ಪ್ರಕಟಣಾ ದಿನಾಂಕ:
26 OCT 2026 4:26PM by PIB Bengaluru
ಸಾಮಾನ್ಯ ದೂರಸಂಪರ್ಕ ಗ್ರಾಹಕರ ಮಾಹಿತಿಗಾಗಿ, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್ ) 2026 ರ ಆಗಸ್ಟ್ ತಿಂಗಳಲ್ಲಿ ಕರ್ನಾಟಕ ಎಲ್ ಎಸ್ ಎ ವ್ಯಾಪ್ತಿಯ ವಿಜಯನಗರ ಜಿಲ್ಲೆಯಾದ್ಯಂತ ನಡೆಸಲಾದ ಸ್ವತಂತ್ರ ಡ್ರೈವ್ ಟೆಸ್ಟ್ (ಐಡಿಟಿ) ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಟೆಲಿಕಾಂ ಸೇವಾ ಪೂರೈಕೆದಾರರು (ಟಿ ಎಸ್ ಪಿ) ಒದಗಿಸುವ ಮೊಬೈಲ್ ನೆಟ್ವರ್ಕ್ ಸೇವೆಗಳ (ಧ್ವನಿ ಮತ್ತು ಡೇಟಾ) ನೈಜ-ಸಮಯದ ಗುಣಮಟ್ಟವನ್ನು ಮೌಲ್ಯಮಾಪನ ಮಾಡುವುದು ಮತ್ತು ಪರಿಶೀಲಿಸುವುದು ಈ ಡ್ರೈವ್ ಪರೀಕ್ಷೆಯ ಮುಖ್ಯ ಉದ್ದೇಶವಾಗಿದೆ. ಐಡಿಟಿ ಸಮಯದಲ್ಲಿ, ನೆಟ್ ವರ್ಕಿನ ವ್ಯಾಪ್ತಿ , ಕರೆ ವಿಫಲವಾಗುವ ದರ (ಕಾಲ್ ಡ್ರಾಪ್ ರೇಟ್ - ಸಿಡಿಆರ್ ), ಕರೆ ಸಂಪರ್ಕ ಯಶಸ್ಸಿನ ದರ (ಸಿ ಎಸ್ ಎಸ್ ಆರ್), ಡೇಟಾ ಡೌನ್ಲೋಡ್ (ಡಿ ಎಲ್) ಮತ್ತು ಅಪ್ಲೋಡ್ (ಯು ಎಲ್) ಮುಂತಾದ ಪ್ರಮುಖ ಸೇವಾ ಗುಣಮಟ್ಟದ ಮಾನದಂಡಗಳ (ಕ್ಯೂ ಒ ಎಸ್ ಗಳಲ್ಲಿ ಟೆಲಿಕಾಂ ಕಂಪನಿಗಳ ಕಾರ್ಯಕ್ಷಮತೆಯನ್ನು ಟ್ರಾಯ್ ದಾಖಲಿಸುತ್ತದೆ. ಇವುಗಳನ್ನು ಗ್ರಾಹಕರಿಗೆ ತಿಳಿಸಲು ಮತ್ತು ಸೇವೆಯನ್ನು ಸುಧಾರಿಸಲು ಟೆಲಿಕಾಂ ಕಂಪನಿಗಳನ್ನು ಪ್ರೋತ್ಸಾಹಿಸಲು ಪ್ರಕಟಿಸಲಾಗುತ್ತದೆ.
