ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
azadi ka amrit mahotsav

ತಮ್ಮ 'ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ವಲಯದ ಸಾಧನೆಗಳನ್ನು ಶ್ಲಾಘಿಸುವ ಮೂಲಕ ಕುಶಲಕರ್ಮಿಗಳ ಮನೋಬಲ ಹೆಚ್ಚಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


'ಖಾದಿ ಪರಿವಾರ'ದ ಕೋಟ್ಯಂತರ ಕುಶಲಕರ್ಮಿಗಳ ಪರವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಕೆವಿಐಸಿ ಅಧ್ಯಕ್ಷರಾದ ಶ್ರೀ ಮನೋಜ್ ಗೋಯಲ್

ಪ್ರಧಾನಮಂತ್ರಿಯವರ ಕರೆ ಖಾದಿಗೆ ಹೊಸ ಗುರುತನ್ನು ನೀಡಿದೆ ಮತ್ತು ಸ್ವದೇಶಿ ಉತ್ಪನ್ನಗಳ ಮೇಲಿನ ಜನರ ನಂಬಿಕೆಯನ್ನು ಬಲಪಡಿಸಿದೆ

ಪ್ರಕಟಣಾ ದಿನಾಂಕ: 25 OCT 2026 9:50PM by PIB Bengaluru

ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷರಾದ ಶ್ರೀ ಮನೋಜ್ ಗೋಯಲ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ತಮ್ಮ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ತಮ್ಮ 'ಮನ್ ಕೀ ಬಾತ್' ಕಾರ್ಯಕ್ರಮದ 139 ನೇ ಸಂಚಿಕೆಯಲ್ಲಿ, ಪ್ರಧಾನಮಂತ್ರಿಯವರು ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಬೆಳೆಯುತ್ತಿರುವ ಮಾರಾಟವನ್ನು ಶ್ಲಾಘಿಸಿದರು ಹಾಗೂ ಮುಂಬರುವ ಹಬ್ಬದ ಋತುವಿನಲ್ಲಿ ಸ್ಥಳೀಯ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳಿಗೆ ಆದ್ಯತೆ ನೀಡುವಂತೆ ನಾಗರಿಕರಲ್ಲಿ ಆಗ್ರಹಿಸಿದರು. ಪ್ರಧಾನಮಂತ್ರಿಯವರಿಂದ ಸಿಕ್ಕ ಈ ಭರವಸೆಯು ಖಾದಿ ಮತ್ತು ಗ್ರಾಮೋದ್ಯೋಗ ವಲಯಕ್ಕೆ ಸಂಪರ್ಕ ಹೊಂದಿರುವ ದೇಶಾದ್ಯಂತದ ಕೋಟ್ಯಂತರ ಕುಶಲಕರ್ಮಿಗಳು, ನೇಕಾರರು, ಕರಕುಶಲಕರ್ಮಿಗಳು ಮತ್ತು ಗ್ರಾಮೀಣ ಉದ್ಯಮಿಗಳಿಗೆ ಗೌರವ, ಪ್ರೇರಣೆ ಮತ್ತು ಹೊಸ ಶಕ್ತಿಯ ಮೂಲವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಶ್ರೀ ಗೋಯಲ್ ಅವರು ತಿಳಿಸಿದ್ದಾರೆ.

