ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
azadi ka amrit mahotsav

ಸಮೀಕ್ಷಾವಧಿ ಶ್ರಮಶಕ್ತಿ ಸಮೀಕ್ಷೆಯ (PLFS) ಸೆಪ್ಟೆಂಬರ್ 2026 ರ ಮಾಸಿಕ ಬುಲೆಟಿನ್ ಕುರಿತ ಪತ್ರಿಕಾ ಪ್ರಕಟಣೆ


ನಗರ ಶ್ರಮಶಕ್ತಿ ಮತ್ತು ಉದ್ಯೋಗಿಗಳ ಭಾಗವಹಿಸುವಿಕೆ ಬಲವರ್ಧನೆ

ನಗರ ಮಹಿಳಾ ಶ್ರಮಶಕ್ತಿ ಭಾಗವಹಿಸುವಿಕೆಯು ಅಕ್ಟೋಬರ್ 2025ರ ನಂತರದ ಗರಿಷ್ಠ ಮಟ್ಟಕ್ಕೆ ತಲುಪಿದೆ

ವಾರ್ಷಿಕ ಆಧಾರದ ಇಳಿಕೆಯೊಂದಿಗೆ ಒಟ್ಟಾರೆ ನಿರುದ್ಯೋಗ ದರವು ಸ್ಥಿರವಾಗಿದೆ

ಪ್ರಕಟಣಾ ದಿನಾಂಕ: 15 OCT 2026 4:00PM by PIB Bengaluru

ಮುಖ್ಯಾಂಶಗಳು:

    • ಸೆಪ್ಟೆಂಬರ್ 2026 ರಲ್ಲಿ ಒಟ್ಟಾರೆ ಎಲ್‌ಎಫ್‌ಪಿಆರ್ (LFPR - 15+ ವರ್ಷಗಳು) % 55.5 ರಷ್ಟಿದ್ದು, ಸೆಪ್ಟೆಂಬರ್ 2025 ಕ್ಕೆ ಹೋಲಿಸಿದರೆ ಶೇಕಡಾ 0.2 ಅಂಕಗಳ ಏರಿಕೆಯನ್ನು ದಾಖಲಿಸಿದೆ.
    • ನಗರ ಎಲ್‌ಎಫ್‌ಪಿಆರ್ (15+ ವರ್ಷಗಳು) ಆಗಸ್ಟ್ 2026 ರಲ್ಲಿ % 50.4 ರಷ್ಟಿದ್ದು, ಸೆಪ್ಟೆಂಬರ್ 2026 ರಲ್ಲಿ % 50.7 ಕ್ಕೆ ಏರಿಕೆಯಾಗಿದೆ.
    • ಒಟ್ಟಾರೆ ಮಹಿಳಾ ಎಲ್‌ಎಫ್‌ಪಿಆರ್ (15+ ವರ್ಷಗಳು) ಸೆಪ್ಟೆಂಬರ್ 2026 ರಲ್ಲಿ ವಾರ್ಷಿಕ ಆಧಾರದ ಮೇಲೆ ಶೇಕಡಾ 0.5 ಅಂಕಗಳಷ್ಟು ಏರಿಕೆಯಾಗಿ % 34.6 ಕ್ಕೆ ತಲುಪಿದೆ. ಇದೇ ಅವಧಿಯಲ್ಲಿ ಗ್ರಾಮೀಣ ಮಹಿಳಾ ಎಲ್‌ಎಫ್‌ಪಿಆರ್ ಶೇಕಡಾ 1.0 ಅಂಕ ಹೆಚ್ಚಾಗಿ % 38.9 ಕ್ಕೆ ತಲುಪಿದೆ.
    • ಒಟ್ಟಾರೆ ಡಬ್ಲ್ಯೂಪಿಆರ್ (WPR - 15+ ವರ್ಷಗಳು) ಸೆಪ್ಟೆಂಬರ್ 2026 ರಲ್ಲಿ ವಾರ್ಷಿಕ ಆಧಾರದ ಮೇಲೆ ಶೇಕಡಾ 0.3 ಅಂಕಗಳಷ್ಟು ಏರಿಕೆಯಾಗಿ % 52.7 ಕ್ಕೆ ತಲುಪಿದೆ.
    • ಒಟ್ಟಾರೆ ಯುಆರ್ (UR - 15+ ವರ್ಷಗಳು) ಸೆಪ್ಟೆಂಬರ್ 2026 ರಲ್ಲಿ % 5.0 ರಷ್ಟಿದ್ದು ಸ್ಥಿರವಾಗಿದ್ದು, ಸೆಪ್ಟೆಂಬರ್ 2025 ಕ್ಕಿಂತ ಶೇಕಡಾ 0.2 ಅಂಕಗಳಷ್ಟು ಕಡಿಮೆಯಾಗಿದೆ.
    • ಗ್ರಾಮೀಣ ಮಹಿಳಾ ಯುಆರ್ ಸೆಪ್ಟೆಂಬರ್ 2026 ರಲ್ಲಿ ವಾರ್ಷಿಕ ಆಧಾರದ ಮೇಲೆ ಶೇಕಡಾ 0.4 ಅಂಕಗಳಷ್ಟು ಇಳಿಕೆಯಾಗಿ % 3.9 ಕ್ಕೆ ತಲುಪಿದೆ, ಇದು 2026 ರಲ್ಲಿ ದಾಖಲಾದ ಅತ್ಯಂತ ಕನಿಷ್ಠ ಮಟ್ಟವಾಗಿದೆ.

