ಸಂವಹನ ಸಚಿವಾಲಯ
ಸೇವೆಯ ಗುಣಮಟ್ಟದ ಮಾನದಂಡಗಳು (ಟೆಲಿವಿಷನ್ ಚಾನೆಲ್‌ಗಳಲ್ಲಿ ಜಾಹೀರಾತುಗಳ ಅವಧಿ) (ರದ್ದತಿ) ನಿಯಮಾವಳಿಗಳು, 2026 ಅನ್ನು ಬಿಡುಗಡೆ ಮಾಡಿದ ಟ್ರಾಯ್ (TRAI)
ಪ್ರಕಟಣಾ ದಿನಾಂಕ:
10 SEP 2026 7:24PM by PIB Bengaluru
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (TRAI) 14ನೇ ಮೇ 2012ರ 'ಸೇವೆಯ ಗುಣಮಟ್ಟದ ಮಾನದಂಡಗಳು (ಟೆಲಿವಿಷನ್ ಚಾನೆಲ್‌ಗಳಲ್ಲಿ ಜಾಹೀರಾತುಗಳ ಅವಧಿ) ನಿಯಮಾವಳಿಗಳು, 2012' (2012ರ 15) ಮತ್ತು ಅದರ ಅಡಿಯಲ್ಲಿ ಹೊರಡಿಸಲಾದ ಎಲ್ಲಾ ಆದೇಶಗಳು ಹಾಗೂ ನಿರ್ದೇಶನಗಳನ್ನು ಅಧಿಕೃತ ಗೆಜೆಟ್ ನಲ್ಲಿ ಅಧಿಸೂಚಿಸಲಾದ ದಿನಾಂಕದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲು 10.09.2026 ರಂದು 'ಸೇವೆಯ ಗುಣಮಟ್ಟದ ಮಾನದಂಡಗಳು (ಟೆಲಿವಿಷನ್ ಚಾನೆಲ್‌ಗಳಲ್ಲಿ ಜಾಹೀರಾತುಗಳ ಅವಧಿ) (ರದ್ದತಿ) ನಿಯಮಾವಳಿಗಳು, 2026' (2026 ರ 4) ಅನ್ನು ಹೊರಡಿಸಿದೆ.
'ಸೇವೆಯ ಗುಣಮಟ್ಟದ ಮಾನದಂಡಗಳು (ಟೆಲಿವಿಷನ್ ಚಾನೆಲ್‌ಗಳಲ್ಲಿ ಜಾಹೀರಾತುಗಳ ಅವಧಿ) ನಿಯಮಾವಳಿಗಳು, 2012' ಕಾರ್ಯಕ್ರಮದ ಪ್ರಸಾರದಲ್ಲಿ ಒಂದು ಗಂಟೆಯ ಅವಧಿಯಲ್ಲಿ ಗರಿಷ್ಠ ಹನ್ನೆರಡು ನಿಮಿಷಗಳ ಜಾಹೀರಾತುಗಳಿಗೆ ಪರಿಮಿತಿ ವಿಧಿಸಿತ್ತು. ಈ ನಿಯಮಾವಳಿಗಳು ಚಂದಾದಾರರ ಹಿತಾಸಕ್ತಿಗಳನ್ನು ಕಾಯಲು ಅಥವಾ ನಿಯಮಾವಳಿಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಸೇವಾ ಪೂರೈಕೆದಾರರಿಗೆ ಆದೇಶ ಅಥವಾ ನಿರ್ದೇಶನಗಳನ್ನು ನೀಡಲು ಪ್ರಾಧಿಕಾರಕ್ಕೆ ಅಧಿಕಾರ ನೀಡಿದ್ದವು.
ಈ ನಿಯಮಾವಳಿಗಳನ್ನು ಮೂಲತಃ 'ಕೇಬಲ್ ಟೆಲಿವಿಷನ್ ನೆಟ್‌ವರ್ಕ್ಸ್ ನಿಯಮಗಳು, 1994' ರ ನಿಯಮ 7, ಉಪ-ನಿಯಮ (11) ರ ಅಡಿಯಲ್ಲಿ ನಿಗದಿಪಡಿಸಲಾದ ಜಾಹೀರಾತು ಅವಧಿಯ ಪರಿಮಿತಿಯನ್ನು ಸೇವೆಯ ಗುಣಮಟ್ಟದ ಮಾನದಂಡವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಜಾರಿಗೊಳಿಸಲು ತರಲಾಗಿತ್ತು.