ಪ್ರಧಾನಮಂತ್ರಿಯವರು ಖಾದಿ ಮತ್ತು ಗ್ರಾಮೋದ್ಯೋಗಗಳಿಗೆ ನೀಡುತ್ತಿರುವ ನಿರಂತರ ಪ್ರೇರಣೆಯಿಂದಾಗಿ, ಈ ವಲಯವು ತನ್ನ ಸಾಂಪ್ರದಾಯಿಕ ಗುರುತನ್ನು ಮೀರಿ ಬೆಳೆದಿದೆ ಹಾಗೂ ಉದ್ಯೋಗ ಸೃಷ್ಟಿ, ಮಹಿಳಾ ಸಶಕ್ತೀಕರಣ, ಗ್ರಾಮೀಣ ಆರ್ಥಿಕತೆಯ ಬಲವರ್ಧನೆ ಮತ್ತು ಆತ್ಮನಿರ್ಭರ ಭಾರತವನ್ನು ನಿರ್ಮಿಸುವ ಪ್ರಮುಖ ಮೂಲವಾಗಿದೆ ಎಂದು ಶ್ರೀ ಗೋಯಲ್ ಹೇಳಿದರು. ಪ್ರಧಾನಮಂತ್ರಿಯವರ ಪ್ರೇರಣೆಯೊಂದಿಗೆ, ಖಾದಿ ವಲಯವು ಇಂದು ದೇಶದ ಸಾಂಸ್ಕೃತಿಕ ಪ್ರಂಪರೆಯ ಜೊತೆಗೆ ಆಧುನಿಕ ಭಾರತದ ಆತ್ಮವಿಶ್ವಾಸವೂ ಆಗಿದೆ. ಇದು *ಸ್ವದೇಶಿ* ಮತ್ತು ಆರ್ಥಿಕ ಸಶಕ್ತೀಕರಣದ ಸಂಕೇತವಾಗಿ ಹೊರಹೊಮ್ಮಿದೆ.

