ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ಸ್ವಚ್ಛ ವಾಯು ದಿನ 2026 ಸಂದರ್ಭದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ನಗರಗಳು ಮತ್ತು ವಾರ್ಡ್‌ಗಳಿಗೆ 5ನೇ ಸ್ವಚ್ಛ ವಾಯು ಸರ್ವೇಕ್ಷಣ ಪ್ರಶಸ್ತಿಗಳ ಪ್ರದಾನ ; ಎನ್ ಸಿ ಎ ಪಿ ಅಡಿಯಲ್ಲಿ ಅತ್ಯುತ್ತಮ ನಿರ್ವಹಣಾ ಪದ್ಧತಿಗಳ ಸಂಕಲನ ಬಿಡುಗಡೆ


ವಾಯು ಮಾಲಿನ್ಯದ ಸಮಸ್ಯೆ ಪರಿಹರಿಸಲು ಎಲ್ಲರನ್ನೂ ಒಳಗೊಂಡ ಮತ್ತು ಇಡೀ ಸಮಾಜದ ವಿಧಾನ ಅಳವಡಿಸಿಕೊಳ್ಳಲು ಸ್ಥಳೀಯ ಸಂಸ್ಥೆಗಳಿಗೆ ಎನ್ ಜಿ ಟಿ ಅಧ್ಯಕ್ಷರ ಕರೆ

ವಾಯು ಮಾಲಿನ್ಯದ ವಿರುದ್ಧ ಹೋರಾಡುವುದು ನಿರಂತರ ಕಾರ್ಯಕ್ರಮವಾಗಿದ್ದು, ಸಮರೋಪಾದಿಯಲ್ಲಿ ನಾಗರಿಕ ನೇತೃತ್ವದ ಚಳವಳಿಯ ಅಗತ್ಯವಿದೆ: ಕಾರ್ಯದರ್ಶಿ (ಇ ಎಫ್ ಸಿ ಸಿ)

ಪ್ರಕಟಣಾ ದಿನಾಂಕ: 07 SEP 2026 2:29PM by PIB Bengaluru

ನೀಲಿ ಆಕಾಶಕ್ಕಾಗಿ ಅಂತಾರಾಷ್ಟ್ರೀಯ ಶುದ್ಧ ಗಾಳಿಯ ದಿನವಾದ ಇಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯ (ಎಂ ಒ ಇ ಎಫ್ ಸಿ ಸಿ) ಸ್ವಚ್ಛ ವಾಯು ದಿನ 2026 ಅನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್ ಜಿಟಿ) ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ವಹಿಸಿದ್ದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಇತರ ಗಣ್ಯರಲ್ಲಿ ಕಾರ್ಯದರ್ಶಿ (ಇ ಎಫ್ ಸಿ ಸಿ),; ಅಧ್ಯಕ್ಷರು (ಸಿಎಕ್ಯೂಎಂ) ಶ್ರೀ ತನ್ಮಯ್ ಕುಮಾರ್, ಮಹಾನಿರ್ದೇಶಕರು (ಅರಣ್ಯ) ಶ್ರೀ ರಾಜೇಶ್ ವರ್ಮಾ ಮತ್ತು ವಿಶೇಷ ಕಾರ್ಯದರ್ಶಿ (ಇಎಫ್ ಸಿಸಿ), ಶ್ರೀ ಸುಶೀಲ್ ಕುಮಾರ್ ಅವಸ್ಥಿ; ಸಿಪಿಸಿಬಿ ಅಧ್ಯಕ್ಷರು  ಶ್ರೀ ಅಮನ್‌ದೀಪ್ ಗಾರ್ಗ್; ಮತ್ತು ಎಎಸ್ (ಇಎಫ್‌ಸಿಸಿ), ಶ್ರೀ ಅಶುತೋಷ್ ಅಗ್ನಿಹೋತ್ರಿ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕೇಂದ್ರ ಸಚಿವಾಲಯಗಳು, ಬಹುಪಕ್ಷೀಯ ಸಂಸ್ಥೆಗಳು, ಮೇಯರ್‌ಗಳು, ಜಿಲ್ಲಾಧಿಕಾರಿಗಳು ಮತ್ತು ಪ್ರಶಸ್ತಿ ವಿಜೇತ ನಗರಗಳು ಮತ್ತು ವಾರ್ಡ್‌ಗಳ ಪುರಸಭೆ ಆಯುಕ್ತರು ಉಪಸ್ಥಿತರಿದ್ದರು.