A. ಪೀಠಿಕೆ

ಸಂಖ್ಯಾನ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ (MoSPI) ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (NSO) ನಡೆಸುವ ಸಮೀಕ್ಷಾವಧಿ ಶ್ರಮಶಕ್ತಿ ಸಮೀಕ್ಷೆಯು (PLFS), ಶ್ರಮಶಕ್ತಿ ಭಾಗವಹಿಸುವಿಕೆ ಹಾಗೂ ಉದ್ಯೋಗ ಮತ್ತು ನಿರುದ್ಯೋಗ ಪರಿಸ್ಥಿತಿಗಳ ಕುರಿತಾದ ಪ್ರಾಥಮಿಕ ದತ್ತಾಂಶ ಮೂಲವಾಗಿದೆ. ದೇಶದ ಶ್ರಮಶಕ್ತಿ ಸೂಚಕಗಳ ಮಾಸಿಕ ಮತ್ತು ತ್ರೈಮಾಸಿಕ ಅಂದಾಜುಗಳನ್ನು ಒದಗಿಸಲು ಪಿಎಲ್‌ಎಫ್‌ಎಸ್ ಸಮೀಕ್ಷಾ ವಿಧಾನವನ್ನು ಜನವರಿ 2025 ರಿಂದ ಮಾರ್ಪಡಿಸಲಾಗಿದೆ.

ಪಿಎಲ್‌ಎಫ್‌ಎಸ್‌ನ ಮಾಸಿಕ ಫಲಿತಾಂಶಗಳನ್ನು ಮಾಸಿಕ ಬುಲೆಟಿನ್‌ಗಳ ರೂಪದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇದು ಪ್ರಸ್ತುತ ವಾರದ ಸ್ಥಿತಿ (CWS) ವಿಧಾನವನ್ನು ಅನುಸರಿಸಿ ಅಖಿಲ ಭಾರತ ಮಟ್ಟದಲ್ಲಿ ಪ್ರಮುಖ ಶ್ರಮ ಮಾರುಕಟ್ಟೆ ಸೂಚಕಗಳಾದ ಶ್ರಮಶಕ್ತಿ ಭಾಗವಹಿಸುವಿಕೆ ದರ (LFPR), ಉದ್ಯೋಗಿ ಜನಸಂಖ್ಯೆ ಅನುಪಾತ (WPR) ಮತ್ತು ನಿರುದ್ಯೋಗ ದರ (UR) ಗಳ ಅಂದಾಜುಗಳನ್ನು ಪ್ರಸ್ತುತಪಡಿಸುತ್ತದೆ.

ಏಪ್ರಿಲ್ 2025 ರಿಂದ ಆಗಸ್ಟ್ 2026 ರವರೆಗಿನ ಮಾಸಿಕ ಬುಲೆಟಿನ್‌ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಸೆಪ್ಟೆಂಬರ್ 2026 ರ ಮಾಸಿಕ ಬುಲೆಟಿನ್ ಸರಣಿಯಲ್ಲಿ 18 ನೇಯದಾಗಿದೆ.