ಪ್ರಧಾನಮಂತ್ರಿಯವರಿಗೆ ಕೃತಜ್ಞತೆ ಸಲ್ಲಿಸುತ್ತಾ ಕೆವಿಐಸಿ ಅಧ್ಯಕ್ಷ ಶ್ರೀ ಮನೋಜ್ ಗೋಯಲ್, "ಮನ್ ಕೀ ಬಾತ್‌ನ 12 ವರ್ಷಗಳ ಪೂರ್ಣತೆಯನ್ನು ಪೂರೈಸುವ ಇಂದಿನ ಸಂಚಿಕೆಯಲ್ಲಿ ಖಾದಿ ಮತ್ತು ಗ್ರಾಮೋದ್ಯೋಗಗಳ ಉಲ್ಲೇಖವು ನಮಗೆ ಅಪಾರ ಹೆಮ್ಮೆಯ ಕ್ಷಣವಾಗಿದೆ. ಅಕ್ಟೋಬರ್ 3, 2014 ರಂದು ಇದೇ ವೇದಿಕೆಯಿಂದ ಪ್ರಧಾನಮಂತ್ರಿಯವರು ಖಾದಿ ಖರೀದಿಸಲು ಕರೆ ನೀಡಿದರು, ಆ ಮೂಲಕ ಅದಕ್ಕೆ ಹೊಸ ಗುರುತನ್ನು ನೀಡಿದರು. ಅಂದಿನಿಂದ, ಅವರು ಖಾದಿ ಮತ್ತು ಸ್ವದೇಶಿ ಉತ್ಪನ್ನಗಳ ಖರೀದಿಯನ್ನು ನಿರಂತರವಾಗಿ ಪ್ರೋತ್ಸಾಹಿಸಿದ್ದಾರೆ. ಗಾಂಧಿ ಜಯಂತಿಯಂದು ಒಂದೇ ದಿನದಲ್ಲಿ 28 ಕೋಟಿ ರೂಪಾಯಿಗೂ ಹೆಚ್ಚು ಮಾರಾಟವಾಗಿದೆ ಎಂಬುದನ್ನು ಒತ್ತಿ ಹೇಳುವ ಮೂಲಕ, ಅವರು ಕೋಟ್ಯಂತರ ಖಾದಿ ಕುಶಲಕರ್ಮಿಗಳ, ವಿಶೇಷವಾಗಿ ಮಹಿಳೆಯರ ಮನೋಬಲವನ್ನು ಗಮನಾರ್ಹವಾಗಿ ಹೆಚ್ಚಿಸಿದ್ದಾರೆ. ಕೆವಿಐಸಿ ಮತ್ತು ದೇಶಾದ್ಯಂತದ ಎಲ್ಲಾ ಖಾದಿ ಕುಶಲಕರ್ಮಿಗಳು ಗೌರವಾನ್ವಿತ ಪ್ರಧಾನಮಂತ್ರಿಯವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ. ಗುಣಮಟ್ಟ, ಆವಿಷ್ಕಾರ ಮತ್ತು ಯುವ ಪೀಳಿಗೆಯನ್ನು ತೊಡಗಿಸಿಕೊಳ್ಳುವ ಮೂಲಕ ಅವರ 'ವೋಕಲ್ ಫಾರ್ ಲೋಕಲ್' ಮತ್ತು 'ಸ್ವಾವಲಂಬಿ ಭಾರತ'ದ ದೃಷ್ಟಿಕೋನವನ್ನು ಇನ್ನಷ್ಟು ಬಲಪಡಿಸಲು ನಾವು ಪ್ರತಿಜ್ಞೆ ಮಾಡುತ್ತೇವೆ" ಎಂದು ಹೇಳಿದರು. ವಿಜಯದಶಮಿಯ ಸಂದರ್ಭದಲ್ಲಿ ಅಕ್ಟೋಬರ್ 3, 2014 ರಂದು ಮೊದಲ ಬಾರಿಗೆ ಪ್ರಾರಂಭವಾದ 'ಮನ್ ಕೀ ಬಾತ್' ಕಾರ್ಯಕ್ರಮದ 12 ವರ್ಷಗಳ ಪೂರ್ಣತೆಯನ್ನು ಗುರುತಿಸಿದ್ದರಿಂದ ಈ ಸಂಚಿಕೆಯು ವಿಶೇಷವಾಗಿ ಮಹತ್ವದ್ದಾಗಿತ್ತು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಮನ್ ಕೀ ಬಾತ್' ಮೂಲಕ ಹಲವಾರು ಸಂದರ್ಭಗಳಲ್ಲಿ ಖಾದಿ ಕ್ಷೇತ್ರದ ಸಾಧನೆಗಳ ಕುರಿತು ಚರ್ಚಿಸಿದ್ದಾರೆ ಮತ್ತು ಖಾದಿ ಉತ್ಪನ್ನಗಳನ್ನು ಖರೀದಿಸುವಂತೆ ದೇಶದ ನಾಗರಿಕರಲ್ಲಿ ಮನವಿ ಮಾಡಿದ್ದಾರೆ ಎಂದು ಶ್ರೀ ಗೋಯಲ್ ಅವರು ಸ್ಮರಿಸಿದರು. ಅಕ್ಟೋಬರ್ 3, 2014 ರಂದು ಗಾಂಧಿ ಜಯಂತಿಯ ಸಂದರ್ಭದಲ್ಲಿ, ಪ್ರಸಾರವಾದ 'ಮನ್ ಕಿ ಬಾತ್'ನ ಮೊದಲ ಸಂಚಿಕೆಯಲ್ಲಿ ಕನಿಷ್ಠ ಒಂದು ಖಾದಿ ಉತ್ಪನ್ನವನ್ನು ಖರೀದಿಸುವಂತೆ ಮಾಡಿದ ಮನವಿಯ ನಂತರ, ಮಾರನೇ ದಿನವೇ ಅಂದರೆ ಅಕ್ಟೋಬರ್ 4, 2014 ರಂದು ಕೆವಿಐಸಿಯ ಪ್ರಮುಖ ಮಳಿಗೆಯಲ್ಲಿ ದಾಖಲೆ ಪ್ರಮಾಣದ ಮಾರಾಟ ನೋಂದಾಯಿಸಲ್ಪಟ್ಟಿತ್ತು. ತರುವಾಯ, ಸೆಪ್ಟೆಂಬರ್ 26, 2021 (81 ನೇ ಸಂಚಿಕೆಯಲ್ಲಿ), ಸೆಪ್ಟೆಂಬರ್ 25, 2022 ಮತ್ತು ಸೆಪ್ಟೆಂಬರ್ 24, 2023 ರಂದು ಮಾಡಿದ ಇದೇ ರೀತಿಯ ಮನವಿಗಳನ್ನು ಅನುಸರಿಸಿ, ಕನ್ನಾಟ್ ಪ್ಲೇಸ್‌ನಲ್ಲಿರುವ ಖಾದಿ ಭವನವು 2022 ರ ಅಕ್ಟೋಬರ್ 2 ರಂದು ₹1.34 ಕೋಟಿ ಮತ್ತು 2023 ರ ಅಕ್ಟೋಬರ್ 2 ರಂದು ₹1.52 ಕೋಟಿಗೂ ಹೆಚ್ಚು ಗಮನಾರ್ಹ ದಾಖಲೆಯ ಮಾರಾಟಕ್ಕೆ ಸಾಕ್ಷಿಯಾಯಿತು. ಸೆಪ್ಟೆಂಬರ್ 28, 2025 ರಂದು ಪ್ರಸಾರವಾದ 126 ನೇ ಸಂಚಿಕೆಯಲ್ಲಿ, ಪ್ರಧಾನಮಂತ್ರಿಯವರು ಅಕ್ಟೋಬರ್ 2 ರಂದು ಕನಿಷ್ಠ ಒಂದು ಖಾದಿ ಉತ್ಪನ್ನವನ್ನು ಖರೀದಿಸಲು ಮತ್ತು ಅದರ ಸ್ವದೇಶಿ ಮೂಲದ ಬಗ್ಗೆ ಹೆಮ್ಮೆಪಡುವಂತೆ ನಾಗರಿಕರಲ್ಲಿ ಆಗ್ರಹಿಸಿದರು. ತರುವಾಯ, ಅಕ್ಟೋಬರ್ 25, 2026 ರಂದು ಪ್ರಸಾರವಾದ 139 ನೇ ಸಂಚಿಕೆಯಲ್ಲಿ, ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಮಾರಾಟವು ಗಾಂಧಿ ಜಯಂತಿಯಂದು ಒಂದೇ ದಿನದಲ್ಲಿ ₹28 ಕೋಟಿಗೂ ಮೀರಿದೆ ಎಂಬುದನ್ನು ಅವರು ಒತ್ತಿ ಹೇಳಿದರು ಹಾಗೂ ಹಬ್ಬದ ಋತುವಿನಲ್ಲಿ ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದರ್ಶಿ ಚಿಂತನೆ ಮತ್ತು ನೀತಿಗಳ ಪರಿಣಾಮವಾಗಿ, ಖಾದಿ ಮತ್ತು ಗ್ರಾಮೋದ್ಯೋಗ ವಲಯವು ಅಭೂತಪೂರ್ವ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದು ಕೆವಿಐಸಿ ಅಧ್ಯಕ್ಷರಾದ ಶ್ರೀ ಮನೋಜ್ ಗೋಯಲ್ ಅಭಿಪ್ರಾಯಪಟ್ಟಿದ್ದಾರೆ. 2025-26 ರ ಹಣಕಾಸು ವರ್ಷದಲ್ಲಿ, ಈ ವಲಯದ ವಹಿವಾಟು ₹1.87 lakh ಕೋಟಿಯನ್ನು ಮೀರಿದೆ, ಜೊತೆಗೆ 2.04 ಕೋಟಿಗೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸಿದೆ. ಸಮೀಪದ ಭವಿಷ್ಯದಲ್ಲಿ, ಈ ವಲಯವು ₹2.51 ಲಕ್ಷ ಕೋಟಿ ವಹಿವಾಟಿನ ತನ್ನ ಗುರಿಯನ್ನು ತಲುಪಲಿದೆ ಎಂದು ಅವರು ಭರವಸೆ ನೀಡಿದರು.

 

*****


(ಪ್ರಕಟಣೆ ಐ.ಡಿ.: 2328307) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English