ತಮ್ಮ ಭಾಷಣದಲ್ಲಿ ನ್ಯಾಯಮೂರ್ತಿ ಶ್ರೀವಾಸ್ತವ, ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮ (ಎನ್ ಸಿಎಪಿ) ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನಗಳನ್ನು ಶ್ಲಾಘಿಸಿದರು. ದೇಶಾದ್ಯಂತ ನಗರಗಳು/ವಾರ್ಡ್‌ಗಳು ನಿಗದಿತ ಮಾನದಂಡಗಳಲ್ಲಿ ಗಾಳಿಯ ಗುಣಮಟ್ಟ ಕಾಯ್ದುಕೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳಲು ಮಾಡಿದ ಪ್ರಯತ್ನಗಳನ್ನು ಗುರುತಿಸಲು ಇದು ಒಂದು ಸಂದರ್ಭ ಎಂದು ಅವರು ಹೇಳಿದರು. "ಶುದ್ಧ ಗಾಳಿಯು ಒಂದು ಆಕಾಂಕ್ಷೆಯಲ್ಲ, ಆದರೆ ಸರಿಯಾದ ಯೋಜನೆ ಮತ್ತು ತಳಮಟ್ಟದ ಅನುಷ್ಠಾನದೊಂದಿಗೆ ಸಾಧಿಸಬಹುದಾದ ಪ್ರಾಯೋಗಿಕ ಗುರಿಯಾಗಿದೆ ಎಂದು ಪ್ರಶಸ್ತಿ ಪುರಸ್ಕೃತರು ತೋರಿಸಿದ್ದಾರೆ" ಎಂದು ಅವರು ಉಲ್ಲೇಖಿಸಿದರು. ಶುದ್ಧ ಗಾಳಿಯು ಐಷಾರಾಮಿಗಿಂತ ಮೂಲಭೂತ ಅಗತ್ಯವಾಗಿದೆ ಎಂದು ಅಧ್ಯಕ್ಷರು ಪ್ರಮುಖವಾಗಿ ಪ್ರತಿಪಾದಿಸಿದರು. "ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಪರಸ್ಪರ ಉದ್ದೇಶಗಳಲ್ಲಿಲ್ಲ ಆದರೆ ನಾಗರಿಕರ ಜೀವನದ ಗುಣಮಟ್ಟವನ್ನು ಕಾಪಾಡಿಕೊಳ್ಳುವಾಗ ಒಟ್ಟಿಗೆ ಹೋಗಬಹುದು. ಮುಂದಿನ ಪೀಳಿಗೆಗಳು ಶುದ್ಧ ವಾತಾವರಣದಲ್ಲಿ ಬದುಕಲು ಸಾಧ್ಯವಾಗುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ" ಎಂದು ಅವರು ಹೇಳಿದರು.