ಈ ಐಡಿಟಿ ಗಳನ್ನು ನಗರಗಳು, ಹಾಟ್ ಸ್ಪಾಟ್ ಗಳು, ಸಾರ್ವಜನಿಕ ಸಾರಿಗೆ ಕೇಂದ್ರಗಳು ಇತ್ಯಾದಿ ವಿವಿಧ ಬಳಕೆ ಪರಿಸರಗಳಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳ ಮೊಬೈಲ್ ನೆಟ್ವರ್ಕ್ ಕಾರ್ಯಕ್ಷಮತೆಯನ್ನು ವಾಸ್ತವಿಕವಾಗಿ ದಾಖಲಿಸಲು ವಿನ್ಯಾಸಗೊಳಿಸಲಾಗಿದೆ. ಈ ರೀತಿಯ ಡ್ರೈವ್ ಟೆಸ್ಟಿಂಗ್ನಲ್ಲಿ, 2ಜಿ, 3ಜಿ, 4ಜಿ, ಮತ್ತು 5ಜಿ ನೆಟ್ ವರ್ಕ್ ಗಳಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳ ಗಳ ಸಿಮ್ ಕಾರ್ಡುಗಳನ್ನು ಬಳಸಿ ಲೈವ್ ಡೇಟಾ ಮತ್ತು ವಾಯ್ಸ್ ಸೆಷನ್ ಗಳನ್ನು ನಡೆಸಲಾಗುತ್ತದೆ. ಹಲವು ಸುಧಾರಿತ ಪರೀಕ್ಷಾ ಹ್ಯಾಂಡ್ ಸೆಟ್ ಗಳನ್ನು ಬಳಸಲಾಗುತ್ತದೆ ಮತ್ತು ಸುಧಾರಿತ ತಂತ್ರಾಂಶ ವ್ಯವಸ್ಥೆಗಳನ್ನು ಬಳಸಿ ನೈಜ ಸಮಯದಲ್ಲಿ ಈ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು ವಿಶ್ಲೇಷಿಸಲಾಗುತ್ತದೆ.
ಟ್ರಾಯ್, ತನ್ನ ನಿಯೋಜಿತ ಸಂಸ್ಥೆಯ ಮೂಲಕ ಆಗಸ್ಟ್ 11 ರಿಂದ ಆಗಸ್ಟ್ 14 2026ರವರೆಗೆ ಕರ್ನಾಟಕ ಎಲ್ ಎಸ್ ಎ ವ್ಯಾಪ್ತಿಯ ವಿಜಯನಗರ ಜಿಲ್ಲೆಯಲ್ಲಿ ನಗರ ಡ್ರೈವ್ - 439.8 ಕಿ.ಮೀ, ಹಾಟ್ಸ್ಪಾಟ್ ಸ್ಥಳಗಳು - 13, ವಾಕ್ ಟೆಸ್ಟ್ - 7.6 ಕಿ.ಮೀ ಮತ್ತು ಹೈವೇ ಡ್ರೈವ್ - 74 ಕಿ.ಮೀ ವ್ಯಾಪ್ತಿಯಲ್ಲಿ ಡ್ರೈವ್ ಟೆಸ್ಟ್ಗಳನ್ನು ನಡೆಸಿದೆ. ಟ್ರಾಯ್ ಪ್ರಾದೇಶಿಕ ಕಚೇರಿ ಬೆಂಗಳೂರಿನ ಮೇಲ್ವಿಚಾರಣೆಯಲ್ಲಿ ಈ ಪರೀಕ್ಷೆಗಳನ್ನು ನಡೆಸಲಾಗಿದೆ. ಡ್ರೈವ್ ಟೆಸ್ಟ್ ವರದಿಗಳಲ್ಲಿ ಪ್ರಸ್ತುತಪಡಿಸಲಾದ ಅವಲೋಕನಗಳು ಡ್ರೈವ್ ಟೆಸ್ಟ್ ನಡೆಸಿದ ದಿನ, ಸಮಯದಲ್ಲಿ ಆಯಾ ಪ್ರದೇಶ, ಮಾರ್ಗದಲ್ಲಿ ಟೆಲಿಕಾಂ ಕಂಪನಿಗಳ ಕಾರ್ಯಕ್ಷಮತೆಯನ್ನು ಪ್ರತಿನಿಧಿಸುತ್ತವೆ.