CWS ವಿಧಾನವನ್ನು ಅನುಸರಿಸಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಪ್ರಮುಖ ಸಂಶೋಧನೆಗಳು:

  • ನಗರ ಶ್ರಮಶಕ್ತಿ ಭಾಗವಹಿಸುವಿಕೆ ದರದಲ್ಲಿ (LFPR) ಏರಿಕೆ:

15 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟ ವಯಸ್ಸಿನ ವ್ಯಕ್ತಿಗಳ ಒಟ್ಟಾರೆ ಶ್ರಮಶಕ್ತಿ ಭಾಗವಹಿಸುವಿಕೆ ದರವು (LFPR) ಆಗಸ್ಟ್ 2026 ರ 55.6%  ಗೆ ಹೋಲಿಸಿದರೆ, ಸೆಪ್ಟೆಂಬರ್ 2026 ರಲ್ಲಿ 55.5%  ರಷ್ಟಿದ್ದು ಹೆಚ್ಚೂಕಡಿಮೆ ಸ್ಥಿರವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಎಲ್‌ಎಫ್‌ಪಿಆರ್ ಆಗಸ್ಟ್ 2026 ರ 58.2%  ಗೆ ಎದುರಾಗಿ 58.0%  ರಷ್ಟು ದಾಖಲಾಗಿದೆ, ಆದರೆ ನಗರ ಎಲ್‌ಎಫ್‌ಪಿಆರ್ ಆಗಸ್ಟ್ 2026 ರ 50.4%  ರಿಂದ ಸೆಪ್ಟೆಂಬರ್ 2026 ರಲ್ಲಿ 50.7%  ಕ್ಕೆ ಶೇಕಡಾ 0.3 ಅಂಕಗಳ ಸಾಧಾರಣ ಏರಿಕೆಯನ್ನು ದಾಖಲಿಸಿದೆ.

ಒಂದು ವರ್ಷದ ಅವಧಿಯಲ್ಲಿ, ಒಟ್ಟಾರೆ ಎಲ್‌ಎಫ್‌ಪಿಆರ್ ಸೆಪ್ಟೆಂಬರ್ 2025 ರ 55.3%  ರಿಂದ ಸೆಪ್ಟೆಂಬರ್ 2026 ರಲ್ಲಿ 55.5%  ಕ್ಕೆ ಶೇಕಡಾ 0.2 ಅಂಕಗಳಷ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಗ್ರಾಮೀಣ ಎಲ್‌ಎಫ್‌ಪಿಆರ್ 57.4%  ರಿಂದ 58.0%  ಕ್ಕೆ ಶೇಕಡಾ 0.6 ಅಂಕಗಳಷ್ಟು ಹೆಚ್ಚಾಗಿದೆ, ಆದರೆ ನಗರ ಎಲ್‌ಎಫ್‌ಪಿಆರ್ 50.9%  ರಿಂದ 50.7%  ಕ್ಕೆ ಶೇಕಡಾ 0.2 ಅಂಕಗಳ ಸಣ್ಣ ಇಳಿಕೆಯನ್ನು ದಾಖಲಿಸಿದೆ.

ನಗರ ಎಲ್‌ಎಫ್‌ಪಿಆರ್ ತಿಂಗಳಿನಿಂದ ತಿಂಗಳಿಗೆ ಶೇಕಡಾ 0.3 ಅಂಕಗಳ ಸುಧಾರಣೆಯನ್ನು ತೋರಿಸಿದ್ದು, ಸೆಪ್ಟೆಂಬರ್ 2026 ರಲ್ಲಿ 50.7%  ಕ್ಕೆ ತಲುಪಿದೆ.

  • ನಗರ ಪ್ರದೇಶಗಳಲ್ಲಿ ಮಹಿಳಾ ಶ್ರಮಶಕ್ತಿ ಭಾಗವಹಿಸುವಿಕೆಗೆ ವೇಗ:

