆ ಮಾಡಲಾಯಿತು. ಜೊತೆಗೆ, ದೇಶಾದ್ಯಂತ ಪಂಚಾಯತ್ ಭೂಮಿಯಲ್ಲಿ ಎಲೆಕ್ಟ್ರಿಕ್ ವಾಹನ (ಇವಿ) ಚಾರ್ಜಿಂಗ್ ಮತ್ತು ಬ್ಯಾಟರಿ ಸ್ವಾಪಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶದಿಂದ, ಪಂಚಾಯತ್ ರಾಜ್ ಸಚಿವಾಲಯವು 'ಕನ್ವರ್ಜೆನ್ಸ್ ಎನರ್ಜಿ ಸರ್ವೀಸಸ್ ಲಿಮಿಟೆಡ್' (CESL) ನೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಿತು. ಸಿಇಎಸ್ ಎಲ್ ಸಂಸ್ಥೆಯು ಇಂಧನ ಸಚಿವಾಲಯದ ಅಧೀನದಲ್ಲಿರುವ 'ಎನರ್ಜಿ ಎಫಿಷಿಯನ್ಸಿ ಸರ್ವೀಸಸ್ ಲಿಮಿಟೆಡ್' (ಇಇಎಸ್ ಎಲ್) ನ ಸಂಪೂರ್ಣ ಅಧೀನದ ಅಂಗಸಂಸ್ಥೆಯಾಗಿದೆ.


'ವಿಕಸಿತ ಭಾರತ'ದ ರಾಷ್ಟ್ರೀಯ ದೂರದೃಷ್ಟಿಗೆ ಅನುಗುಣವಾಗಿ, ಆಡಳಿತ ವ್ಯವಸ್ಥೆಯಲ್ಲಿ ಮುಂದಿನ ಪೀಳಿಗೆಯ ಪರಿವರ್ತನೆ ತರುವ 'ಪ್ರಧಾನ ಮಂತ್ರಿ ವಿಕಸಿತ ಗ್ರಾಮ ಸ್ವರಾಜ್ ಯೋಜನೆ'ಗೆ (PM VGSY) ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ ಎಂಬ ಮಹತ್ವದ ನಿರ್ಧಾರದ ಬಗ್ಗೆ ಶ್ರೀ ರಾಜೀವ್ ರಂಜನ್ ಸಿಂಗ್ ಅವರು ಸಭೆಯಲ್ಲಿ ಮಾಹಿತಿ ನೀಡಿದರು. ಈ ಯೋಜನೆಯ ಪ್ರಮುಖ ಉದ್ದೇಶಗಳನ್ನು ವಿವರಿಸಿದ ಕೇಂದ್ರ ಸಚಿವರು, ಸರ್ಕಾರಿ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವುದು, ತಳಮಟ್ಟದಲ್ಲಿ ಚರ್ಚೆ ಮತ್ತು ಸಮಾಲೋಚನೆಗಳನ್ನು ಉತ್ತೇಜಿಸುವುದು, ಸಾಮಾನ್ಯ ಡಿಜಿಟಲ್ ವೇದಿಕೆಯ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ಯೋಜನೆಗಳನ್ನು ಸಂಯೋಜಿಸುವುದು, ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆಗಳನ್ನು (ಜಿಪಿಡಿಪಿ) ಸಕಾಲದಲ್ಲಿ ಸಿದ್ಧಪಡಿಸುವುದನ್ನು ಖಾತ್ರಿಪಡಿಸಿಕೊಳ್ಳುವುದು ಹಾಗೂ ತಳಮಟ್ಟದಲ್ಲಿ ಪರಿಣಾಮಕಾರಿ ಆಡಳಿತಕ್ಕಾಗಿ ಪಂಚಾಯತ್ ಪ್ರತಿನಿಧಿಗಳು ಮತ್ತು ಪಾಲುದಾರರ ಸಾಮರ್ಥ್ಯ ವೃದ್ಧಿಸುವ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದರು. ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಪಂಚಾಯತ್ಗಳ ಮೇಲೆ ಸರ್ಕಾರಕ್ಕೆ ದೃಢವಾದ ನಂಬಿಕೆ ಇದೆ ಎಂಬುದನ್ನು ಈ ಯೋಜನೆಯ ಅನುಮೋದನೆಯು ಪ್ರತಿಬಿಂಬಿಸುತ್ತದೆ ಮತ್ತು 'ವಿಕಸಿತ ಪಂಚಾಯತ್'ಗಳ ಮೂಲಕವೇ 'ವಿಕಸಿತ ಭಾರತ'ದ ಕನಸನ್ನು ನನಸಾಗಿಸಲು ಸಾಧ್ಯ ಎಂಬುದನ್ನು ಇದು ಗುರುತಿಸುತ್ತದೆ ಎಂದು ಅವರು ಹೇಳಿದರು. ಗ್ರಾಮ ಸಭೆಗಳು ಆತ್ಮವಿಶ್ವಾಸದಿಂದ ಯೋಜನೆಗಳನ್ನು ರೂಪಿಸಿದಾಗ, ಸ್ವಂತ ಸಂಪನ್ಮೂಲಗಳ ಆದಾಯ (OSR) ಸ್ಥಿರವಾಗಿ ಹೆಚ್ಚಾದಾಗ ಮತ್ತು ಸರ್ಕಾರದ ಪ್ರತಿಯೊಂದು ಹಂತವೂ ಪರಸ್ಪರ ಸಹಯೋಗದೊಂದಿಗೆ ಕೆಲಸ ಮಾಡಿದಾಗ ಪಂಚಾಯತ್ಗಳು ನಿಜವಾಗಿಯೂ 'ಆತ್ಮನಿರ್ಭರ'ವಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ಷಮತೆ ಆಧಾರಿತ ಅನುದಾನಗಳನ್ನು ಪಡೆಯಲು ಗ್ರಾಮ ಪಂಚಾಯತ್ಗಳು ತಮ್ಮ ಸ್ವಂತ ಸಂಪನ್ಮೂಲಗಳ ಆದಾಯವನ್ನು ಹೆಚ್ಚಿಸಿಕೊಳ್ಳಬೇಕಾದ ಅಗತ್ಯವನ್ನು ಒತ್ತಿಹೇಳಿದ ಅವರು, 'ವಿಕಸಿತ ಭಾರತ 2047'ರ ಗುರಿಯನ್ನು ಸಾಧಿಸಲು 'ಆತ್ಮನಿರ್ಭರ ಪಂಚಾಯತ್' ಎಂಬ ಸಂಕಲ್ಪದೊಂದಿಗೆ ಒಗ್ಗೂಡಿ ಕಾರ್ಯನಿರ್ವಹಿಸಲು ಕರೆ ನೀಡಿದರು. ಪಂಚಾಯತ್ಗಳನ್ನು ಬಲಪಡಿಸಲು ಮತ್ತು ಅವು ಸುಸ್ಥಿರ ಆದಾಯ ಮೂಲಗಳನ್ನು ಕಂಡುಕೊಳ್ಳಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಎಲ್ಲಾ ಪಾಲುದಾರರು ಒಟ್ಟಾಗಿ ಕೆಲಸ ಮಾಡಬೇಕು ಹಾಗೂ ಸ್ಥಳೀಯ ಅಭಿವೃದ್ಧಿಯು ಸ್ಥಳೀಯ ಆದ್ಯತೆಗಳಿಗೆ ಅನುಗುಣವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ಕೋರಿದರು.
2026ರ ಅಕ್ಟೋಬರ್ 2 ರಂದು ಆರಂಭಿಸಲಾದ 'ಪೀಪಲ್ಸ್ ಪ್ಲಾನ್ ಕ್ಯಾಂಪೇನ್' (ಪಿಪಿಸಿ) 2026–27, ಯೋಜನಾ ಪ್ರಕ್ರಿಯೆಯ ಕೇಂದ್ರಬಿಂದು ನಾಗರಿಕರಾಗಿದ್ದಾರೆ ಎಂದು ಉಲ್ಲೇಖಿಸಿದ ಅವರು, ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಲ್ಪಿಸಿದಂತೆ, ಜನಭಾಗಿಧಾರಿ ಆಧಾರಿತ ಯೋಜನೆ, ಡಿಜಿಟಲ್ ವೇದಿಕೆಗಳು ಮತ್ತು 'ಜನ್ ಭಾಗಿದಾರಿ'ಯ (ಜನರ ಸಹಭಾಗಿತ್ವ) ಮಹತ್ವವನ್ನು ಒತ್ತಿ ಹೇಳಿದರು.
ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿ ಡಾ. ವಿನೀತ್ ಜೋಶಿ ಅವರು ತಮ್ಮ ಪ್ರಧಾನ ಭಾಷಣದಲ್ಲಿ, 'ಪ್ರಧಾನ ಮಂತ್ರಿ ವಿಕಸಿತ ಗ್ರಾಮ ಸ್ವರಾಜ್ ಯೋಜನೆ' (PM VGSY) ಕುರಿತ ಸಚಿವ ಸಂಪುಟದ ನಿರ್ಧಾರವು, ವಿಕೇಂದ್ರೀಕೃತ ಮತ್ತು ಸಾಕ್ಷ್ಯಾಧಾರಿತ ಯೋಜನೆಗೆ ಬಲವಾದ ಅಡಿಪಾಯ ಒದಗಿಸುತ್ತದೆ ಎಂದು ಹೇಳಿದರು. 2018 ರಿಂದ ಸಚಿವಾಲಯವು "ಸಬ್ ಕಿ ಯೋಜನೆ, ಸಬ್ ಕಾ ವಿಕಾಸ್" (ಎಲ್ಲರ ಯೋಜನೆ, ಎಲ್ಲರ ಅಭಿವೃದ್ಧಿ) ಎಂಬ ಧ್ಯೇಯದಡಿ ನಡೆಸುತ್ತಿರುವ 'ಪಿಪಿಸಿ' (ಪಿಪಿಸಿ- ಜನ ಸಹಭಾಗಿತ್ವದ ಯೋಜನೆ), ಗ್ರಾಮ, ಬ್ಲಾಕ್ ಮತ್ತು ಜಿಲ್ಲಾ ಪಂಚಾಯತ್ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು, ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸ್ಥಳೀಯ ಮಟ್ಟಕ್ಕೆ ಅಳವಡಿಸಲು ಹಾಗೂ ವಿವಿಧ ಯೋಜನೆಗಳು ಮತ್ತು ಸಂಪನ್ಮೂಲಗಳನ್ನು ಒಗ್ಗೂಡಿಸಲು ಒಂದು ಪ್ರಬಲ ಚೌಕಟ್ಟಾಗಿ ವಿಕಸನಗೊಂಡಿದೆ ಎಂದು ಅವರು ಪ್ರಸ್ತಾಪಿಸಿದರು. ವ್ಯವಸ್ಥಿತ, ಸಹಭಾಗಿತ್ವದ ಮತ್ತು ಎಲ್ಲರನ್ನೂ ಒಳಗೊಳ್ಳುವ ಯೋಜನಾ ಪ್ರಕ್ರಿಯೆಗೆ ಒತ್ತು ನೀಡಿದ ಅವರು, 2026-31ರ ಅವಧಿಗಾಗಿ ಹದಿನಾರನೇ ಹಣಕಾಸು ಆಯೋಗವು ದೇಶದ ಎಲ್ಲಾ 28 ರಾಜ್ಯಗಳಲ್ಲಿನ ಪಂಚಾಯತ್ ರಾಜ್ ಸಂಸ್ಥೆಗಳಿಗೆ/ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು 4,35,236 ಕೋಟಿ ರೂಪಾಯಿಗಳ ಅನುದಾನ ಶಿಫಾರಸು ಮಾಡಿದೆ ಎಂದು ತಿಳಿಸಿದರು. ಈ ನಿಧಿಯ ಅತ್ಯುತ್ತಮ ಬಳಕೆ ಖಚಿತಪಡಿಸಿಕೊಳ್ಳುವಲ್ಲಿ ಗ್ರಾಮ ಪಂಚಾಯತ್ಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಅವರು ಹೇಳಿದರು. ಲಭ್ಯವಿರುವ ಯೋಜನೆಗಳು ಅಥವಾ ನಿಧಿಯ ಮೂಲಗಳಿಗೆ ಮಾತ್ರ ಸೀಮಿತವಾಗದೆ, ಜನರ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಆಧರಿಸಿದ ಸಮಗ್ರ ಅಭಿವೃದ್ಧಿ ಯೋಜನೆಗಳನ್ನು (ಜಿಪಿಡಿಪಿ) ರೂಪಿಸಬೇಕು ಎಂದು ಡಾ. ಜೋಶಿ ಒತ್ತಿ ಹೇಳಿದರು. ಅಲ್ಲದೆ, ಕಾರ್ಯಕ್ಷಮತೆ ಆಧಾರಿತ ಅನುದಾನಗಳು ಪಂಚಾಯತ್ಗಳ ಆದಾಯ ಗಳಿಕೆಯೊಂದಿಗೆ ಸಂಪರ್ಕ ಹೊಂದಿರುವುದರಿಂದ, ಜಿಪಿಡಿಪಿ ಗಳಲ್ಲಿ 'ಸ್ವಂತ ಆದಾಯ ಮೂಲ' (OSR) ಘಟಕವನ್ನು ಸೇರಿಸುವ ಅಗತ್ಯವನ್ನು ಅವರು ಪ್ರತಿಪಾದಿಸಿದರು. 'ಇ-ಗ್ರಾಮ ಸ್ವರಾಜ್' ಮತ್ತು 'ಸಮರ್ಥ ಪಂಚಾಯತ್ ಪೋರ್ಟಲ್' ಸೇರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪೋರ್ಟಲ್ಗಳನ್ನು ತಂತ್ರಜ್ಞಾನದ ಮೂಲಕ ಪರಸ್ಪರ ಸಂಯೋಜಿಸಬೇಕು ಎಂದು ಅವರು ಕರೆ ನೀಡಿದರು; ಇದರಿಂದ ಏಕೀಕೃತ ದತ್ತಾಂಶವು ತಳಮಟ್ಟದಲ್ಲಿ ಉತ್ತಮ ಫಲಿತಾಂಶ ಆಧಾರಿತ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗುತ್ತದೆ. 'ಪಿಎಂ ವಿಜಿಎಸ್ವೈ' (PM VGSY) ಮೂಲಕ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಮಗ್ರ ಯೋಜನೆ ಖಾತ್ರಿಪಡಿಸಿಕೊಳ್ಳಬಹುದು ಎಂದು ಹೇಳಿದ ಡಾ. ಜೋಶಿ, ಗ್ರಾಮ ಸಭೆಗಳಲ್ಲಿ ಸಕ್ರಿಯ ಭಾಗವಹಿಸುವಿಕೆ, ಸ್ಥಳೀಯ ದತ್ತಾಂಶದ ಬಳಕೆ, ವಿವಿಧ ಇಲಾಖೆಗಳ ನಡುವೆ ಸಮನ್ವಯ, 2027-28ನೇ ಆರ್ಥಿಕ ವರ್ಷಕ್ಕೆ ಜಿಪಿಡಿಪಿಗಳ ಗುಣಮಟ್ಟ ಸುಧಾರಣೆ ಮತ್ತು ರಾಜ್ಯಗಳ ನಡುವೆ ಅನುಭವ ಹಂಚಿಕೆಯ ಅಗತ್ಯತೆಯನ್ನು ಪ್ರತಿಪಾದಿಸಿದರು.
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿ ಶ್ರೀ ಅಶೋಕ್ ಕೆ. ಕೆ. ಮೀನಾ ಮಾತನಾಡಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಸೇವೆಗಳನ್ನು ನಿರಂತರವಾಗಿ ಒದಗಿಸುವಲ್ಲಿ ಪಂಚಾಯತ್ಗಳು ಪ್ರಮುಖ ಪಾತ್ರ ವಹಿಸುತ್ತವೆ ಮತ್ತು ಇದು ನೇರವಾಗಿ ಜನರ ಆರೋಗ್ಯ ಹಾಗೂ ಘನತೆಯೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಿದರು. ನೀರು ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಗ್ರಾಮ ಪಂಚಾಯತ್ಗಳ ಮಹತ್ವದ ಪಾತ್ರ ಪ್ರಮುಖವಾಗಿ ಪ್ರಸ್ತಾಪಿಸಿದ ಅವರು, 'ಪಿಎಂ ವಿಜಿಎಸ್ವೈ' (PM VGSY) ಮೂಲಕ ಪಂಚಾಯತ್ ಪ್ರತಿನಿಧಿಗಳಿಗೆ ತರಬೇತಿ ನೀಡುವುದು ಮತ್ತು ಅವರ ಸಾಮರ್ಥ್ಯವನ್ನು ವೃದ್ಧಿಸುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದರು. ನೀರಿನ ಮೂಲಗಳು, ಗುಣಮಟ್ಟ, ನಿರ್ವಹಣೆ, ತರಬೇತಿ ಪಡೆದ ಮಾನವಶಕ್ತಿಯ ಲಭ್ಯತೆ ಮತ್ತು ಕಸ ನಿರ್ವಹಣೆ ಸೇರಿದಂತೆ ನೀರು ಮತ್ತು ನೈರ್ಮಲ್ಯದ ಸಮಸ್ಯೆಗಳನ್ನು ಜಿಪಿಡಿಪಿಗಳು ಸಮರ್ಪಕವಾಗಿ ಪರಿಹರಿಸಬೇಕು ಎಂದು ಅವರು ಹೇಳಿದರು ಮತ್ತು ಹದಿನಾರನೇ ಹಣಕಾಸು ಆಯೋಗದ ಅಡಿಯಲ್ಲಿ ಜಲ ಸೇವಾ ಮತ್ತು ಸ್ವಚ್ಛ ಸೇವಾ ಅಂಕಲನ್ ಮೂಲಕ ಅಂತರವನ್ನು ಗುರುತಿಸಲು ಮತ್ತು ಸಂಶೋಧನೆಗಳನ್ನು ಜಿಪಿಡಿಪಿಗಳಲ್ಲಿ ಸೇರಿಸಲು ಅನುದಾನಗಳ ಪರಿಣಾಮಕಾರಿ ಬಳಕೆಯನ್ನು ಒತ್ತಿ ಹೇಳಿದರು. ಪಂಚಾಯತ್ಗಳ ಒಎಸ್ ಆರ್ ಅನ್ನು ಹೆಚ್ಚಿಸುವ ವಿಶಾಲ ದೂರದೃಷ್ಟಿಯನ್ನು ಒತ್ತಿ ಹೇಳಿದ ಶ್ರೀ ಮೀನಾ, ಪಂಚಾಯತ್ಗಳು ಆರ್ಥಿಕ ಸ್ವಾವಲಂಬನೆಯತ್ತ ಪ್ರಗತಿ ಸಾಧಿಸಲು ನೀರು ಮತ್ತು ನೈರ್ಮಲ್ಯ ಸೇವೆಗಳನ್ನು ಸುಸ್ಥಿರಗೊಳಿಸಲು ಬಳಕೆದಾರರ ಶುಲ್ಕಗಳ ಮಹತ್ವವನ್ನು ಎತ್ತಿ ತೋರಿಸಿದರು. ಉತ್ತಮ ಯೋಜನೆ, ಹೂಡಿಕೆ ಮತ್ತು ಮಾಹಿತಿಯುಕ್ತ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಬೆಂಬಲಿಸಲು ಬಳಸುವ ದತ್ತಾಂಶದೊಂದಿಗೆ ಗ್ರಾಮ ಸಭೆಗಳ ಮೂಲಕ ಗ್ರಾಮ ಪಂಚಾಯತ್ಗಳ ಹೆಚ್ಚಿನ ಹೊಣೆಗಾರಿಕೆಗೆ ಅವರು ಕರೆ ನೀಡಿದರು.
