ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

25 ವರ್ಷಗಳ ಸಾರ್ವಜನಿಕ ಜೀವನ ರೂಪಿಸಿದ ಸೇವೆ, ಉದ್ದೇಶ, ದೃಢನಿಶ್ಚಯ ಮತ್ತು ಧೈರ್ಯದಂತಹ ಮೌಲ್ಯಗಳ ಮಹತ್ವ ವಿವರಿಸುವ ಲೇಖನ ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 07 OCT 2026 12:17PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದಾಜಿ (ಶ್ರೀ ಕಮಲೇಶ್ ಪಟೇಲ್) ಅವರ ಲೇಖನವೊಂದನ್ನು ಹಂಚಿಕೊಂಡಿದ್ದಾರೆ. ಈ ಲೇಖನವು ಸೇವೆ, ಉದ್ದೇಶ, ದೃಢನಿಶ್ಚಯ ಮತ್ತು ಧೈರ್ಯದಂತಹ ಮೂಲಭೂತ ಮೌಲ್ಯಗಳ ಮೂಲಕ ಪ್ರಧಾನಮಂತ್ರಿಯವರ 25 ವರ್ಷಗಳ ಸಾರ್ವಜನಿಕ ಸೇವೆಯನ್ನು ಅವಲೋಕಿಸಿದೆ.

ಶ್ರೀ ಮೋದಿಯವರ ಆರಂಭಿಕ ದಿನಗಳಲ್ಲಿನ ಸಮರ್ಪಣೆಯೊಂದಿಗಿನ ಸೇವೆಯಿಂದ ಹಿಡಿದು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಯಾಗಿ ಅವರು ವಹಿಸಿದ ನಾಯಕತ್ವದವರೆಗಿನ ಪಯಣದುದ್ದಕ್ಕೂ, ದೃಢವಾದ ಸೇವಾ ಮನೋಭಾವವು ಹೇಗೆ ನಿರಂತರ ಮಾರ್ಗದರ್ಶಕ ಸೂತ್ರವಾಗಿದೆ ಎಂಬುದನ್ನು ದಾಜಿ ಅವರು ವಿವರಿಸಿದ್ದಾರೆ.

ಪ್ರಧಾನಮಂತ್ರಿಯವರ ಕಾರ್ಯಾಲಯದ ಎಕ್ಸ್ ಪೋಸ್ಟ್ ಹೀಗಿದೆ:

“ದಾಜಿ (ಶ್ರೀ ಕಮಲೇಶ್ ಪಟೇಲ್) ಅವರು ಪ್ರಧಾನಮಂತ್ರಿ @narendramodi ಅವರ ಸಾರ್ವಜನಿಕ ಜೀವನದ 25 ವರ್ಷಗಳಲ್ಲಿನ ಸೇವೆ, ಉದ್ದೇಶ, ದೃಢನಿಶ್ಚಯ ಮತ್ತು ಧೈರ್ಯದ ಮೌಲ್ಯಗಳ ಬಗ್ಗೆ ವಿವರಿಸಿದ್ದಾರೆ. ಶ್ರೀ ಮೋದಿ ಅವರ ಆರಂಭಿಕ ದಿನಗಳಿಂದ ಹಿಡಿದು ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಯಾಗಿ ಅವರ ಪಯಣದವರೆಗೂ, ಸೇವಾ ಮನೋಭಾವವು ಹೇಗೆ ಒಂದು ನಿರಂತರ ಕೊಂಡಿಯಾಗಿ ಉಳಿದಿದೆ ಎಂಬುದನ್ನು ಅವರು ವಿವರಿಸಿದ್ದಾರೆ."

 

*****


(ಪ್ರಕಟಣೆ ಐ.ಡಿ.: 2320023) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Bengali , Punjabi , Gujarati , Tamil , Telugu , Malayalam