ಆಗಸ್ಟ್ 2026ರ 34.8% ಗೆ ಹೋಲಿಸಿದರೆ, ಸೆಪ್ಟೆಂಬರ್ 2026ರಲ್ಲಿ ಒಟ್ಟಾರೆ ಮಹಿಳಾ ಎಲ್‌ಎಫ್‌ಪಿಆರ್ 34.6% ರಷ್ಟಿದೆ. ನಗರ ಮಹಿಳಾ ಎಲ್‌ಎಫ್‌ಪಿಆರ್ 25.4%  ರಿಂದ 25.9% ಕ್ಕೆ ತಿಂಗಳಿನಿಂದ ತಿಂಗಳಿಗೆ ಶೇಕಡಾ 0.5 ಅಂಕಗಳ ಗಮನಾರ್ಹ ಏರಿಕೆಯನ್ನು ದಾಖಲಿಸಿದ್ದು, ಅಕ್ಟೋಬರ್ 2025ರ ನಂತರದ ಗರಿಷ್ಠ ಮಟ್ಟವನ್ನು ತಲುಪಿದೆ. ಗ್ರಾಮೀಣ ಮಹಿಳಾ ಎಲ್‌ಎಫ್‌ಪಿಆರ್ ಕಳೆದ ತಿಂಗಳ 39.4%  ಗೆ ಹೋಲಿಸಿದರೆ ಸೆಪ್ಟೆಂಬರ್ 2026 ರಲ್ಲಿ 38.9%  ರಷ್ಟಿದೆ ಎಂದು ಅಂದಾಜಿಸಲಾಗಿದೆ.

ವಾರ್ಷಿಕ ಆಧಾರದ ಮೇಲೆ, ಒಟ್ಟಾರೆ ಮಹಿಳಾ ಎಲ್‌ಎಫ್‌ಪಿಆರ್ ಸೆಪ್ಟೆಂಬರ್ 2025 ರ 34.1% ರಿಂದ ಸೆಪ್ಟೆಂಬರ್ 2026 ರಲ್ಲಿ 34.6% ಕ್ಕೆ ಶೇಕಡಾ 0.5 ಅಂಕಗಳಷ್ಟು ಹೆಚ್ಚಾಗಿದೆ. ಗ್ರಾಮೀಣ ಮಹಿಳಾ ಎಲ್‌ಎಫ್‌ಪಿಆರ್ 37.9% ರಿಂದ 38.9% ಕ್ಕೆ ಶೇಕಡಾ 1.0 ಅಂಕಗಳಷ್ಟು ಹೆಚ್ಚಳವನ್ನು ದಾಖಲಿಸಿದೆ, ಆದರೆ ನಗರ ಮಹಿಳಾ ಎಲ್‌ಎಫ್‌ಪಿಆರ್ ಹೆಚ್ಚೂಕಡಿಮೆ 26% ರಷ್ಟು ಸ್ಥಿರವಾಗಿದೆ (ಕಳೆದ ವರ್ಷದ 26.1% ಗೆ ಹೋಲಿಸಿದರೆ ಸೆಪ್ಟೆಂಬರ್ 2026 ರಲ್ಲಿ 25.9%).

ಗ್ರಾಮೀಣ ಮಹಿಳಾ ಶ್ರಮಶಕ್ತಿ ಭಾಗವಹಿಸುವಿಕೆಯು ವಾರ್ಷಿಕ ಆಧಾರದ ಮೇಲೆ ಶೇಕಡಾ 1.0 ಅಂಕಗಳ ಏರಿಕೆಯನ್ನು ದಾಖಲಿಸಿದ್ದು, ಸೆಪ್ಟೆಂಬರ್ 2026 ರಲ್ಲಿ 38.9%  ರಷ್ಟು ದಾಖಲಾಗಿದೆ.

  • ಲಿಂಗಭೇದವಿಲ್ಲದೆ ನಗರ ಪ್ರದೇಶಗಳಲ್ಲಿ ಉದ್ಯೋಗಿಗಳ ಭಾಗವಹಿಸುವಿಕೆ ಬಲವರ್ಧನೆ:

ಆಗಸ್ಟ್ 2026ರ 52.8% ಗೆ ಹೋಲಿಸಿದರೆ, ಸೆಪ್ಟೆಂಬರ್ 2026ರಲ್ಲಿ ಒಟ್ಟಾರೆ ಉದ್ಯೋಗಿ ಜನಸಂಖ್ಯೆ ಅನುಪಾತವು (WPR) 52.7% ರಷ್ಟಿದ್ದು ಹೆಚ್ಚೂಕಡಿಮೆ ಸ್ಥಿರವಾಗಿದೆ. ನಗರ ಡಬ್ಲ್ಯೂಪಿಆರ್ ಅಕ್ಟೋಬರ್ 2025ರ ನಂತರದ ಅತ್ಯುನ್ನತ ಮಟ್ಟವಾದ 47.2% ಅನ್ನು ತಲುಪಿದೆ. ಈ ಸುಧಾರಣೆಯು ಎರಡೂ ಲಿಂಗಗಳಾದ್ಯಂತ ಪ್ರತಿಫಲಿಸಿದ್ದು, ನಗರ ಪುರುಷ ಡಬ್ಲ್ಯೂಪಿಆರ್ 70.7 % ರಿಂದ 71.0% ಕ್ಕೆ ಮತ್ತು ನಗರ ಮಹಿಳಾ ಡಬ್ಲ್ಯೂಪಿಆರ್ 23.2% ರಿಂದ 23.5%ಕ್ಕೆ ಏರಿಕೆಯಾಗಿದೆ. ತಿಂಗಳ ಅವಧಿಯಲ್ಲಿ ಗ್ರಾಮೀಣ ಡಬ್ಲ್ಯೂಪಿಆರ್ 55.8% ರಿಂದ 55.5% ಕ್ಕೆ ಸಲ್ಪ ಮಟ್ಟಿಗೆ ತಗ್ಗಿದೆ.

ವಾರ್ಷಿಕ ಆಧಾರದ ಮೇಲೆ, ಒಟ್ಟಾರೆ ಡಬ್ಲ್ಯೂಪಿಆರ್ ಸೆಪ್ಟೆಂಬರ್ 2025 ರ 52.4%  ರಿಂದ ಸೆಪ್ಟೆಂಬರ್ 2026 ರಲ್ಲಿ 52.7% ಕ್ಕೆ ಶೇಕಡಾ 0.3 ಅಂಕಗಳಷ್ಟು ಹೆಚ್ಚಾಗಿದೆ. ಗ್ರಾಮೀಣ ಡಬ್ಲ್ಯೂಪಿಆರ್ 54.8%  ರಿಂದ 55.5% ಕ್ಕೆ ಶೇಕಡಾ 0.7 ಅಂಕಗಳಷ್ಟು ಏರಿಕೆಯನ್ನು ದಾಖಲಿಸಿದೆ, ಆದರೆ ನಗರ ಡಬ್ಲ್ಯೂಪಿಆರ್ ಹೆಚ್ಚೂಕಡಿಮೆ 47% ರಷ್ಟು ಸ್ಥಿರವಾಗಿದೆ. ಅಖಿಲ ಭಾರತ ಮಟ್ಟದಲ್ಲಿ, ಇದೇ ಅವಧಿಯಲ್ಲಿ ಪುರುಷ ಡಬ್ಲ್ಯೂಪಿಆರ್ ಶೇಕಡಾ 0.4 ಅಂಕ ಹೆಚ್ಚಾಗಿ 73.6% ಕ್ಕೆ ತಲುಪಿದ್ದರೆ, ಮಹಿಳಾ ಡಬ್ಲ್ಯೂಪಿಆರ್ ಶೇಕಡಾ 0.5 ಅಂಕ ಹೆಚ್ಚಾಗಿ 32.8% ಕ್ಕೆ ತಲುಪಿದೆ.

 

 

 

ಸೆಪ್ಟೆಂಬರ್ 2026ರಲ್ಲಿ ಲಿಂಗಭೇದವಿಲ್ಲದೆ ನಗರ ಪ್ರದೇಶಗಳಲ್ಲಿ ಉದ್ಯೋಗಿಗಳ ಭಾಗವಹಿಸುವಿಕೆ ಬಲಗೊಂಡಿದ್ದು, ಈ ತಿಂಗಳಲ್ಲಿ ಪುರುಷ ಮತ್ತು ಮಹಿಳಾ ಡಬ್ಲ್ಯೂಪಿಆರ್ ಎರಡೂ ಶೇಕಡಾ 0.3 ಅಂಕಗಳಷ್ಟು ಏರಿಕೆಯಾಗಿವೆ.

 

  • ಒಟ್ಟಾರೆ ನಿರುದ್ಯೋಗ ದರ (UR) ಸ್ಥಿರ:

ಆಗಸ್ಟ್ 2026 ಗೆ ಹೋಲಿಸಿದರೆ, 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಲ್ಲಿ ಒಟ್ಟಾರೆ ನಿರುದ್ಯೋಗ ದರವು (UR) ಸೆಪ್ಟೆಂಬರ್ 2026 ರಲ್ಲಿ 5.0% ರಷ್ಟಿದ್ದು ಸ್ಥಿರವಾಗಿದೆ. ಗ್ರಾಮೀಣ ಯುಆರ್ ಕಳೆದ ತಿಂಗಳ 4.1% ಗೆ ಎದುರಾಗಿ 4.2% ರಷ್ಟಿದ್ದು ಹೆಚ್ಚೂಕಡಿಮೆ ಸ್ಥಿರವಾಗಿದೆ, ಆದರೆ ನಗರ ಯುಆರ್ 6.8% ರಿಂದ 6.9% ಕ್ಕೆ ಸಲ್ಪ ಮಟ್ಟಿಗೆ ಹೆಚ್ಚಾಗಿದೆ.

ಸೆಪ್ಟೆಂಬರ್ 2025 ಕ್ಕೆ ಹೋಲಿಸಿದರೆ, ಒಟ್ಟಾರೆ ಯುಆರ್ ಶೇಕಡಾ 0.2 ಅಂಕಗಳಷ್ಟು ಇಳಿಕೆಯಾಗಿ ಸೆಪ್ಟೆಂಬರ್ 2026 ರಲ್ಲಿ 5.0% ಕ್ಕೆ ತಲುಪಿದೆ. ಗ್ರಾಮೀಣ ಯುಆರ್ ಸೆಪ್ಟೆಂಬರ್ 2025 ರ 4.6% ರಿಂದ ಸೆಪ್ಟೆಂಬರ್ 2026 ರಲ್ಲಿ 4.2% ಕ್ಕೆ ಶೇಕಡಾ 0.4 ಅಂಕಗಳಷ್ಟು ಇಳಿಕೆಯಾಗಿದೆ. ನಗರ ಪ್ರದೇಶಗಳಲ್ಲಿನ ಯುಆರ್ ಸೆಪ್ಟೆಂಬರ್ 2025 ರ 6.8% ರಿಂದ ಸೆಪ್ಟೆಂಬರ್ 2026 ರಲ್ಲಿ 6.9% ಕ್ಕೆ ಹೆಚ್ಚೂಕಡಿಮೆ ಸ್ಥಿರವಾಗಿದೆ.

 

ಗ್ರಾಮೀಣ ಯುಆರ್ ವಾರ್ಷಿಕ ಆಧಾರದ ಮೇಲೆ ಶೇಕಡಾ 0.4 ಅಂಕಗಳ ಇಳಿಕೆಯನ್ನು ದಾಖಲಿಸಿದ್ದು, ಸೆಪ್ಟೆಂಬರ್ 2026 ರಲ್ಲಿ 4.2% ಕ್ಕೆ ತಲುಪಿದೆ.

 

  • ಪುರುಷ ಮತ್ತು ಮಹಿಳೆಯರಿಬ್ಬರಲ್ಲೂ ವಾರ್ಷಿಕ ಆಧಾರದ ಮೇಲೆ ನಿರುದ್ಯೋಗ ದರ ಇಳಿಕೆ:

 

ಕಳೆದ ತಿಂಗಳಿಗೆ ಹೋಲಿಸಿದರೆ, 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಲ್ಲಿ ಒಟ್ಟಾರೆ ಪುರುಷ ಯುಆರ್ ಸೆಪ್ಟೆಂಬರ್ 2026 ರಲ್ಲಿ 4.9%  ರಷ್ಟಿದ್ದು ಸ್ಥಿರವಾಗಿದೆ, ಇದು ಜೂನ್ 2026 ರಿಂದ ಕಂಡುಬಂದ ಇಳಿಕೆ ಅಥವಾ ಸ್ಥಿರ ಪ್ರವೃತ್ತಿಯನ್ನು ಮುಂದುವರಿಸಿದೆ. ನಗರ ಪುರುಷ ಯುಆರ್ ಆಗಸ್ಟ್ 2026 ರ 6.1% ರಿಂದ ಸೆಪ್ಟೆಂಬರ್ 2026 ರಲ್ಲಿ 6.0% ಕ್ಕೆ ಕಡಿಮೆಯಾಗಿದೆ. ಮಹಿಳೆಯರಲ್ಲಿ, ಒಟ್ಟಾರೆ ಯುಆರ್ ಕಳೆದ ತಿಂಗಳ 5.1% ಗೆ ಹೋಲಿಸಿದರೆ 5.2% ರಷ್ಟಿದ್ದು ಹೆಚ್ಚೂಕಡಿಮೆ ಸ್ಥಿರವಾಗಿದೆ. ಗ್ರಾಮೀಣ ಮಹಿಳಾ ಯುಆರ್ 3.9% ರಷ್ಟಿದ್ದು, ಇದು 2026 ರಲ್ಲಿ ದಾಖಲಾದ ಅತ್ಯಂತ ಕನಿಷ್ಠ ಮಟ್ಟವಾಗಿದೆ, ಆದರೆ ನಗರ ಮಹಿಳಾ ಯುಆರ್ 8.9% ರಿಂದ 9.2% ಕ್ಕೆ ಸಲ್ಪ ಮಟ್ಟಿಗೆ ಹೆಚ್ಚಾಗಿದೆ.