ನ್ಯಾಯಮೂರ್ತಿ ಶ್ರೀವಾಸ್ತವ ಅವರು ವಾಯು ಮಾಲಿನ್ಯವನ್ನು ಒಂದು ಸಂಕೀರ್ಣ ಸವಾಲು ಎಂದು ಬಣ್ಣಿಸಿದರು. ಏಕೆಂದರೆ ಅದು ರಾಜಕೀಯ ಮಿತಿಗಳನ್ನು ತಿಳಿದಿಲ್ಲ ಮತ್ತು ಹಲವು ಮೂಲಗಳು ಅದಕ್ಕೆ ಕೊಡುಗೆ ನೀಡುತ್ತವೆ. ರಾಷ್ಟ್ರೀಯ ದೂರದೃಷ್ಟಿಯ ಪರಿಣಾಮಕಾರಿ ಅನುಷ್ಠಾನ ಖಾತ್ರಿಪಡಿಸಿಕೊಳ್ಳುವ ನಗರ/ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಮುಂಚೂಣಿಯಲ್ಲಿವೆ ಎಂದು ಅಧ್ಯಕ್ಷರು ಒತ್ತಿ ಹೇಳಿದರು. ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿಗಳೊಂದಿಗೆ, ವಾಯು ಗುಣಮಟ್ಟ ನಿರ್ವಹಣಾ ಕ್ಷೇತ್ರದಲ್ಲಿನ ಎಲ್ಲಾ ಪಾಲುದಾರರ ಪ್ರಯತ್ನಗಳನ್ನು ಸರ್ಕಾರ ಗುರುತಿಸುತ್ತದೆ, ಅವರು ಗಾಳಿಯ ಗುಣಮಟ್ಟವು ನಿಗದಿತ ಮಿತಿಗಳಲ್ಲಿ ಉಳಿಯುವಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ಅವರು ಹೇಳಿದರು. "ಸ್ಥಳೀಯ ಸಂಸ್ಥೆಗಳು ನಾಗರಿಕರಲ್ಲಿ ಅರಿವು ಮೂಡಿಸುವ ಮೂಲಕ ಮೂಲದಲ್ಲಿ ಮಾಲಿನ್ಯ ಉತ್ಪಾದನೆಯನ್ನು ತಡೆಗಟ್ಟಲು ಶ್ರಮಿಸುವುದು ಅತ್ಯಗತ್ಯ; ಸಮಸ್ಯೆಯನ್ನು ನಿಭಾಯಿಸಲು ಇತ್ತೀಚಿನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು; ಮತ್ತು ಸಮಸ್ಯೆಯನ್ನು ಪರಿಹರಿಸಲು ಎಲ್ಲರನ್ನೂ ಒಳಗೊಂಡ ಮತ್ತು ಇಡೀ ಸಮಾಜದ ವಿಧಾನದಲ್ಲಿ ತೊಡಗಿಸಿಕೊಳ್ಳುವುದು ಅತ್ಯಗತ್ಯ" ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ತಮ್ಮ ಭಾಷಣದಲ್ಲಿ, ಕಾರ್ಯದರ್ಶಿ (ಇಎಫ್‌ಸಿಸಿ) ಶ್ರೀ ತನ್ಮಯ್ ಕುಮಾರ್, ಭಾರತ ಸರ್ಕಾರವು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯಂತೆ ವಾಯು ಮಾಲಿನ್ಯವನ್ನು ನಿಭಾಯಿಸುವ ಕಡೆಗೆ ಬಹುಮುಖಿ, ಸಂಘಟಿತ ಮತ್ತು ವೈಜ್ಞಾನಿಕ ವಿಧಾನವನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು. ವಾಯು ಮಾಲಿನ್ಯದ ವಿರುದ್ಧ ಹೋರಾಡಲು ನಾಗರಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಮತ್ತು ಎಲ್ಲಾ ಪಾಲುದಾರರ ಸಾಮರ್ಥ್ಯ ವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಸಾರ್ವಜನಿಕ ಪ್ರತಿನಿಧಿಗಳನ್ನು ಈ ಕಾರ್ಯಾಚರಣೆಯಲ್ಲಿ ಸೇರಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಎನ್ ಸಿಎಪಿ ಬಗ್ಗೆ ಮಾತನಾಡಿದ ಶ್ರೀ ಕುಮಾರ್, ನಗರಗಳು ಶುದ್ಧ ಗಾಳಿಯನ್ನು ಖಾತ್ರಿಪಡಿಸಿಕೊಳ್ಳಲು ತಮ್ಮದೇ ಆದ ಕಾರ್ಯತಂತ್ರಗಳನ್ನು ಹೊಂದಿರುವ ಚೌಕಟ್ಟನ್ನು ಹೊಂದಿವೆ. ಆದರೆ ಪ್ರಾಣ್‌  ಪೋರ್ಟಲ್ ಎನ್ ಸಿಎಪಿ ಅಡಿಯಲ್ಲಿ 130 ನಗರಗಳಿಗೆ ವಾಯು ಗುಣಮಟ್ಟ ನಿರ್ವಹಣೆಯ ವಿವಿಧ ಮಾನದಂಡಗಳನ್ನು ಟ್ರ್ಯಾಕ್ ಮಾಡುತ್ತದೆ. ವಾಯು ಮಾಲಿನ್ಯದ ವಿರುದ್ಧ ಹೋರಾಡುವುದು ನಿರಂತರ ಕಾರ್ಯಕ್ರಮ, ಒಂದೇ ಬಾರಿಗೆ ನಡೆಯುವ ಚಟುವಟಿಕೆಯಲ್ಲ ಎಂದು ಅವರು ಹೇಳಿದರು. ಮುಂದಿನ ಪೀಳಿಗೆಗೆ ಶುದ್ಧ ಪರಿಸರವನ್ನು ಸಾಧಿಸಲು ಸಮರೋಪಾದಿಯಲ್ಲಿ ನಾಗರಿಕ ನೇತೃತ್ವದ ಚಳವಳಿಯ ಅಗತ್ಯವಿದೆ. ಎಲ್ಲಾ ಪ್ರಶಸ್ತಿ ಪುರಸ್ಕೃತರ ಪ್ರಯತ್ನಗಳಿಗಾಗಿ ಅವರು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು ಮತ್ತು ವಾಯು ಗುಣಮಟ್ಟ ನಿರ್ವಹಣೆಯನ್ನು ಜನ-ಭಾಗಿದಾರಿ ಚಳವಳಿಯನ್ನಾಗಿ ಮಾಡಲು ಅವರನ್ನು ಪ್ರೋತ್ಸಾಹಿಸಿದರು.

