ರೈಲ್ವೇ ಸಚಿವಾಲಯ
azadi ka amrit mahotsav

ಗುಜರಾತ್‌ನಲ್ಲಿ 125 ಕೋಟಿ ರೂಪಾಯಿ ವೆಚ್ಚದ ಭವನಗರ ಪ್ಯಾರಾ ಯಾರ್ಡ್ ಪುನರ್ ರಚನೆ ಯೋಜನೆಗೆ ಭಾರತೀಯ ರೈಲ್ವೆ ಅನುಮೋದನೆ


ಯೋಜನೆ ಭವನಗರ ಟರ್ಮಿನಸ್‌ನಲ್ಲಿ ಜನದಟ್ಟಣೆ ತಗ್ಗಿಸಲು, ರೈಲು ಕಾರ್ಯಾಚರಣೆ ಸುಧಾರಿಸಲು ಮತ್ತು ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸಲು ನೆರವು

ಪ್ರಕಟಣಾ ದಿನಾಂಕ: 01 SEP 2026 2:27PM by PIB Bengaluru

ಭಾರತೀಯ ರೈಲ್ವೆ ಸುಮಾರು 125 ಕೋಟಿ ರೂಪಾಯಿ ವೆಚ್ಚದಲ್ಲಿ ಗುಜರಾತ್‌ನಲ್ಲಿ ಭವನಗರ ಪ್ಯಾರಾ (ಬಿವಿಪಿ) ಯಾರ್ಡ್ ಪುನರ್ ರಚನೆ ಯೋಜನೆಗೆ ಅನುಮೋದನೆ ನೀಡಿದೆ. ಈ ಯೋಜನೆಯು ಭವನಗರ ಪಾರಾದಲ್ಲಿ ಹೆಚ್ಚುವರಿ ಕಾರ್ಯಾಚರಣಾ ಸಾಮರ್ಥ್ಯವನ್ನು ಸೃಷ್ಟಿಸುವ ಮೂಲಕ ಮತ್ತು ಪ್ರಯಾಣಿಕರ ಸೌಲಭ್ಯಗಳನ್ನು ಸುಧಾರಿಸುವ ಮೂಲಕ ಭವನಗರದಲ್ಲಿ ರೈಲು ಮೂಲಸೌಕರ್ಯವನ್ನು ಮತ್ತಷ್ಟು ಬಲವರ್ಧನೆಗೊಳಿಸಲಿದೆ.

ಭವನಗರ ಟರ್ಮಿನಸ್‌ನಲ್ಲಿ ದಟ್ಟಣೆ ತಗ್ಗಿಸಲಿರುವ ಭವನಗರ ಪ್ಯಾರಾ ಯಾರ್ಡ್ ಪುನರ್ರಚನೆ

ಈ ಯೋಜನೆಯು ಸ್ಟೇಬಿಲಿಂಗ್ ಮತ್ತು ಇತರ ಕಾರ್ಯಾಚರಣಾ ಚಟುವಟಿಕೆಗಳನ್ನು ಭವನಗರ ಪಾರಾಕ್ಕೆ ಸ್ಥಳಾಂತರಿಸುವ ಮೂಲಕ ಭವನಗರ ಟರ್ಮಿನಸ್ (ಬಿವಿಸಿ) ಸಂಚಾರ ದಟ್ಟಣೆಯನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಇದು ಸುಗಮ ರೈಲು ಕಾರ್ಯಾಚರಣೆಗಳನ್ನು ಸಕ್ರಿಯಗೊಳಿಸುತ್ತದೆ, ರೇಕ್ ಡಿಂಟೆಷನ್‌ ಅನ್ನು ಕಡಿಮೆ ಮಾಡುತ್ತದೆ ಮತ್ತು ಸಮಯಪಾಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಭವನಗರ ಪಾರಾದಲ್ಲಿನ ಹೆಚ್ಚುವರಿ ಮೂಲಸೌಕರ್ಯವು ರೈಲು ಚಲನೆಗಳ ಉತ್ತಮ ನಿರ್ವಹಣೆಯನ್ನು ಸುಗಮಗೊಳಿಸುತ್ತದೆ ಮತ್ತು ಹೆಚ್ಚಿನ ರೈಲುಗಳ ಸುಗಮ ಕಾರ್ಯಾಚರಣೆಗೆ ಅನುವು ಮಾಡಿಕೊಡುತ್ತದೆ.

