ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಕ್ರೀಡೆಯನ್ನು ಸ್ವಚ್ಛಗೊಳಿಸಲು ಭಾರತ ಕಟಿ ಬದ್ಧ: ಕ್ರೀಡೆಯಲ್ಲಿ ಉದ್ದೀಪನ ಮದ್ದು ಸೇವನೆ ತಡೆ ವಿರುದ್ಧದ ಯುನೆಸ್ಕೋ ಅಂತಾರಾಷ್ಟ್ರೀಯ ಸಮಾವೇಶದಡಿಯಲ್ಲಿ COP10 ಬ್ಯೂರೋ ಸಭೆಯಲ್ಲಿ ಡಾ. ಮನ್ಸುಖ್ ಮಾಂಡವಿಯಾ ಹೇಳಿಕೆ


“ಕ್ರಿಮಿನಲ್ ನಿಬಂಧನೆಗಳನ್ನು ಸೇರ್ಪಡೆ ಮಾಡಲು ಭಾರತ ರಾಷ್ಟ್ರೀಯ ಡೋಪಿಂಗ್ ನಿಗ್ರಹ ಕಾಯ್ದೆಗೆ ಮತ್ತಷ್ಟು ತಿದ್ದುಪಡಿಗಳನ್ನು ತರಲಿದೆ”: ಡಾ. ಮನ್ಸುಖ್ ಮಾಂಡವಿಯಾ

“2025-26ರಲ್ಲಿ ನಾಡಾದಿಂದ 7 ಸಾವಿರಕ್ಕೂ ಅಧಿಕ ಪರೀಕ್ಷೆಗಳು, 350ಕ್ಕೂ ಅಧಿಕ ಜಾಗೃತಿ ಗೋಷ್ಠಿಗಳು ಮತ್ತು 27,000 ಭಾಗವಹಿಸುವವರನ್ನು ತಲುಪಿದೆ; ನೋ ಯುವರ್ ಮೆಡಿಸಿನ್ ಅಪ್ಲಿಕೇಶನ್ ಅರ್ಧ ಮಿಲಿಯನ್‌ಗಿಂತಲೂ ಅಧಿಕ ಹುಡುಕಾಟಗಳ ದಾಖಲು’’: ಕೇಂದ್ರ ಕ್ರೀಡಾ ಸಚಿವರಾದ ಡಾ. ಮಾಂಡವಿಯಾ

ಪ್ರಕಟಣಾ ದಿನಾಂಕ: 27 OCT 2026 3:06PM by PIB Bengaluru

ಗೌರವಾನ್ವಿತ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ನವದೆಹಲಿಯಲ್ಲಿಂದು ನಡೆದ ಕ್ರೀಡೆಯಲ್ಲಿ ಡೋಪಿಂಗ್ ವಿರುದ್ಧದ ಯುನೆಸ್ಕೋ ಅಂತಾರಾಷ್ಟ್ರೀಯ ಸಮಾವೇಶದ ಅಡಿಯಲ್ಲಿ 2026–27ರ COP10 ಬ್ಯೂರೋದ ಮೂರನೇ ಔಪಚಾರಿಕ ಸಭೆ ಮತ್ತು 2026–27ರ ನಿಧಿಯ ಅನುಮೋದನೆ ಸಮಿತಿಯ ನಾಲ್ಕನೇ ಔಪಚಾರಿಕ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಕ್ರೀಡೆಯನ್ನು ಸ್ವಚ್ಛಗೊಳಿಸಲು ಭಾರತ ಕಟ್ಟಿಬದ್ಧತೆವಾಗಿದೆ ಎಂಬ ಭರವಸೆಯನ್ನು ಡಾ. ಮಾಂಡವಿಯಾ ನೀಡಿದರು. ಅವರು "ಭಾರತ ಸದಾ ಕ್ರೀಡಾ ಶ್ರೇಷ್ಠತೆಯು  ಪ್ರಾಮಾಣಿಕತೆಯಿಂದ ಇರಬೇಕೆಂದು ದೃಢವಾಗಿ ನಂಬುತ್ತದೆ. ಪ್ರತಿಯೊಬ್ಬ ಕ್ರೀಡಾಪಟು ಸ್ಪರ್ಧಿಸಲು ನ್ಯಾಯಯುತ ಅವಕಾಶವನ್ನು ಪಡೆಯಬೇಕು. ಪ್ರತಿಭೆ, ಸಿದ್ಧತೆ ಮತ್ತು ಕಠಿಣ ಪರಿಶ್ರಮದಿಂದ ಯಶಸ್ಸು ನಿರ್ಧರಿಸಲ್ಪಡುತ್ತದೆಯೇ ಹೊರತು ನಿಷೇಧಿತ ವಸ್ತುಗಳು ಅಥವಾ ಅಕ್ರಮ ವಿಧಾನಗಳಿಂದಲ್ಲ. “ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಗ್ಗಾಗ್ಗೆ ಶುದ್ಧ ಕ್ರೀಡೆ ಮತ್ತು ಡೋಪಿಂಗ್ (ಉದ್ದೀಪನ ಮದ್ದು ಸೇವನೆ ತಡೆ) ಬೆದರಿಕೆಯ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಅಭ್ಯಾಸ ಮಾಡುವ ಅಗತ್ಯತೆಯನ್ನು ಒತ್ತಿ ಹೇಳಿತ್ತಲೇ ಇರುತ್ತಾರೆ" ಎಂದು ಅವರು ಹೇಳಿದರು.