ಸ್ವಚ್ಛ ವಾಯು ಸರ್ವೇಕ್ಷಣ ಪ್ರಶಸ್ತಿಗಳು

ಈ ಸಂದರ್ಭದಲ್ಲಿ 5 ನೇ ಸ್ವಚ್ಛ ವಾಯು ಸರ್ವೇಕ್ಷಣದ ಭಾಗವಾಗಿ ಸ್ಥಾನ ಪಡೆದ ರಾಷ್ಟ್ರೀಯ ಸ್ವಚ್ಛ ವಾಯು ಕಾರ್ಯಕ್ರಮದ (ಎನ್ ಸಿಎಪಿ) ಅಡಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ನಗರಗಳು ಮತ್ತು ವಾರ್ಡ್‌ಗಳಿಗೆ ಎಂಒಸಿಇಎಫ್ ಸಿಸಿ ಪ್ರಶಸ್ತಿ ನೀಡಿತು. ರಸ್ತೆ ಧೂಳು, ಎಸ್‌ ಡಬ್ಲೂ ಎಂ(ಘನ ತ್ಯಾಜ್ಯ), ವಾಹನ ಹೊರಸೂಸುವಿಕೆ, ಕೈಗಾರಿಕಾ ಮಾಲಿನ್ಯ, ಸಿ & ಅಂಡ್, ತ್ಯಾಜ್ಯ ನಿರ್ವಹಣೆ, ಇತರ ಹೊರಸೂಸುವಿಕೆಗಳು (ಡಿಜಿಸೆಟ್‌ಗಳು ಮತ್ತು ವಾಣಿಜ್ಯ ಸ್ಥಾಪನೆಗಳು), ಐಇಸಿ ಚಟುವಟಿಕೆಗಳ ಕುರಿತು ನಗರಗಳು ತೆಗೆದುಕೊಂಡ ಕ್ರಮಗಳ ಕುರಿತು 2022-23 ರಲ್ಲಿ ಸ್ವಚ್ಛ ವಾಯು ಸರ್ವೇಕ್ಷಣ ಚೌಕಟ್ಟನ್ನು ಬಿಡುಗಡೆ ಮಾಡಲಾಯಿತು