ಡ್ರೈವ್ ಟೆಸ್ಟ್ ಮಾರ್ಗ ನಕ್ಷೆ: ಈ ಕೆಳಗಿನ ನಕ್ಷೆಯು ಡ್ರೈವ್ ಟೆಸ್ಟ್ ಮಾರ್ಗಗಳ ಅವಲೋಕನವನ್ನು ಒದಗಿಸುತ್ತದೆ, ಇದು ನಕ್ಷೆಯಲ್ಲಿ ತೋರಿಸಿರುವ ಸೂಚಕಗಳ ಪ್ರಕಾರ ಸಿಟಿ ಡ್ರೈವ್, ಇಂಟರ್-ಆಪರೇಟರ್ ಕರೆಗಳು, ಹಾಟ್ ಸ್ಪಾಟ್ಗಳು ಮತ್ತು ವಾಕ್ ಟೆಸ್ಟ್ಗಳನ್ನು ಸೂಚಿಸುತ್ತದೆ.
ಮೌಲ್ಯಮಾಪನ ಮಾಡಲಾದ ಪ್ರಮುಖ ಮಾನದಂಡಗಳು
- ಕವರೇಜ್ ಗ್ಯಾಪ್: ಆಯಾ ತಂತ್ರಜ್ಞಾನಕ್ಕೆ (2ಜಿ/ 3ಜಿ/ 4ಜಿ/ 5ಜಿ) ನಿಗದಿಪಡಿಸಿದ ಕನಿಷ್ಠ ಸಿಗ್ನಲ್ ಸಾಮರ್ಥ್ಯಕ್ಕಿಂತ ಕಡಿಮೆ ಸಿಗ್ನಲ್ ಸಾಮರ್ಥ್ಯ ಕಂಡುಬಂದ ಮಾದರಿಗಳ ಶೇಕಡಾವಾರು ಪ್ರಮಾಣ.
- ಧ್ವನಿ (ವಾಯ್ಸ್) ಸೇವೆಗಳು: ಕಾಲ್ ಸೆಟಪ್ ಯಶಸ್ಸಿನ ದರ (ಸಿ ಎಸ್ ಎಸ್ ಆರ್), ಕರೆ ವಿಫಲದ ದರ (ಡ್ರಾಪ್ ಕಾಲ್ ರೇಟ್ -ಡಿಸಿಆರ್), ಕರೆ ಸಂಪರ್ಕಗೊಳ್ಳಲು ತೆಗೆದುಕೊಳ್ಳುವ ಸಮಯ, ಕರೆ ಮ್ಯೂಟ್ ದರ ಅಥವಾ ಏಕಮುಖ ಆಡಿಯೋ ದರ (ಕಾಲ್ ಸೈಲೆಂಸ್ ರೇಟ್), ಧ್ವನಿಯ ಗುಣಮಟ್ಟ ಸ್ಪೀಚ್ (ಎಂ ಒ ಎಸ್).
- ಕಾಲ್ ಸೈಲೆಂಸ್ ಘಟನೆಗಳು: ಕರೆಗಳ ಸಮಯದಲ್ಲಿ ಸಂಭವಿಸಿದ ಕಾಲ್ ಸೈಲೆಂಸ್ ಘಟನೆಗಳ ಸಂಖ್ಯೆ.
- ಡೇಟಾ ಸೇವೆಗಳು: ಡೌನ್ಲೋಡ್/ಅಪ್ಲೋಡ್ ಥ್ರೂಪುಟ್, ಲೇಟೆನ್ಸಿ, ಜಿಟ್ಟರ್, ಪ್ಯಾಕೆಟ್ ಡ್ರಾಪ್ ದರ.
