ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಪತ್ರಿಕಾ ಪ್ರಕಟಣೆ

ಪ್ರಕಟಣಾ ದಿನಾಂಕ: 12 OCT 2026 10:55PM by PIB Bengaluru

ಭಾರತದ ರಾಷ್ಟ್ರಪತಿಯವರು ವಿವಿಧ ರಾಜ್ಯಗಳಿಗೆ ಈ ಕೆಳಗಿನಂತೆ ರಾಜ್ಯಪಾಲರ ನೇಮಕಾತಿ ಮಾಡಿದ್ದಾರೆ:-

(i) ಸಿಕ್ಕಿಂ ರಾಜ್ಯಪಾಲರಾಗಿರುವ ಶ್ರೀ ಓಂ ಪ್ರಕಾಶ್ ಮಾಥುರ್ ಅವರನ್ನು ಕೇರಳಂ ರಾಜ್ಯದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.

(ii) ಕೇರಳಂನ ರಾಜ್ಯಪಾಲರಾಗಿರುವ ಶ್ರೀ ರಾಜೇಂದ್ರ ವಿಶ್ವನಾಥ್ ಅರ್ಳೇಕರ್ ಅವರನ್ನು ತಮಿಳುನಾಡಿನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.

(iii) ಶ್ರೀ ಬ್ರಜ್ ಮೋಹನ್ ರಾಮ್ ಅವರನ್ನು ಒಡಿಶಾದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.

(iv) ಡಾ. ಸುಧಾ ಯಾದವ್ ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.

(v) ಡಾ. ಧಲ್ ಸಿಂಗ್ ಬೈಸೆನ್ ಅವರನ್ನು ಉತ್ತರಾಖಂಡದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.

(vi) ಶ್ರೀ ದುಷ್ಯಂತ್ ಗೌತಮ್ ಅವರನ್ನು ಸಿಕ್ಕಿಂನ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.

ಈ ನೇಮಕಾತಿಗಳು ಅವರು ತಮ್ಮ ತಮ್ಮ ಅಧಿಕಾರ ವಹಿಸಿಕೊಳ್ಳುವ ದಿನಾಂಕದಿಂದ ಜಾರಿಗೆ ಬರಲಿವೆ.

 

*****


(ಪ್ರಕಟಣೆ ಐ.ಡಿ.: 2322702) ವಿಸಿಟರ್ ಕೌಂಟರ್ : 20
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Malayalam