ಮಾಹಿತಿ ಮತ್ತು ಪ್ರಸಾರ ಸಚಿವಾಲಯವು (MIB) 21ನೇ ಆಗಸ್ಟ್ 2026 ರಂದು ಅಧಿಕೃತ ಗೆಜೆಟ್ ನಲ್ಲಿ ಪ್ರಕಟಿಸಲಾದ ಅಧಿಸೂಚನೆಯ ಮೂಲಕ, 'ಕೇಬಲ್ ಟೆಲಿವಿಷನ್ ನೆಟ್‌ವರ್ಕ್ಸ್ ನಿಯಮಗಳು, 1994'ರ ನಿಯಮ 7ರ ಉಪ-ನಿಯಮ (11) ಅನ್ನು ಕೈಬಿಟ್ಟಿದೆ, ಆ ಮೂಲಕ ಟೆಲಿವಿಷನ್ ಚಾನೆಲ್‌ಗಳಿಗೆ ನಿಗದಿಪಡಿಸಲಾಗಿದ್ದ ಹನ್ನೆರಡು ನಿಮಿಷಗಳ ಜಾಹೀರಾತು ಅವಧಿಯ ಮಿತಿಯನ್ನು ತೆರವುಗೊಳಿಸಿದೆ. ಟೆಲಿವಿಷನ್ ಪ್ರಸಾರ ವಲಯದಲ್ಲಾದ ಗಮನಾರ್ಹ ಬದಲಾವಣೆಗಳು, ಹೆಚ್ಚಿದ ಸ್ಪರ್ಧೆ ಮತ್ತು ಗ್ರಾಹಕರ ಆಯ್ಕೆಯನ್ನು ಗಮನದಲ್ಲಿಟ್ಟುಕೊಂಡು, ಹಾಗೂ ನ್ಯಾಯಯುತ ಸ್ಪರ್ಧೆಯನ್ನು ಉತ್ತೇಜಿಸುವ ಮತ್ತು ಟೆಲಿವಿಷನ್ ಪ್ರಸಾರ ವಲಯದಲ್ಲಿ ಸುಲಭ ವಾಣಿಜ್ಯ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ಮಿತಿಯನ್ನು ತೆರವುಗೊಳಿಸಲಾಗಿದೆ.
ಕೇಂದ್ರ ಸರ್ಕಾರವು ಜಾಹೀರಾತು ಅವಧಿಯ ಪರಿಮಿತಿಯನ್ನು ತೆರವುಗೊಳಿಸಿರುವ ಹಿನ್ನೆಲೆಯಲ್ಲಿ, ಟ್ರಾಯ್ ನಿಯಮಾವಳಿಗಳ ಅಡಿಯಲ್ಲಿ ಸಂಬಂಧಿತ ನಿಯಂತ್ರಣ ನಿಬಂಧನೆಗಳನ್ನು ಮುಂದುವರಿಸುವುದು 'ಕೇಬಲ್ ಟೆಲಿವಿಷನ್ ನೆಟ್‌ವರ್ಕ್ಸ್ ನಿಯಮಗಳು, 1994' ರ ನಿಯಮ 7(11) ಕ್ಕೆ ಅಸಂಗತವಾಗುತ್ತದೆ.
ಅದರಂತೆ, ಕೇಂದ್ರ ಸರ್ಕಾರದ ನಿರ್ಧಾರದೊಂದಿಗೆ ಸಾಮರಸ್ಯವನ್ನು ಕಾಯ್ದುಕೊಳ್ಳುವ ಸಲುವಾಗಿ, ಪ್ರಾಧಿಕಾರವು 'ಸೇವೆಯ ಗುಣಮಟ್ಟದ ಮಾನದಂಡಗಳು (ಟೆಲಿವಿಷನ್ ಚಾನೆಲ್‌ಗಳಲ್ಲಿ ಜಾಹೀರಾತುಗಳ ಅವಧಿ) ನಿಯಮಾವಳಿಗಳು, 2012' ಮತ್ತು ಅದರ ಅಡಿಯಲ್ಲಿ ಹೊರಡಿಸಲಾದ ಎಲ್ಲಾ ಆದೇಶಗಳು ಹಾಗೂ ನಿರ್ದೇಶನಗಳನ್ನು 'ಸೇವೆಯ ಗುಣಮಟ್ಟದ ಮಾನದಂಡಗಳು (ಟೆಲಿವಿಷನ್ ಚಾನೆಲ್‌ಗಳಲ್ಲಿ ಜಾಹೀರಾತುಗಳ ಅವಧಿ) (ರದ್ದತಿ) ನಿಯಮಾವಳಿಗಳು, 2026' ಅಧಿಕೃತ ಗ್ಯಾಜೆಟ್‌ನಲ್ಲಿ ಬಿಡುಗಡೆಯಾದ ದಿನಾಂಕದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲು ನಿರ್ಧರಿಸಿದೆ.
*****
(ಪ್ರಕಟಣೆ ಐ.ಡಿ.: 2308977)
ವಿಸಿಟರ್ ಕೌಂಟರ್ : 5