ಪಂಚಾಯತ್ ರಾಜ್ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀಮತಿ ಪಾಲ್ಕಾ ಸಾಹ್ನಿ, ವಿಷಯಾಧಾರಿತ ಪಂಚಾಯತ್ ಅಭಿವೃದ್ಧಿ ಯೋಜನೆಗಳ ಮೂಲಕ ಸಾಧಿಸಿದ ಪ್ರಗತಿ ಮತ್ತು ಸ್ಥಳೀಯ ಅಭಿವೃದ್ಧಿ ಆದ್ಯತೆಗಳಿಗೆ ಅವುಗಳ ಗುಣಮಟ್ಟ, ಸಮಗ್ರತೆ ಮತ್ತು ಸ್ಪಂದಿಸುವಿಕೆಯನ್ನು ಮತ್ತಷ್ಟು ಬಲವರ್ಧನೆಗೊಳಿಸುವ ಅಗತ್ಯತೆಯನ್ನು ಪ್ರತಿಪಾದಿಸಿದರು. ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀಮತಿ ರೋಹಿಣಿ ಆರ್. ಭಜಿಭಾಕರೆ, ಸಮಗ್ರ ಗ್ರಾಮೀಣ ಅಭಿವೃದ್ಧಿಯನ್ನು ಖಾತ್ರಿಪಡಿಸಿಕೊಳ್ಳಲು ಸಮಗ್ರ ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆಗಳ ಅಗತ್ಯತೆಯನ್ನು ಒತ್ತಿ ಹೇಳಿದರು. ಕಾರ್ಯಾಗಾರದ ನಂತರ 2027–28ನೇ ಹಣಕಾಸು ವರ್ಷಕ್ಕೆ ಗುಣಮಟ್ಟ, ಭಾಗವಹಿಸುವಿಕೆ ಮತ್ತು ಸಂಯೋಜಿತ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸುವಲ್ಲಿ ಪಂಚಾಯತ್ಗಳಿಗೆ ಮಾರ್ಗದರ್ಶನ ನೀಡಲು ರಾಜ್ಯ, ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಪುನರ್ ಮನನ ಕಾರ್ಯಕ್ರಮಗಳು ನಡೆಯಲಿವೆ.