ಪ್ರಮುಖ ಮಾನದಂಡಗಳಿಗಾಗಿ ವಿಜಯನಗರ ಜಿಲ್ಲೆಯ ಒಟ್ಟಾರೆ ಮೊಬೈಲ್ ನೆಟ್ ವರ್ಕ್ ಕಾರ್ಯಕ್ಷಮತೆಯನ್ನು ಈ ಕೆಳಗೆ ಸಂಕ್ಷಿಪ್ತವಾಗಿ ನೀಡಲಾಗಿದೆ:
1. ವಿಜಯನಗರ ಜಿಲ್ಲೆ
a) ಕವರೇಜ್ ಕೊರತೆ - ಆಟೋ-ಸೆಲೆಕ್ಷನ್ ಮೋಡ್ನಲ್ಲಿ (5ಜಿ/4ಜಿ/3ಜಿ/2ಜಿ) ಧ್ವನಿ ಪರೀಕ್ಷೆಯ ಸಮಯದಲ್ಲಿ ಕಂಡುಬಂದ ಸಿಗ್ನಲ್ ಸಾಮರ್ಥ್ಯದಲ್ಲಿ, ಒಟ್ಟು ಸಂಗ್ರಹಿಸಿದ ಮಾದರಿಗಳಲ್ಲಿ ಕಳಪೆ ಸಿಗ್ನಲ್ ಸಾಮರ್ಥ್ಯ ಹೊಂದಿರುವ ಮಾದರಿಗಳ ಸಂಖ್ಯೆ ಹೀಗಿವೆ: ಏರ್ ಟೆಲ್ - 3067/52309, ಬಿಎಸ್ ಎನ್ ಎಲ್ - 18287/48469, ಆರ್ ಜೆಐಎಲ್ - 2750/52578 ಮತ್ತು ವಿಐಎಲ್ - 8930/51328. ಕವರೇಜ್ ಕೊರತೆಗಳಿಗೆ ಸಂಬಂಧಿಸಿದ ವಿವರಗಳನ್ನು ನಕ್ಷೆಯಲ್ಲಿ ನೀಡಲಾಗಿದೆ.
b) ವಿಫಲವಾದ ಕರೆಗಳು (ಡ್ರಾಪ್ ಆದ ಕರೆಗಳು) - ಯಶಸ್ವಿಯಾಗಿ ಸಂಪರ್ಕಗೊಂಡ ಕರೆಗಳಲ್ಲಿ ಡ್ರಾಪ್ ಆದ ಕರೆಗಳ ಸಂಖ್ಯೆ ಹೀಗಿದೆ: ಏರ್ ಟೆಲ್ - 1/471, ಬಿಎಸ್ ಎನ್ ಎಲ್ - 37/425, ಆರ್ ಜೆಐಎಲ್ - 2/478 ಮತ್ತು ವಿಐಎಲ್ - 8/467. ಡ್ರಾಪ್ ಆದ ಕರೆಗಳ ಸ್ಥಳಗಳ ವಿವರಗಳನ್ನು ನಕ್ಷೆಯಲ್ಲಿ ನೀಡಲಾಗಿದೆ.
c) ಕಾಲ್ ಸೈಲೆಂಸ್ ಘಟನೆಗಳು - ಒಟ್ಟು ಸಂಪರ್ಕಗೊಂಡ ಕರೆಗಳಲ್ಲಿ 3 ಸೆಕೆಂಡುಗಳಿಗಿಂತ ಹೆಚ್ಚು ಕಾಲ ಕಂಡುಬಂದ ಕಾಲ್ ಸೈಲೆಂಸ್ ಘಟನೆಗಳ ಸಂಖ್ಯೆ ಹೀಗಿದೆ: ಏರ್ಟೆಲ್ - 13/533, ಬಿಎಸ್ ಎನ್ಎಲ್ - 33/367, ಆರ್ ಜೆಐಎಲ್ - 10/459 ಮತ್ತು ವಿಐಎಲ್ - 59/453. ಇಂತಹ ಕಾಲ್ ಸೈಲೆಂಸ್ ಸಂಭವಿಸಿದ ಸ್ಥಳಗಳ ವಿವರವನ್ನು ನಕ್ಷೆಯಲ್ಲಿ ನೀಡಲಾಗಿದೆ.