ನಗರಗಳಿಂದ ಸ್ವಯಂ ಮೌಲ್ಯಮಾಪನ, ರಾಜ್ಯ ಮಟ್ಟದ ಮೇಲ್ವಿಚಾರಣಾ ಸಮಿತಿಯ ಅನುಮೋದನೆ, ಸಿಪಿಸಿಬಿ ಯಿಂದ ಮೌಲ್ಯಮಾಪನ, ಸ್ವತಂತ್ರ ಸಮಿತಿಗಳಿಂದ ತಳಮಟ್ಟದಲ್ಲಿ ಪರಿಶೀಲನೆ ಮತ್ತು 10 ಅತ್ಯುತ್ತಮ ಪ್ರದರ್ಶನ ನೀಡುವ ನಗರಗಳ ಆಯ್ಕೆ ಸೇರಿದಂತೆ 3 ಗುಂಪುಗಳಲ್ಲಿ (3 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ; 3-10 ಲಕ್ಷ; ಮತ್ತು 10 ಲಕ್ಷಕ್ಕಿಂತ ಹೆಚ್ಚಿನ) ಎಲ್ಲಾ 130 ನಗರಗಳ ಭಾಗವಹಿಸುವಿಕೆ ಮತ್ತು ಶ್ರೇಯಾಂಕವನ್ನು ಆಧರಿಸಿ ಪ್ರಶಸ್ತಿಗಳನ್ನು ನೀಡಲಾಗಿದೆ.

ಸ್ವಚ್ಛ ವಾಯು ಸರ್ವೇಕ್ಷಣ ಪ್ರಶಸ್ತಿ ಪುರಸ್ಕೃತರ ಪಟ್ಟಿ List of Swachh Vayu Sarvekshan Awardees

ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದ (ಎನ್ ಸಿಎಪಿ) ಅಡಿಯಲ್ಲಿ ಸಾಧನೆಗಳು

ಸ್ವಚ್ಛ ವಾಯು ದಿನದ ಸಂದರ್ಭದಲ್ಲಿ, 24 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 130 ನಗರಗಳಲ್ಲಿ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಆರಂಭಿಸಲಾದ ಪ್ರಮುಖ ಉಪಕ್ರಮವಾದ ಎನ್ ಸಿಎಪಿ ಅಡಿಯಲ್ಲಿ ಮಾಡಿದ ಪ್ರಗತಿ ಮತ್ತು ಸಾಧನೆಗಳನ್ನು ಬಿಂಬಿಸಲಾಯಿತು. ವಾಯು ಮಾಲಿನ್ಯ ತಗ್ಗಿಸುವ ಕ್ರಮಗಳನ್ನು ಕಾರ್ಯಗತಗೊಳಿಸಲು ನಿರ್ಣಾಯಕ ಅಂತರ ನಿಧಿಯಾಗಿ 130 ಎನ್ ಸಿಎಪಿ ನಗರಗಳಿಗೆ  16,425 ಕೋಟಿ ಕಾರ್ಯಕ್ಷಮತೆ ಸಂಬಂಧಿತ ಅನುದಾನವನ್ನು ಒದಗಿಸಲಾಗಿದೆ.

2017-18ನೇ ಹಣಕಾಸು ವರ್ಷದ ಮಟ್ಟಗಳಿಗೆ ಹೋಲಿಸಿದರೆ 2025-26 ರಲ್ಲಿ PM10 ಮಟ್ಟದಲ್ಲಿ ಕಡಿತವನ್ನು ಸಾಧಿಸುವಲ್ಲಿ ಎನ್ ಸಿಎಪಿ ಸಕಾರಾತ್ಮಕ ಫಲಿತಾಂಶಗಳನ್ನು ತೋರಿಸಿದೆ:

• 130 ನಗರಗಳಲ್ಲಿ 108 ನಗರಗಳು PM10 ಮಟ್ಟದಲ್ಲಿ ಸುಧಾರಣೆಯನ್ನು ತೋರಿಸಿವೆ.