ಪಂಚಾಯತ್ ಭೂಮಿಗಳಲ್ಲಿ ಇವಿ (ಇವಿ) ಚಾರ್ಜಿಂಗ್ ಮತ್ತು ಬ್ಯಾಟರಿ ಸ್ವಾಪಿಂಗ್ ಕೇಂದ್ರಗಳ ಸ್ಥಾಪನೆಗೆ ಒಪ್ಪಂದ
ಪಂಚಾಯತ್ಗಳ ಆರ್ಥಿಕ ಸುಸ್ಥಿರತೆಯನ್ನು ಬಲಪಡಿಸುವ ಮತ್ತು ಭಾರತದ ಶುದ್ಧ ಇಂಧನ ಕಾರ್ಯಸೂಚಿಯನ್ನು ಮುನ್ನಡೆಸುವ ಮಹತ್ವದ ಹೆಜ್ಜೆಯಾಗಿ, ಪಂಚಾಯತ್ ರಾಜ್ ಸಚಿವಾಲಯವು ಇಂಧನ ಸಚಿವಾಲಯದ ಅಡಿಯಲ್ಲಿ ಬರುವ ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್ಎಲ್) ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಕನ್ವರ್ಜೆನ್ಸ್ ಎನರ್ಜಿ ಸರ್ವೀಸಸ್ ಲಿಮಿಟೆಡ್ (ಸಿಇಎಸ್ಎಲ್) ನೊಂದಿಗೆ ಪಂಚಾಯತ್ ಭೂಮಿಗಳಲ್ಲಿ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಚಾರ್ಜಿಂಗ್ ಮತ್ತು ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲು ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿತು. ಕೇಂದ್ರ ಪಂಚಾಯತ್ ರಾಜ್ ಸಚಿವ ಶ್ರೀ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್ ಮತ್ತು ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿ ಶ್ರೀ (ಡಾ) ವಿನೀತ್ ಜೋಶಿ ಅವರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು ಮತ್ತು ಎಂಒಪಿಆರ್ ಜಂಟಿ ಕಾರ್ಯದರ್ಶಿ ಶ್ರೀಮತಿ ಮುಕ್ತಾ ಶೇಖರ್ ಮತ್ತು ಸಿಇಎಸ್ಎಲ್ ನಿರ್ದೇಶಕಿ ಶ್ರೀ ಅಖಿಲೇಶ್ ಕುಮಾರ್ ದೀಕ್ಷಿತ್ ಅವರು ಒಪ್ಪಂದ ವಿನಿಮಯ ಮಾಡಿಕೊಂಡರು. ಇದು ಗ್ರಾಮೀಣ ಸ್ಥಳೀಯ ಆಡಳಿತ, ಗ್ರೀನ್ ಮೊಬಿಲಿಟಿ ಮತ್ತು ಸುಸ್ಥಿರ ಆದಾಯ ಉತ್ಪಾದನೆಯ ನವೀನ ಸಂಗಮವನ್ನು ಗುರುತಿಸುತ್ತದೆ. ಈ ಪಾಲುದಾರಿಕೆಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಗ್ರಾಮ, ಬ್ಲಾಕ್ ಮತ್ತು ಜಿಲ್ಲಾ ಪಂಚಾಯತ್ಗಳಿಗೆ ಹೊಸ ಸ್ವಂತ ಆದಾಯ ಮೂಲಗಳ (ಒಎಸ್ ಆರ್) ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ನಗರ ಕೇಂದ್ರಗಳನ್ನು ಮೀರಿ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಪಂಚಾಯತ್ ಆವರಣಗಳಲ್ಲಿ ಸೂಕ್ತವಾದ ಸ್ಥಳಗಳು ಸೇರಿ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ನಾಲ್ಕು ಚಕ್ರ ವಾಹನಗಳು ಮತ್ತು ಮಧ್ಯಮ ಮತ್ತು ಭಾರೀ ವಾಹನಗಳಿಗೆ ಸ್ವಚ್ಛ ಮೊಬಿಲಿಟಿಯ ಮೂಲಸೌಕರ್ಯ ಒದಗಿಸುತ್ತದೆ. ಸೂಕ್ತ ಸ್ಥಳಗಳ ಗುರುತಿಸುವಿಕೆ ಮತ್ತು ಮೇಲ್ವಿಚಾರಣೆಗಾಗಿ ಸಚಿವಾಲಯವು ರಾಜ್ಯ ಪಂಚಾಯತ್ ರಾಜ್ ಇಲಾಖೆಗಳೊಂದಿಗೆ ಸಮನ್ವಯ ಸುಗಮಗೊಳಿಸುತ್ತದೆ, ಆದರೆ CESL ಸ್ಥಳ ಮೌಲ್ಯಮಾಪನ, ಬೇಡಿಕೆ ಒಗ್ಗೂಡಿಸುವಿಕೆ, ಪೂರೈಕೆ, ಸ್ಥಾಪನೆ, ಪರೀಕ್ಷೆ, ಕಾರ್ಯಾರಂಭ, ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಕೈಗೊಳ್ಳುತ್ತದೆ.