d) ಡೇಟಾ ಡೌನ್ಲೋಡ್ ಮತ್ತು ಅಪ್ಲೋಡ್ ಥ್ರೂಪುಟ್:
i) ಡೇಟಾ ಡೌನ್ಲೋಡ್ ಕಾರ್ಯಕ್ಷಮತೆ (ಒಟ್ಟಾರೆಯಾಗಿ): ದಾಖಲಾದ ಸರಾಸರಿ ಡೌನ್ ಲೋಡ್ ವೇಗದ ವಿವಿರ: (5ಜಿ/4ಜಿ) 87.50 ಎಂಬಿಪಿಎಸ್, ಬಿಎಸ್ ಎನ್ ಎಲ್ ಗೆ (4ಜಿ) 10.47 ಎಂಬಿಪಿಎಸ್, ಆರ್ ಜೆಐಎಲ್ ಗೆ (5ಜಿ/4ಜಿ) 151.30 ಎಂಬಿಪಿಎಸ್ ಮತ್ತು ವಿಐಎಲ್ ಗೆ (5ಜಿ/4ಜಿ/2ಜಿ) 22.09 ಎಂಬಿಪಿಎಸ್ . ಡೌನ್ಲೋಡ್ ಥ್ರೂಪುಟ್ ನ ವಿವರವನ್ನು ನಕ್ಷೆಯಲ್ಲಿ ನೀಡಲಾಗಿದೆ.
ii) ಡೇಟಾ ಅಪ್ ಲೋಡ್ ಕಾರ್ಯಕ್ಷಮತೆ (ಒಟ್ಟಾರೆಯಾಗಿ): ದಾಖಲಾದ ಸರಾಸರಿ ಅಪ್ಲೋಡ್ ವೇಗದ ವಿವರ : ಏರ್ ಟೆಲ್ (5ಜಿ/4ಜಿ) 20.69 ಎಂಬಿಪಿಎಸ್, ಬಿಎಸ್ ಎನ್ ಎಲ್ ಗೆ (4ಜಿ) 5.41 ಎಂಬಿಪಿಎಸ್, ಆರ್ ಜೆಐಎಲ್ (5ಜಿ/4ಜಿ) 14.00 ಎಂಬಿಪಿಎಸ್ ಮತ್ತು ವಿಐಎಲ್ (5ಜಿ/4ಜಿ/2ಜಿ) 10.77 ಎಂಬಿಪಿಎಸ್. ಅಪ್ ಲೋಡ್ ಥ್ರೂಪುಟ್ ನ ವಿವರವನ್ನು ನಕ್ಷೆಯಲ್ಲಿ ನೀಡಲಾಗಿದೆ.
ನಕ್ಷೆಯಲ್ಲಿನ ಕೆಂಪು ಚುಕ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಡ್ರಾಪ್ ಆದ ಕರೆಗಳು ಮತ್ತು ಕಾಲ್ ಸೈಲೆಂಸ್ ಘಟನೆಗಳ ಸ್ಥಳಗಳನ್ನು ವೀಕ್ಷಿಸಬಹುದು
2. ಹೆದ್ದಾರಿ ಡ್ರೈವ್ – ಎನ್ ಎಚ್-50 ಮೂಲಕ ಹೊಸಪೇಟೆಯಿಂದ ಬಣವಿಕಲ್ಲಿನವರೆಗೆ
a) ವ್ಯಾಪ್ತಿಯ ಕೊರತೆ: - 'ಆಟೋ-ಸೆಲೆಕ್ಷನ್' ಮೋಡ್ನಲ್ಲಿ (5ಜಿ/4ಜಿ/3ಜಿ/2ಜಿ) ಡ್ರೈವ್ ಟೆಸ್ಟ್ ಮಾರ್ಗದಲ್ಲಿ ಧ್ವನಿ ಕರೆ ಪರೀಕ್ಷೆ ನಡೆಸಿದಾಗ, ಸಿಗ್ನಲ್ ಸಾಮರ್ಥ್ಯವು ಕಳಪೆಯಾಗಿರುವ ನಮೂನೆಗಳ ಸಂಖ್ಯೆಯನ್ನು ಒಟ್ಟು ಸಂಗ್ರಹಿಸಿದ ನಮೂನೆಗಳ ಸಂಖ್ಯೆಗೆ ಹೋಲಿಸಿ ನೋಡಿದಾಗ, ಕಂಡು ಬಂದ ಪ್ರಮಾಣ: ಏರ್ ಟೆಲ್ 208/5431, ಬಿಎಸ್ ಎನ್ಎಲ್ 1512/4759, ಆರ್ ಜೆಐಎಲ್ ಗೆ 152/5409 ಮತ್ತು ವಿಐಎಲ್ 1063/5303 . ವ್ಯಾಪ್ತಿಯ ಕೊರತೆಗಳ ವಿವರಗಳನ್ನು ನಕ್ಷೆಯಲ್ಲಿ ನೀಡಲಾಗಿದೆ.
b) ಡ್ರಾಪ್ ಆದ ಕರೆಗಳು - ಯಶಸ್ವಿಯಾಗಿ ಸಂಪರ್ಕಗೊಂಡ ಕರೆಗಳಲ್ಲಿ ಡ್ರಾಪ್ ಆದ ಕರೆಗಳ ವಿವರ: ಏರ್ ಟೆಲ್ 0/27, ಬಿಎಸ್ ಎನ್ ಎಲ್ 3/23, ಆರ್ ಜೆಐಎಲ್ 0/27 ಮತ್ತು ವಿಐಎಲ್ 3/28. ಕರೆ ವಿಫಲವಾದ ಘಟನೆಗಳ ವಿವರಗಳನ್ನು ನಕ್ಷೆಯಲ್ಲಿ ನೀಡಲಾಗಿದೆ.
c) ಕಾಲ್ ಸೈಲೆಂಸ್ ಸಂದರ್ಭಗಳು - ಒಟ್ಟು ಸಂಪರ್ಕಗೊಂಡ ಕರೆಗಳಲ್ಲಿ 3 ಸೆಕೆಂಡುಗಳಿಗಿಂತ ಹೆಚ್ಚು ಕಾಲ ಕಂಡುಬಂದ ಸೈಲೆಂಸ್ ಘಟನೆಗಳ ವಿವರ: ಏರ್ ಟೆಲ್) - 0/23, ಬಿಎಸ್ ಎನ್ ಎಲ್) - 4/21, ಆರ್ ಜೆಐ ಎಲ್) - 1/21 ಮತ್ತು ವಿಐಎಲ್) - 1/23. ಇಂತಹ ಸನ್ನಿವೇಶಗಳು ಸಂಭವಿಸಿದ ಸ್ಥಳಗಳ ವಿವರಗಳನ್ನು ನಕ್ಷೆಯಲ್ಲಿ ನೀಡಲಾಗಿದೆ.
d) ಡೇಟಾ ಡೌನ್ ಲೋಡ್ ಮತ್ತು ಅಪ್ಲೋಡ್ ಥ್ರೋಪುಟ್ (ವೇಗ):
i) ಡೇಟಾ ಡೌನ್ ಲೋಡ್ ಕಾರ್ಯಕ್ಷಮತೆ (ಒಟ್ಟಾರೆಯಾಗಿ): ದಾಖಲಾದ ಸರಾಸರಿ ಡೌನ್ಲೋಡ್ ವೇಗದ ವಿವರ : ಏರ್ ಟೆಲ್ (5ಜಿ/4ಜಿ) 109.91 ಎಂಬಿಪಿಎಸ್, ಬಿಎಸ್ ಎನ್ ಎಲ್ (4ಜಿ) 6.12 ಎಂಬಿಪಿಎಸ್, ಆರ್ಜೆಐಎಲ್ (5ಜಿ/4ಜಿ) 269.09 ಎಂಬಿಪಿಎಸ್ ಮತ್ತು ವಿಐಎಲ್ (5ಜಿ/4ಜಿ/2ಜಿ) 31.44 ಎಂಬಿಪಿಎಸ್. ವಿವರಗಳನ್ನು ನಕ್ಷೆಯಲ್ಲಿ ನೀಡಲಾಗಿದೆ.
