ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಇಂಜಿನಿಯರ್ ಗಳ ದಿನದಂದು ಶುಭಾಶಯಗಳನ್ನು ಕೋರಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 15 SEP 2026 11:12AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂಜಿನಿಯರ್ ಗಳ ದಿನದ ಅಂಗವಾಗಿ ಎಲ್ಲಾ ಅಭಿಯಂತರರಿಗೆ ಶುಭಾಶಯಗಳನ್ನು ಕೋರಿದ್ದಾರೆ. ನಾಳಿನ ಉತ್ತಮ ಭವಿಷ್ಯವನ್ನು ರೂಪಿಸಲು ಸಹಾಯಕವಾಗುವಂತಹ ನಿರ್ಮಾಣ ಕಾರ್ಯಗಳು, ನಾವೀನ್ಯತೆ ಮತ್ತು ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಎಂಜಿನಿಯರುಗಳು ನೀಡಿರುವ ಗಮನಾರ್ಹ ಕೊಡುಗೆಯನ್ನು ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.

ಅಲ್ಲದೆ, ತಮ್ಮ ಅಸಾಧಾರಣ ಎಂಜಿನಿಯರಿಂಗ್ ಕೌಶಲ ಮತ್ತು ರಾಷ್ಟ್ರ ನಿರ್ಮಾಣದ ದೂರದೃಷ್ಟಿಯಿಂದಾಗಿ ತಲೆಮಾರುಗಳ ಅಭಿಯಂತರರಿಗೆ ಸ್ಫೂರ್ತಿಯ ಸೆಲೆಯಾಗಿರುವ ಸರ್ ಎಂ. ವಿಶ್ವೇಶ್ವರಯ್ಯ ಅವರಿಗೂ ಪ್ರಧಾನಮಂತ್ರಿಯವರು ಗೌರವ ನಮನ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ 'ಎಕ್ಸ್' (X) ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:

ನಾಳಿನ ಉತ್ತಮ ಭವಿಷ್ಯಕ್ಕಾಗಿ ನಿರ್ಮಾಣ, ನಾವೀನ್ಯತೆ ಮತ್ತು ಪರಿಹಾರಗಳನ್ನು ಒದಗಿಸುವ ಎಲ್ಲಾ ಅಸಾಧಾರಣ ಅಭಿಯಂತರರಿಗೆ #EngineersDay ಶುಭಾಶಯಗಳು.

ತಮ್ಮ ಇಂಜಿನಿಯರಿಂಗ್ ಪ್ರತಿಭೆ ಮತ್ತು ರಾಷ್ಟ್ರ ನಿರ್ಮಾಣದ ದೂರದೃಷ್ಟಿಯಿಂದ ಸ್ಫೂರ್ತಿ ನೀಡುತ್ತಲೇ ಇರುವ ಸರ್. ಎಂ. ವಿಶ್ವೇಶ್ವರಯ್ಯ ಅವರಿಗೆ ಗೌರವ ನಮನಗಳು.

 

*****


(ಪ್ರಕಟಣೆ ಐ.ಡಿ.: 2310342) ವಿಸಿಟರ್ ಕೌಂಟರ್ : 37
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Bengali , Manipuri , Gujarati , Malayalam