ಪ್ರಧಾನ ಮಂತ್ರಿಯವರ ಕಛೇರಿ
ಭಾರತೀಯ ಕ್ರೀಡಾಪಟುಗಳು ಮತ್ತು ಕ್ರೀಡಾ ಪೂರಕ ವ್ಯವಸ್ಥೆಯ ನೆರವಿನಲ್ಲಿನ ಗಮನಾರ್ಹ ಬದಲಾವಣೆ ಬಿಂಬಿಸುವ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
07 OCT 2026 12:56PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಭಾರತದಾದ್ಯಂತ ಕ್ರೀಡಾಪಟುಗಳನ್ನು ಬೆಂಬಲಿಸುವ ವಿಧಾನದಲ್ಲಿನ ಗಮನಾರ್ಹ ಬದಲಾವಣೆಯನ್ನು ಪ್ರಮುಖವಾಗಿ ಬಿಂಬಿಸುವ ಶೂಟರ್ ಎಲವೆನಿಲ್ ವಲರಿವನ್ ಅವರ ಲೇಖನವನ್ನು ಹಂಚಿಕೊಂಡಿದ್ದಾರೆ.
ಖೇಲ್ ಮಹಾಕುಂಭ್ ಮತ್ತು ಖೇಲೋ ಇಂಡಿಯಾದಂತಹ ಉಪಕ್ರಮಗಳ ಮೂಲಕ ಯುವ ಪ್ರತಿಭೆಗಳನ್ನು ಪೋಷಿಸುವುದರಿಂದ ಹಿಡಿದು, ವಿಶ್ವ ದರ್ಜೆಯ ತರಬೇತಿ, ಆಧುನಿಕ ಸೌಲಭ್ಯಗಳು ಮತ್ತು ಉನ್ನತ ಮಟ್ಟದ ಸ್ಪರ್ಧೆಯಲ್ಲಿ ಕ್ರೀಡಾಪಟುಗಳನ್ನು ಸಜ್ಜುಗೊಳಿಸುವವರೆಗೆ ಪ್ರಧಾನಮಂತ್ರಿಯವರ ಬೆಂಬಲ ಹೇಗೆ ವಿಸ್ತರಿಸುತ್ತಿದೆ ಎಂಬುದನ್ನು ಶ್ರೀಮತಿ ವಲರಿವನ್ ಪ್ರಧಾನವಾಗಿ ಪ್ರಸ್ತಾಪಿಸಿದ್ದಾರೆ.
ಪ್ರಧಾನಮಂತ್ರಿಗಳ ಕಾರ್ಯಾಲಯ ತನ್ನ X ಪೋಸ್ಟ್ ನಲ್ಲಿ ಹೀಗೆ ಮಾಡಿದೆ:
“ಭಾರತೀಯ ಕ್ರೀಡಾ ವಲಯದಲ್ಲಿ ಕ್ರೀಡಾಪಟುಗಳನ್ನು ಬೆಂಬಲಿಸುವ ರೀತಿಯಲ್ಲಿ ಗಮನಾರ್ಹ ಬದಲಾವಣೆ ಕಂಡಿದೆ ಎಂದು ಎಲವೆನಿಲ್ ವಲರಿವನ್ ಬರೆಯುತ್ತಾರೆ. ಅವರು ತನ್ನ ಲೇಖನದಲ್ಲಿ ಖೇಲ್ ಮಹಾಕುಂಭ್ ಮತ್ತು ಖೇಲೋ ಇಂಡಿಯಾ ಮೂಲಕ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದರಿಂದ ಹಿಡಿದು ಕ್ರೀಡಾಪಟುಗಳಿಗೆ ಉನ್ನತ ಮಟ್ಟದಲ್ಲಿ ತರಬೇತಿ, ಸೌಲಭ್ಯಗಳು ಮತ್ತು ಬೆಂಬಲವನ್ನು ಒದಗಿಸುವವರೆಗೆ ಪ್ರಧಾನಮಂತ್ರಿ @narendramodi ಅವರ ಬೆಂಬಲ ಹೇಗೆ ವಿಸ್ತರಿಸಿದೆ ಎಂಬುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.
ಇದನ್ನು ಎಲ್ಲರೂ ಓದಲೇಬೇಕು!”
*****
(ಪ್ರಕಟಣೆ ಐ.ಡಿ.: 2320018)
ವಿಸಿಟರ್ ಕೌಂಟರ್ : 17