ಹೊಸ ಪ್ಲಾಟ್‌ಫಾರ್ಮ್ ಮತ್ತು ಸುಧಾರಿತ ಪ್ರಯಾಣಿಕರ ಸೌಲಭ್ಯಗಳು

ಪುನರ್‌ ರಚನೆ ಕಾರ್ಯವು ನಾಲ್ಕು ಲೂಪ್ ಲೈನ್‌ಗಳು, ಒಂದು ಎಂಜಿನ್ ರಿವರ್ಸಲ್ ಲೈನ್, ಎಆರ್ ಟಿ  ಮತ್ತು ಎಆರ್ ಎಂಇ ಸೈಡಿಂಗ್, ನಿಲ್ದಾಣ ಮತ್ತು ಇಐ ಕಟ್ಟಡದ ಸ್ಥಳಾಂತರ, ಒಂದು ಉನ್ನತ ಮಟ್ಟದ ಪ್ರಯಾಣಿಕರ ಫ್ಲಾಟ್ ಫಾರಂ,  ಅಸ್ತಿತ್ವದಲ್ಲಿರುವ ಫ್ಲಾಟ್ ಫಾರಂ ಅಗಲೀಕರಣ, ಅಸ್ತಿತ್ವದಲ್ಲಿರುವ ಪಾದಚಾರಿ ಸೇತುವೆ (ಎಫ್ ಒಬಿ) ವಿಸ್ತರಣೆ ಮತ್ತು ಒಂದು ಹೊಸ ಎಫ್ ಒಬಿಯ ನಿರ್ಮಾಣವನ್ನು ಒಳಗೊಂಡಿದೆ. ಈ ಯೋಜನೆಯು ಎರಡು ರಸ್ತೆ ಕೆಳ ಸೇತುವೆಗಳನ್ನು (ಆರ್ ಯುಬಿ) ಒಳಗೊಂಡಿರುತ್ತದೆ, ಇದರಲ್ಲಿ ಒಂದು ಹೊಸ ಆರ್ ಯುಬಿ ಮತ್ತು ಅಸ್ತಿತ್ವದಲ್ಲಿರುವ ಆರ್ ಯುಬಿ ವಿಸ್ತರಣೆ, ಸೇವಾ ಕಟ್ಟಡಗಳು ಮತ್ತು ಸಂಬಂಧಿತ ವಿದ್ಯುತ್ ಮತ್ತು ಸಿಗ್ನಲಿಂಗ್ ಕೆಲಸಗಳು ಸೇರಿವೆ.

ಹೊಸ ಉನ್ನತ ಮಟ್ಟದ ಐಲ್ಯಾಂಡ್ ಫ್ಲಾಟ್ ಫಾರ್ಮ್, ಪ್ಲಾಟ್‌ಫಾರ್ಮ್ ಸಂಖ್ಯೆ 2 ರ ಅಗಲೀಕರಣ ಮತ್ತು ಭವನಗರ ಪಾರಾ ನಿಲ್ದಾಣದಲ್ಲಿ ಸುಧಾರಿತ ಎಫ್ ಒಬಿ ಸಂಪರ್ಕದ ಮೂಲಕ ಪ್ರಯಾಣಿಕರ ಅನುಕೂಲತೆಯನ್ನು ಹೆಚ್ಚಿಸಲಾಗುತ್ತದೆ. ಈ ಸೌಲಭ್ಯಗಳು ಪ್ರಯಾಣಿಕರಿಗೆ ಸುಲಭ ಸಂಚಾರ ಮತ್ತು ಪ್ರವೇಶವನ್ನು ಒದಗಿಸುತ್ತದೆ.

ಭವನಗರ ಪಾರಾ ಯಾರ್ಡ್ ಪುನರ್‌ ರಚನೆ ಯೋಜನೆಯು ರೈಲ್ವೆ ಮೂಲಸೌಕರ್ಯವನ್ನು ಬಲಪಡಿಸುವ ಮತ್ತು ಭವನಗರದಲ್ಲಿ ಪ್ರಯಾಣಿಕರ ಸೇವೆಗಳನ್ನು ಸುಧಾರಿಸುವ ಕಡೆಗೆ ಒಂದು ಪ್ರಮುಖ ಹೆಜ್ಜೆಯಾಗಿದೆ. ಭವನಗರ ಟರ್ಮಿನಸ್‌ನಲ್ಲಿ ದಟ್ಟಣೆಯನ್ನು ಕಡಿಮೆ ಮಾಡುವ ಮೂಲಕ ಮತ್ತು ಹೆಚ್ಚುವರಿ ಟರ್ಮಿನಲ್ ಸಾಮರ್ಥ್ಯವನ್ನು ಸೃಷ್ಟಿಸುವ ಮೂಲಕ, ಯೋಜನೆಯು ಸುಗಮ ಮತ್ತು ಸಮಯಕ್ಕೆ ಸರಿಯಾಗಿ ಹೆಚ್ಚು ರೈಲು ಕಾರ್ಯಾಚರಣೆಗಳನ್ನು ನೆರವಾಗಲಿದೆ. ಸುಧಾರಿತ ಪ್ಲಾಟ್‌ಫಾರ್ಮ್‌ಗಳು, ಎಫ್‌ಒಬಿ ಸಂಪರ್ಕ ಮತ್ತು ಇತರ ಪ್ರಯಾಣಿಕರ ಸೌಲಭ್ಯಗಳು ಭವನಗರ ಮತ್ತು ಸುತ್ತಮುತ್ತಲಿನ ಪ್ರದೇಶಕ್ಕೆ ಪ್ರಯಾಣಿಸುವ ಮತ್ತು ಅಲ್ಲಿಂದ ಬರುವ ಜನರಿಗೆ ಅನುಕೂಲವನ್ನು ಮತ್ತಷ್ಟು ಹೆಚ್ಚಿಸುತ್ತವೆ.

 

*****


(ಪ್ರಕಟಣೆ ಐ.ಡಿ.: 2305456) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati