ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಸಾಕಷ್ಟು ಈರುಳ್ಳಿ ಲಭ್ಯ: ಕಾಂಡಾ ಎಕ್ಸ್‌ಪ್ರೆಸ್ ಮತ್ತು ರಸ್ತೆ ಸಾರಿಗೆಯ ಮೂಲಕ ಬಫರ್ ಸ್ಟಾಕ್‌ಗಳ ಮಾಪನಾಂಕ ನಿರ್ಣಯ ಮತ್ತು ಗುರಿ ಬಿಡುಗಡೆ ವಿಸ್ತರಿಸಿದ ಕೇಂದ್ರ ಸರ್ಕಾರ


ಪ್ರಮುಖ ಬಳಕೆ ಕೇಂದ್ರಗಳಿಗೆ ಪೂರೈಸಲು ರೈಲ್ವೆ ರೇಕ್‌ಗಳು ಮತ್ತು ರಸ್ತೆ ಸಾರಿಗೆಯ ಮೂಲಕ ಹೈಬ್ರಿಡ್ ಸಾರಿಗೆ ಮಾದರಿ ಬಳಕೆ

ಬಫರ್ ಸ್ಟಾಕ್ ವಿಲೇವಾರಿ 19 ನಗರಗಳಿಗೆ ವಿಸ್ತರಣೆ, ಕಾಂಡಾ ಎಕ್ಸ್‌ಪ್ರೆಸ್ ಮತ್ತು ದೇಶಾದ್ಯಂತ 30 ಕ್ಕೂ ಅಧಿಕ ಟ್ರಕ್‌ಗಳ ನಿಯೋಜನೆ

ನೇರ ಪಾವತಿ ಕಾರ್ಯವಿಧಾನದ ಮೂಲಕ ರೈತರಿಗೆ ಸಕಾಲಿಕ ಪಾವತಿ ಖಾತ್ರಿ

ಎನ್‌ಸಿಸಿಎಫ್, ನಾಫೆಡ್, ಕೇಂದ್ರೀಯ ಭಂಡಾರ್ ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ಮೊಬೈಲ್ ವ್ಯಾನ್‌ಗಳ ಮೂಲಕ 35 ರೂಪಾಯಿಗೆ ಪ್ರತಿ ಕೆ.ಜಿ ಈರುಳ್ಳಿ ಲಭ್ಯ

ಪ್ರಕಟಣಾ ದಿನಾಂಕ: 01 SEP 2026 2:38PM by PIB Bengaluru

ಋತುಮಾನದ ಬೆಲೆ ಒತ್ತಡಗಳ ಸಮರ್ಪಕ ಲಭ್ಯತೆ ಮತ್ತು ಮಿತಗೊಳಿಸುವಿಕೆಯನ್ನು ಖಾತ್ರಿಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ರೈಲ್ವೆ ರೇಕ್‌ಗಳು (ಕಂದಾ ಎಕ್ಸ್‌ಪ್ರೆಸ್) ಮತ್ತು ಪ್ರಮುಖ ಬಳಕೆ ಕೇಂದ್ರಗಳಿಗೆ ರಸ್ತೆ ಸಾರಿಗೆಯನ್ನು ಒಳಗೊಂಡಿರುವ ಹೈಬ್ರಿಡ್ ಸಾರಿಗೆ ಮಾದರಿಯ ಮೂಲಕ ಈರುಳ್ಳಿ ಹೆಚ್ಚುವರಿ ದಾಸ್ತಾನು ಮಾಪನಾಂಕ ನಿರ್ಣಯ ಬಿಡುಗಡೆ ಆರಂಭಿಸಿದೆ. ಬೆಲೆ ಸ್ಥಿರೀಕರಣ ನಿಧಿ (ಪಿಎಸ್‌ಎಫ್) ಬಫರ್ ಅಡಿಯಲ್ಲಿ ಈರುಳ್ಳಿ ವಿಲೇವಾರಿ 2026ರ ಆಗಸ್ಟ್ 24 ರಿಂದ ನಾಫೆಡ್‌ ಮತ್ತು ಎನ್ ಸಿಸಿಎಫ್ ಮೂಲಕ ಆರಂಭವಾಗಿದೆ.