ii) ಡೇಟಾ ಅಪ್ಲೋಡ್ ಕಾರ್ಯಕ್ಷಮತೆ (ಒಟ್ಟಾರೆಯಾಗಿ): ದಾಖಲಾದ ಸರಾಸರಿ ಅಪ್ಲೋಡ್ ವೇಗದ ವಿವರ : ಏರ್ ಟೆಲ್ (5ಜಿ/4ಜಿ) 31.98 ಎಂಬಿಪಿಎಸ್, ಬಿಎಸ್ ಎನ್ ಎಲ್ (4ಜಿ ) 2.73 ಎಂಬಿಪಿಎಸ್, ಆರ್ ಜೆಐಎಲ್ (5ಜಿ/4ಜಿ) 19.29 ಎಂಬಿಪಿಎಸ್ ಮತ್ತು ವಿಐಎಲ್ (5ಜಿ/4ಜಿ/2ಜಿ) 15.20 ಎಂಬಿಪಿಎಸ್ ಎಂದು ಕಂಡುಬಂದಿದೆ. ವಿವರಗಳನ್ನು ನಕ್ಷೆಯಲ್ಲಿ ನೀಡಲಾಗಿದೆ.
ಐಡಿಟಿ ಸಮಯದಲ್ಲಿ ಕ್ರಮಿಸಿದ ಮಾರ್ಗ ಮತ್ತು ವ್ಯಾಪ್ತಿಗೆ ಒಳಪಟ್ಟ ಪ್ರದೇಶದ ವಿವರಗಳು ಹೀಗಿವೆ:-
a) ನಗರ: ಹಂಪಿ, ಕಮಲಾಪುರ, ಹೊಸಪೇಟೆ, ಆನೆಕಲ್, ಮರಿಯಮ್ಮನಹಳ್ಳಿ, ಚಿಲಕನಹಟ್ಟಿ, ಹಂಪಾಪಟ್ಟಣ, ಹಗರಿಬೊಮ್ಮನಹಳ್ಳಿ, ಧರ್ಮಸಾಗರ, ಹೊಳಗುಂದಿ, ಕೊಟ್ಟೂರು, ಬಣವಿಕಲ್ಲು, ಗದ್ದಿಕೇರಿ, ಅಳಬೂರು, ಚಿಗಟೇರಿ, ಇಟ್ಟಿಗಿ, ಹರಪನಹಳ್ಳಿ ಮತ್ತು ಹರೇಗೊಂಡನಹಳ್ಳಿ ಇತ್ಯಾದಿ.
b) ಹೆದ್ದಾರಿ: ಹೊಸಪೇಟೆಯಿಂದ ಬಣವಿಕಲ್ಲು ಮಾರ್ಗವಾಗಿ ಮರಿಯಮ್ಮನಹಳ್ಳಿ, ದಾನನಾಯಕನಕೆರೆ, ಚಿಲಕನಹಟ್ಟಿ, ತಿಮ್ಮಲಾಪುರ, ಶಿವಪುರ, ಕುಡ್ಲಿಗಿ ಮತ್ತು ಕಕುಪ್ಪಿ ಇತ್ಯಾದಿ.
c) ಹಾಟ್ ಸ್ಪಾಟ್: ಅಚ್ಯುತರಾಯ ದೇವಸ್ಥಾನ ಸಂಕೀರ್ಣ ಹಂಪಿ, ಜಿಲ್ಲಾ ನ್ಯಾಯಾಲಯ ಸಂಕೀರ್ಣ ಹೊಸಪೇಟೆ, ಸರ್ಕಾರಿ ಸಿಎಚ್ ಸಿ ಕಮಲಾಪುರ, ಹಂಪಿ ಉತ್ಸವ ಮೈದಾನ ಮತ್ತು ಪ್ರವಾಸಿ ಪಾರ್ಕಿಂಗ್ ಪ್ರದೇಶ, ಹೊಸಪೇಟೆ ಎಪಿಎಂಸಿ ಯಾರ್ಡ್, ಹೊಸಪೇಟೆ ನಗರ ಸಭೆ ಕಚೇರಿ, ಕಮಲಾಪುರ ಪುರಾತತ್ವ ವಸ್ತುಸಂಗ್ರಹಾಲಯ ಕರ್ನಾಟಕ ಒನ್ ಸೆಂಟರ್ ಹೊಸಪೇಟೆ, ಕೊಟ್ಟೂರು ಬಸ್ ನಿಲ್ದಾಣ, ರಾಣಿ ಸ್ನಾನ ಗೃಹ ಹಂಪಿ, ಪೋಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಹೊಸಪೇಟೆ, ತುಂಗಭದ್ರಾ ಅಣೆಕಟ್ಟು ಪ್ರವೇಶದ್ವಾರ ಮತ್ತು ಉದ್ಯಾನವನ, ಮತ್ತು ವಿಜಯನಗರ ಉಪ ಆಯುಕ್ತರ ಕಚೇರಿ ಹೊಸಪೇಟೆ.
d) ವಾಕ್ ಟೆಸ್ಟ್: ಆಗಸ್ಟ್ 11 ಮತ್ತು 12, 2026ರಂದು ನಡೆಸಲಾದ ವಾಕ್ ಟೆಸ್ಟ್ಗಳು: ಹೊಸಪೇಟೆ ಜಂಕ್ಷನ್ ರೈಲ್ವೆ ನಿಲ್ದಾಣ, ಲೋಟಸ್ ಮಹಲ್ ಹಂಪಿ, ವಿಜಯ ವಿಠಲ ದೇವಾಲಯ ಮತ್ತು ವಿರೂಪಾಕ್ಷ ದೇವಾಲಯ ಸಂಕೀರ್ಣ ಇತ್ಯಾದಿ.
ಈ ಐಡಿಟಿ ವರದಿಯ ಫಲಿತಾಂಶಗಳನ್ನು ಆಯಾ ಟೆಲೆಕಾಂ ಕಂಪನಿಗಳೊಂದಿಗೆ ಹಂಚಿಕೊಳ್ಳಲಾಗಿದ್ದು, ಅವರ ಹಂತದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಐಡಿಟಿ ಯ ವಿವರವಾದ ವರದಿಗಳು ಟ್ರಾಯ್ ಜಾಲತಾಣ http://www.trai.gov.in ನಲ್ಲಿ ಕಾಣಬಹುದು. ಯಾವುದೇ ಸ್ಪಷ್ಟೀಕರಣ ಅಥವಾ ಹೆಚ್ಚಿನ ಮಾಹಿತಿಗಾಗಿ, adv.bengaluru@trai.gov.in ಗೆ ಮಿಂಚಂಚೆ ಕಳುಹಿಸಬಹುದು ಅಥವಾ ಬೆಂಗಳೂರು ಟ್ರಾಯ್ ಪ್ರಾದೇಶಿಕ ಕಚೇರಿಯನ್ನು ದೂರವಾಣಿ ಸಂಖ್ಯೆ +91-80-22865004 ಮೂಲಕ ಸಂಪರ್ಕಿಸಬಹುದು.
ಅನುಬಂಧವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿರಿ
******