ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

94ನೇ 'ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್': ಏಷ್ಯನ್ ಗೇಮ್ಸ್ ಪದಕ ವಿಜೇತರೊಂದಿಗೆ ಫಿಟ್‌ನೆಸ್‌ಗಾಗಿ ವಾರಣಾಸಿಯಲ್ಲಿ ಸೈಕಲ್ ಜಾಥಾ

ಪ್ರಕಟಣಾ ದಿನಾಂಕ: 10 OCT 2026 1:08PM by PIB Bengaluru

ಫಿಟ್‌ನೆಸ್, ಯುವ ಸಬಲೀಕರಣ ಮತ್ತು ಮಾದಕವ್ಯಸನ ಮುಕ್ತ ಭಾರತದ ಸಂದೇಶವನ್ನು ಸಾರುವ 'ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್'ನ 94ನೇ ಆವೃತ್ತಿಯನ್ನು 2026ರ ಅಕ್ಟೋಬರ್ 11 ರಂದು ಬೆಳಿಗ್ಗೆ 6:00 ಗಂಟೆಯಿಂದ ವಾರಣಾಸಿಯ ನಮೋ ಘಾಟ್‌ನಿಂದ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದ ದೀಕ್ಷಾ ಮಂಟಪದವರೆಗಿನ ಮಾರ್ಗದಲ್ಲಿ ಆಯೋಜಿಸಲಾಗುವುದು. "ವಿಕಸಿತ ಭಾರತಕ್ಕಾಗಿ ನಶಾಮಕ್ತ ಯುವಜನತೆ" ಎಂಬ ವಿಷಯವನ್ನು ಆಧರಿಸಿದ ಈ ಉಪಕ್ರಮವು ಯುವಕರು, ಫಿಟ್ನೆಸ್ ಉತ್ಸಾಹಿಗಳು, ನಾಗರಿಕರು ಮತ್ತು ಕ್ರೀಡಾ ದಿಗ್ಗಜರನ್ನು ಒಟ್ಟುಗೂಡಿಸಿ, ಸಕ್ರಿಯ ಜೀವನಶೈಲಿಯನ್ನು ಉತ್ತೇಜಿಸುತ್ತದೆ ಮತ್ತು ಯುವಜನರು ಮಾದಕ ವ್ಯಸನದಿಂದ ದೂರವಿರಲು ಪ್ರೇರೇಪಿಸುತ್ತದೆ.

ಸಕ್ರಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸುಲಭವಾದ, ಕೈಗೆಟುಕುವ ಮತ್ತು ಸುಸ್ಥಿರ ಮಾರ್ಗವಾಗಿ ಸೈಕ್ಲಿಂಗ್ ಅನ್ನು ಉತ್ತೇಜಿಸಲು ಈ ಕಾರ್ಯಕ್ರಮವು ನಾಗರಿಕರು, ಯುವಕರು, ಫಿಟ್‌ನೆಸ್ ಉತ್ಸಾಹಿಗಳು ಮತ್ತು ಕ್ರೀಡಾ ಸಮುದಾಯದ ಸದಸ್ಯರನ್ನು ಒಟ್ಟುಗೂಡಿಸುತ್ತದೆ. ಸಾಮೂಹಿಕ ಭಾಗವಹಿಸುವಿಕೆಯ ಮೂಲಕ, ಫಿಟ್‌ನೆಸ್ ಎಂಬುದು ದೈನಂದಿನ ಬದ್ಧತೆಯಾಗಿದೆ ಮತ್ತು ಆರೋಗ್ಯಕರ, ಬಲಿಷ್ಠ ಮತ್ತು ಮಾದಕವ್ಯಸನ ಮುಕ್ತ ಭಾರತವನ್ನು ನಿರ್ಮಿಸುವಲ್ಲಿ ಕ್ರೀಡೆ ಮತ್ತು ದೈಹಿಕ ಚಟುವಟಿಕೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬ ಸಂದೇಶವನ್ನು ಬಲಪಡಿಸುವ ಗುರಿಯನ್ನು ಈ ಉಪಕ್ರಮವು ಹೊಂದಿದೆ.

ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಗೌರವಾನ್ವಿತ ಡಾ. ಮನ್ಸುಖ್ ಮಾಂಡವಿಯಾ ಅವರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. 2026ರ ಐಚಿ-ನಗೋಯಾ ಏಷ್ಯನ್ ಗೇಮ್ಸ್‌ನಲ್ಲಿ ತಮ್ಮ ಸಾಧನೆಗಳ ಮೂಲಕ ದೇಶಕ್ಕೆ ಕೀರ್ತಿ ತಂದ ಕ್ರೀಡಾಪಟುಗಳು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಹಿಳೆಯರ 400 ಮೀಟರ್ ಓಟದಲ್ಲಿ ಪ್ರಾಚಿ ಚೌಧರಿ ಕಂಚಿನ ಪದಕ ಗೆದ್ದರೆ, ಪಾರುಲ್ ಚೌಧರಿ ಮಹಿಳೆಯರ 3000 ಮೀಟರ್ ಸ್ಟೀಪಲ್‌ಚೇಸ್ ಮತ್ತು 5000 ಮೀಟರ್ ಓಟದಲ್ಲಿ ಎರಡು ಕಂಚಿನ ಪದಕಗಳನ್ನು ಪಡೆದಿದ್ದಾರೆ. ಜೇ ಕುಮಾರ್ ಅವರು ಮಿಶ್ರ 4x400 ಮೀಟರ್ ರಿಲೇಯಲ್ಲಿ ಬೆಳ್ಳಿ ಮತ್ತು ಪುರುಷರ 4x400 ಮೀಟರ್ ರಿಲೇಯಲ್ಲಿ ಕಂಚು ಗೆದ್ದಿದ್ದಾರೆ ಹಾಗೂ ಹಾಕಿ ತಂಡದ ಭಾಗವಾಗಿ ರಾಜ್ ಕುಮಾರ್ ಪಾಲ್ ಚಿನ್ನದ ಪದಕವನ್ನು ಗೆದ್ದಿದ್ದಾರೆ.

ಇವರ ಭಾಗವಹಿಸುವಿಕೆಯು ಕಾರ್ಯಕ್ರಮಕ್ಕೆ ವಿಶೇಷ ಕ್ರೀಡಾ ಮೆರುಗು ತರಲಿದ್ದು, ಯುವ ಸ್ಪರ್ಧಿಗಳಿಗೆ ಉನ್ನತ ಮಟ್ಟದ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಲು ಅವಕಾಶವನ್ನು ನೀಡುತ್ತದೆ. ಅವರ ಈ ಪಯಣವು ಶಿಸ್ತು, ಪರಿಶ್ರಮ, ನಿಯಮಿತ ತರಬೇತಿ ಮತ್ತು ಶ್ರೇಷ್ಠತೆಯತ್ತ ಇರುವ ಬದ್ಧತೆಯ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ - ಈ ಮೌಲ್ಯಗಳು 'ಸಂಡೇಸ್ ಆನ್ ಸೈಕಲ್' ಸಂದೇಶಕ್ಕೆ ಮತ್ತಷ್ಟು ಪೂರಕವಾಗಿವೆ.

ಕ್ರೀಡಾಪಟುಗಳ ಭಾಗವಹಿಸುವಿಕೆಯ ಜೊತೆಗೆ, ನಮೋ ಘಾಟ್‌ನಲ್ಲಿ ಯೋಗಾಭ್ಯಾಸ, ಶಕ್ತಿಶಾಲಿ ಜುಂಬಾ ನೃತ್ಯ, ಮೋಜಿನ ಆಟಗಳು ಮತ್ತು ರೋಮಾಂಚಕಾರಿ ಸಂವಾದಾತ್ಮಕ ಚಟುವಟಿಕೆಗಳನ್ನು ಒಳಗೊಂಡಂತೆ ಹಲವಾರು ಮೋಜು ಮತ್ತು ಫಿಟ್‌ನೆಸ್ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.ಇದು ಭಾಗವಹಿಸುವವರಿಗೆ ಫಿಟ್‌ನೆಸ್ ಮತ್ತು ಯೋಗಕ್ಷೇಮವನ್ನು ಅಳವಡಿಸಿಕೊಳ್ಳಲು ಆಕರ್ಷಕ ವೇದಿಕೆಯನ್ನು ಒದಗಿಸುತ್ತದೆ.