ಈ ಉಪಕ್ರಮದ ಭಾಗವಾಗಿ, ನಾಸಿಕ್‌ನಿಂದ ಎರಡು ಕಾಂಡಾ ಎಕ್ಸ್‌ಪ್ರೆಸ್ ಸರಕುಗಳನ್ನು ರವಾನಿಸಲಾಗಿದೆ. 450 ಮೆಟ್ರಿಕ್ ಟನ್ ಈರುಳ್ಳಿಯನ್ನು ಹೊತ್ತ ಮೊದಲ ರೇಕ್ 2026ರ ಆಗಸ್ಟ್ 27 ರ ತಡರಾತ್ರಿ ದೆಹಲಿಯನ್ನು ತಲುಪಿತು. ಅದರಲ್ಲಿ 140 ಮೆಟ್ರಿಕ್ ಟನ್ ಅನ್ನು ನಂತರ ವಾರಣಾಸಿ, ಲಕ್ನೋ, ಚಂಡೀಗಢ ಮತ್ತು ಅಮೃತಸರದಲ್ಲಿ ವಿತರಿಸಲಾಯಿತು, ಉಳಿದ ಪ್ರಮಾಣವನ್ನು ದೆಹಲಿ-ಎನ್‌ಸಿಆರ್ ಪ್ರದೇಶದಾದ್ಯಂತ ವಿತರಿಸಲಾಯಿತು.

840 ಮೆಟ್ರಿಕ್ ಟನ್ ಈರುಳ್ಳಿಯನ್ನು ಹೊತ್ತ ಎರಡನೇ ರೇಕ್ 2026ರ ಆಗಸ್ಟ್ 31 ರಂದು ಚೆನ್ನೈ ತಲುಪಿತು. ತಮಿಳುನಾಡು ರಾಜ್ಯ ಸರ್ಕಾರವು ಅವಶ್ಯಕತೆಗೆ ಅನುಗುಣವಾಗಿ ಈ ಈರುಳ್ಳಿಯನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಮೂಲಕ ಪ್ರತಿ ಕಾರ್ಡ್‌ಗೆ 1 ಕೆಜಿ ಈರುಳ್ಳಿ ವಿತರಿಸಲು ಯೋಜಿಸಿದೆ. ಪ್ರಸ್ತಾವಿತ ಜಿಲ್ಲಾವಾರು ಕ್ಲಸ್ಟರಿಂಗ್ ಪ್ರಕಾರ ಈರುಳ್ಳಿಯನ್ನು ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ವಿತರಿಸುವ ಸಾಧ್ಯತೆಯಿದೆ:

ಕ್ರ.ಸಂ

ವಿಭಾಗ

ಜಿಲ್ಲಾ ಸಂಯೋಜನೆ

1

ದಕ್ಷಿಣ

ಚೆನ್ನೈ ಪಿಡಿಎಸ್ 1 + ಚೆನ್ನೈ ಪಿಡಿಎಸ್ 2

2

ದಕ್ಷಿಣ

ತಿರುವಳ್ಳೂರ್ + ಕಾಂಚೀಪುರಂ+ ಚೆಂಗಲ್ಪಟ್ಟು + ವೆಲ್ಲೂರ್ + ರಾಣಿಪೇಟ್ + ತಿರುಪತ್ತೂರ್

3

ದಕ್ಷಿಣ

ತಿರುವಣ್ಣಾಮಲೈ + ವಿಲ್ಲುಪುರಂ +ಕಲ್ಲಕುರಿಚಿ

4

ಪಶ್ಚಿಮ

ಕೊಯಮತ್ತೂರು + ನೀಲಗಿರಿ

5

ಪಶ್ಚಿಮ

ತಿರುಪ್ಪೂರ್ + ಈರೋಡ್

6

ಪಶ್ಚಿಮ

ಸೇಲಂ + ನಾಮಕ್ಕಲ್ + ಧರ್ಮಪುರಿ + ಕೃಷ್ಣಗಿರಿ

7

ಪೂರ್ವ

ಕಡಲೂರು + ಮೈಲಾಡುತುರೈ

8

ಪೂರ್ವ

ನಾಗಪಟ್ಟಿಣಂ + ತಿರುವಾರೂರ್

9

ಕೇಂದ್ರ

ಅರಿಯಲೂರ್+ ಪೆರಂಬಲೂರ್

10

ಕೇಂದ್ರ

ತಿರುಚ್ಚಿ + ಕರೂರ್

11

ಕೇಂದ್ರ

ತಂಜಾವೂರು + ಪುದುಕ್ಕೊಟ್ಟೈ

12

ದಕ್ಷಿಣ

ಮಧುರೈ + ದಿಂಡಿಗಲ್

13

ದಕ್ಷಿಣ

ತೇಣಿ + ವಿರುದುನಗರ

14

ದಕ್ಷಿಣ

ಶಿವಗಂಗೈ + ರಾಮನಾಥನಪುರ

15

ದಕ್ಷಿಣ

ತಿರುನೆಲ್ವೇಲಿ + ತೆಂಕಶಿ

16

ದಕ್ಷಿಣ

ಟುಟಿಕೋರಿನ್ + ಕನ್ಯಾಕುಮಾರಿ

 

