ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರಿಂದ ವಿಶ್ವ ಘೇಂಡಾಮೃಗ ದಿನ ಆಚರಣೆ


ಪ್ರಾಜೆಕ್ಟ್ ರೈನೋ ಆರಂಭದ ಬಗ್ಗೆ ಪ್ರಧಾನಮಂತ್ರಿ ಮಾಹಿತಿ

ಪ್ರಕಟಣಾ ದಿನಾಂಕ: 22 SEP 2026 4:58PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 'ವಿಶ್ವ ಘೇಂಡಾಮೃಗ ದಿನ'ದ ಅಂಗವಾಗಿ, ಮೋಹಕ 'ಏಕ-ಕೊಂಬಿನ ಘೇಂಡಾಮೃಗ'ವನ್ನು ಕೊಂಡಾಡಿದ್ದಾರೆ ಹಾಗೂ ಅವುಗಳ ಸಂರಕ್ಷಣಾ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಎಲ್ಲರನ್ನೂ ಶ್ಲಾಘಿಸಿದ್ದಾರೆ. ಪ್ರಸ್ತುತ ವಿಶ್ವದ ಒಟ್ಟು ಖಡ್ಗಮೃಗಗಳ ಸಂಖ್ಯೆಯ ಸುಮಾರು ಶೇಕಡ 80ರಷ್ಟು ಅಸ್ಸಾಂನಲ್ಲಿದೆ ಎಂದು ತಿಳಿಸಿದ ಅವರು, ಈ ಮೃಗಗಳ ಅಕ್ರಮ ಬೇಟೆಯನ್ನು ತಡೆಯಲು ಕಾಜಿರಂಗ ಕೈಗೊಂಡಿರುವ ಪ್ರಯತ್ನಗಳು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿವೆ ಎಂದರು.

ಬಿಹಾರ ಮತ್ತು ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಖಡ್ಗಮೃಗಗಳು ಮರಳಿವೆ ಅಥವಾ ಉತ್ತಮ ರಕ್ಷಣೆಯನ್ನು ಹೊಂದಿವೆ. ಅದೇ ವೇಳೆ, ಉತ್ತರ ಪ್ರದೇಶದ ದುಧ್ವಾದಲ್ಲಿ ಖಡ್ಗಮೃಗಗಳನ್ನು ಯಶಸ್ವಿಯಾಗಿ ಮರುಪರಿಚಯಿಸಿರುವುದು ಇತಿಹಾಸ ಸೃಷ್ಟಿಸುತ್ತಿದೆ ಎಂದು ಪ್ರಧಾನಮಂತ್ರಿಗಳು ವಿವರಿಸಿದ್ದಾರೆ. ಈ ವ್ಯಾಪ್ತಿಯ ರಾಜ್ಯಗಳಲ್ಲಿ ಪ್ರಾಣಿ ಸಂರಕ್ಷಣೆ ಹಾಗೂ ಸಕ್ರಿಯ ವನ್ಯಜೀವಿ ನಿರ್ವಹಣೆಯತ್ತ ಜನರು ಹೊಂದಿರುವ ನಿರಂತರ ಬದ್ಧತೆಯನ್ನು ಇದು ಪ್ರದರ್ಶಿಸಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೇ, ದೇಶದಲ್ಲಿ ಪ್ರಭೇದಗಳ ಸಂರಕ್ಷಣಾ ಕಾರ್ಯವನ್ನು ಮುಂದಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ, ರಕ್ಷಣೆ; ಆವಾಸಸ್ಥಾನ ನಿರ್ವಹಣೆ; ತಳಿ ಸುಧಾರಣೆ ಹಾಗೂ ಪ್ರಾಣಿಸಂಖ್ಯೆಯ ಏರಿಳಿತದ ಗತಿಶೀಲತೆಯನ್ನು ಅರಿಯುವ ಸಂಬಂಧ ರಾಜ್ಯಗಳಿಗೆ ಹಣಕಾಸು ಮತ್ತು ತಾಂತ್ರಿಕ ನೆರವು ಒದಗಿಸಲು 'ಪ್ರಾಜೆಕ್ಟ್ ರೈನೋ' ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಧಾನಮಂತ್ರಿಗಳು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:

“ವಿಶ್ವ ಘೇಂಡಾಮೃಗ ದಿನದಂದು, ನಾವು ಮೋಹಕವಾದ ಏಕ ಕೊಂಬಿನ ಘೇಂಡಾಮೃಗವನ್ನು ಸಂಭ್ರಮಿಸುತ್ತಾ ಅದರ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿರುವ ಎಲ್ಲರನ್ನೂ ಶ್ಲಾಘಿಸುತ್ತೇವೆ.

ಪ್ರಸ್ತುತ ವಿಶ್ವದ ಒಟ್ಟು ಖಡ್ಗಮೃಗಗಳ ಸಂಖ್ಯೆಯ ಸುಮಾರು ಶೇ.80ರಷ್ಟು ಅಸ್ಸಾಂನಲ್ಲಿವೆ ಮತ್ತು ಖಡ್ಗಮೃಗಗಳ ಅಕ್ರಮ ಬೇಟೆಯನ್ನು ತಡೆಯಲು ಕಾಜಿರಂಗ ಕೈಗೊಂಡಿರುವ ಪ್ರಯತ್ನಗಳು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿವೆ.

ಒಂದೆಡೆ, ಬಿಹಾರ ಮತ್ತು ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಖಡ್ಗಮೃಗಗಳು ಮರಳಿವೆ ಅಥವಾ ಉತ್ತಮ ರಕ್ಷಣೆಯನ್ನು ಪಡೆದಿವೆ. ಮತ್ತೊಂದೆಡೆ, ಉತ್ತರ ಪ್ರದೇಶದ ದುಧ್ವಾದಲ್ಲಿ ಖಡ್ಗಮೃಗಗಳನ್ನು ಮರುಪರಿಚಯಿಸುವ ಪ್ರಯತ್ನದ ಯಶಸ್ಸು ಇತಿಹಾಸ ನಿರ್ಮಿಸುತ್ತಿದೆ. ಇದು ಈ ವ್ಯಾಪ್ತಿಯ ರಾಜ್ಯಗಳಲ್ಲಿ ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಸಕ್ರಿಯ ನಿರ್ವಹಣೆಗೆ ನಮ್ಮ ಜನರ ನಿರಂತರ ಬದ್ಧತೆಯನ್ನು ಪ್ರದರ್ಶಿಸಿದೆ.  

ದೇಶದಲ್ಲಿ ವಿವಿಧ ಪ್ರಬೇಧಗಳ ಸಂರಕ್ಷಣೆಯನ್ನು ಮುಂದಕ್ಕೆ ಕೊಂಡೊಯ್ಯುತ್ತಾ, ರಕ್ಷಣೆ, ಆವಾಸಸ್ಥಾನ ನಿರ್ವಹಣೆ, ಆನುವಂಶಿಕ ಸುಧಾರಣೆ ಮತ್ತು ಜನನ -ಮರಣ, ವಲಸೆ ಸಂಖ್ಯಾ ಮಾದರಿಯನ್ನು ಅರ್ಥಮಾಡಿಕೊಳ್ಳಲು ಈ ವ್ಯಾಪ್ತಿಯ ರಾಜ್ಯಗಳಿಗೆ ಆರ್ಥಿಕ ಮತ್ತು ತಾಂತ್ರಿಕ ನೆರವು ಒದಗಿಸಲು ಪ್ರಾಜೆಕ್ಟ್ ರೈನೋ ಪ್ರಾರಂಭಿಸಲಾಗಿದೆ ಎಂಬ ವಿಷಯವನ್ನು ನಾನು ಸಂತಸದಿಂದ ಹಂಚಿಕೊಳ್ಳುತ್ತಿದ್ದೇನೆ.”

 

*****


(ಪ್ರಕಟಣೆ ಐ.ಡಿ.: 2313808) ವಿಸಿಟರ್ ಕೌಂಟರ್ : 8