ರಾಷ್ಟ್ರೀಯ ಡೋಪಿಂಗ್ ವಿರೋಧಿ ಕಾಯ್ದೆ2022 ಮತ್ತು ಅದರ 2025ರ ತಿದ್ದುಪಡಿಯ ಮೂಲಕ ಭಾರತದ ಡೋಪಿಂಗ್ ವಿರೋಧಿ ಚೌಕಟ್ಟನ್ನು ಬಲವರ್ಧನೆಗೊಳಿಸುತ್ತಿರುವುದನ್ನು ಕೇಂದ್ರ ಕ್ರೀಡಾ ಸಚಿವರು ಪ್ರಮುಖವಾಗಿ ಉಲ್ಲೇಖಿಸಿದರು. "ಭಾರತವು ರಾಷ್ಟ್ರೀಯ ಡೋಪಿಂಗ್ ವಿರೋಧಿ ಕಾಯ್ದೆ, 2022 ಮತ್ತು ಅದರ 2025 ರ ತಿದ್ದುಪಡಿಯ ಮೂಲಕ ತನ್ನ ಕಾನೂನು ಮತ್ತು ಸಾಂಸ್ಥಿಕ ಚೌಕಟ್ಟನ್ನು ಬಲಪಡಿಸಿದೆ, ಇವೆರಡೂ ಜುಲೈ 2026 ರಲ್ಲಿ ಜಾರಿಗೆ ಬಂದವು" ಎಂದು ಡಾ. ಮಾಂಡವಿಯಾ ಹೇಳಿದರು. "ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ನಾವು ಮತ್ತೊಂದು ತಿದ್ದುಪಡಿಯನ್ನು ತರುತ್ತೇವೆ, ಇದು ತರಬೇತುದಾರರು ಮತ್ತು ಪೂರೈಕೆ ಸರಣಿ ಪಾಲುದಾರರು ಸೇರಿ ನಿಯಮಗಳನ್ನು ಉಲ್ಲಂಘನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಎದುರಿಸಲು ಕ್ರಿಮಿನಲ್ ನಿಬಂಧನೆಗಳನ್ನು ಸೇರ್ಪಡೆ ಮಾಡುವ ಗುರಿಯನ್ನು ಹೊಂದಿದೆ." ಎಂದರು.

ಅಲ್ಲದೆ, ಕೇಂದ್ರ ಕ್ರೀಡಾ ಸಚಿವರು ಡೋಪಿಂಗ್ ಮತ್ತು ನಿಷೇಧಿತ ವಸ್ತುಗಳ ಬಗ್ಗೆ ಕ್ರೀಡಾಪಟುಗಳಿಗೆ ಮಾಹಿತಿ ನೀಡಲು ಭಾರತ ಈಗಾಗಲೇ ಕೈಗೊಂಡಿರುವ ಕ್ರಮಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು.

