ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಎಂಸಿಡಿ ನಜಾಫ್‌ಗಢ ವಲಯದಲ್ಲಿ ತ್ಯಾಜ್ಯ ಆಯುವವರಿಗೆ ನಮಸ್ತೆ ಕಾರ್ಡ್‌ಗಳ ವಿತರಣೆಗೆ ಚಾಲನೆ ನೀಡಿದ ಕೇಂದ್ರ ಸಚಿವರಾದ ಶ್ರೀ ರಾಮದಾಸ್ ಅಠಾವಳೆ ; ನವದೆಹಲಿಯ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೂ ಆಯುಷ್ಮಾನ್ ಕಾರ್ಡ್‌ಗಳ ವಿತರಣೆ
ದೇಶದ ನೈರ್ಮಲ್ಯ ಮತ್ತು ಶುಚಿತ್ವ ಕಾಯ್ದುಕೊಳ್ಳುವಲ್ಲಿ ತ್ಯಾಜ್ಯ ಆಯುವವರ ಅವಿಶ್ರಾಂತ ಕೊಡುಗೆ ಶ್ಲಾಘಿಸಿದ ಕೇಂದ್ರ ಸಚಿವರು; ಅವರ ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸುವಲ್ಲಿ ಮತ್ತು ಕಲ್ಯಾಣ ಯೋಜನೆಗಳನ್ನು ಪಡೆಯಲು ಸರ್ಕಾರದ ಸಂಪೂರ್ಣ ಸಹಕಾರ ಮತ್ತು ನಿರಂತರ ಬೆಂಬಲದ ಭರವಸೆ ನೀಡಿದ ಸಚಿವರು
ಪ್ರಕಟಣಾ ದಿನಾಂಕ:
04 SEP 2026 9:02AM by PIB Bengaluru
ರಾಷ್ಟ್ರದ ರಾಜಧಾನಿಯ ಮಟಿಯಾಲಾದ ಎಂಸಿಡಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾದ ಶ್ರೀ ರಾಮದಾಸ್ ಅಠಾವಳೆ ಅವರು ಎಂಸಿಡಿ ನಜಾಫ್‌ಗಢ ವಲಯದ ತ್ಯಾಜ್ಯ ಆಯುವವರಿಗೆ ನಮಸ್ತೆ ಕಾರ್ಡ್‌ಗಳ ವಿತರಣೆಯನ್ನು ಉದ್ಘಾಟಿಸಿದರು.
ದೇಶಾದ್ಯಂತ ಸ್ವಚ್ಚತಾ ಕಾರ್ಮಿಕರ ಸುರಕ್ಷತೆ, ಘನತೆ ಮತ್ತು ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ರಾಷ್ಟ್ರೀಯ ಯಾಂತ್ರೀಕೃತ ನೈರ್ಮಲ್ಯ ಪರಿಸರ ವ್ಯವಸ್ಥೆ (ನಮಸ್ತೆ) ಯೋಜನೆಯಡಿ ತ್ಯಾಜ್ಯ ಆಯುವವರನ್ನು ಔಪಚಾರಿಕವಾಗಿ ಗುರುತಿಸುವುದು ಮತ್ತು ಸಬಲೀಕರಣಗೊಳಿಸುವಲ್ಲಿ ಈ ಕಾರ್ಯಕ್ರಮವು ಮಹತ್ವದ ಹೆಜ್ಜೆಯಾಗಿದೆ.
ನಮಸ್ತೆ ಕಾರ್ಡ್‌ಗಳ ಜೊತೆಗೆ, ಸಚಿವರು ಈ ಪ್ರಮುಖ ದುಡಿಯುವ ಸಿಬ್ಬಂದಿಗೆ ಆರೋಗ್ಯ ರಕ್ಷಣೆಯ ಪ್ರಯೋಜನಗಳನ್ನು ವಿಸ್ತರಿಸುವ ಆಯುಷ್ಮಾನ್ ಕಾರ್ಡ್‌ಗಳನ್ನು ತ್ಯಾಜ್ಯ ಆಯುವವರಿಗೆ ವಿತರಿಸಿದರು.
ತಮ್ಮ ಭಾಷಣದಲ್ಲಿ, ಶ್ರೀ ಅಠಾವಳೆ ಭಾರತೀಯ ನಗರಗಳನ್ನು ಸ್ವಚ್ಛವಾಗಿಡುವಲ್ಲಿ ತ್ಯಾಜ್ಯ ಆಯುವವರ ಅವಿಶ್ರಾಂತ ಕೊಡುಗೆಯನ್ನು ಶ್ಲಾಘಿಸಿದರು, ದೇಶದ ನೈರ್ಮಲ್ಯ ಮತ್ತು ಸಾರ್ವಜನಿಕ ಆರೋಗ್ಯ ಪ್ರಯತ್ನಗಳಿಗೆ ಅವರ ಕೆಲಸ ಅತ್ಯಗತ್ಯ ಎಂದು ವಿವರಿಸಿದರು. ಕಾರ್ಮಿಕರ ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸುವಲ್ಲಿ ಮತ್ತು ಕಲ್ಯಾಣ ಯೋಜನೆಗಳನ್ನು ಪಡೆಯಲು ಸರ್ಕಾರದ ಸಂಪೂರ್ಣ ಸಹಕಾರ ಮತ್ತು ನಿರಂತರ ಬೆಂಬಲವಿದೆ ಎಂದು ಸಚಿವರು ಕಾರ್ಮಿಕರಿಗೆ ಭರವಸೆ ನೀಡಿದರು

ಶ್ರೀ ರಾಮದಾಸ್ ಅಠಾವಳೆ ಅವರು ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿರುವುದು

ನಜಫ್‌ಗಢ ವಲಯದ 300ಕ್ಕೂ ಅಧಿಕ ತ್ಯಾಜ್ಯ ಆಯುವವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನ್ಯಾಷನಲ್ ಆಕ್ಷನ್ ಫಾರ್ ಮೆಕನೈಸ್ಡ್ ಸ್ಯಾನಿಟೇಷನ್ ಇಕೋಸಿಸ್ಟಮ್ (ನಮಸ್ಟೆ) ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಕೇಂದ್ರ ವಲಯದ ಯೋಜನೆಯಾಗಿದ್ದು, ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕೆಲಸಗಾರರು ಮತ್ತು ತ್ಯಾಜ್ಯ ಆಯುವವರು ಸೇರಿದಂತೆ ನೈರ್ಮಲ್ಯ ಕಾರ್ಮಿಕರ ಸುರಕ್ಷತೆ, ಘನತೆ ಮತ್ತು ಸಾಮಾಜಿಕ-ಆರ್ಥಿಕ ಏಳಿಗೆಯನ್ನು ಖಾತ್ರಿಪಡಿಸಿಕೊಳ್ಳಲು ಇದನ್ನು ಜಾರಿಗೆ ತರಲಾಗಿದೆ. ದೇಶಾದ್ಯಂತ ದೈಹಿಕವಾಗಿ ಮಾಡುವ ಅಪಾಯಕಾರಿ ಶುಚಿಗೊಳಿಸುವ ಪದ್ಧತಿಗಳನ್ನು ತೆಗೆದುಹಾಕುವ ಗುರಿಯೊಂದಿಗೆ, ಈ ಯೋಜನೆಯು ಔದ್ಯೋಗಿಕ ಸುರಕ್ಷತೆ, ಕಾರ್ಮಿಕರ ಔಪಚಾರಿಕ ಗುರುತಿಸುವಿಕೆ, ಆರೋಗ್ಯ ರಕ್ಷಣೆ ಮತ್ತು ಸಾಮಾಜಿಕ ಭದ್ರತಾ ಪ್ರಯೋಜನಗಳ ಲಭ್ಯತೆ, ಕೌಶಲ್ಯ ಅಭಿವೃದ್ಧಿ ಮತ್ತು ಅಪಾಯಕಾರಿ ನೈರ್ಮಲ್ಯ ಕೆಲಸದ ಯಾಂತ್ರೀಕರಣದ ಮೇಲೆ ಕೇಂದ್ರೀಕರಿಸುತ್ತದೆ.
*****
(ಪ್ರಕಟಣೆ ಐ.ಡಿ.: 2306658)
ವಿಸಿಟರ್ ಕೌಂಟರ್ : 3