ರಸ್ತೆ ಮೂಲಕ ಸುಮಾರು 1,000 MT ಈರುಳ್ಳಿ ಸಾಗಾಣೆ

ಏಕಕಾಲದಲ್ಲಿ, ಲಭ್ಯತೆಯನ್ನು ಸುಧಾರಿಸುವ ಮತ್ತು ಸರಿಯಾದ ಸಮಯದಲ್ಲಿ ಬೆಲೆ ಒತ್ತಡಗಳನ್ನು ನಿಯಂತ್ರಿಸುವ ಉದ್ದೇಶದಿಂದ, ಚಾಲ್ತಿಯಲ್ಲಿರುವ ಮಾರುಕಟ್ಟೆ ಪರಿಸ್ಥಿತಿಗಳು ಮತ್ತು ಬೆಲೆ ಪ್ರವೃತ್ತಿಗಳ ಆಧಾರದ ಮೇಲೆ ಸುಮಾರು 1,000 MT ಈರುಳ್ಳಿಯನ್ನು ರಸ್ತೆ ಮೂಲಕ ಪ್ರಮುಖ ಗ್ರಾಹಕ ಕೇಂದ್ರಗಳಿಗೆ ಸಾಗಿಸಲಾಗುತ್ತಿದೆ.

ವ್ಯಾಪಕ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳಲು 30 ಕ್ಕೂ ಅಧಿಕ ಟ್ರಕ್‌ಗಳನ್ನು ಕಳುಹಿಸುವ ಮೂಲಕ ಚಿಲ್ಲರೆ ವ್ಯಾಪಾರ ಹಸ್ತಕ್ಷೇಪ ಪ್ರಯತ್ನಗಳು 19 ನಗರಗಳಲ್ಲಿ ಗಮನಾರ್ಹವಾಗಿ ವಿಸ್ತರಿಸಿವೆ. ಈ ನಗರಗಳಲ್ಲಿ ದೆಹಲಿ, ಜೈಪುರ, ಜಮ್ಮು, ಡೆಹ್ರಾಡೂನ್, ಶಿಮ್ಲಾ, ಅಮೃತಸರ, ಚಂಡೀಗಢ, ಕೋಲ್ಕತ್ತಾ, ಗುವಾಹಟಿ, ಲಕ್ನೋ, ವಾರಣಾಸಿ, ಪಾಟ್ನಾ, ಭೋಜ್‌ಪುರ (ಬಿಹಾರ), ಷರೀಫ್ (ಬಿಹಾರ), ಭುವನೇಶ್ವರ, ಚೆನ್ನೈ, ಮಧುರೈ, ತ್ರಿಶೂರ್ ಮತ್ತು ಕೊಚ್ಚಿ ಸೇರಿವೆ. ಚಿಲ್ಲರೆ ವ್ಯಾಪಾರ ಉಪಕ್ರಮವನ್ನು ಲಕ್ನೋದಲ್ಲಿಯೂ ಸಹ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವ ಶ್ರೀ ಬಿ.ಎಲ್. ವರ್ಮಾ ಆರಂಭಿಸಿದ್ದಾರೆ.