ವಾರ್ಷಿಕ ಹೋಲಿಕೆಯು ಒಟ್ಟಾರೆ ಪುರುಷ ಯುಆರ್ ಶೇಕಡಾ 0.2 ಅಂಕಗಳಷ್ಟು ಇಳಿಕೆಯಾಗಿ ಸೆಪ್ಟೆಂಬರ್ 2026 ರಲ್ಲಿ 4.9% ಕ್ಕೆ ತಲುಪಿದೆ, ಆದರೆ ಒಟ್ಟಾರೆ ಮಹಿಳಾ ಯುಆರ್ ಇದೇ ಅವಧಿಯಲ್ಲಿ ಶೇಕಡಾ 0.3 ಅಂಕಗಳಷ್ಟು ಕಡಿಮೆಯಾಗಿದೆ ಎಂಬುದನ್ನು ತೋರಿಸುತ್ತದೆ. ಈ ಇಳಿಕೆಯು ಗ್ರಾಮೀಣ ಪ್ರದೇಶಗಳಲ್ಲಿ ಪ್ರಮುಖವಾಗಿ ಕಂಡುಬಂದಿದ್ದು, ಅಲ್ಲಿ ಪುರುಷ ಯುಆರ್ 4.7% ರಿಂದ 4.4% ಕ್ಕೆ ಶೇಕಡಾ 0.3 ಅಂಕಗಳಷ್ಟು ಕಡಿಮೆಯಾಗಿದೆ ಮತ್ತು ಮಹಿಳಾ ಯುಆರ್ 4.3% ರಿಂದ 3.9% ಕ್ಕೆ ಶೇಕಡಾ 0.4 ಅಂಕಗಳಷ್ಟು ಕಡಿಮೆಯಾಗಿದೆ.

 

ಎರಡೂ ಲಿಂಗಗಳಲ್ಲಿ ವಾರ್ಷಿಕ ಆಧಾರದ ಮೇಲೆ ನಿರುದ್ಯೋಗ ದರಗಳು ಕಡಿಮೆಯಾಗಿದ್ದು, ಗ್ರಾಮೀಣ ಮಹಿಳಾ ಯುಆರ್ 2026 ರ ಅವಧಿಯಲ್ಲಿ ತನ್ನ ಅತ್ಯಂತ ಕನಿಷ್ಠ ಮಟ್ಟವನ್ನು ತಲುಪಿದೆ.

 

ಅಖಿಲ ಭಾರತ ಮಟ್ಟದಲ್ಲಿ, ಮಾಸಿಕ ಅಂದಾಜುಗಳು, ಸಮೀಕ್ಷೆಗೆ ಒಳಪಟ್ಟ ಒಟ್ಟು 3,70,513 ವ್ಯಕ್ತಿಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿವೆ.

ಗ್ರಾಮೀಣ ಪ್ರದೇಶಗಳಲ್ಲಿ ಸಮೀಕ್ಷೆಗೆ ಒಳಪಟ್ಟ ವ್ಯಕ್ತಿಗಳು: 2,11,333

ನಗರ ಪ್ರದೇಶಗಳಲ್ಲಿ ಸಮೀಕ್ಷೆಗೆ ಒಳಪಟ್ಟ ವ್ಯಕ್ತಿಗಳು:
1,59,180

ಸೆಪ್ಟೆಂಬರ್ 2026ರ ಮಾಸಿಕ ಬುಲೆಟಿನ್ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ (https://www.mospi.gov.in).

MoSPI ಪ್ರಕಟಣೆಗಳು/ವರದಿಗಳನ್ನು ವೀಕ್ಷಿಸಲು QR ಕೋಡ್ ಸ್ಕ್ಯಾನ್ ಮಾಡಿ.

 

 

 

 

 

*****


(ಪ್ರಕಟಣೆ ಐ.ಡಿ.: 2323936) ವಿಸಿಟರ್ ಕೌಂಟರ್ : 19
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी