ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
NMBA 13.70 ಕೋಟಿಗೂ ಹೆಚ್ಚು ಯುವಕರು ಮತ್ತು 10.64 ಕೋಟಿ ಮಹಿಳೆಯರು ಸೇರಿದಂತೆ ಒಟ್ಟು 34.54 ಕೋಟಿ ನಾಗರಿಕರನ್ನು ತಲುಪಿದೆ
ಸಮುದಾಯದ ಭಾಗವಹಿಸುವಿಕೆಯನ್ನು ಬಲಪಡಿಸಲು 1.67 ಲಕ್ಷಕ್ಕೂ ಹೆಚ್ಚು 'ನಶಾ ಮುಕ್ತಿ ಮಿತ್ರ'ರು NMBAಗೆ ಸೇರ್ಪಡೆ;
ದೇಶಾದ್ಯಂತ 31.40 ಲಕ್ಷಕ್ಕೂ ಹೆಚ್ಚು ಜಾಗೃತಿ ಮತ್ತು ಸಂಪರ್ಕ ಕಾರ್ಯಕ್ರಮಗಳ (outreach activities) ಆಯೋಜನೆ
1.67 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರು ಮತ್ತು ಸಿಬ್ಬಂದಿಗೆ ತರಬೇತಿ; ಕಳೆದ ಎರಡು ವರ್ಷಗಳಲ್ಲಿ 755ಕ್ಕೂ ಹೆಚ್ಚು ಹೊಸ ವ್ಯಸನ ಮುಕ್ತ ಕೇಂದ್ರಗಳ ಸ್ಥಾಪನೆ
ಪ್ರಕಟಣಾ ದಿನಾಂಕ:
14 SEP 2026 6:45PM by PIB Bengaluru
ಮಾದಕವಸ್ತು ದುರುಪಯೋಗದ ವಿರುದ್ಧ ರಾಷ್ಟ್ರೀಯ ಸಾಮೂಹಿಕ ಪ್ರತಿಜ್ಞೆ ಸ್ವೀಕರಿಸಲು ಭೌತಿಕ ಹಾಗೂ ಆನ್‌ಲೈನ್ ಭಾಗವಹಿಸುವಿಕೆಯ ಮೂಲಕ 10 ಕೋಟಿಗೂ ಹೆಚ್ಚು ನಾಗರಿಕರನ್ನು ಸಜ್ಜುಗೊಳಿಸುವ ಗುರಿಯನ್ನು ಹೊಂದಿರುವ ಸಚಿವಾಲಯ
ಕೇಂದ್ರ ಸರ್ಕಾರವು ತರಬೇತಿ, ವ್ಯಸನ ಮುಕ್ತ ಕೇಂದ್ರಗಳ ವಿಸ್ತರಣೆ ಮತ್ತು ದೇಶಾದ್ಯಂತ ಸಾರ್ವಜನಿಕ ಭಾಗವಹಿಸುವಿಕೆಯ ಮೂಲಕ "ನಯಾ ಭಾರತ್, ನಶಾ ಮುಕ್ತ್ ಭಾರತ್" (ಹೊಸ ಭಾರತ, ವ್ಯಸನ ಮುಕ್ತ ಭಾರತ) ಕಡೆಗಿನ ಪ್ರಯತ್ನಗಳನ್ನು ಬಲಪಡಿಸಿದೆ. ಈ ಉಪಕ್ರಮಗಳ ಜೊತೆಗೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಸಮಗ್ರ ಗ್ರಾಮ ಅಭಿವೃದ್ಧಿ ಮತ್ತು ವಿದ್ಯಾರ್ಥಿ ವಸತಿ ಸೌಲಭ್ಯಗಳಿಗೆ ಬೆಂಬಲವನ್ನು ನೀಡುವ ಕಾರ್ಯವನ್ನೂ ಮುಂದುವರಿಸಿದೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಕಾರ್ಯದರ್ಶಿ ಶ್ರೀ ಸುಧಾಂಶು ಪಂತ್ ಅವರು, ವ್ಯಸನವನ್ನು ಗುರುತಿಸುವ ಮತ್ತು ಆರೈಕೆ ನೀಡುವ ವಿಶೇಷ ಕಾರ್ಯವಿಧಾನಗಳ ಕುರಿತು 1.67 ಲಕ್ಷಕ್ಕೂ ಹೆಚ್ಚು ಪ್ರಮುಖ ಸ್ವಯಂಸೇವಕರು, ಸಮುದಾಯದ ಮುಖಂಡರು ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು. ಈ ಪ್ರಯತ್ನಗಳು ಮಾದಕವಸ್ತು ಅವಲಂಬನೆಯನ್ನು ಗುರುತಿಸುವ ಮತ್ತು ಆರೈಕೆಯ ಅಗತ್ಯವಿರುವ ವ್ಯಕ್ತಿಗಳಿಗೆ ಬೆಂಬಲ ನೀಡುವ ಸಮುದಾಯದ ಸಾಮರ್ಥ್ಯವನ್ನು ಬಲಪಡಿಸುತ್ತವೆ ಎಂದು ಅವರು ಹೇಳಿದರು.
ಚಿಕಿತ್ಸೆಯ ಲಭ್ಯತೆಯನ್ನು ವಿಸ್ತರಿಸಲು ಕಳೆದ ಎರಡು ವರ್ಷಗಳಲ್ಲಿ 755ಕ್ಕೂ ಹೆಚ್ಚು ಹೊಸ ವ್ಯಸನ ಮುಕ್ತ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಶ್ರೀ ಪಂತ್ ಹೇಳಿದರು; ಇವುಗಳಲ್ಲಿ ಜಿಲ್ಲಾ ವ್ಯಸನ ಮುಕ್ತ ಕೇಂದ್ರಗಳು (DDACs), ವ್ಯಸನ ಚಿಕಿತ್ಸಾ ಕೇಂದ್ರಗಳು (ATFs) ಮತ್ತು ಜೈಲುಗಳಲ್ಲಿನ ವ್ಯಸನ ಮುಕ್ತ ಕೇಂದ್ರಗಳು ಸೇರಿವೆ.
NAPDDR ಅಡಿಯಲ್ಲಿ, ತಡೆಗಟ್ಟುವ ಶಿಕ್ಷಣ, ಜಾಗೃತಿ ಮೂಡಿಸುವಿಕೆ, ಸಮಾಲೋಚನೆ, ಚಿಕಿತ್ಸೆ ಮತ್ತು ಪುನರ್ವಸತಿಗಾಗಿ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು, ಸರ್ಕಾರೇತರ ಸಂಸ್ಥೆಗಳು (NGOಗಳು) ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಸಚಿವಾಲಯವು ಆರ್ಥಿಕ ನೆರವು ನೀಡುತ್ತದೆ ಎಂದು ಅವರು ತಿಳಿಸಿದರು.
ದೇಶಾದ್ಯಂತ ಜಾಗೃತಿ ಕಾರ್ಯಕ್ರಮಗಳ ಮೂಲಕ ಈ ಅಭಿಯಾನವು ಇಲ್ಲಿಯವರೆಗೆ 13.70 ಕೋಟಿಗೂ ಹೆಚ್ಚು ಯುವಕರು ಮತ್ತು 10.64 ಕೋಟಿ ಮಹಿಳೆಯರು ಸೇರಿದಂತೆ ಒಟ್ಟು 34.54 ಕೋಟಿ ನಾಗರಿಕರನ್ನು ತಲುಪಿದೆ ಎಂದು ಶ್ರೀ ಪಂತ್ ಮಾಹಿತಿ ನೀಡಿದರು. ಸಮುದಾಯದ ಭಾಗವಹಿಸುವಿಕೆಯನ್ನು ಬಲಪಡಿಸಲು 1.67 ಲಕ್ಷಕ್ಕೂ ಹೆಚ್ಚು 'ನಶಾ ಮುಕ್ತಿ ಮಿತ್ರ'ರು (NMM) ಈ ಅಭಿಯಾನಕ್ಕೆ ಸೇರ್ಪಡೆಗೊಂಡಿದ್ದಾರೆ. ಇದರ ಜೊತೆಗೆ, ದೇಶಾದ್ಯಂತ 31.40 ಲಕ್ಷಕ್ಕೂ ಹೆಚ್ಚು ಜಾಗೃತಿ ಮತ್ತು ಸಂಪರ್ಕ ಕಾರ್ಯಕ್ರಮಗಳನ್ನು (outreach activities) ನಡೆಸಲಾಗಿದೆ ಎಂದು ಅವರು ಹೇಳಿದರು.
NMBA ಪೋರ್ಟಲ್‌ನ ವಿಳಾಸ: https://www.dosje.gov.in/organisation/nasha-mukt-bharat-abhiyaan/
'ನಶಾ ಮುಕ್ತ ಭಾರತ್ ಅಭಿಯಾನ'ದ (NMBA) ಆರನೇ ವರ್ಷದ ಸಂಭ್ರಮಾಚರಣೆಯಲ್ಲಿ ವ್ಯಾಪಕ ಸಾರ್ವಜನಿಕ ಭಾಗವಹಿಸುವಿಕೆ ಕಂಡುಬಂದಿದೆ ಎಂದು ಅವರು ತಿಳಿಸಿದರು. ಆರೈಕೆ ಮತ್ತು ಪುನರ್ವಸತಿ ಸೌಲಭ್ಯಗಳನ್ನು ವಿಸ್ತರಿಸುವುದು, ಮಾದಕವಸ್ತು ದುರುಪಯೋಗದ ವಿರುದ್ಧ ಸಮುದಾಯಗಳನ್ನು ಒಗ್ಗೂಡಿಸುವುದು, ಗ್ರಾಮ ಅಭಿವೃದ್ಧಿಯನ್ನು ಉತ್ತೇಜಿಸುವುದು ಮತ್ತು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೆಂಬಲ ನೀಡುವುದು ಮುಂತಾದ ಸಚಿವಾಲಯದ ಪ್ರಯತ್ನಗಳನ್ನು ಈ ಸಾಧನೆಗಳು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದರು.
ದೇಶಾದ್ಯಂತ ಸ್ವೀಕರಿಸಲಾದ ಒಟ್ಟು 'ನಶಾ ಮುಕ್ತಿ' ಪ್ರತಿಜ್ಞೆಗಳ (ಇ-ಪ್ರತಿಜ್ಞೆಗಳು ಸೇರಿದಂತೆ) ಸಂಖ್ಯೆ 34 ಲಕ್ಷಕ್ಕೂ ಹೆಚ್ಚಿದೆ ಎಂದು ಶ್ರೀ ಪಂತ್ ತಿಳಿಸಿದರು.
