ರಕ್ಷಣಾ ಸಚಿವಾಲಯ
ಮಲೇಷ್ಯಾದ ಲುಮುಟ್‌ನಲ್ಲಿ 4ನೇ ಆವೃತ್ತಿಯ ಸೇನಾ ತರಬೇತಿ “ಸಮುದ್ರ ಲಕ್ಷ್ಮಣ”ವನ್ನು ಪೂರ್ಣಗೊಳಿಸಿದ ಐಎನ್ಎಸ್ ಮೈಸೂರ್
ಪ್ರಕಟಣಾ ದಿನಾಂಕ:
14 SEP 2026 1:14PM by PIB Bengaluru
ಭಾರತೀಯ ನೌಕಾಪಡೆಯ ಕಾರ್ಯಾಚರಣೆ ನಿಯೋಜನೆಯ ಭಾಗವಾಗಿ, ಭಾರತೀಯ ನೌಕಾಪಡೆಯ ಸಾಗರ ನೌಕೆ (ಹಡಗು) ಐಎನ್ಎಸ್ ಮೈಸೂರು 2026ರ ಸೆಪ್ಟೆಂಬರ್ 9ರಿಂದ 12ರ ತನಕ ಮಲೇಷ್ಯಾದ ಲುಮಟ್‌ನಲ್ಲಿ ರಾಯಲ್ ಮಲೇಷಿಯನ್ ನೌಕಾಪಡೆಯೊಂದಿಗೆ ಸೇರಿ 4ನೇ ಆವೃತ್ತಿಯ ಸಮರಾಭ್ಯಾಸ “ಸಮುದ್ರ ಲಕ್ಷ್ಮಣ”ದಲ್ಲಿ ಭಾಗವಹಿಸಿತ್ತು.
ಈ ಸೇನಾ ತರಬೇತಿಯ ಭಾರತೀಯ ನೌಕಾಪಡೆ ಮತ್ತು ರಾಯಲ್ ಮಲೇಷಿಯನ್ ನೌಕಾಪಡೆಗೆ ವ್ಯಾಪಕವಾದ ವೃತ್ತಿಪರ ಮತ್ತು ಕಾರ್ಯಾಚರಣೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಒದಗಿಸಿತು. ಬಂದರು ಹಂತವು ಎರಡೂ ನೌಕಾಪಡೆಗಳ ಸಿಬ್ಬಂದಿ ನಡುವಿನ ವೃತ್ತಿಪರ ಅಭ್ಯಾಸಗಳ ವಿನಿಮಯ ಮತ್ತು ಸಂವಹನಗಳನ್ನು ಒಳಗೊಂಡಿತ್ತು, ಸೇನಾ ವೃತ್ತಿ ಅನುಭವಗಳ ಹಂಚಿಕೆಯನ್ನು ಸುಗಮಗೊಳಿಸಿತು ಮತ್ತು ಹೆಚ್ಚಿನ ಪರಸ್ಪರ ತಿಳಿವಳಿಕೆ ಬೆಳೆಸಿತು.
ಈ ಜಂಟಿ ಸಮರಾಭ್ಯಾಸವು ಸಾಗರ ಭಾಗದಲ್ಲಿ ಸೇನಾ ಕಾರ್ಯಾಚರಣೆ ಹಂತಕ್ಕೆ ಮುಂದುವರಿಯಿತು, ಈ ಸಮಯದಲ್ಲಿ ಐಎನ್ಎಸ್ ಮೈಸೂರು ಮತ್ತು ರಾಯಲ್ ಮಲೇಷಿಯನ್ ನೌಕಾಪಡೆಯ ಹಡಗುಗಳಾದ ಕೆಡಿ ಲೆಕಿರ್ ಮತ್ತು ಕೆಡಿ ಗಗಾ ಸಮುದೇರಾಗಳ ಜತೆ ಜಂಟಿ ಕಸರತ್ತು ನಡೆಸಿದವು. ತರಬೇತಿಯಲ್ಲಿ ಭಾಗವಹಿಸಿದ್ದ ಸಾಗರ ನೌಕೆಗಳು ಸಂಘಟಿತ ಕಡಲ ವಿಕಸನಗಳನ್ನು ಕೈಗೊಂಡವು, ಪರಸ್ಪರ ಕಾರ್ಯಸಾಧ್ಯತೆ ಹೆಚ್ಚಿಸಲು, ಕಾರ್ಯಾಚರಣೆಯ ಸಮನ್ವಯ ಪರಿಷ್ಕರಿಸಲು ಮತ್ತು ಪರಿಣಾಮಕಾರಿಯಾಗಿ ಒಟ್ಟಿಗೆ ಕಾರ್ಯ ನಿರ್ವಹಿಸುವ ಸಾಮರ್ಥ್ಯವನ್ನು ಬಲಪಡಿಸಲು ಸಾಕಷ್ಟು ಅವಕಾಶಗಳನ್ನು ಒದಗಿಸಿದವು.
ಈ ಜಂಟಿ ಸಮರಾಭ್ಯಾಸದ ಪೂರ್ಣಗೊಳಿಸುವಿಕೆಯು ಭಾರತ ಮತ್ತು ಮಲೇಷ್ಯಾ ನಡುವಿನ ನೌಕಾ ಸಹಕಾರದಲ್ಲಿ ಬೆಳೆಯುತ್ತಿರುವ ಆಳ ಮತ್ತು ಪ್ರಬುದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇದು 2 ನೌಕಾ ಪಡೆಗಳ ನಡುವೆ ಹೆಚ್ಚಿನ ಕಾರ್ಯಾಚರಣೆಯ ತಿಳಿವಳಿಕೆ ನಿರ್ಮಿಸುವಲ್ಲಿ ನಿರಂತರ ವೃತ್ತಿಪರ ತೊಡಗಿಸಿಕೊಳ್ಳುವಿಕೆ ಮತ್ತು ಪ್ರಾಯೋಗಿಕ ಸಹಕಾರದ ಮೌಲ್ಯವನ್ನು ಎತ್ತಿ ತೋರಿಸಿದೆ.
'ಸಮುದ್ರ ಲಕ್ಷ್ಮಣ' ಸಮರಾಭ್ಯಾಸವು ವಿಸ್ತರಣೆ ಆಗುತ್ತಿರುವ ಭಾರತ-ಮಲೇಷ್ಯಾ ಕಡಲ ಪಾಲುದಾರಿಕೆಯಲ್ಲಿ ಮತ್ತೊಂದು ಮಹತ್ವದ ತೊಡಗಿಸಿಕೊಳ್ಳುವಿಕೆಯನ್ನು ಗುರುತಿಸುತ್ತದೆ. 2026 ಜುಲೈ 1ರಂದು ನಡೆದ 12ನೇ ಭಾರತ-ಮಲೇಷ್ಯಾ ಉಪಸಮಿತಿ ಸಭೆ ಸೇರಿದಂತೆ ಇತ್ತೀಚಿನ ದ್ವಿಪಕ್ಷೀಯ ತೊಡಗಿಸಿಕೊಳ್ಳುವಿಕೆಗಳಿಂದ ಸೃಷ್ಟಿಯಾಗುವ ಆವೇಗದ ಮೇಲೆ ನಿರ್ಮಿಸಲಾದ ಈ ಜಂಟಿ ಕಸರತ್ತು 2 ನೌಕಾಪಡೆಗಳ ನಡುವಿನ ಸಹಕಾರದ ಅಡಿಪಾಯವನ್ನು ಮತ್ತಷ್ಟು ಬಲಪಡಿಸಿದೆ.
(3)_20260914131556_566453.jpeg)
(3)_20260914131609_983e80.jpeg)
(3)_20260914131622_0a86aa.jpeg)
*****
(ಪ್ರಕಟಣೆ ಐ.ಡಿ.: 2310116)
ವಿಸಿಟರ್ ಕೌಂಟರ್ : 3