ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಾಮರಸ್ಯ ಮತ್ತು ಪರಸ್ಪರ ತಿಳಿವಳಿಕೆಗೆ ಒತ್ತು ನೀಡುವ ಸಂಸ್ಕೃತ ಸುಭಾಷಿತ ಹಂಚಿಕೊಂಡ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 15 SEP 2026 11:10AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾಮರಸ್ಯ, ಪರಸ್ಪರ ತಿಳಿವಳಿಕೆ ಮತ್ತು ವಾತ್ಸಲ್ಯದ ಶಾಶ್ವತ ಮೌಲ್ಯವನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವೊಂದನ್ನು ಹಂಚಿಕೊಂಡಿದ್ದಾರೆ:

"सहृदयं सांमनस्यमविद्वेषं कृणोमि वः।

अन्यो अन्यमभि हर्यत वत्सं जातमिवाघ्न्या॥"

ಇದು ಜನರನ್ನು ದ್ವೇಷರಹಿತವಾದ ಒಗ್ಗಟ್ಟಿನ ಮನಸ್ಸು ಮತ್ತು ಭಾವನೆಯನ್ನು ಬೆಳೆಸಿಕೊಳ್ಳುವಂತೆ ಹಾಗೂ ಹಸುವೊಂದು ತನ್ನ ನವಜಾತ ಕರುವಿನ ಪಾಲನೆ-ಪೋಷಣೆ ಮಾಡುವಷ್ಟೇ ವಾತ್ಸಲ್ಯ ಮತ್ತು ಮೃದುತ್ವದಿಂದ ಪರಸ್ಪರರನ್ನು ಆರೈಕೆ ಮಾಡಿ ಪ್ರೀತಿಸುವಂತೆ ಕರೆ ನೀಡುತ್ತದೆ.

ಪ್ರಧಾನಮಂತ್ರಿ ಅವರು ತಮ್ಮ 'ಎಕ್ಸ್' (X) ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:

सहृदयं सांमनस्यमविद्वेषं कृणोमि वः।

अन्यो अन्यमभि हर्यत वत्सं जातमिवाघ्न्या॥

 

*****


(ಪ್ರಕಟಣೆ ಐ.ಡಿ.: 2310336) ವಿಸಿಟರ್ ಕೌಂಟರ್ : 34
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Malayalam