ಈ ಉಪಕ್ರಮವು ಇತ್ತೀಚೆಗೆ ಬಿಡುಗಡೆಯಾದ ಮಾದರಿ ಪಂಚಾಯತ್ ತೆರಿಗೆ, ದರಗಳು ಮತ್ತು ಶುಲ್ಕ ನಿಯಮಗಳು (ಮಾದರಿ ಒಎಸ್ ಆರ್ ನಿಯಮಗಳು) ಸೇರಿ ವರ್ಧಿತ ಒಎಸ್ ಆರ್ ಸೃಷ್ಟಿಯ ಮೂಲಕ ಪಂಚಾಯತ್ಗಳನ್ನು ಸಬಲೀಕರಣಗೊಳಿಸುವ ಸಚಿವಾಲಯದ ಪ್ರಯತ್ನಗಳೊಂದಿಗೆ ಹೊಂದಿಕೆಯಾಗುತ್ತದೆ. ಇದು ಪಾರದರ್ಶಕ, ಜವಾಬ್ದಾರಿಯುತ ಮತ್ತು ಸ್ಥಳೀಯ ಮೂಲಗಳಿಂದ ಆದಾಯ ಕ್ರೋಢೀಕರಣಕ್ಕಾಗಿ ಚೌಕಟ್ಟನ್ನು ಒದಗಿಸುತ್ತದೆ. ಪಂಚಾಯತ್ ಭೂಮಿ ಉತ್ಪಾದಕ ಸಮುದಾಯ ಆಸ್ತಿಯಾಗುತ್ತದೆ, ನಾಗರಿಕ ಸೇವೆಗಳು, ಮೂಲಸೌಕರ್ಯ ಮತ್ತು ಸಮುದಾಯ ಕಲ್ಯಾಣಕ್ಕಾಗಿ ಪುನರಾವರ್ತಿತ ಆದಾಯ ಉತ್ಪಾದಿಸುತ್ತದೆ, ಇವಿ ಸೇವೆಗಳ ಲಭ್ಯತೆಯನ್ನು ಸುಧಾರಿಸುತ್ತದೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇಂಗಾಲದ ಹೊರಸೂಸುವಿಕೆ ತಗ್ಗಿಸುತ್ತದೆ. ಈ ಸಹಯೋಗದ ಮೂಲಕ, ಪಂಚಾಯತ್ ಮಟ್ಟದ ಸಾರ್ವಜನಿಕ ಸ್ವತ್ತುಗಳು ಎಲೆಕ್ಟ್ರಿಕ್ ಮೊಬಿಲಿಟಿ ಮೂಲಸೌಕರ್ಯದ ಲಭ್ಯತೆಯನ್ನು ವಿಸ್ತರಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಎಂಒಪಿಆರ್ ಮತ್ತು ಸಿಇಎಸ್ ಎಲ್ ಅನ್ವೇಷಿಸುತ್ತವೆ ಮತ್ತು ಸ್ವಚ್ಛ ಮತ್ತು ಹಸಿರು ಗ್ರಾಮಗಳು, ಸುಸ್ಥಿರ ಸ್ಥಳೀಯ ಅಭಿವೃದ್ಧಿ ಮತ್ತು ಆರ್ಥಿಕವಾಗಿ ಬಲಿಷ್ಠವಾದ ಪಂಚಾಯತ್ಗಳ ವಿಶಾಲ ಉದ್ದೇಶಗಳಿಗೆ ಕೊಡುಗೆ ನೀಡುತ್ತವೆ.
*****