NMBA ಪ್ರತಿಜ್ಞೆಯು ಮಾದಕವಸ್ತು ದುರುಪಯೋಗದ ಸಂತ್ರಸ್ತರನ್ನು ತಲುಪಲು ಸ್ವಯಂಸೇವಕರನ್ನು ಸಜ್ಜುಗೊಳಿಸುವ ಒಂದು ಉಪಕ್ರಮವಾಗಿದೆ. ಮಾದಕವಸ್ತುಗಳಿಂದ ದೂರವಿರುವಂತೆ ಜನರಲ್ಲಿ ಜವಾಬ್ದಾರಿಯ ಪ್ರಜ್ಞೆಯನ್ನು ಮೂಡಿಸುವುದು, ಹಾಗೂ ಸಾಮಾನ್ಯ ಗುರಿಯತ್ತ ಒಟ್ಟಾಗಿ ಕೆಲಸ ಮಾಡಲು ಸಂಬಂಧಪಟ್ಟವರನ್ನು ಪ್ರೋತ್ಸಾಹಿಸುವ ಮೂಲಕ ಏಕತೆ ಮತ್ತು ಬದ್ಧತೆಯ ಭಾವನೆಯನ್ನು ಬೆಳೆಸುವುದು ಈ ಪ್ರತಿಜ್ಞೆಯ ಉದ್ದೇಶವಾಗಿದೆ. ಜೊತೆಗೆ, ಮಾದಕವಸ್ತು ಮುಕ್ತ ಸಮಾಜವನ್ನು ನಿರ್ಮಿಸುವಲ್ಲಿ ಸಕ್ರಿಯವಾಗಿ ಕೊಡುಗೆ ನೀಡಲು ಯುವಜನರನ್ನು ಸಬಲೀಕರಣಗೊಳಿಸುವ ಗುರಿಯನ್ನೂ ಇದು ಹೊಂದಿದೆ.
NMBA ಇ-ಪ್ರತಿಜ್ಞೆಯ ಲಿಂಕ್: https://nashamukt.dosje.gov.in/epledge
ಮಾದಕವಸ್ತು ದುರುಪಯೋಗದ ವಿರುದ್ಧದ ರಾಷ್ಟ್ರೀಯ ಸಾಮೂಹಿಕ ಪ್ರತಿಜ್ಞೆಗಾಗಿ ಭೌತಿಕ ಮತ್ತು ಆನ್‌ಲೈನ್ ಭಾಗವಹಿಸುವಿಕೆಯ ಮೂಲಕ 10 ಕೋಟಿಗೂ ಹೆಚ್ಚು ನಾಗರಿಕರನ್ನು ಒಗ್ಗೂಡಿಸುವ ಸಚಿವಾಲಯದ ಗುರಿಯು, ದೇಶಾದ್ಯಂತ NMBA ಕುರಿತು ನಾಗರಿಕರಲ್ಲಿ ಅರಿವು ಮೂಡಿಸುವಲ್ಲಿ ಮಹತ್ವದ ಬದಲಾವಣೆಯನ್ನು ತರಲಿದೆ ಎಂದು ಶ್ರೀ ಪಂತ್ ವಿಶ್ವಾಸ ವ್ಯಕ್ತಪಡಿಸಿದರು. 'ನಶಾ ಮುಕ್ತ ಭಾರತ್ ಅಭಿಯಾನ'ದ (NMBA) 6ನೇ ವಾರ್ಷಿಕೋತ್ಸವದ ಅಂಗವಾಗಿ ಈ ತಿಂಗಳ ಅಂತ್ಯದ ವೇಳೆಗೆ ರಾಷ್ಟ್ರಮಟ್ಟದ ಸಾಮೂಹಿಕ ಪ್ರತಿಜ್ಞಾ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಚಿಕಿತ್ಸಾ ಸೇವೆಗಳ ಲಭ್ಯತೆಯನ್ನು ಸುಧಾರಿಸಲು, ನಾಗರಿಕರು ತಮ್ಮ ಹತ್ತಿರದ ವ್ಯಸನ ಮುಕ್ತ ಕೇಂದ್ರವನ್ನು (de-addiction centre) ಪತ್ತೆಹಚ್ಚಲು ಅನುಕೂಲವಾಗುವಂತೆ ಸಚಿವಾಲಯವು 'NMBA 2.0' ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ.
ಈ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಈ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು: https://play.google.com/store/apps/details?id=com.dosje.nmba_app&hl=en_IN
*****
(ಪ್ರಕಟಣೆ ಐ.ಡಿ.: 2310310)
ವಿಸಿಟರ್ ಕೌಂಟರ್ : 8