ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸರ್ಕಾರದ ಮುಖ್ಯಸ್ಥರಾಗಿ ರಾಷ್ಟ್ರಕ್ಕೆ 25 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ಶುಭಾ ಹಾರೈಸಿದ ಸರ್ಬಿಯಾ ಅಧ್ಯಕ್ಷರಾದ ಅಲೆಕ್ಸಾಂಡರ್‌ವುಸಿಕ್‌ ಅವರಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 07 OCT 2026 9:10PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ಬಿಯಾ ಅಧ್ಯಕ್ಷರಾದ  ಅಲೆಕ್ಸಾಂಡರ್‌ವುಸಿಕ್‌ ಅವರ ಆತ್ಮೀಯ ಶುಭಾಶಯಗಳಿಗಾಗಿ ಧನ್ಯವಾದ ಅರ್ಪಿಸಿದ್ದಾರೆ. ಭಾರತ-ಸೆರ್ಬಿಯಾ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಸರ್ಬಿಯಾದ ಅಧ್ಯಕ್ಷರ ವೈಯಕ್ತಿಕ ಕೊಡುಗೆಯನ್ನು ನಾನು ಅಪಾರವಾಗಿ ಶ್ಲಾಸುತ್ತೇನೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಶ್ರೀ ಮೋದಿ ಅವರು ತಮ್ಮ ಎಕ್ಸ್‌ ಖಾತೆಯಲ್ಲಿಈ ರೀತಿ ಸಂದೇಶ ತಿಳಿಸಿದ್ದಾರೆ:

ನಿಮ್ಮ ಆತ್ಮೀಯ ಮಾತುಗಳು ಮತ್ತು ಸ್ನೇಹಕ್ಕಾಗಿ ಧನ್ಯವಾದಗಳು.

ಭಾರತ-ಸೆರ್ಬಿಯಾ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ನಿಮ್ಮ ವೈಯಕ್ತಿಕ ಕೊಡುಗೆಯನ್ನು ನಾನು ಪ್ರಶಂಸಿಸುತ್ತೇನೆ.

ನಿಮ್ಮ ನಾಯಕತ್ವದಲ್ಲಿ ಸರ್ಬಿಯಾ ಅಸಾಧಾರಣ ಪರಿವರ್ತನೆಗೆ ಒಳಗಾಗಿದೆ. ನೀವು ಸರ್ಬಿಯಾಕ್ಕೆ ದೃಢ ನಿಶ್ಚಯ ಮತ್ತು ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸಿದ್ದೀರಿ.

ಭಾರತ-ಸರ್ಬಿಯಾ ಸಹಭಾಗಿತ್ವವನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ನಾನು ಎದಿರು ನೋಡುತ್ತಿದ್ದೇನೆ.

@avucic

 

*****


(ಪ್ರಕಟಣೆ ಐ.ಡಿ.: 2320576) ವಿಸಿಟರ್ ಕೌಂಟರ್ : 2
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी , Marathi , Gujarati , Telugu