ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಗೇಮ್ಸ್‌ ನಲ್ಲಿ ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ ಪಡೆದಿರುವ ಕಿರಣ್ ಪಹಾಲ್, ಪೂವಮ್ಮ ಎಂ.ಆರ್., ಪ್ರಾಚಿ ಮತ್ತು ವಿದ್ಯಾ ರಾಮರಾಜ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ

ಪ್ರಕಟಣಾ ದಿನಾಂಕ: 29 SEP 2026 8:26PM by PIB Bengaluru

ಏಷ್ಯನ್ ಕ್ರೀಡಾಕೂಟದ ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಅಮೋಘ ಪ್ರದರ್ಶನ ನೀಡಿದ ಕಿರಣ್ ಪಹಾಲ್, ಪೂವಮ್ಮ ಎಂ.ಆರ್., ಪ್ರಾಚಿ ಮತ್ತು ವಿದ್ಯಾ ರಾಮರಾಜ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಅವರ ವೇಗ ಮತ್ತು ದೃಢನಿಶ್ಚಯದಿಂದಾಗಿ ಭಾರತ ಅಗ್ರಸ್ಥಾನ ಪಡೆಯಿತು ಎಂದು ಹೇಳಿರುವ ಪ್ರಧಾನಮಂತ್ರಿಯವರು, ಈ ಸಾಧನೆಯನ್ನು ಭಾರತೀಯ ಅಥ್ಲೆಟಿಕ್ಸ್‌ನ ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ. 

ಸಾಮೂಹಿಕ ಪ್ರಯತ್ನದಿಂದ ಏನನ್ನು ಸಾಧಿಸಬಹುದು ಎಂಬುದಕ್ಕೆ ಈ ಪ್ರದರ್ಶನವು ಒಂದು ಅದ್ಭುತ ಉದಾಹರಣೆಯಾಗಿದೆ ಎಂದು ಹೇಳುತ್ತಾ ಶ್ರೀ ಮೋದಿ ಅವರು ಕ್ರೀಡಾಪಟುಗಳ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಸಿದ್ದಾರೆ. 

ಪ್ರಧಾನಮಂತ್ರಿಯವರ ಕಚೇರಿಯು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದೆ:

"ಏಷ್ಯನ್ ಗೇಮ್ಸ್‌ ನ ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕಿರಣ್ ಪಹಾಲ್, ಪೂವಮ್ಮ ಎಂ.ಆರ್., ಪ್ರಾಚಿ ಮತ್ತು ವಿದ್ಯಾ ರಾಮರಾಜ್ ಅವರಿಗೆ ಅಭಿನಂದನೆಗಳು. ಅವರ ವೇಗ ಮತ್ತು ದೃಢನಿಶ್ಚಯವು ಭಾರತವನ್ನು ಅಗ್ರಸ್ಥಾನಕ್ಕೇರಿಸಿತು. ಇದು ಭಾರತೀಯ ಅಥ್ಲೆಟಿಕ್ಸ್‌ ಗೆ ಹೆಮ್ಮೆಯ ಕ್ಷಣ ಮತ್ತು ತಂಡವಾಗಿ ಪ್ರಯತ್ನ ಏನನ್ನು ಸಾಧಿಸಬಹುದು ಎಂಬುದಕ್ಕೆ ಅದ್ಭುತ ಉದಾಹರಣೆಯಾಗಿದೆ! ಕ್ರೀಡಾಪಟುಗಳ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು: ಪ್ರಧಾನಮಂತ್ರಿ @narendramodi"

 

*****


(ಪ್ರಕಟಣೆ ಐ.ಡಿ.: 2316957) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Bengali , Manipuri , Punjabi , Gujarati , Tamil , Telugu , Malayalam