35 ರೂ.ಗೆ ಪ್ರತಿ ಕೆಜಿ ಚಿಲ್ಲರೆ ಈರುಳ್ಳಿ ಲಭ್ಯ

ಗ್ರಾಹಕರಿಗೆ ಕೈಗೆಟುಕುವ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಎನ್ ಸಿಸಿಎಫ್, ನಾಫೆಡ್, ಕೇಂದ್ರೀಯ ಭಂಡಾರ್ ಮಳಿಗೆಗಳು ಮತ್ತು ಮೊಬೈಲ್ ವ್ಯಾನ್‌ಗಳ ಮೂಲಕ ಈರುಳ್ಳಿಯ ಚಿಲ್ಲರೆ ಮಾರಾಟವು ಪ್ರತಿ ಕೆಜಿಗೆ 35 ರೂಪಾಯಿಗೆ ಮುಂದುವರೆದಿದೆ. ಈವರೆಗೆ ಸುಮಾರು 669 ಮೆಟ್ರಿಕ್ ಟನ್ ಈರುಳ್ಳಿ ಮಾರಾಟವಾಗಿದ್ದು, ಅದರಲ್ಲಿ 223 ಮೆಟ್ರಿಕ್ ಟನ್ ಈರುಳ್ಳಿಯನ್ನು ಇ-ನ್ಯಾಮ್ ಪೋರ್ಟಲ್ ಮೂಲಕ ಮತ್ತು ಚಾಲ್ತಿಯಲ್ಲಿರುವ ಮಂಡಿ ಬೆಲೆಗಳಲ್ಲಿ ಇದೇ ರೀತಿಯ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮತ್ತು 446 ಮೆಟ್ರಿಕ್ ಟನ್ ಚಿಲ್ಲರೆ ಮಾರ್ಗಗಳ ಮೂಲಕ ಮಾರಾಟ ಮಾಡಲಾಗಿದೆ.

ಬೆಲೆ ನಿಯಂತ್ರಣಕ್ಕೆ ಬೆಂಬಲ ನೀಡುವ ಮೂಲಕ ಈರುಳ್ಳಿ ಲಭ್ಯತೆ ಹೆಚ್ಚಳ

ಬಫರ್ ಸ್ಟಾಕ್‌ಗಳಿಂದ ಈರುಳ್ಳಿ ಬಿಡುಗಡೆ ಮಾಡುವುದರಿಂದ ಮಾರುಕಟ್ಟೆ ಲಭ್ಯತೆ ಸುಧಾರಿಸಿದೆ ಮತ್ತುವಿಶೇಷವಾಗಿ ವಾರಣಾಸಿ, ಅಮೃತಸರ, ದೆಹಲಿ ಮತ್ತು ಹತ್ತಿರದ ಮಾರುಕಟ್ಟೆಗಳಂತಹ ಈರುಳ್ಳಿ ಸರಕುಗಳು ತಲುಪಿದ ಕೇಂದ್ರಗಳಲ್ಲಿ ಬೆಲೆಗಳು ಕಡಿಮೆಯಾಗಿವೆ. ವಿಲೇವಾರಿ ಆರಂಭವಾದ ಮರುದಿನದಿಂದ ಬೆಲೆಗಳು ಕುಸಿತ ಕಂಡಿದ್ದು, ಬೆಂಬಲ ಬೆಲೆ ಸ್ಥಿರತೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ರೈತರಿಗೆ ಸಕಾಲಿಕ ಪಾವತಿ

ಅಲ್ಲದೆ, ಸುಮಾರು 3,400 ರೈತರಿಗೆ ನೇರವಾಗಿ 210 ಕೋಟಿ ರೂ.ಗಳನ್ನು ಪಾವತಿಸಲಾಗಿದೆ, ಇದು ಸಕಾಲಿಕ ಪಾವತಿಗಳನ್ನು ಖಚಿತಪಡಿಸುತ್ತದೆ. ಸರ್ಕಾರವು ಈರುಳ್ಳಿ ರೈತರನ್ನು ಬೆಂಬಲಿಸಲು ಬದ್ಧವಾಗಿದೆ ಮತ್ತು ಗ್ರಾಹಕರಿಗೆ ಸಾಕಷ್ಟು ಮತ್ತು ಕೈಗೆಟುಕುವ ಲಭ್ಯತೆಯನ್ನು ಖಚಿತಪಡಿಸುತ್ತದೆ. ರೈಲ್ವೆ ರೇಕ್‌ಗಳ ಮೂಲಕ ದೊಡ್ಡ ಪ್ರಮಾಣದ ಈರುಳ್ಳಿಯ ಸಾಗಣೆ ಮತ್ತು ವಿಲೇವಾರಿಯ ಸಮಯದಲ್ಲಿ ಯಾವುದೇ ಸೋರಿಕೆಯಾಗದಂತೆ ತಡೆಗಟ್ಟಲು ಮತ್ತು ಭದ್ರತಾ ಕಾಳಜಿಗಳನ್ನು ಪರಿಹರಿಸಲು ಸರ್ಕಾರವು ಉತ್ಕೃಷ್ಠ ಭದ್ರತಾ ಕ್ರಮಗಳನ್ನು ಸಹ ಜಾರಿಗೆ ತಂದಿದೆ.

 

*****


(ಪ್ರಕಟಣೆ ಐ.ಡಿ.: 2305493) ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Bengali-TR , Punjabi , Gujarati