• 72 ನಗರಗಳು ಶೇ.20 ಕ್ಕಿಂತ ಹೆಚ್ಚು PM10 ಸಾಂದ್ರತೆಯಲ್ಲಿ ಕಡಿತವನ್ನು ಸಾಧಿಸಿವೆ.

• 26 ನಗರಗಳು ಶೇ.40 ಕ್ಕಿಂತ ಅಧಿಕ ಕಡಿತವನ್ನು ದಾಖಲಿಸಿವೆ.

• 14 ನಗರಗಳು ರಾಷ್ಟ್ರೀಯ ಸುತ್ತುವರಿದ ವಾಯು ಗುಣಮಟ್ಟದ ಮಾನದಂಡಗಳನ್ನು (NAAQS) ಪೂರೈಸಿವೆ.

ಎನ್ ಸಿ ಎ ಪಿ ಅಡಿಯಲ್ಲಿ ಅತ್ಯುತ್ತಮ ನಿರ್ವಹಣಾ ಪದ್ಧತಿಗಳ ಸಂಕಲನ

ಕಾರ್ಯಕ್ರಮದ ವೇಳೆ, ಎನ್ ಸಿಎಪಿ  ಅಡಿಯಲ್ಲಿ ಅತ್ಯುತ್ತಮ ನಿರ್ವಹಣಾ ಅಭ್ಯಾಸಗಳ ಸಂಕಲನ Compendium of Best Management Practices under NCAP ವನ್ನು ಬಿಡುಗಡೆ ಮಾಡಲಾಯಿತು. ಇದು ನಗರಗಳು ಮತ್ತು ಎನ್ ಸಿಎಪಿ   ಅಡಿಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು/ಸಮಿತಿಗಳು ರಸ್ತೆ ಧೂಳು ನಿಯಂತ್ರಣ, ವಾಹನ ಮಾಲಿನ್ಯ, ಕೈಗಾರಿಕಾ ಮಾಲಿನ್ಯ, ಘನ ಮತ್ತು ನಿರ್ಮಾಣ ಮತ್ತು ಉರುಳಿಸುವಿಕೆ (ಸಿ&ಡಿ) ತ್ಯಾಜ್ಯ ನಿರ್ವಹಣೆ, ತೆರೆದ ದಹನದ ನಿಯಂತ್ರಣ, ಹಸಿರೀಕರಣ, ತಂತ್ರಜ್ಞಾನದ ಬಳಕೆ ಮತ್ತು ಸಾರ್ವಜನಿಕ ಸಂಪರ್ಕ ಸೇರಿದಂತೆ ವಿವಿಧ ವಲಯಗಳಲ್ಲಿ ಜಾರಿಗೆ ತಂದ ಅತ್ಯುತ್ತಮ ಪದ್ಧತಿಗಳು ಮತ್ತು ಯಶಸ್ವಿ ವಾಯು ಗುಣಮಟ್ಟ ಸುಧಾರಣಾ ಕ್ರಮಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತದೆ. ಈ ಅತ್ಯುತ್ತಮ ಪದ್ಧತಿಗಳು ಇತರ ನಗರಗಳು ಮತ್ತು ಎಸ್ ಪಿಸಿಬಿಗಳಿಗೆ ಅವುಗಳನ್ನು ಪುನರಾವರ್ತಿಸಲು ಸಹಾಯಕವಾಗುತ್ತವೆ.

 

*****


(ಪ್ರಕಟಣೆ ಐ.ಡಿ.: 2307481) ವಿಸಿಟರ್ ಕೌಂಟರ್ : 16
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi