ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಗೇಮ್ಸ್ ನ ಪುರುಷರ 57 ಕೆ.ಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಅಮನ್ ಸೆಹ್ರಾವತ್ ಅವರನ್ನು ಪ್ರಧಾನಮಂತ್ರಿ ಅವರು ಅಭಿನಂದಿಸಿದರು

ಪ್ರಕಟಣಾ ದಿನಾಂಕ: 03 OCT 2026 7:30PM by PIB Bengaluru

ಪುರುಷರ 57 ಕೆ.ಜಿ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಭಾರತದ ಮೊದಲ ಏಷ್ಯನ್ ಗೇಮ್ಸ್ ಚಿನ್ನದ ಪದಕ ಗೆದ್ದ ಅಮನ್ ಸೆಹ್ರಾವತ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಕಳೆದ ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆದ್ದು  ಈ ಬಾರಿ ವೇದಿಕೆಯ ಮೇಲೆ ನಿಲ್ಲುವವರೆಗೆ, ಅಮನ್ ಸೆಹ್ರಾವತ್ ಅವರು ಉತ್ತಮ ದೃಢತೆಯನ್ನು ಪ್ರದರ್ಶಿಸಿದ್ದಾರೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಪ್ರಧಾನಮಂತ್ರಿಗಳ ಕಾರ್ಯಾಲಯ ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ;

"ಅಮನ್ ಶೆರಾವತ್ ಅವರಿಗೆ ಎಂತಹ ಅದ್ಭುತ ಗೆಲುವು!

ಪುರುಷರ 57 ಕೆಜಿ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಭಾರತದ ಮೊದಲ ಏಷ್ಯನ್ ಗೇಮ್ಸ್ ಚಿನ್ನವನ್ನು ಗೆಲ್ಲುವ ಮೂಲಕ ಅವರು ಇತಿಹಾಸ ಬರೆದಿದ್ದಾರೆ. ಕಳೆದ ಏಷ್ಯನ್ ಗೇಮ್ಸ್ ನಲ್ಲಿ ಕಂಚು ಗೆದ್ದ ಪದಕದಿಂದ ಹಿಡಿದು ಈ ಬಾರಿ ವೇದಿಕೆಯ ಮೇಲೆ ನಿಲ್ಲುವವರೆಗೆ, ಅಮನ್ ಉತ್ತಮ ದೃಢತೆಯನ್ನು ಪ್ರದರ್ಶಿಸಿದ್ದಾರೆ. ಅವರಿಗೆ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು: ಪ್ರಧಾನಮಂತ್ರಿ @narendramodi" ಎಂದು ಹೇಳಿದ್ದಾರೆ.

 

 

******


(ಪ್ರಕಟಣೆ ಐ.ಡಿ.: 2319092) ವಿಸಿಟರ್ ಕೌಂಟರ್ : 14
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Bengali , Manipuri , Punjabi , Gujarati , Tamil , Telugu , Malayalam