ಪ್ರಧಾನ ಮಂತ್ರಿಯವರ ಕಛೇರಿ
ಕೃಷಿಯನ್ನು ರೂಪಾಂತರಿಸುವಲ್ಲಿ ಹಾಗೂ ರೈತರ ಜೀವನ ಸುಧಾರಿಸುವಲ್ಲಿ ತಂತ್ರಜ್ಞಾನ ಮತ್ತು ಸಂಶೋಧನೆಯ ಪಾತ್ರ ವಿವರಿಸಿರುವ ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ಲೇಖನ ಹಂಚಿಕೊಂಡಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
21 OCT 2026 12:22PM by PIB Bengaluru
ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಬರೆದ ಲೇಖನವೊಂದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.
ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಲೇಖನದಲ್ಲಿ ಭಾರತೀಯ ಕೃಷಿಯನ್ನು ಪರಿವರ್ತಿಸಲು ಹಾಗೂ ರೈತರ ಜೀವನವನ್ನು ಸುಧಾರಿಸಲು ತಂತ್ರಜ್ಞಾನ ಮತ್ತು ಸಂಶೋಧನೆ ಅತ್ಯಗತ್ಯ ಎಂದು ಬರೆದಿದ್ದಾರೆ. ಪೌಷ್ಟಿಕಾಂಶ ಭದ್ರತೆಯ ಮಹತ್ವವನ್ನು ತಿಳಿಸುವ ಜೊತೆಗೆ ಈ ಲೇಖನದಲ್ಲಿ, ಹೆಚ್ಚಿನ ಮೌಲ್ಯದ ಬೆಳೆಗಳು, ಹವಾಮಾನ ಬದಲಾವಣೆಯನ್ನು ತಡೆದುಕೊಳ್ಳಬಲ್ಲ ಕೃಷಿ ಪದ್ಧತಿಗಳು, ಸಂಪನ್ಮೂಲಗಳ ಸಮರ್ಥ ಬಳಕೆ ಮತ್ತು ರೈತರಿಗೆ ಮಾರುಕಟ್ಟೆ ಸೌಲಭ್ಯಗಳನ್ನು ಉತ್ತಮಪಡಿಸುವ ಬಗ್ಗೆಯೂ ವಿವರಿಸಲಾಗಿದೆ.
ಪ್ರಧಾನಮಂತ್ರಿಗಳ ಕಾರ್ಯಾಲಯ ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದೆ:
“ಭಾರತೀಯ ಕೃಷಿಯನ್ನು ರೂಪಾಂತರಿಸಲು ಹಾಗೂ ರೈತರ ಜೀವನವನ್ನು ಸುಧಾರಿಸಲು ತಂತ್ರಜ್ಞಾನ ಮತ್ತು ಸಂಶೋಧನೆ ಅತ್ಯಗತ್ಯ ಎಂದು ಕೇಂದ್ರ ಸಚಿವರಾದ ಶ್ರೀ @ChouhanShivraj ಅವರು ಬರೆದಿದ್ದಾರೆ.
ಪೌಷ್ಟಿಕಾಂಶ ಭದ್ರತೆಯ ಮಹತ್ವವನ್ನು ವಿವರಿಸುತ್ತಾ, ಹೆಚ್ಚಿನ ಮೌಲ್ಯದ ಬೆಳೆಗಳು, ಹವಾಮಾನ ಬದಲಾವಣೆ ತಡೆದುಕೊಳ್ಳಬಲ್ಲ ಕೃಷಿ ಪದ್ಧತಿಗಳು, ಸಂಪನ್ಮೂಲಗಳ ಸಮರ್ಥ ಬಳಕೆ ಮತ್ತು ರೈತರಿಗೆ ಸುಧಾರಿತ ಮಾರುಕಟ್ಟೆ ಲಭ್ಯತೆ ದೊರಕಿಸುವ ಬಗ್ಗೆಯೂ ಲೇಖನದಲ್ಲಿ ಅವರು ವಿವರಿಸಿದ್ದಾರೆ.
ತಪ್ಪದೇ ಓದಿ!”
https://www.hindustantimes.com/opinion/technology-is-central-to-the-agri-transformation-vision-101792523800011.html
*****
(ಪ್ರಕಟಣೆ ಐ.ಡಿ.: 2326000)
ವಿಸಿಟರ್ ಕೌಂಟರ್ : 5