ಈ ಅಭಿಯಾನವು 'ಫಿಟ್ ಇಂಡಿಯಾ' ಮತ್ತು ಮಾದಕವ್ಯಸನ ಮುಕ್ತ ಸಮಾಜವನ್ನು ನಿರ್ಮಿಸುವ ವ್ಯಾಪಕ ದೃಷ್ಟಿಕೋನದೊಂದಿಗೆ ಹೊಂದಿಕೊಂಡಿದೆ. ಇದು ಸೈಕ್ಲಿಂಗ್, ನಡಿಗೆ ಮತ್ತು ಇತರ ರೀತಿಯ ದೈಹಿಕ ಚಟುವಟಿಕೆಗಳನ್ನು ತಮ್ಮ ದೈನಂದಿನ ದಿನಚರಿಯ ಭಾಗವಾಗಿಸಲು ನಾಗರಿಕರನ್ನು ಪ್ರೋತ್ಸಾಹಿಸುತ್ತದೆ. ಮಾದಕ ವ್ಯಸನದ ವಿರುದ್ಧದ ಹೋರಾಟಕ್ಕೆ ಸಾಮೂಹಿಕ ಕ್ರಿಯೆಯ ಅಗತ್ಯವಿದೆ ಮತ್ತು ಯುವಜನರನ್ನು ಸಕಾರಾತ್ಮಕ ಆಯ್ಕೆಗಳತ್ತ ಮುನ್ನಡೆಸುವಲ್ಲಿ ಕುಟುಂಬಗಳು, ಸಮುದಾಯಗಳು, ಶಿಕ್ಷಣ ಸಂಸ್ಥೆಗಳು ಮತ್ತು ಕ್ರೀಡಾ ದಿಗ್ಗಜರು ಪ್ರಮುಖ ಪಾತ್ರವಹಿಸುತ್ತಾರೆ ಎಂಬ ಸಂದೇಶವನ್ನು ಇದು ಮತ್ತಷ್ಟು ಬಲಪಡಿಸುತ್ತದೆ.

ವಾರಣಾಸಿಯು 'ಸಂಡೇಸ್ ಆನ್ ಸೈಕಲ್'ನ 94 ನೇ ಆವೃತ್ತಿಗೆ ಸೇರ್ಪಡೆಯಾಗುವುದರೊಂದಿಗೆ, ಈ ಕಾರ್ಯಕ್ರಮವು ಸಾಮೂಹಿಕ ಫಿಟ್‌ನೆಸ್, ಯುವಜನರ ಭಾಗವಹಿಸುವಿಕೆ ಮತ್ತು ಕ್ರೀಡಾ ಉತ್ಕೃಷ್ಟತೆಯ ಮನೋಭಾವವನ್ನು ಮುಂದಕ್ಕೆ ಕೊಂಡೊಯ್ಯುತ್ತದೆ - ಆರೋಗ್ಯಕರ, ಸದೃಢ ಮತ್ತು ಮಾದಕವ್ಯಸನ ಮುಕ್ತ ಭಾರತ ಎಂಬ ಒಂದು ಹಂಚಿಕೆಯ ಉದ್ದೇಶದ ಸುತ್ತ ಜನರನ್ನು ಒಟ್ಟುಗೂಡಿಸುತ್ತದೆ.

'ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್' ಕಾರ್ಯಕ್ರಮವನ್ನು ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು, ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಸಿಎಫ್‌ಐ), ರಾಹಗಿರಿ ಫೌಂಡೇಶನ್ ಮತ್ತು 'ಮೈ ಭಾರತ್' (ಮೈ ಭಾರತ್‌) ಸಹಯೋಗದೊಂದಿಗೆ ಆಯೋಜಿಸಿದೆ. ಸಾಯ್ (ಎಸ್‌ಎಐ) ಪ್ರಾದೇಶಿಕ ಕೇಂದ್ರಗಳು, ರಾಷ್ಟ್ರೀಯ ಉತ್ಕೃಷ್ಟತೆಯ ಕೇಂದ್ರಗಳು (ಎನ್‌ಸಿಒಇ), ಸಾಯ್ ತರಬೇತಿ ಕೇಂದ್ರಗಳು (ಎಸ್‌ಟಿಸಿ), ಖೇಲೊ ಇಂಡಿಯಾ ರಾಜ್ಯ ಉತ್ಕೃಷ್ಟತೆಯ ಕೇಂದ್ರಗಳು (KISCE) ಮತ್ತು ಖೇಲೊ ಇಂಡಿಯಾ ಕೇಂದ್ರಗಳು (ಕೆಐಸಿ)ಸೇರಿದಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸೈಕ್ಲಿಂಗ್ ಅಭಿಯಾನವನ್ನು ಏಕಕಾಲದಲ್ಲಿ ನಡೆಸಲಾಗುತ್ತದೆ. ದೇಶಾದ್ಯಂತ 6,000 ಕ್ಕೂ ಹೆಚ್ಚು ನಮೋ ಫಿಟ್ ಇಂಡಿಯಾ ಕ್ಲಬ್‌ಗಳು ಕೂಡ ಪ್ರತಿ ವಾರ ಈ ಸೈಕ್ಲಿಂಗ್ ಉಪಕ್ರಮವನ್ನು ಆಯೋಜಿಸುತ್ತವೆ.

 

*****


(ಪ್ರಕಟಣೆ ಐ.ಡಿ.: 2321737) ವಿಸಿಟರ್ ಕೌಂಟರ್ : 48
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Assamese , Gujarati , Tamil , Malayalam