ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದಿರುವ ಪರ್ಮೋದ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ

ಪ್ರಕಟಣಾ ದಿನಾಂಕ: 23 OCT 2026 7:14PM by PIB Bengaluru

ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ಪುರುಷರ 1500 ಮೀಟರ್‌ ಟಿ46 ಸ್ಪರ್ಧೆಯಲ್ಲಿ ರಜತ ಪದಕ ಗಳಿಸಿರುವ ಪರ್ಮೋದ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.

ಹಿಂದಿನ ಆವೃತ್ತಿಯಂತೆಯೇ ಈ ಬಾರಿಯೂ ಬೆಳ್ಳಿ ಪದಕ  ಗೆದ್ದಿರುವುದು ಉತ್ತಮ ಸಾಧನೆಯಾಗಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. ಕ್ರೀಡಾ ಪಯಣದಲ್ಲಿ ಅವರು ಇದೇ ರೀತಿ ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸುತ್ತಾ ಇತರರಿಗೆ ಸ್ಫೂರ್ತಿಯಾಗಲಿ ಎಂದು ಪ್ರಧಾನಮಂತ್ರಿ ಆಶಿಸಿದ್ದಾರೆ.

ಪ್ರಧಾನಮಂತ್ರಿಗಳ ಕಾರ್ಯಾಲಯದ ಎಕ್ಸ್‌ ಪೋಸ್ಟ್‌ ಹೀಗಿದೆ: 

“ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ಪುರುಷರ 1500 ಮೀಟರ್‌ ಟಿ 46 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿರುವ ಪರ್ಮೋದ್ ಅವರಿಗೆ ಅಭಿನಂದನೆಗಳು! ಹಿಂದಿನ ಆವೃತ್ತಿಯಂತೆಯೇ ಈ ಬಾರಿಯೂ ಬೆಳ್ಳಿ ಪದಕವನ್ನು ಗೆದ್ದಿರುವುದು ಉತ್ತಮ ಸಾಧನೆಯಾಗಿದೆ. ಅವರು ತಮ್ಮ ಕ್ರೀಡಾ ಪಯಣದಲ್ಲಿ ಹೀಗೆಯೇ ಉತ್ತಮ ಸಾಧನೆಗಳನ್ನು ಮುಂದುವರಿಸಲಿ ಮತ್ತು ಇತರರಿಗೆ ಪ್ರೇರಣೆಯಾಗಲಿ: ಪ್ರಧಾನಮಂತ್ರಿ @narendramodi”

 

*****


(ಪ್ರಕಟಣೆ ಐ.ಡಿ.: 2327711) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: Urdu , English , Marathi , हिन्दी , Gujarati , Tamil , Malayalam