ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸೆಮಿಕಾನ್ ಇಂಡಿಯಾ 2026ರ ನೋಟ ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 17 SEP 2026 8:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಇಂದು ನಡೆದ 'ಸೆಮಿಕಾನ್ ಇಂಡಿಯಾ 2026' ಕಾರ್ಯಕ್ರಮದ ಕೆಲವು ನೋಟಗಳನ್ನು ಹಂಚಿಕೊಂಡಿದ್ದಾರೆ. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ಪ್ರಧಾನಮಂತ್ರಿಯವರು, ಈ ಐದನೇ ಆವೃತ್ತಿಯ ಮಹತ್ವವನ್ನು ವಿವರಿಸಿ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿದ್ದ ಅಂತಾರಾಷ್ಟ್ರೀಯ ಪ್ರತಿನಿಧಿಗಳಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದರು. "ವಿದೇಶಗಳಿಂದ ಭಾರತಕ್ಕೆ ಆಗಮಿಸಿರುವ ಅತಿಥಿಗಳಿಗೆ ನಾನು ವಿಶೇಷ ಸ್ವಾಗತ ಕೋರುತ್ತೇನೆ" ಎಂದು ಶ್ರೀ ಮೋದಿ ಅವರು ನುಡಿದರು.

ಪ್ರಧಾನಮಂತ್ರಿಯವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯು ವೇಗವಾಗಿ ವಿಸ್ತರಿಸುತ್ತಿದೆ. ಇದು ನಾವೀನ್ಯತೆ, ಹೂಡಿಕೆ ಮತ್ತು ಬೆಳವಣಿಗೆಗೆ ಹೊಸ ಅವಕಾಶಗಳನ್ನು ತೆರೆಯುತ್ತಿದೆ. ದೆಹಲಿಯಲ್ಲಿ ನಡೆದ 'ಸೆಮಿಕಾನ್ ಇಂಡಿಯಾ 2026' ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದೆ.

ಸೆಮಿಕಾನ್ ಇಂಡಿಯಾ 2026ರ ಉತ್ಸಾಹವನ್ನು ಸ್ವತಃ ನೋಡಿದರೆ ಮಾತ್ರ ನಂಬಲು ಸಾಧ್ಯ!

ಸೆಮಿಕಂಡಕ್ಟರ್ ಗಳಂತಹ ವಲಯದಲ್ಲಿ ಭಾರತವು ತನ್ನ ಪ್ರಯತ್ನಗಳನ್ನು ವಿಸ್ತರಿಸುತ್ತಿರುವ ಬಗ್ಗೆ ನನಗೆ ಅತ್ಯಂತ ಹೆಮ್ಮೆ ಎನಿಸುತ್ತಿದೆ.

ಭಾರತವು ಭವಿಷ್ಯದ ಚಿಪ್ ಗಳಿಗಾಗಿ ಈಗಲೇ ಸಿದ್ಧತೆ ನಡೆಸುತ್ತಿದೆ!

ಸೆಮಿಕಂಡಕ್ಟರ್ ಮಿಷನ್ 2.0

ಆಳವಾದ ಸುಧಾರಣೆಗಳು.

ಯೋಜನೆಗಳ ಹೆಚ್ಚುತ್ತಿರುವ ಸರಣಿ.

ಯುವಜನರೇ ಕೇಂದ್ರದಲ್ಲಿರುವ ಒಂದು ಸಂಪೂರ್ಣ ಪರಿಸರ ವ್ಯವಸ್ಥೆಯ ನಿರ್ಮಾಣ.

 

*****


(ಪ್ರಕಟಣೆ ಐ.ಡಿ.: 2312788) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी , Assamese , Manipuri , Bengali , Gujarati , Malayalam