"2025-26ರ ಅವಧಿಯಲ್ಲಿ, ಭಾರತದ ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆಯು (NADA) 7 ಸಾವಿರಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಿದೆ. ಜೊತೆಗೆ, ಅಪಾಯ-ಆಧಾರಿತ ಪರೀಕ್ಷೆಗಳು ಮತ್ತು ಗುಪ್ತಚರ-ಆಧಾರಿತ ತನಿಖೆಗಳಿಗೆ ಆದ್ಯತೆ ನೀಡುತ್ತಲೇ, 350ಕ್ಕೂ ಅಧಿಕ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ 27,000 ಮಂದಿಯನ್ನು ತಲುಪಿದೆ," ಎಂದು ಡಾ. ಮಾಂಡವೀಯ ಹೇಳಿದರು. "'ನೋ ಯುವರ್ ಮೆಡಿಸಿನ್' ಮೊಬೈಲ್ ಅಪ್ಲಿಕೇಶನ್‌ನಲ್ಲಿ ಐದು ಲಕ್ಷಕ್ಕೂ ಅಧಿಕ ಬಾರಿ ಹುಡುಕಾಟಗಳು ನಡೆದಿವೆ; ಇದು ಔಷಧಗಳ ಬಗ್ಗೆ ಸರಿಯಾದ ಮಾಹಿತಿ ಪಡೆದು ನಿರ್ಧಾರಗಳನ್ನು ತೆಗೆದುಕೊಳ್ಳಲು ಕ್ರೀಡಾಪಟುಗಳಿಗೆ ಸಹಕಾರಿಯಾಗಿದೆ." ಎಂದು ತಿಳಿಸಿದರು.

ಭಾರತದಲ್ಲಿ ಪ್ರತಿಯೊಂದು ತರಗತಿಯಲ್ಲೂ ಕ್ರೀಡಾ ಮೌಲ್ಯಗಳು ಅನ್ನು ಪರಿಚಯಿಸಲು, ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಶಿಕ್ಷಣ ಸಚಿವಾಲಯ ಮತ್ತು ಯುನೆಸ್ಕೋ (ಯುನೆಸ್ಕೋ) ನಡುವೆ ಶೀಘ್ರದಲ್ಲೇ ಆಗಲಿರುವ ತಿಳಿವಳಿಕೆ ಒಪ್ಪಂದ (ಎಂಒಯು)ದ ಬಗ್ಗೆ ಡಾ. ಮಾಂಡವೀಯ ಪ್ರಧಾನವಾಗಿ ಪ್ರಸ್ತಾಪಿಸಿದರು. ಈ ಉಪಕ್ರಮವು ಕ್ರೀಡಾ ಮೌಲ್ಯಗಳು, ನೈತಿಕತೆ ಮತ್ತು ಪ್ರಾಮಾಣಿಕತೆಯನ್ನು ತರಗತಿಗಳಿಗೆ ಕೊಂಡೊಯ್ಯುವ ಮತ್ತು ಲಕ್ಷಾಂತರ ಯುವ ಮನಸ್ಸುಗಳನ್ನು ತಲುಪುವ ಗುರಿಯನ್ನು ಹೊಂದಿದೆ.

ಡೋಪಿಂಗ್ ವಿರುದ್ಧದ ಹೋರಾಟದಲ್ಲಿ ಜಾಗತಿಕ ಸಹಯೋಗವನ್ನು ಹೆಚ್ಚಿಸುವುದು ಮತ್ತು ಆ ಕುರಿತ ಒಪ್ಪಂದದ ಅನುಷ್ಠಾನ ಬಲವರ್ಧನೆಗೊಳಿಸುವುದು ಈ ಸಭೆಯ ಉದ್ದೇಶವಾಗಿತ್ತು. ಜಾಗತಿಕ ಡೋಪಿಂಗ್ ವಿರೋಧಿ ವ್ಯವಸ್ಥೆಯಲ್ಲಿ ಸಾರ್ವಜನಿಕ ಪ್ರಾಧಿಕಾರಗಳ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ವಿವರಿಸುವ ಚೌಕಟ್ಟಿನ ದಾಖಲೆಯ ಬಗ್ಗೆ ಚರ್ಚೆಗಳು ನಡೆದವು. ಅಲ್ಲದೆ, 'ರಾಷ್ಟ್ರೀಯ ಅನುಸರಣಾ ವೇದಿಕೆ'ಯ ಮೂಲಕ ಸದಸ್ಯ ರಾಷ್ಟ್ರಗಳೊಂದಿಗೆ ತೊಡಗಿಸಿಕೊಳ್ಳುವ ಮೂಲಕ, ಡೋಪಿಂಗ್ ವಿರೋಧಿ ಶಿಕ್ಷಣ ಸಾಮರ್ಥ್ಯ ಹೆಚ್ಚಳ ಮತ್ತು ಶೈಕ್ಷಣಿಕ ಸಂಶೋಧನೆಯನ್ನು ಬಲವರ್ಧನೆಗೊಳಿಸುವ ಬಗ್ಗೆಯೂ ಚರ್ಚಿಸಲಾಯಿತು. ಅಲ್ಲದೆ, ಸಭೆಯ ಕಾರ್ಯಸೂಚಿಯಲ್ಲಿ ಸುಸ್ಥಿರ ಜಾಗತಿಕ ಡೋಪಿಂಗ್ ವಿರೋಧಿ ವ್ಯವಸ್ಥೆಯನ್ನು ಬೆಂಬಲಿಸಲು ಸಂಪನ್ಮೂಲ ಕ್ರೋಢೀಕರಣ, 2026-2031ರ ಅವಧಿಗೆ ನಿಧಿಯ ಕಾರ್ಯಾಚರಣಾ ತಂತ್ರ, ಹಾಗೂ ನಿಯಮಗಳ ಅನುಸರಣೆ ಮತ್ತು ಸಾಮರ್ಥ್ಯ ವೃದ್ಧಿಯಂತಹ ವಿಷಯಗಳು ಸೇರಿದ್ದವು.

ಉದ್ಘಾಟನಾ ಗೋಷ್ಠಿಯಲ್ಲಿ ಅಜೆರ್ಬೈಜಾನ್ ಗಣರಾಜ್ಯದ ಯುವ ಮತ್ತು ಕ್ರೀಡಾ ಸಚಿವರು ಹಾಗೂ COP10 ಬ್ಯೂರೋದ ಅಧ್ಯಕ್ಷರಾದ ಶ್ರೀ ಫರೀದ್ ಗಯಿಬೋವ್; ಕ್ರೀಡೆಯಲ್ಲಿ ಡೋಪಿಂಗ್ ನಿರ್ಮೂಲನೆಗಾಗಿರುವ ನಿಧಿಯ ಅನುಮೋದನಾ ಸಮಿತಿಯ ಅಧ್ಯಕ್ಷರಾದ ಶ್ರೀ ಲ್ಯೂಕ್ ಮೆಕ್‌ಕ್ಯಾನ್; ಭಾರತ ಸರ್ಕಾರದ ಕ್ರೀಡಾ ಕಾರ್ಯದರ್ಶಿ ಮತ್ತು COP10 ಬ್ಯೂರೋದ ಉಪಾಧ್ಯಕ್ಷರಾದ ಶ್ರೀ ಹರಿ ರಂಜನ್ ರಾವ್; ಯುನೆಸ್ಕೋದ ಸಾಮಾಜಿಕ ನೀತಿಗಳು ಮತ್ತು ಒಳಗೊಳ್ಳುವಿಕೆ ವಿಭಾಗದ ನಿರ್ದೇಶಕರಾದ ಶ್ರೀ ಗುಸ್ತಾವೊ ಮೆರಿನೊ; ಹಾಗೂ ಜಾಂಬಿಯಾ, ಸ್ಪೇನ್ ಮತ್ತು ರಷ್ಯಾದ ಒಕ್ಕೂಟದಿಂದ COP10 ಬ್ಯೂರೋ ಮತ್ತು ನಿಧಿ ಅನುಮೋದನಾ ಸಮಿತಿಯ ಸದಸ್ಯರು ಭಾಗವಹಿಸಿದ್ದರು.

ಈ ಜಂಟಿ ಸಭೆಯು ಜಾಗತಿಕ ಕ್ರೀಡಾ ಆಡಳಿತದಲ್ಲಿ ಭಾರತದ ಭಾಗವಹಿಸುವಿಕೆಯನ್ನು ಪ್ರತಿಬಿಂಬಿಸುತ್ತದೆ; ಇದರಲ್ಲಿ ಭಾರತವು 'ಗ್ರೂಪ್ IV' ಅನ್ನು ಉಪಾಧ್ಯಕ್ಷ ಸ್ಥಾನದ ಮೂಲಕ ಪ್ರತಿನಿಧಿಸುತ್ತದೆ. ಅಲ್ಲದೆ, ನೈತಿಕ ಕ್ರೀಡಾ ಪದ್ಧತಿಗಳನ್ನು ಉತ್ತೇಜಿಸಲು ಹಾಗೂ ಕ್ರೀಡೆಯಲ್ಲಿ ಡೋಪಿಂಗ್ ವಿರುದ್ಧದ ಯುನೆಸ್ಕೋ (UNESCO) ಅಂತಾರಾಷ್ಟ್ರೀಯ ಒಪ್ಪಂದದಂತಹ ಅಂತಾರಾಷ್ಟ್ರೀಯ ಚೌಕಟ್ಟುಗಳನ್ನು ಬೆಂಬಲಿಸಲು ಭಾರತ ಹೊಂದಿರುವ ಬದ್ಧತೆಯನ್ನು ಇದು ಪ್ರಮುಖವಾಗಿ ಬಿಂಬಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2328969) ವಿಸಿಟರ್ ಕೌಂಟರ್ : 12
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Assamese , Gujarati