ಶಿಕ್ಷಣ ಸಚಿವಾಲಯ
ಯುವ ಸಂಗಮ ಹಂತ VIIರ ಮಧ್ಯಪ್ರದೇಶ–ಕರ್ನಾಟಕ ನಿಯೋಗದಿಂದ ಸಾಂಸ್ಕೃತಿಕ ಅನ್ವೇಷಣೆ ಮತ್ತು ಯುವಜನ ವಿನಿಮಯದ ಪ್ರಯಾಣದ ಆರಂಭ
ಕರ್ನಾಟಕದ ರಾಜ್ಯಪಾಲರೊಂದಿಗೆ ಸಂವಾದ ನಡೆಸಿದ ನಿಯೋಗ ಹಾಗೂ ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ವೀಕ್ಷಣೆ
ಪ್ರಕಟಣಾ ದಿನಾಂಕ:
02 OCT 2026 8:48PM by PIB Bengaluru
ಜನರಿಂದ ಜನರ ಬಾಂಧವ್ಯವನ್ನು ಬಲಪಡಿಸಲು ಮತ್ತು ಯುವಕರಲ್ಲಿ ರಾಷ್ಟ್ರೀಯ ಭಾವೈಕ್ಯತೆಯನ್ನು ಉತ್ತೇಜಿಸಲು ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯು ಏಕ ಭಾರತ ಶ್ರೇಷ್ಠ ಭಾರತ ಕಾರ್ಯಕ್ರಮದಡಿಯಲ್ಲಿ ಯುವ ಸಂಗಮ ಹಂತ VII ಅನ್ನು ಆಯೋಜಿಸುತ್ತಿದೆ.
ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್ (ಎಸ್ ಪಿ ಎ), ಭೋಪಾಲ್ ಅನ್ನು ನೋಡಲ್ ಸಂಸ್ಥೆಯನ್ನಾಗಿ ಹೊಂದಿರುವ ಮಧ್ಯಪ್ರದೇಶ–ಕರ್ನಾಟಕ ನಿಯೋಗಕ್ಕೆ ಸೆಪ್ಟೆಂಬರ್ 26, 2026ರಂದು ಚಾಲನೆ ನೀಡಲಾಯಿತು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಆತಿಥ್ಯ ವಹಿಸಿರುವ ಈ ನಿಯೋಗವು, ರಾಜ್ಯದ ಶ್ರೀಮಂತ ಪರಂಪರೆ, ಸಂಪ್ರದಾಯಗಳು, ಆಹಾರ ಸಂಸ್ಕೃತಿ, ನೈಸರ್ಗಿಕ ಸೌಂದರ್ಯ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ನೇರವಾಗಿ ಅನುಭವಿಸಲು ಕರ್ನಾಟಕಕ್ಕೆ ಭೇಟಿ ನೀಡುತ್ತಿದೆ.

ಈ ಭೇಟಿಯ ಪ್ರಮುಖ ಆಕರ್ಷಣೆಯೆಂದರೆ, ಮಧ್ಯಪ್ರದೇಶದ ನಿಯೋಗವು ಅಕ್ಟೋಬರ್ 1, 2026ರಂದು ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ನಡೆಸಿದ ಸಂವಾದ. ಈ ಸಂವಾದವು ಯುವ ಪ್ರತಿನಿಧಿಗಳಿಗೆ ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಹಾಗೂ ರಾಷ್ಟ್ರೀಯ ಏಕತೆ ಮತ್ತು ಜನರಿಂದ ಜನರ ಬಾಂಧವ್ಯವನ್ನು ಬಲಪಡಿಸುವಲ್ಲಿ ಯುವಕರ ಪಾತ್ರದ ಬಗ್ಗೆ ತಿಳಿದುಕೊಳ್ಳಲು ಅವಕಾಶವನ್ನು ಒದಗಿಸಿತು.


ತಮ್ಮ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಅಧ್ಯಯನದ ಭಾಗವಾಗಿ, ಪ್ರತಿನಿಧಿಗಳು ಬೀದರ್ ಕೋಟೆ ಮತ್ತು ಭಾರತೀಯ ವ್ಯವಸ್ಥಾ ಪ್ರಬಂಧ ಸಂಸ್ಥೆ, ಬೆಂಗಳೂರಿಗೆ (ಐಐಎಂ ಬೆಂಗಳೂರು) ಭೇಟಿ ನೀಡಿದರು.
ಸೆಪ್ಟೆಂಬರ್ 30, 2026ರಂದು, ನಿಯೋಗವು ಬಿದ್ರಿವೇರ್ ಕಲೆಯ ಸಾಂಪ್ರದಾಯಿಕ ಕೊಡುಗೆಗಾಗಿ ಹೆಸರುವಾಸಿಯಾದ ಪದ್ಮಶ್ರೀ ರಶೀದ್ ಅಹಮದ್ ಖಾದ್ರಿ ಅವರೊಂದಿಗೆ ಸಂವಾದ ನಡೆಸಿತು. ಈ ಸಂವಾದವು ಪ್ರತಿನಿಧಿಗಳಿಗೆ ಈ ಕಲೆ, ಅದರ ಭವ್ಯ ಪರಂಪರೆ ಮತ್ತು ಭಾರತದ ಸಾಂಪ್ರದಾಯಿಕ ಜ್ಞಾನ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮಹತ್ವವನ್ನು ಅರಿಯಲು ಅವಕಾಶ ಮಾಡಿಕೊಟ್ಟಿತು.


ಪ್ರತಿನಿಧಿಗಳು ಗುರುದ್ವಾರ ಶ್ರೀ ನಾನಕ್ ಝೀರಾ ಸಾಹಿಬ್ ಗೆ ಭೇಟಿ ನೀಡಿ, ಐತಿಹಾಸಿಕ ಸ್ಥಳಕ್ಕೆ ಸಂಬಂಧಿಸಿದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳನ್ನು ಕಂಡರು. ಈ ಭೇಟಿಯು ಪ್ರದೇಶದ ವೈವಿಧ್ಯಮಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರಶಂಸಿಸಲು ಅವಕಾಶವನ್ನು ಒದಗಿಸಿತು.
ಯುವ ಸಂಗಮವು ಏಕ ಭಾರತ ಶ್ರೇಷ್ಠ ಭಾರತ ಕಾರ್ಯಕ್ರಮದಡಿಯಲ್ಲಿ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯ ಪ್ರಮುಖ ಯುವಜನ ವಿನಿಮಯ ಶ್ರೇಷ್ಠ ಉಪಕ್ರಮವಾಗಿದೆ. ಇದು ಕಾರ್ಯಸಾಧ್ಯವಾದ ಕಲಿಕೆ ಮತ್ತು ಸಾಂಸ್ಕೃತಿಕ ವಿನಿಮಯದ ಮೂಲಕ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಯುವಕರ ನಡುವೆ ಪರಸ್ಪರ ತಿಳುವಳಿಕೆಯನ್ನು ಉತ್ತೇಜಿಸುವ ಮತ್ತು ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಈ ಉಪಕ್ರಮವು ಭಾಗವಹಿಸುವ ಯುವಜನರಿಗಾಗಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಾಂಸ್ಕೃತಿಕ ಸಂಪ್ರದಾಯಗಳು, ಶೈಕ್ಷಣಿಕ ಸಂಸ್ಥೆಗಳು, ನಾವೀನ್ಯತೆ ವ್ಯವಸ್ಥೆಗಳು ಮತ್ತು ಅಭಿವೃದ್ಧಿ ಯೋಜನೆಗಳನ್ನು ಅನುಭವಿಸಲು ಅವಕಾಶವನ್ನು ನೀಡುತ್ತದೆ.

ಈ ಕಾರ್ಯಕ್ರಮವು ಐದು ಪ್ರಮುಖ ಸ್ತಂಭಗಳ ಸುತ್ತ ರೂಪುಗೊಂಡಿದೆ — ಪರ್ಯಟನ್ (ಪ್ರವಾಸೋದ್ಯಮ), ಪರಂಪರಾ (ಸಂಪ್ರದಾಯಗಳು), ಪ್ರಗತಿ (ಅಭಿವೃದ್ಧಿ), ಪರಸ್ಪರ ಸಂಪರ್ಕ (ಜನರಿಂದ ಜನರ ಸಂಪರ್ಕ) ಮತ್ತು ಪ್ರೌದ್ಯೋಗಿಕಿ (ತಂತ್ರಜ್ಞಾನ). ಈ ಸ್ತಂಭಗಳು ಭಾಗವಹಿಸುವವರಿಗೆ ವಿವಿಧ ಪ್ರದೇಶಗಳ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ, ತಾಂತ್ರಿಕ ಮತ್ತು ಅಭಿವೃದ್ಧಿಯ ಆಯಾಮಗಳನ್ನು ಅನ್ವೇಷಿಸಲು ಅವಕಾಶ ಮಾಡಿಕೊಡುತ್ತವೆ.
*****
(ಪ್ರಕಟಣೆ ಐ.ಡಿ.: 2318486)
ವಿಸಿಟರ್ ಕೌಂಟರ್ : 10