ಕಲ್ಲಿದ್ದಲು ಸಚಿವಾಲಯ
ಭಾರತ ಗಣಿಗಾರಿಕಾ ಸಪ್ತಾಹ 2026ಕ್ಕೆ ಮಾಧ್ಯಮ ನೋಂದಣಿ ಆರಂಭ
ಭಾರತದ ಮಹತ್ವಾಕಾಂಕ್ಷಿ ಗಣಿ ಮತ್ತು ಖನಿಜಗಳ ವೇದಿಕೆಯ ಬಗ್ಗೆ ವರದಿಗಾರಿಕೆಗೆ ನೋಂದಾಯಿಸಿಕೊಳ್ಳಲು ಪತ್ರಕರ್ತರು ಮತ್ತು ಮಾಧ್ಯಮ ವೃತ್ತಿಪರರಿಗೆ ಆಹ್ವಾನ
ಪ್ರಕಟಣಾ ದಿನಾಂಕ:
25 SEP 2026 5:31PM by PIB Bengaluru
ನವದೆಹಲಿಯ ಯಶೋಭೂಮಿ ಸಮಾವೇಶ ಕೇಂದ್ರದಲ್ಲಿ 2026ರ ನವೆಂಬರ್ 15 ರಿಂದ 17 ರವರೆಗೆ ಆಯೋಜನೆಯಾಗಲಿರುವ ಮೂರು ದಿನಗಳ ಅಂತಾರಾಷ್ಟ್ರೀಯ ಕಾರ್ಯಕ್ರಮವಾದ ‘ಭಾರತ ಗಣಿಗಾರಿಕೆ ಸಪ್ತಾಹ (ಐಎಂಡಬ್ಲ್ಯು) 2026'ರ ವರದಿಗಾರಿಕೆ ಮಾಡಲು ಬಯಸುವ ಪತ್ರಕರ್ತರು, ಮಾಧ್ಯಮ ವೃತ್ತಿಪರರು ಮತ್ತು ವಿಷಯ ರಚನೆಕಾರರಿಗಾಗಿ (content creators) ಮಾಧ್ಯಮ ನೋಂದಣಿ ಪ್ರಕ್ರಿಯೆ ಈಗ ಪ್ರಾರಂಭವಾಗಿದೆ.
ಆಧುನಿಕ ತಂತ್ರಜ್ಞಾನದ, ಜಾಗತಿಕವಾಗಿ ಸ್ಪರ್ಧಾತ್ಮಕವಾದ ಹಾಗೂ ಪರಿಸರಾತ್ಮಕವಾಗಿ ಜವಾಬ್ದಾರಿಯುತ ಗಣಿಗಾರಿಕೆ ವಲಯವನ್ನು ರೂಪಿಸುವ ಭಾರತದ ಮುನ್ನೋಟವನ್ನು ಪ್ರತಿಬಿಂಬಿಸುವ "ಸದೃಢ ಸಂಪನ್ಮೂಲಗಳು, ಚುರುಕಾದ ಗಣಿಗಾರಿಕೆ, ಸುಸ್ಥಿರ ಭವಿಷ್ಯ" ಎಂಬ ವಿಷಯಾಧಾರಿತವಾಗಿ ಮೂರು ದಿನಗಳ ಶೃಂಗಸಭೆ ಆಯೋಜನೆಯಾಗಲಿದೆ. ಗಣಿಗಾರಿಕೆ ಮತ್ತು ಖನಿಜ ವಲಯದಾದ್ಯಂತದ ಬೆಳವಣಿಗೆಗಳ ಕುರಿತ ಚರ್ಚೆಗೆ ಈ ಕಾರ್ಯಕ್ರಮವು ನೀತಿ ನಿರೂಪಕರು, ಸರ್ಕಾರಿ ಪ್ರತಿನಿಧಿಗಳು, ಗಣಿಗಾರಿಕೆ ಮತ್ತು ಖನಿಜ ಕಂಪನಿಗಳು, ಹೂಡಿಕೆದಾರರು, ತಂತ್ರಜ್ಞಾನ ನಾವೀನ್ಯಕಾರರು, ಸಾಧನ ಸಲಕರಣೆ ತಯಾರಕರು, ಸಂಶೋಧಕರು ಮತ್ತು ಅಂತಾರಾಷ್ಟ್ರೀಯ ಪಾಲುದಾರರನ್ನು ಒಟ್ಟುಗೂಡಿಸಲಿದೆ.
ಶೃಂಗಸಭೆಯು ಉನ್ನತ ಮಟ್ಟದ ಸಮ್ಮೇಳನ, ಅಂತಾರಾಷ್ಟ್ರೀಯ ಪ್ರದರ್ಶನ, ತಾಂತ್ರಿಕ ಅವಧಿ ಚರ್ಚೆಗಳು, ನಾಯಕತ್ವ ಸಂವಾದಗಳು ಮತ್ತು ಪ್ರತ್ಯೇಕವಾದ ನೆಟ್ ವರ್ಕಿಂಗ್ (ಜಾಲ ವಿಸ್ತರಣೆ) ಅವಕಾಶಗಳನ್ನು ಒಳಗೊಂಡಿರಲಿದೆ. ವಿಕಸನಗೊಳ್ಳುತ್ತಿರುವ ಜಾಗತಿಕ ಭೂದೃಶ್ಯದಲ್ಲಿ ಖನಿಜ ಭದ್ರತೆ, ಪರಿಶೋಧನೆ, ಡಿಜಿಟಲೀಕರಣ, ಯಾಂತ್ರೀಕರಣ, ಗಣಿ ಸುರಕ್ಷತೆ, ಸುಸ್ಥಿರತೆ, ನಿರ್ಣಾಯಕ ಖನಿಜಗಳು, ಸಂಪನ್ಮೂಲ ದಕ್ಷತೆ, ನಾವೀನ್ಯತೆ, ಗಣಿಗಾರಿಕೆಯ ಭವಿಷ್ಯ ಸೇರಿದಂತೆ ನಿರ್ಣಾಯಕ ವಿಷಯಗಳ ಮೇಲೆ ಚರ್ಚೆ ಕೇಂದ್ರೀಕೃತವಾಗಿರಲಿದೆ. ಈ ಕಾರ್ಯಕ್ರಮವು ಭಾರತದ ಗಣಿಗಾರಿಕೆ ಪರಿಸರ ವ್ಯವಸ್ಥೆಯ ಭವಿಷ್ಯ ಮತ್ತು ವಿಕಸನಗೊಳ್ಳುತ್ತಿರುವ ಜಾಗತಿಕ ಖನಿಜ ಭೂದೃಶ್ಯದ ಕುರಿತ ಚರ್ಚೆಗಳಿಗೆ ವೇದಿಕೆ ಒದಗಿಸುವ ನಿರೀಕ್ಷೆಯಿದೆ.
ಭಾರತ ಗಣಿಗಾರಿಕೆ ಸಪ್ತಾಹದ ಅಧಿಕೃತ ಜಾಲತಾಣ - https://www.indiaminingweek.org/media-registration/ ಮೂಲಕ ಮಾಧ್ಯಮ ನೋಂದಣಿ ಮಾಡಿಕೊಳ್ಳಬಹುದಾಗಿದೆ.
*****
(ಪ್ರಕಟಣೆ ಐ.ಡಿ.: 2315126)
ವಿಸಿಟರ್ ಕೌಂಟರ್ : 10